RCBಗೆ ಉಪ್ಪಿಗಿಂತ ರುಚಿ ಬೇರೆ ಇಲ್ಲ – ಪವರ್ ಪ್ಲೇ ಪವರ್ ಹಿಟ್ಟರ್ ಸಾಲ್ಟ್
ಟ್ರ್ಯಾಕ್ ರೆಕಾರ್ಡ್ ಗೆ ಫ್ರಾಂಚೈಸಿ ಫಿದಾ

RCBಗೆ ಉಪ್ಪಿಗಿಂತ ರುಚಿ ಬೇರೆ ಇಲ್ಲ – ಪವರ್ ಪ್ಲೇ ಪವರ್ ಹಿಟ್ಟರ್ ಸಾಲ್ಟ್ಟ್ರ್ಯಾಕ್ ರೆಕಾರ್ಡ್ ಗೆ ಫ್ರಾಂಚೈಸಿ ಫಿದಾ

ಟಿ-20 ಮ್ಯಾಚ್​ಗಳಲ್ಲಿ ಪವರ್ ಪ್ಲೇನೇ ಮೋಸ್ಟ್ ಇಂಪಾರ್ಟೆಂಟ್. ಆರಂಭದ 6 ಓವರ್​ಗಳಲ್ಲಿ ಏನು ರನ್ಸ್ ಬರುತ್ತೋ ಅಲ್ಲಿಂದಲೇ ಗೇಮ್ ನ ಪ್ರೆಡಿಕ್ಟ್ ಮಾಡ್ತಾ ಹೋಗ್ಬೋದು. ಓಪನಿಂಗ್​ನಲ್ಲಿ ಬರೋ ಬಾಟ್ಸ್​ಮನ್ಸ್​ ಈ ಟೈಮಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡೋ ಜವಾಬ್ದಾರಿ ಇರುತ್ತೆ. ಸೋ ಆ ನಂತ್ರ ಬರುವಂತ ಬ್ಯಾಟ್ಸ್​ಮನ್ಸ್​ಗೆ ಅಷ್ಟೊಂದು ಪ್ರೆಶರ್ ಇರೋದಿಲ್ಲ. ಸೋ ಈ ಕೆಲಸವನ್ನ ಆರ್​ಸಿಬಿಯಲ್ಲಿ ಅಚ್ಚುಕಟ್ಟಾಗಿ ನಿಭಾಯಿಸ್ತಾ ಇರೋದು ಫಿಲ್ ಸಾಲ್ಟ್. ತಮ್ಮ ಹೊಡಿಬಡಿ ಆಟದ ಮೂಲಕವೇ ಅಭಿಮಾನಿಗಳ ಬಾಯಲ್ಲಿ ಉಪ್ಪಿಗಿಂತ ರುಚಿ ಬೇರೆ ಇಲ್ಲ ಅಂತಾ ನಲಿದಾಡ್ತಿದ್ದಾರೆ.

ಇದನ್ನೂ ಓದಿ : ರಾಜಸ್ಥಾನ ವಿರುದ್ಧ ಗೆದ್ದು 3ನೇ ಸ್ಥಾನಕ್ಕೇರಿದ ಆರ್ ಸಿಬಿ – ರೆಡ್ ಆರ್ಮಿಗೆ ಮತ್ತೆ ಚಿನ್ನಸ್ವಾಮಿ ಭಯ

