ನಿಂತು ಹೋಯ್ತು ಭಾಗ್ಯ ಬ್ಯುಸಿನೆಸ್‌ – ಶ್ರೇಷ್ಠಾಳಿಂದ ತಾಂಡವ್‌ ಲೈಫ್ ಹಾಳು

ನಿಂತು ಹೋಯ್ತು ಭಾಗ್ಯ ಬ್ಯುಸಿನೆಸ್‌ – ಶ್ರೇಷ್ಠಾಳಿಂದ ತಾಂಡವ್‌ ಲೈಫ್ ಹಾಳು

ಭಾಗ್ಯ ಸಕ್ಸಸ್‌ ಆಗೋದನ್ನ ತಾಂಡವ್‌ ಶ್ರೇಷ್ಠಾಗೆ ನೋಡೋಕೆ ಆಗಲ್ಲ.. ಶ್ರೇಷ್ಠಾ ಜೊತೆ ಸೇರ್ಕೊಂಡು ಒಂದಲ್ಲ, ಒಂದು ಕುತಂತ್ರ ಮಾಡ್ತಾನೆ ಇರ್ತಾನೆ. ಭಾಗ್ಯ ಹೊಸ ಬ್ಯುಸಿನೆಸ್‌ ಶುರು ಮಾಡ್ತಿದ್ದಂತೆ ಕನ್ನಿಕಾ ಜೊತೆ ಸೇರ್ಕೊಂಡು ಮತ್ತೊಂದು ಪ್ಲ್ಯಾನ್‌ ಮಾಡಿದ್ದಾನೆ ತಾಂಡವ್..‌ ಇದೀಗ ಭಾಗ್ಯ ಮನೆಗೆ ಅಧಿಕಾರಿಗಳು ರೈಡ್‌ ಮಾಡಿದ್ದಾರೆ.

ಇದನ್ನೂ ಓದಿ: ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ವೈಷ್ಣವಿ ಗೌಡ –  ಹುಡುಗ ಯಾರು?

ಭಾಗ್ಯಲಕ್ಷ್ಮೀ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಗಂಡನಿಂದ ದೂರ ಆದ್ರೂ ಭಾಗ್ಯಗೆ ಆತನ ಕಾಟ ತಪ್ತಿಲ್ಲ.. ಆಕೆ ಸೋಲ್ಬೇಕು ಅಂತಾ ತಾಂಡವ್‌ ಶ್ರೇಷ್ಠಾ ಜೊತೆ ಸೇರ್ಕೊಂಡು ಒಂದಲ್ಲಾ ಒಂದು ಕುತಂತ್ರ ಮಾಡ್ತಾನೇ ಬಂದಿದ್ದಾನೆ. ಮತ್ತೊಂದ್ಕಡೆ ಗಂಡನನ್ನ ಬಿಟ್ಟಿದ್ದಾಳೆ ಎಂಬ ಕಾರಣಕ್ಕೆ ಭಾಗ್ಯಗೆ ಜನರು ಅವಮಾನ ಮಾಡ್ತಿದ್ದಾರೆ. ಇನ್ನೊಂದು ಕಡೆ ಆಕೆಯನ್ನೇ ನಂಬಿ ದೊಡ್ಡ ಸಂಸಾರವಿದ್ದು, ಅವರಿಗೆ ಮೂರು ಹೊತ್ತು ಊಟ, ಬ್ಯಾಂಕ್ ಸಾಲ ತೀರಿಸೋಕೆ ಭಾಗ್ಯ ಹೆಣಗಾಡ್ತಿದ್ದಾಳೆ. ಇವರಿಬ್ರ ಮನೆಹಾಳ್‌ ಕೆಲಸಕ್ಕೆ ಕನ್ನಿಕಾ ಕೂಡ ಕೈಜೋಡಿಸಿದ್ದಾಳೆ. ಈ ಮೂವರ ಕುತಂತ್ರದಿಂದ ಭಾಗ್ಯ ಇರೋ ಕೆಲಸವನ್ನೆಲ್ಲಾ ಕಳ್ಕೊಳ್ತಿದ್ದಾಳೆ. ಇದೀಗ ಹೊಸ ಬ್ಯುಸಿನೆಸ್‌ ಶುರುಮಾಡಿದ್ದು, ಈ ಕೆಲಸಕ್ಕೂ ಅಡ್ಡಗಾಲು ಹಾಕ್ತಿದ್ದಾರೆ. ಇದೀಗ ಭಾಗ್ಯ ಹೊಸ ಬ್ಯುಸಿನೆಸ್‌ ನಿಂತು ಹೋಗುತ್ತಾ ಅನ್ನೋ ಅನುಮಾನ ವೀಕ್ಷಕರನ್ನ ಕಾಡ್ತಿದೆ.

