ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಉಗ್ರಂ – ಹೊಸ ಗೆಳತಿಯನ್ನ ಪರಿಚಯಿಸಿದ ಮಂಜು!

ಉಗ್ರಂ ಮಂಜು ಬಿಗ್ ಬಾಸ್ ಮನೆಗೆ ಬಂದ್ಮೇಲೆ ಗೌತಮಿ ಜೊತೆಗೆ ಹೆಚ್ಚು ಕಾಣಿಸಿಕೊಂಡಿದ್ರು. ಗೆಳತಿ ಅಂತಾ ಹೇಳ್ಕೊಂಡು ಟಾಸ್ಕ್‌ಗಿಂತ ಜಾಸ್ತಿ ಗೌತಮಿ ಜೊತೆಗೆ ಕಾಲ ಕಳಿತಾ ಇದ್ರು. ಬಿಗ್ ಬಾಸ್‌ನಿಂದ ಹೊರ ಬಂದ್ಮೇಲೂ ಗೌತಮಿ ದಂಪತಿ ಜೊತೆಗೆ ಸುತ್ತಾಡ್ತಾ ಇದ್ರು. ಇದೀಗ ಉಗ್ರಂ ಮಂಜು ಫ್ಯಾನ್ಸ್ ಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಹೊಸ ಗೆಳತಿಯನ್ನ ಪರಿಚಯಿಸಿದ್ದಾರೆ ಮ್ಯಾಕ್ಸ್ ಮಂಜು.
ಇದನ್ನೂ ಓದಿ: ಬೇಟೆಯಾಡಿದ ಕನ್ನಡದ ಹುಲಿ – ಕರುಣ್ ಗೆ ಕಾಡಿದ್ಯಾಕೆ ರನ್ ಹಸಿವು?
ಉಗ್ರಂ ಮಂಜು ಬಿಗ್ ಬಾಸ್ ಬಳಿಕ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲಿ ‘ಮ್ಯಾಂಗೋ ಪಚ್ಚ’ ಚಿತ್ರ ಕೂಡ ಒಂದು. ಈ ಸಿನಿಮಾದ ನಾಯಕಿ ಕಾಜಲ್ ಕುಂದರ್ ಜೊತೆ ತೆಗೆಸಿಕೊಂಡಿರುವ ಫೋಟೋಗಳನ್ನು ಮಂಜು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಾಜಲ್ ಜೊತೆ ಇರೋ ಫೋಟೋ ಪೋಸ್ಟ್ ಮಾಡಿರೋ ಉಗ್ರಂ, ನನ್ನ ಹೊಸ ಗೆಳತಿ ಕಾಜಲ್ ಕುಂದರ್. ಮ್ಯಾಂಗೋ ಪಚ್ಚ ಸಿನಿಮಾದ ನಟಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ.
ಕಾಜಲ್ ಅವರು ಕನ್ನಡದ ನಟಿ. ಅವರು ಈ ಮೊದಲು ‘ಪೆಪೆ’, ‘ಮೇಘಾ’, ‘ಬಾಂಡ್ ರವಿ’ ರೀತಿಯ ಸಿನಿಮಾಗಳನ್ನು ಮಾಡಿದ್ದಾರೆ. ಈಗ ಅವರಿಗೆ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ನಟಿಸೋ ಅವಕಾಶ ದೊರೆತಿದೆ. ಇದಕ್ಕಾಗಿ ಕಾಜಲ್ ಖುಷಿ ಆಗಿದ್ದಾರೆ.
ಮಂಜು ಹಾಗೂ ಕಾಜಲ್ ಅವರ ಸೀನ್ ಕಾಂಬಿನೇಷನ್ ಇತ್ತು. ಈ ಕಾರಣಕ್ಕೆ ಶೂಟಿಂಗ್ ಬ್ರೇಕ್ ಸಂದರ್ಭದಲ್ಲಿ ಕುಳಿತು ಹರಟೆ ಹೊಡೆದಿದ್ದಾರೆ. ಇವರ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಉಗ್ರಂ ಮಂಜು ಪಾತ್ರ ಯಾವ ರೀತಿಯಲ್ಲಿ ಮೂಡಿ ಬಂದಿದೆ ಎಂಬ ಕುತೂಹಲ ಇದೆ.
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಸುದೀಪ್ ಅವರ ಸೋದರ ಅಳಿಯ ಸಂಚಿತ್ ಸಂಜೀವ್ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರ ರೆಟ್ರೋ ಶೈಲಿಯಲ್ಲಿ ಮೂಡಿ ಬರಲಿದೆ. ಇದು ಅವರು ನಟಿಸುತ್ತಿರೋ ಮೊದಲ ಸಿನಿಮಾ ಆಗಿದೆ.