ಬೆಂಗಳೂರು ಟೀಮ್​ನ ಆಲ್ ಟೈಂ ಆಪತ್ಬಾಂಧವ ಟೈಟಲ್ ಇರೋದು ಎಬಿ ಡಿವಿಲಿಯರ್ಸ್​ಗೆ. ಎಬಿಡಿ ಆಡಿದ ಅಷ್ಟೂ ವರ್ಷ ಆರ್​ಸಿಬಿಗೆ ಆಪತ್ಬಾಂಧವನಾಗಿಯೇ ಇದ್ರು. ಇದೀಗ ಈ ವರ್ಷ ಎಬಿಡಿ ಸಾಲಿನಲ್ಲೇ ನಿಲ್ತಾ ಇರೋದು ಫಿಲ್ ಸಾಲ್ಟ್. ಬೆಂಗಳೂರು ಟೀಂ ಪರ ಓಪನಿಂಗ್ ಬ್ಯಾಟ್ಸ್​ಮನ್ ಆಗಿ ಬರೋ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಜೋಡಿ ಸಾಲಿಡ್ ಪರ್ಫಾಮೆನ್ಸ್ ಕೊಡ್ತಿದೆ. ಒಂದ್ಕಡೆ ಸಾಲ್ಟ್ ಹೊಡಿಬಡಿ ಆಟವಾಡ್ತಿದ್ರೆ ಮತ್ತೊಂದೆಡೆ ಕೊಹ್ಲಿ ಸ್ಲೋ ರನ್ಸ್ ಮೂಲಕ ಸಾಥ್ ಕೊಡ್ತಾ ಹೋಗ್ತಾರೆ. ಇವ್ರಿಬ್ಬರ ಜೋಡಿ ಸೆಟಲ್ ಆಯ್ತಂದ್ರೆ ಪವರ್ ಪ್ಲೇ ಮುಗಿಯೋ ಅಷ್ಟ್ರಲ್ಲೇ ತಂಡದ ಸ್ಕೋರ್ ಎದುರಾಳಿಗಳನ್ನ ಡಿಸ್ಟರ್ಬ್ ಮಾಡೋ ಮಟ್ಟಿಗೆ ಬರುತ್ತೆ.

ಆರ್ ಸಿಬಿ ತಂಡದ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಈ ಸೀಸನ್​ನಲ್ಲಿ ಹಿಂದೆಂದಿಗಿಂತ್ಲೂ ಡಿಫ್ರೆಂಟ್ ಆಗಿ ಆಡ್ತಿದ್ದಾರೆ. ಪರ್ಸನಲ್ ಸ್ಕೋರ್ ಗೋಲ್ ಬಿಟ್ಟು ಕಂಪ್ಲೀಟ್ ಆಗಿ ಟೀಮ್​ಗೋಸ್ಕರನೇ ಬ್ಯಾಟ್ ಬೀಸ್ತಿದ್ದಾರೆ. ಪಿಚ್ ಎಂತದ್ದೇ ಇರಲಿ, ಎದುರಾಳಿ ಯಾರೇ ಆಗಿರಲಿ ಸಾಲ್ಟ್ ಅಬ್ಬರಿಸೋಕೆ ನಿಂತ್ರ ಮುಖ ಮೂತಿ ನೋಡ್ದಂಗೆ ಚಚ್ಚುತ್ತಾರೆ. ಅದ್ರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಫಿಲ್ ಸಾಲ್ಟ್ ಅಬ್ಬರಕ್ಕೆ ಬೌಲರ್​ಗಳೆಲ್ಲಾ ಥಂಡಾ ಹೋಡ್ದು ಹೋಗಿದ್ರು. ವರ್ಲ್ಡ್ ಕ್ಲಾಸ್ ಬೌಲರ್ ಮಿಚೆಲ್ ಸ್ಟಾರ್ಕ್ ಅವರಿಗೆ ಒಂದೇ ಓವರ್ ನಲ್ಲಿ 30 ರನ್ ಹೊಡೆದು ಬೆಂಡೆತ್ತಿದ್ರು. ಆವತ್ತು ಸಾಲ್ಟ್ ಇದ್ದ ಫಾರ್ಮ್ ನೋಡಿದ್ರೆ ಅಟ್​ಲೀಸ್ಟ್ 70-80 ರನ್​ಗೆ ಮೋಸ ಇರ್ಲಿಲ್ಲ. ಬಟ್ ಬ್ಯಾಡ್​​ಲಕ್ ರನ್​ಔಟ್​ಗೆ ಬಲಿಯಾಗಿದ್ರು. ಆ ಬಳಿಕ ಯಾವ ಬ್ಯಾಟರ್ ಕೂಡ ಕ್ರೀಚ್ ಕಚ್ಚಿ ನಿಲ್ಲದೆ ಕೊನೆಗೆ ಡಿಸಿ ವಿರುದ್ಧ ಸೋಲು ಕಂಡಿದ್ರು. ಇದೀಗ ಆರ್​ಆರ್ ವಿರುದ್ಧವೂ ಉಪ್ಪು ಇದ್ಮೇಲೆ ಬೌಲರ್ಸ್ ನೀರು ಕುಡೀಬೇಕು ಅಂತಾ ರಾಜಸ್ಥಾನ ಬೌಲರ್​ಗಳನ್ನೂ ದಂಡಿಸಿದ್ರು. ಕೇವಲ 33 ಎಸೆತಗಳಲ್ಲಿ 5 ಬೌಂಡರಿ 6 ಸಿಕ್ಸರ್ ಸಹಿತ 65 ರನ್ ಗಳಿಸಿದರು.