ತಾಂಡವ್‌ ನಿಂದ ದೂರ ಆದ್ಮೇಲೆ ಭಾಗ್ಯ ಲೈಫ್‌ ಮತ್ತೆ ಟ್ರ್ಯಾಕ್‌ಗೆ ಬರ್ತಾ ಇತ್ತು.  ಒಂದಿಷ್ಟು ಅಡುಗೆ ಮಾಡಿ ಹಾಸ್ಟೆಲ್ ಹುಡುಗ್ರು ಹಾಗೂ ಆಫೀಸ್ ಗೆ ನೀಡೋಕೆ ಶುರು ಮಾಡಿದ್ಲು. ಬಂದ ಹಣದಲ್ಲಿ ಮನೆ ನಡೆಸ್ಕೊಂಡು ಹೋಗ್ತಿದ್ದಾಳೆ. ಇತ್ತೀಚೆಗಷ್ಟೇ ಗುಂಡಣ್ಣನ ಸ್ಕೂಲ್ ಫೀ ಕೂಡ ಕಟ್ಟಿದ್ದಾಳೆ. ಇದನ್ನು ನೋಡಿ ತಾಂಡವ್ ಊರ್ಕೊಂಡಿದ್ದಾನೆ..  ಭಾಗ್ಯ ಸೋಲ್ಬೇಕು.. ತನ್ನ ಮುಂದೆ ಮಂಡಿಯೂರಿ ಕೂತು, ತಾನು ಸೋತು ಹೋದೇ ಅಂತಾ ಹೇಳ್ಬೇಕು ಅನ್ನೋ  ಕಾರಣಕ್ಕೆ ತಾಂಡವ್ ಆಕೆಗೆ ಕಾಟ ಕೊಡ್ತಿದ್ದಾನೆ. ಇದೀಗ ತಾಂಡವ್ ಹಾಗೂ ಶ್ರೇಷ್ಠಾ ಈಗ ಮತ್ತೆ ಕನ್ನಿಕಾ ಸಹಾಯ ಪಡೆದಿದ್ದಾರೆ. ಕನ್ನಿಕಾಳನ್ನು ತಾಂಡವ್ ಕೆಣಕಿದ್ದಾನೆ. ನಿನ್ನಿಂದ ಏನೂ ಸಾಧ್ಯ ಇಲ್ಲ ಎಂದಿದ್ದಾನೆ. ಇದ್ರಿಂದ ಕನ್ನಿಕಾ ಕೋಪ ನೆತ್ತಿಗೇರಿದೆ. ಹೇಗಾದ್ರೂ ಸರಿ ಭಾಗ್ಯಾ ಡಬ್ಬ ಸರ್ವಿಸ್ ನಿಲ್ಲಿಸ್ಬೇಕು ಅಂತ ಪಣ ತೊಟ್ಟಿರುವ ಕನ್ನಿಕಾ, ಭಾಗ್ಯಾಗೆ ದೊಡ್ಡ ಶಾಕ್ ನೀಡಿದ್ದಾಳೆ.‌ ಇದೀಗ ಭಾಗ್ಯ ಮನೆಗೆ ಅಧಿಕಾರಿಗಳು ರೈಡ್‌ ಮಾಡಿದ್ದಾರೆ.

ಹೌದು, ಭಾಗ್ಯ ಕೈತುತ್ತು ಬ್ಯುಸಿನೆಸ್‌ ಗೂ ಕನ್ನಿಕಾ ಅಡ್ಡಿಯಾಗಿದ್ದಾಳೆ. ಕನ್ನಿಕಾ ಈಗ ಫುಡ್ ಡಿಪಾರ್ಟ್ ಮೆಂಟ್‌ ಗೆ ಕಂಪ್ಲೆಂಟ್‌ ಕೊಟ್ಟಿದ್ದಾಳೆ. ಹೀಗಾಗಿ ಅಧಿಕಾರಿಗಳು ಭಾಗ್ಯ ಮನೆಗೆ ಬಂದು ಲೈಸೆನ್ಸ್ ನೀಡುವಂತೆ ಕೇಳಿದ್ದಾರೆ. ಫುಡ್ ಬ್ಯುಸಿನೆಸ್ ಶುರು ಮಾಡೋಕೆ ಲೈಸೆನ್ಸ್ ಇರ್ಬೇಕು, ನೀವು ಲೈಸೆನ್ಸ್ ಪಡೆದಿಲ್ಲ, ಲೈಸೆನ್ಸ್ ಸಿಗೋವರೆಗೂ ಅನ್ನ ಕೂಡ ಬೇಯಿಸಿ ಮಾರಾಟ ಮಾಡುವಂತಿಲ್ಲ ಅಂತ ಎಚ್ಚರಿಕೆ ನೀಡಿ ಹೋಗಿದ್ದಾರೆ. ಭಾಗ್ಯ, ಲೈಸೆನ್ಸ್ ಪಡೆದ್ರೆ ಮಾತ್ರ ಇನ್ಮುಂದೆ ಅಡುಗೆ ಮಾಡಿ ಮಾರಾಟ ಮಾಡ್ಬಹುದು. ಇಲ್ಲ ಅಂದ್ರೆ ಆಕೆಯ ಅಡುಗೆ ಕೆಲಸ ನಿಂತು ಹೋಗುತ್ತೆ. ಆದ್ರೆ ಲೈಸೆನ್ಸ್‌ ಪಡೆಯಲು ಹೋದ ಭಾಗ್ಯಗೆ ಮತ್ತೆ ಕನ್ನಿಕಾ ಕಾಟ ಕೊಡೋ ಸಾಧ್ಯತೆ ಇರುತ್ತೆ. ಇದೀಗ ಭಾಗ್ಯ, ಲೈಸೆನ್ಸ್ ಪಡೀತಾಳಾ ಅಥವಾ ಬೇರೆ ಕೆಲಸ ಶುರು ಮಾಡ್ತಾಳಾ ಕಾದು ನೋಡ್ಬೇಕು.

