ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಪಾಕಿಸ್ತಾನದ ಟೀಕೆ ಖಂಡಿಸಿದ ಭಾರತ
ಪಾಕ್ ಯಾವುದೇ ಅರ್ಹತೆ ಇಲ್ಲವೆಂದು ಕೌಂಟರ್

ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಪಾಕಿಸ್ತಾನದ ಟೀಕೆ ಖಂಡಿಸಿದ ಭಾರತಪಾಕ್ ಯಾವುದೇ ಅರ್ಹತೆ ಇಲ್ಲವೆಂದು ಕೌಂಟರ್

ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಪಾಕಿಸ್ತಾನದ ಟೀಕೆಯನ್ನು ಭಾರತ  ಖಂಡಿಸಿದೆ. ಇತರರಿಗೆ ಉಪದೇಶ ನೀಡುವ ಬದಲು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವಲ್ಲಿ ಪಾಕಿಸ್ತಾನ ಗಮನಹರಿಸಬೇಕು ಎಂದು ಹೇಳಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ವಕ್ಫ್ ತಿದ್ದುಪಡಿ ಕಾನೂನಿನ ಕುರಿತು ಪಾಕಿಸ್ತಾನದ ಹೇಳಿಕೆಗಳನ್ನು ಪ್ರೇರೇಪಿತ ಮತ್ತು ಆಧಾರರಹಿತ ಎಂದು ಟೀಕಿಸಿದ್ದಾರೆ. ಭಾರತದ ಆಂತರಿಕ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನೆರೆಯ ದೇಶಕ್ಕೆ ಯಾವುದೇ ಅರ್ಹತೆ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.

ವಕ್ಫ್ ಕಾನೂನು ಭಾರತೀಯ ಮುಸ್ಲಿಮರ ಧಾರ್ಮಿಕ ಮತ್ತು ಆರ್ಥಿಕ ಹಕ್ಕುಗಳ ಮೇಲೆ ಉಲ್ಲಂಘನೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರರು ಆರೋಪಿಸಿದ ನಂತರ ಭಾರತದ ಪ್ರತಿಕ್ರಿಯೆ  ನೀಡಿದೆ.

ಭಾರತದ ಸಂಸತ್ತು ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯ್ದೆಯ ಕುರಿತು ಪಾಕಿಸ್ತಾನ ಮಾಡಿದ ಪ್ರೇರೇಪಿತ ಮತ್ತು ಆಧಾರರಹಿತ ಹೇಳಿಕೆಗಳನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ ಎಂದು ಜೈಸ್ವಾಲ್ ಹೇಳಿದರು. ಕಾನೂನಿನ ಬಗ್ಗೆ ಪಾಕಿಸ್ತಾನ ಮಾಡಿದ ಹೇಳಿಕೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ವಿದೇಶಾಂಗ ಸಚಿವಾಲಯದ ವಕ್ತಾರರು ಉತ್ತರಿಸುತ್ತಿದ್ದರು. ಭಾರತದ ಆಂತರಿಕ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಯಾವುದೇ ಅರ್ಹತೆ ಇಲ್ಲ ಎಂದರು. ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ವಿಷಯದಲ್ಲಿ ಪಾಕಿಸ್ತಾನವು ಇತರರಿಗೆ ಉಪದೇಶ ಮಾಡುವ ಬದಲು ತನ್ನದೇ ಆದ ಕಳಪೆ ದಾಖಲೆಯನ್ನು ನೋಡುವುದು ಉತ್ತಮ ಎಂದರು.

 

Kishor KV

Leave a Reply

Your email address will not be published. Required fields are marked *