ಸಾಲ್ಟ್ ಕ್ರೀಸ್​ನಲ್ಲಿ ಇರುವಷ್ಟು ಹೊತ್ತು ಕೂಡ ಸ್ಟ್ರೈಕ್ ರೇಟ್ ನೆಕ್ಸ್​ಟ್ ಲೆವೆಲ್​ನಲ್ಲೇ ಇರುತ್ತೆ. ಈ ಸೀಸನ್​ನಲ್ಲಿ 6 ಪಂದ್ಯಗಳನ್ನ ಆಡಿದ್ದು 34.67 ಸರಾಸರಿಯಲ್ಲಿ 208 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕ ಸೇರಿವೆ. ಅದ್ರಲ್ಲೂ ಮೋಸ್ಟ್ ಇಂಪಾರ್ಟೆಂಟ್ ಅಂದ್ರೆ ಅವರ ಸ್ಟ್ರೈಕ್‌ರೇಟ್. ಬರೋಬ್ಬರಿ 185.71ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿದ್ರೂ ಫೀಲ್ಡಿಂಗ್​ನಲ್ಲೂ ಬೆಸ್ಟ್ ಪರ್ಫಾಮೆನ್ಸ್ ಕೊಡ್ತಿದ್ದಾರೆ.  ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಓವರ್ ನಲ್ಲಿ ಟಿಮ್ ಡೇವಿಡ್ ಜೊತೆ ಅವರು ಹಿಡಿದ ಕ್ಯಾಚ್‌ ಆರ್​ಸಿಬಿ ಗೆಲುವಿಗೆ ಕಾರಣ ಆಗಿತ್ತು. ಸಾಲ್ಟ್ ಕೂಡ 360 ಡಿಗ್ರಿಯಲ್ಲಿ ಬ್ಯಾಟ್ ಬೀಸ್ತಿದ್ದು ಎಬಿಡಿ ವಿಲಿಯರ್ಸ್ ಅವರನ್ನು ನೆನಪಿಸುತ್ತಿದ್ದಾರೆ.

ಇಂಗ್ಲೆಂಡ್‌ ತಂಡದ ಸ್ಫೋಟಕ ಬ್ಯಾಟರ್‌ ಫಿಲ್‌ ಸಾಲ್ಟ್‌ ಅವರನ್ನು ಆರ್ ಸಿಬಿ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ  11.50 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಌಕ್ಚುಲಿ ಸಾಲ್ಟ್ ಐಪಿಎಲ್​ಗೆ ಕಾಲಿಟ್ಟು ಇದು ಮೂರನೇ ಸೀಸನ್ ಅಷ್ಟೇ. 2023ರಲ್ಲಿ ಐಪಿಎಲ್​ಗೆ ಡೆಬ್ಯೂ ಮಾಡಿದ್ದ ಸಾಲ್ಟ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ರು. ಇನ್ನು 2024ರಲ್ಲಿ ಚಾಂಪಿಯನ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ರು. ಕೆಕೆಆರ್ ಪರ 12 ಪಂದ್ಯಗಳಲ್ಲಿ ಕಣಕ್ಕಿಳಿದು 182ರ ಸ್ಟ್ರೈಕ್ ರೇಟ್​ನಲ್ಲಿ 435 ರನ್ ಕಲೆ ಹಾಕಿದ್ರು. ಕೊಲ್ಕತ್ತಾ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. 2 ಕೋಟಿಗೆ ಡೆಲ್ಲಿ ಸೇರಿದ್ದ ಸಾಲ್ಟ್ ಅದೇ ಬೆಲೆಗೆ ಕೆಕೆಆರ್​ನಲ್ಲೂ ಕಂಟಿನ್ಯೂ ಆಗಿದ್ರು. ಹೀಗೆ 2 ಕೋಟಿ ಪಡೀತಿದ್ದ ಸಾಲ್ಟ್​ರನ್ನ ಆರ್​ಸಿಬಿ ಹನ್ನೊಂದೂವರೆ ಕೋಟಿಗೆ ಖರೀದಿ ಮಾಡಿದಾಗ ಲೇವಡಿ ಮಾಡಿದ್ದವ್ರೇ ಹೆಚ್ಚಿದ್ರು. ಆದ್ರೀಗ ಅಷ್ಟೊಂದು ಹಣ ಕೊಟ್ಟಿದ್ದು ಯಾಕೆ ಅಂತಾ ಟೀಕಾಕಾರರಿಗೂ ಗೊತ್ತಾಗಿದೆ.

