ರಾಜಸ್ಥಾನ ವಿರುದ್ಧ ಗೆದ್ದು 3ನೇ ಸ್ಥಾನಕ್ಕೇರಿದ ಆರ್ ಸಿಬಿ – ರೆಡ್ ಆರ್ಮಿಗೆ ಮತ್ತೆ ಚಿನ್ನಸ್ವಾಮಿ ಭಯ

18ನೇ ಸೀಸನ್ನ ಐಪಿಎಲ್ ಆಲ್ಮೋಸ್ಟ್ ಫಸ್ಟ್ ಆಫ್ ಮುಕ್ತಾಯದ ಹಂತಕ್ಕೆ ಬಂದಿದೆ. ಹತ್ತೂ ತಂಡಗಳೂ ಸೋಲು ಗೆಲುವುಗಳನ್ನ ಕಂಡಿದ್ದು ಈಗಾಗ್ಲೇ ಪ್ಲೇಆಫ್ ಲೆಕ್ಕಾಚಾರ ಶುರುವಾಗಿದೆ. ಈ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಕೂಡ ಚೆನ್ನಾಗೇ ಪರ್ಫಾಮ್ ಮಾಡ್ತಿದೆ. ಹೋಂ ಗ್ರೌಂಡ್ನಲ್ಲಿ ಮುಗ್ಗರಿಸ್ತಿದ್ರೂ ಅವೇ ಸ್ಟೇಡಿಯಮ್ಗಳಲ್ಲಿ ಗೆದ್ದು ಬೀಗ್ತಿದೆ.
ಇದನ್ನೂ ಓದಿ : ಸ್ಯಾಂಡಲ್ವುಡ್ನ ಹಿರಿಯ ನಟ ಬ್ಯಾಂಕ್ ಜನಾರ್ಧನ್ ವಿಧಿವಶ – ಸಂಜೆ 4 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಆರ್ಸಿಬಿ ಟೀಂ ಈ ಸಲ ತುಂಬಾನೇ ಡಿಫ್ರೆಂಟ್ ಆಗಿ ಕಾಣ್ತಾ ಇದೆ. ಪ್ರತೀ ಸಲ ಗೆದ್ದಿದ್ದಕ್ಕಿಂತ ಸೋಲಿನ ನಂಬರ್ಗಳೇ ಜಾಸ್ತಿ ಇರ್ತಾ ಇತ್ತು. ಬಟ್ ಈ ಸಲ ಅಭಿಮಾನಿಗಳಿಗೆ ನಿರಾಸೆ ಮೂಡಿಸಿಲ್ಲ. ಹೋಂ ಗ್ರೌಂಡ್ನಲ್ಲಿ ಗೆಲ್ತಾ ಇಲ್ಲ ಅನ್ನೋದನ್ನ ಬಿಟ್ರೆ ಹೊರಗಡೆ ಆಡಿರುವಂತ ಎಲ್ಳಾ ಮ್ಯಾಚ್ಗಳನ್ನೂ ಗೆದ್ಕೊಂಡು ಬಂದಿದ್ದಾರೆ. ಭಾನುಬಾರ ಜೈಪುರದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆದ್ದು ಬೀಗಿದೆ. ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ ಆರ್ಆರ್ 20 ಓವರ್ಗಳಲ್ಲಿ 173 ರನ್ ಕಲೆ ಹಾಕಿತು. ಈ ಟಾರ್ಗೆಟ್ ಬೆನ್ನತ್ತಿದ ಆರ್ ಸಿಬಿ ಪರ ಕೊಹ್ಲಿ ಌಂಡ್ ಸಾಲ್ಟ್ ಸೂಪರ್ ಡೂಪರ್ ಪಾರ್ಟರ್ಶಿಪ್ ಕೊಟ್ರು. ಆ ಬಳಿಕ ಬಂದ ದೇವದತ್ ಪಡಿಕ್ಕಲ್ ಕೂಡ 40 ರನ್ ಬಾರಿಸಿದ್ರು. 17ನೇ ಓವರ್ನಲ್ಲೇ 1 ವಿಕೆಟ್ ನಷ್ಟಕ್ಕೆ ಆರ್ಸಿಬಿ ಟಾರ್ಗೆಟ್ ರೀಚ್ ಮಾಡೋ ಮೂಲಕ ಗೆದ್ದು ಬೀಗಿತು. ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಈ ಮ್ಯಾಚಲ್ಲಿ 60+ ರನ್ ಸ್ಕೋರ್ ಮಾಡಿದ್ರು. ಈ ಗೆಲುವಿನ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನಕ್ಕೇರಿದೆ.
