ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ವೈಷ್ಣವಿ ಗೌಡ –  ಹುಡುಗ ಯಾರು?

ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ವೈಷ್ಣವಿ ಗೌಡ –  ಹುಡುಗ ಯಾರು?

ಕಿರುತೆರೆ ನಟಿ ವೈಷ್ಣವಿ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಉದ್ಯಮಿ ಅನುಕೂಲ್‌ ಮಿಶ್ರಾ ಎಂಬುವವರ ಜೊತೆ ಸೋಮವಾರ ಎಂಗೇಜ್‌ ಮೆಂಟ್‌ ನಡೆದಿದೆ.

ಇದನ್ನೂ ಓದಿ: 5 ಸೋಲುಗಳಿಂದ ಕಂಗೆಟ್ಟಿದ್ದ ಸಿಎಸ್‌ಕೆಗೆ ಕೊನೆಗೂ ಜಯ – ಹಳೆಯ ಖದರ್‌ನಲ್ಲಿ ಧೋನಿ ಬ್ಯಾಟಿಂಗ್

ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಟಿ ವೈಷ್ಣವಿ ಗೌಡ  ಇಷ್ಟು ದಿನ ಸಿಂಗಲ್​ ಆಗಿದ್ರು. ಮದುವೆ ಯಾವಾಗ ಅಂತಾ ಫ್ಯಾನ್ಸ್‌ ಕೂಡ ಕೇಳ್ತಾ ಬಂದಿದ್ರು.  ಏಪ್ರಿಲ್ 14ರಂದು ನಟಿ ವೈಷ್ಣವಿ ಗೌಡ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಟಿ ವೈಷ್ಣವಿ ಗೌಡ ಉದ್ಯಮಿ ಜೊತೆಗೆ ಮದುವೆಗೆ ರೆಡಿಯಾಗಿದ್ದಾರೆ. ಉದ್ಯಮಿ ಅಕಾಯ್ ಹಾಗೂ ವೈಷ್ಣವಿ ಗೌಡ ಗುರು ಹಿರಿಯರ ಸಮ್ಮುಖದಲ್ಲಿ ಒಬ್ಬರೊಬ್ಬರು ಉಂಗುರ ಬದಲಾಯಿಸಿಕೊಂಡಿದ್ದಾರೆ.

ವೈಷ್ಣವಿ ಗೌಡ ನಿಶ್ಚಿತಾರ್ಥದ ಸಮಾರಂಭದಲ್ಲಿ ಸ್ಯಾಂಡಲ್​​ವುಡ್​ ಸ್ಟಾರ್​ ನಟಿ ಅಮೂಲ್ಯ ಗೌಡ ದಂಪತಿ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ಕಿರುತೆರೆ ಸ್ಟಾರ್​ ನಟ ನಟಿಯರು ಭಾಗಿಯಾಗಿದ್ದು ಇನ್ನೂ ವಿಶೇಷವಾಗಿತ್ತು. ಸದ್ಯ ನಟಿ ಸೀತಾ ರಾಮ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಸೀರಿಯಲ್​ನಲ್ಲಿ ನಟಿ ವೈಷ್ಣವಿ ಗೌಡ ಸೀತಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ ಅಭಿಮಾನಿಗಳು ವೈಷ್ಣವಿ ಗೌಡ ಅವರ ನಟನೆಗೆ ಫಿದಾ ಆಗಿದ್ದಾರೆ.

ವೈಷ್ಣವಿ ಗೌಡ ಅವರು ಮದುವೆ ಆಗುತ್ತಿರುವ ಹುಡುಗ ಯಾರು ಅಂತ ಅಭಿಮಾನಿಗಳು ಹುಡುಕುತ್ತಿದ್ದಾರೆ. ಹುಡುಗನ ಹೆಸರು ಅನುಕೂಲ್‌ ಮಿಶ್ರಾ. ಅನುಕೂಲ್‌ ಅವರನ್ನ ಪ್ರೀತಿಯಿಂದ ಅಕಾಯ್‌ ಎಂದು ಕರೆಯುತ್ತಾರಂತೆ. ಅಕಾಯ್‌ ಇಂಡಿಯನ್‌ ಏರ್‌ಫೋರ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ.

Shwetha M

Leave a Reply

Your email address will not be published. Required fields are marked *