ಅಷ್ಟಕ್ಕೂ ಇಲ್ಲಿ ಫಿಲ್ ಸಾಲ್ಟ್ ರನ್ನ ಆರ್ ಸಿಬಿ ಫ್ರಾಂಚೈಸಿ ಸುಖಾಸುಮ್ಮನೆ ಖರೀದಿ ಮಾಡಿರಲಿಲ್ಲ. ಸಾಕಷ್ಟು ಕ್ಯಾಲ್ಕುಲೇಟ್ ಮಾಡಿಯೇ ಪಿಕ್ ಮಾಡಿರೋದು. 28 ವರ್ಷದ ಇಂಗ್ಲೆಂಡ್ ತಂಡದ ಸ್ಫೋಟಕ ಆಟಗಾರ ಫಿಲ್​ ಸಾಲ್ಟ್​​ ತನ್ನ ಕರಿಯರ್​ನಲ್ಲೇ ಶೇ. 28ರಷ್ಟು ಸಮಯ ಒಂದು ಓವರ್​​ನಲ್ಲಿ 6-8 ರನ್​​ ಗಳಿಸುತ್ತಾರೆ. ಶೇ. 30ರಷ್ಟು ಸಮಯ 1 ಓವರ್​​ನಲ್ಲಿ 12-15 ರನ್​​ ಕಲೆ ಹಾಕುತ್ತಾರೆ. 4 ಓವರ್​​ಗಳ ಪೈಕಿ 1ರಲ್ಲಿ 16ಕ್ಕೂ ಹೆಚ್ಚು ರನ್​​​ ಸಿಡಿಸುತ್ತಾರೆ. ಆವರೇಜ್​​ 2 ಓವರ್​​ಗೆ ಒಮ್ಮೆ 12 ರನ್​​ ಬಾರಿಸೋ ಸಾಮರ್ಥ್ಯ ಇವ್ರಲ್ಲಿದೆ. ಇವ್ರ ಟ್ರ್ಯಾಕ್​​ ರೆಕಾರ್ಡ್​ ನೋಡಿಯೇ ಆರ್​​ಸಿಬಿ ಇವ್ರನ್ನ ಪರ್ಚೇಸ್ ಮಾಡಿತ್ತು. ಅಗ್ರೆಸ್ಸಿವ್ ಬ್ಯಾಟಿಂಗ್ ಮತ್ತು ಎಕ್ಸ್​ಪ್ಲೋಸಿವ್ ಸ್ಟಾರ್ಟ್​ನಿಂದಲೇ ಫೇಮಸ್ ಆಗಿರೋ ಸಾಲ್ಟ್ ಆರ್ ಸಿಬಿ ಪರವೂ ಸ್ಫೋಟಕ ಇನ್ನಿಂಗ್ಸ್ ಆಡ್ತಿದ್ದಾರೆ.

Shantha Kumari

Leave a Reply

Your email address will not be published. Required fields are marked *