ಇನ್ನು ರಾಜಸ್ಥಾನ ವಿರುದ್ಧದ ಪಂದ್ಯದ ಮೂಲಕ ಕೊಹ್ಲಿ ವಿಶೇಷ ದಾಖಲೆಯೊಂದನ್ನ ಮಾಡಿದ್ದಾರೆ. 40 ಎಸೆತಗಳಲ್ಲಿ ಅರ್ಧಶತಕ ಕಂಪ್ಲೀಟ್ ಮಾಡಿದ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಕಿಂಗ್ ಕೊಹ್ಲಿ 100 ಅರ್ಧಶತಕಗಳನ್ನು ಪೂರೈಸಿದ ದಾಖಲೆಯನ್ನು ನಿರ್ಮಿಸಿದ್ದಾರೆ. ರಾಜಸ್ಥಾನ್ ವಿರುದ್ಧ ಅಜೇಯ 62 ರನ್ಗಳ ಇನ್ನಿಂಗ್ಸ್ ಆಡಿದ ಕೊಹ್ಲಿ ಈ ಅರ್ಧಶತಕದೊಂದಿಗೆ ಈ ಸಾಧನೆ ಮಾಡಿದ ಮೊದಲ ಏಷ್ಯಾದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿಗಿಂತ ಮೊದಲು, ಇಲ್ಲಿಯವರೆಗೆ ಯಾವುದೇ ಏಷ್ಯಾದ ಆಟಗಾರನಿಗೂ ಚುಟುಕು ಮಾದರಿಯಲ್ಲಿ 100 ಅರ್ಧಶತಕಗಳನ್ನು ಬಾರಿಸಲು ಸಾಧ್ಯವಾಗಿಲ್ಲ. ಇದರರ್ಥ ವಿರಾಟ್ ಕೊಹ್ಲಿ ತಮ್ಮ ಟಿ20 ವೃತ್ತಿಜೀವನದ 100ನೇ ಅರ್ಧಶತಕ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಟಿ20ಯಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಮೊದಲ ಆಟಗಾರ ಡೇವಿಡ್ ವಾರ್ನರ್. ಅವರು ಇಲ್ಲಿಯವರೆಗೆ 108 ಅರ್ಧಶತಕಗಳನ್ನು ಗಳಿಸಿದ್ದಾರೆ. ಇವರಲ್ಲದೆ, ವಿರಾಟ್ ಕೊಹ್ಲಿ ಈಗ 100 ಅರ್ಧಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಬಾಬರ್ ಆಝಂ ಇದ್ದು, ಅವರು ಇಲ್ಲಿಯವರೆಗೆ 90 ಅರ್ಧಶತಕಗಳನ್ನು ಗಳಿಸಿದ್ದಾರೆ.
ಹೌದು. ಬೆಂಗಳೂರು ಟೀಮ್ನ ಕಾಡ್ತಿರೋದೇ ಚಿನ್ನಸ್ವಾಮಿ ಕ್ರೀಡಾಂಗಣ. ಮನೆಗೆ ಇಲಿ ಬೀದಿಯಲ್ಲಿ ಹುಲಿ ಅನ್ನಂಗಾಗಿದೆ ಅವ್ರ ಪರಿಸ್ಥಿತಿ. ಈಡನ್ ಗಾರ್ಡನ್ಸ್ನಲ್ಲಿ ಉದ್ಘಾಟನಾ ಪಂದ್ಯದಲ್ಲೇ ಕೆಕೆಆರ್ನ ಬಗ್ಗು ಬಡಿದು ಬಂದ್ರು. ಆಮೇಲೆ ಚೆಪಾಕ್ನಲ್ಲಿ 17 ವರ್ಷಗಳ ಬಳಿಕ ಸಿಎಸ್ಕೆ ಟೀಮ್ಗೆ ಮಣ್ಣು ಮುಕ್ಕಿಸಿದ್ರು. ಆಟಗಾರರ ಫಾರ್ಮ್ ನೋಡಿದ್ರೆ ಹ್ಯಾಟ್ರಿಕ್ ವಿಕ್ಟರಿ ಅಂತಾ ಕಾಯ್ತಾ ಇದ್ರು. ಅದೂ ಅಲ್ದೇ ಮೂರನೇ ಮ್ಯಾಚ್ ಇದ್ದದ್ದು ಗುಜರಾತ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ. ಹೋಂ ಗ್ರೌಂಡ್ ಅಡ್ವಾಂಟೇಜ್ ಇದ್ದೇ ಇರುತ್ತೆ, ಸೋ ಹ್ಯಾಟ್ರಿಕ್ ಗೆಲುವು ಫಿಕ್ಸ್ ಅಂತಾ ಅಭಿಮಾನಿಗಳೆಲ್ಲಾ ಜೋಶ್ನಲ್ಲೇ ಮೈದಾನಕ್ಕೆ ಹೋಗಿದ್ರು. ಬಟ್ ಆವತ್ತು ಗಿಲ್ ನೇತೃತ್ವದ ಜಿಟಿ ವಿರುದ್ಧ ಟಾಸ್ ಸೋಲೋದ್ರ ಜೊತೆಗೆ ಮ್ಯಾಚ್ನೂ ಸೋತಿದ್ರು. ಆ ಬಳಿಕ ಮುಂಬೈನ ವಾಂಖೆಡೆ ಸ್ಟೇಡಿಯಮ್ನಲ್ಲಿ 10 ವರ್ಷಗಳ ಬಳಿಕ ಎಂಐ ತಂಡಕ್ಕೂ ಆ ಮೈದಾನದಲ್ಲಿ ಸೋಲಿನ ರುಚಿ ತೋರಿಸಿದ್ರು. ಸೋ ಮುಂಬೈ ಮಣಿಸಿ ಬೆಂಗಳೂರಿಗೆ ಕಾಲಿಟ್ಟ ಆರ್ಸಿಬಿಗೆ ಮತ್ತೆ ತವರಿನಲ್ಲಿ ಆಘಾತ ನೀಡಿದ್ದು ಡಿಸಿ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಾಸ್ ಗೆದ್ದು ಮ್ಯಾಚ್ನೂ ಗೆದ್ದುಕೊಳ್ತು. ಕನ್ನಡಿಗ ಕೆಎಲ್ ರಾಹುಲ್ರೇ ಡೆಲ್ಲಿ ತಂಡವನ್ನ ಗೆಲ್ಲಿಸಿದ್ರು. ಸೋ ಸತತ ಎರಡನೇ ಬಾರಿಗೆ ತವರಿನಲ್ಲಿ ಸೋತ ಆರ್ಸಿಬಿ ಜೈಪುರಕ್ಕೆ ಹಾರಿ ರಾಜಸ್ಥಾನವನ್ನ ಸೋಲಿಸಿ ಬಂದಿದೆ. ಕನ್ನಡಿಗ ರಾಹುಲ್ ದ್ರಾವಿಡ್ ಕೋಚ್ ಆಗಿರುವ ಆರ್ಆರ್ ತಂಡಕ್ಕೆ ಸೋಲುಣಿಸಿದೆ. ಬಟ್ ಅಸಲಿ ಚಾಲೆಂಜ್ ಇರೋದು ಈಗ.
ಬೆಂಗಳೂರಿಗೆ ಈ ಸೀಸನ್ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ತುಂಬಾನೇ ಸ್ಟ್ರಾಂಗ್ ಆಗಿದ್ರೂ ಬ್ಯಾಡ್ಲಕ್ನಂತೆ ಕಾಡ್ತಿರೋದು ಚಿನ್ನಸ್ವಾಮಿ ಮೈದಾನ. ನಮ್ಮದೇ ಗ್ರೌಂಡ್ ಆಗಿದ್ರೂ ಎದುರಾಳಿಗಳೇ ಬಂದು ಗೆದ್ಕೊಂಡು ಹೋಗ್ತಿದ್ದಾರೆ. ಇದೀಗ ಏಪ್ರಿಲ್ 18ರಂದು ಚಿನ್ನಸ್ವಾಮಿ ಮೈದಾನದಲ್ಲಿ ಪಂಜಾಬ್ ವಿರುದ್ಧ ಆರ್ಸಿಬಿ ತನ್ನ 7ನೇ ಪಂದ್ಯವನ್ನ ಆಡಲಿದೆ. ಈ ವರ್ಷ ಪಂಜಾಬ್ ತಂಡ ಹಿಂದೆಂದಿಗಿಂತ್ಲೂ ಸೂಪರ್ ಸ್ಟ್ರಾಂಗ್ ಆಗಿ ಕಾಣ್ತಿದೆ. ಕಳೆದ ಶನಿವಾರದ ಪಂದ್ಯದಲ್ಲಿ ಪಂಜಾಬ್ ಬ್ಯಾಟರ್ಸ್ 245 ರನ್ ಕಲೆ ಹಾಕಿದ್ರು. ಬಟ್ ಆವತ್ತು ವಿಶ್ವರೂಪ ತಾಳಿದ್ದ ಹೈದ್ರಾಬಾದ್ ಪ್ಲೇಯರ್ಸ್ ಇದ್ಯಾವ್ ಸೀಮೆ ಟಾರ್ಗೆಟ್ ಅನ್ನೋ ಲೆಕ್ಕದಲ್ಲಿ ಚೇಸ್ ಮಾಡಿದ್ರು. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ನಿದ ಇನ್ನೂ 9 ಬಾಲ್ಗಳು ಇರುವಂತೆಯೇ ಮ್ಯಾಚ್ ಫಿನಿಶ್ ಮಾಡಿದ್ರು. ಸೋ ಬಿಗ್ ಸ್ಕೋರ್ ಕಲೆ ಹಾಕಿಯೂ ಸೋತಿರೋ ಪಂಜಾಬ್ ಗೆಲುವಿನ ಟ್ರ್ಯಾಕ್ಗೆ ಬರೋಕೆ ಕಾಯ್ತಿದೆ. ಚಿನ್ನಸ್ವಾಮಿಯಂತ ಚಿಕ್ಕ ಪಿಚ್ನಲ್ಲಿ ಅವ್ರೂ ಕೂಡ ರನ್ ಮಳೆ ಹರಿಸಬಹುದು.