ಮತ್ತೊಂದ್ಕಡೆ ಶ್ರೇಷ್ಠಾಳನ್ನ ಮದುವೆಯಾದ ತಾಂಡವ್‌ ಗೆ ಸರಿಯಾಗಿ ಊಟ ಸಿಗ್ತಿಲ್ಲ.. ಶ್ರೇಷ್ಠಾಗೆ ಅಡುಗೆ ಬರಲ್ಲ ಅಂತಾ ಆಕೆ ಹೋಟೇಲ್‌ ಫುಡ್‌ ಆರ್ಡರ್‌ ಮಾಡ್ತಿರ್ತಾಳೆ. ಇದೀಗ ಹೊರಗಿನ ಊಟ ತಿಂದ ತಾಂಡವ್‌ಗೆ ಆರೋಗ್ಯ ಹಾಳಾಗಿದೆ. ಹೀಗಾಗಿ ಆತನನ್ನ ಶ್ರೇಷ್ಠಾ ಆಸ್ಪತ್ರೆಗೆ ಕರ್ಕೊಂಡು ಬಂದಿದ್ದಾಳೆ. ಅಲ್ಲಿ ಕುಸುಮಾ ಹಾಗೂ ಧರ್ಮಾರಾಜ್‌ ಸಿಕ್ಕಿದ್ದಾರೆ. ಆಗ ಕುಸುಮಾ ತಾಂಡವ್‌ ಸ್ಥಿತಿ ಕಂಡು ಸರಿಯಾಗೇ ಕಾಲೆಳಿದ್ದಾಳೆ. ನಿನ್ನ ಹೆಂಡ್ತಿ ಮಾಡ್ತಿರೋ ಅಡುಗೆ ಇಷ್ಟ ಆಗಲ್ವಾ ಅಂತಾ ಕೇಳಿದ್ದಾಳೆ.. ಆಗ ತಾಂಡವ್‌ ತಂದೆ.. ಇದೇನು ಕುಸುಮಾ ಹೀಗೆ ಹೇಳ್ತಿದ್ಯಾ? ಶ್ರೇಷ್ಠಾಳನ್ನ ಮದುವೆ ಆಗಿ ಇವನ ಲೈಫೇ ಹಾಳಾಗಿದೆ. ಇನ್ನೂ ಹೊಟ್ಟೆ ಹಾಳಾಗಲ್ವಾ ಅಂತಾ ಹೇಳಿದ್ದಾನೆ. ಇದ್ರಿಂದ ತಾಂಡವ್‌ ಗೆ ಮುಜುಗರ ಆಗಿದೆ.

ಇದೀಗ ಸೀರಿಯಲ್‌ ನೋಡಿದ ವೀಕ್ಷಕರು ನಾನಾ ಕಾಮೆಂಟ್‌ ಮಾಡಿದ್ದಾರೆ.. ಭಾಗ್ಯ ಗೋಳು ನೋಡೋಕೆ ಆಗಲ್ಲ.. ಲಕ್ಷ್ಮೀ ಬಾರಮ್ಮ ಸೀರಿಯಲ್‌ ಮುಗಿತು. ಇದೀಗ ಈ ಸೀರಿಯಲ್‌ ಅನ್ನ ಕೂಡ ಮುಗಿಸಿಬಿಡಿ.. ಯಾಕೆ ರಬ್ಬರ್‌ ತರ ಎಳಿತಿದ್ದೀರಾ ಅಂತಾ ಕೆಲವರು ಹೇಳಿದ್ದಾರೆ. ಇನ್ನೂ ಕೆಲ ವೀಕ್ಷಕರು, ತಾಂಡವ್‌, ಶ್ರೇಷ್ಠಾ ಎಷ್ಟೇ ಕುತಂತ್ರ ಮಾಡಿದ್ರೂ ಗೆಲ್ಲೋದು ಮಾತ್ರ ಭಾಗ್ಯನೇ.

Shwetha M

Leave a Reply

Your email address will not be published. Required fields are marked *