ಭಾರತದಲ್ಲಿ ಈ ಬಾರಿ ಮಳೆ ಪ್ರಮಾಣ ಹೆಚ್ಚು – ರೈತರಿಗೆ ಅನುಕೂಲ ಆಗಲಿದ್ಯಾ ಮುಂಗಾರು ಮಳೆ?

ಭಾರತದಲ್ಲಿ ಈ ಬಾರಿ ಮಳೆ ಪ್ರಮಾಣ ಹೆಚ್ಚು – ರೈತರಿಗೆ ಅನುಕೂಲ ಆಗಲಿದ್ಯಾ ಮುಂಗಾರು ಮಳೆ?

ದೇಶದಲ್ಲಿ ಈಗ ಬೇಸಿಗೆ ಬಿಸಿಲಿನೊಂದಿಗೆ ಮುಂಗಾರು ಪೂರ್ವ ಮಳೆ ಶುರುವಾಗಿದೆ. ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಮತ್ತೆ ಬಿಸಿಲಿನ ಶಾಖ ಹೆಚ್ಚಾಗಲು ಪ್ರಾರಂಭಿಸಿದೆ. ಇನ್ನೇನು ಮಳೆಗಾಲ ಕೂಡ ಆರಂಭವಾಗಲಿದೆ. ಈ ವರ್ಷ ಮಳೆರಾಯ ಕೃಪೆ ಕೃಷಿ ಮೇಲಿರುತ್ತಾ ಅಂತಾ ರೈತಾಪಿ ವರ್ಗ ಕಾಯ್ತಿದೆ. ಇದೀಗ ರೈತರಿಗೆ ಹವಾಮಾನ ಇಲಾಖೆ ಗುಡ್‌ನ್ಯೂಸ್‌ ಕೊಟ್ಟಿದೆ. ಈ ವರ್ಷದ ಮಾನ್ಸೂನ್ ಋತುವಿನಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಸಂಕಷ್ಟಗಳಿಂದ ಪಾರಾಗಲು ಶಕ್ತಿ ದೇವತೆ ಮೊರೆ ಹೋದ ಪವಿತ್ರಾ ಗೌಡ – ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ

ಈ ವರ್ಷ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ಈ ವರ್ಷದ ಮಾನ್ಸೂನ್ ಋತುವಿನಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ. ಹಾಗೇ, ಭಾರತ ಹವಾಮಾನ ಇಲಾಖೆ (ಐಎಂಡಿ) ದೀರ್ಘಾವಧಿಯ ಸರಾಸರಿಯ 105% ಕಾಲೋಚಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ನೈರುತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳಕ್ಕೆ ಪ್ರವೇಶಿಸಲು ಆರಂಭಿಸುತ್ತದೆ, ಸೆಪ್ಟೆಂಬರ್ ಮಧ್ಯದ ವೇಳೆಗೆ ಹಿಂದೆ ಸರಿಯುತ್ತದೆ. ಅಂದಾಜು ಸರಾಸರಿಗಿಂತ ಹೆಚ್ಚಿನ ಮಳೆಯು ಕೃಷಿ ವಲಯಕ್ಕೆ ಅನುಕೂಲಕರ ವಾತಾವರಣವನ್ನು ಒದಗಿಸಬಹುದು ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ.

ಐಎಂಡಿ ಪ್ರಕಾರ, ಈ ವರ್ಷದ ಮುನ್ಸೂಚನೆಯು ಕೆಲವು ಪ್ರದೇಶಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಅನುಕೂಲಕರ ಮಳೆಯ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸೂಚಿಸಿದೆ. 4 ತಿಂಗಳ ಮಾನ್ಸೂನ್ ಋತುವಿನಲ್ಲಿ ಲಡಾಖ್, ಈಶಾನ್ಯ ಭಾರತ ಮತ್ತು ತಮಿಳುನಾಡಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ.

“4 ತಿಂಗಳ ಮಾನ್ಸೂನ್ ಋತುವಿನಲ್ಲಿ (ಜೂನ್ ತಿಂಗಳಿಂದ ಸೆಪ್ಟೆಂಬರ್) ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ದೀರ್ಘಾವಧಿಯ ಸರಾಸರಿ 87 ಸೆಂ.ಮೀ.ನಷ್ಟು ಸಂಚಿತ ಮಳೆಯಾಗುವ ಅಂದಾಜು ಮಾಡಲಾಗಿದೆ” ಎಂದು ಭಾರತ ಹವಾಮಾನ ಇಲಾಖೆ (IMD) ಮುಖ್ಯಸ್ಥ ಮೃತ್ಯುಂಜಯ ಮೊಹಾಪಾತ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *