RUN OUT ಸ್ಪೆಷಲಿಸ್ಟ್ ಕೊಹ್ಲಿ -ವಿರಾಟ್ ತಪ್ಪಿಗೆ ಪಾರ್ಟ್ನರ್ಸ್ ಔಟ್

ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿದ್ದಾಗ ಫುಲ್ ಌಕ್ಟೀವ್ ಆಗಿರ್ತಾರೆ. ಸ್ಟೈಲಿಶ್ ಆಗಿ ಫೋರ್, ಸಿಕ್ಸ್ ಬಾರಿಸೋ ಕೊಹ್ಲಿ ಅಷ್ಟೇ ವೇಗವಾಗಿ ಓಡಿ ರನ್ ಕದಿತಾರೆ. ಯಾಕಂದ್ರೆ ಅವ್ರು ಸಿಕ್ಕಾಪಟ್ಟೆ ಫಿಟ್ ಆಗಿರೋದ್ರಿಂದ ಹಿಂದೆ ಮುಂದೆ ನೋಡೋದೇ ಇಲ್ಲ. ಬಾಲ್ ಪಕ್ಕದಲ್ಲೇ ಬಿದ್ದಿದ್ರೂ ಪಟ್ ಅಂತಾ ಒಂದು ತುದಿಯಿಂದ ಇನ್ನೊಂದು ತುದಿ ತಲುಪಿ ಬಿಡ್ತಾರೆ. ಜೊತೆಗಿದ್ದ ಬ್ಯಾಟರ್ ಅರ್ಧ ಪಿಚ್ನಲ್ಲಿ ಇರುವಾಗ್ಲೇ ಇವ್ರು ಆಲ್ರೆಡಿ ಕ್ರೀಸ್ನಲ್ಲಿರ್ತಾರೆ. ಬಟ್ ಈ ಅರ್ಜೆನ್ಸಿ, ಈ ಅಗ್ರೆಶನ್, ಸ್ಪೀಡ್ ಸಹ ಬ್ಯಾಟರ್ಸ್ಗೆ ಕಂಟಕ ಆಗ್ತಿದೆ.
ಇದನ್ನೂ ಓದಿ : 3ನೇ ಸ್ಲಾಟ್.. 5 ಪಂದ್ಯಗಳಿಂದ 78 ರನ್ – RCBಗೆ ಭಾರವಾದ್ರಾ ದೇವದತ್ ಪಡಿಕ್ಕಲ್?
ಡಿಸಿ ವಿರುದ್ಧದ ಮ್ಯಾಚಲ್ಲಿ ನೀವೆಲ್ಲಾ ನೋಡೋ ಇರ್ತೀರಾ. ಸ್ಫೋಟಕ ಇನ್ನಿಂಗ್ಸ್ ಆಡ್ತಿದ್ದ ಫಿಲ್ ಸಾಲ್ಟ್ ಔಟ್ ಆಗಿಲ್ಲ ಅಂದ್ರೆ ಆವತ್ತು ಮ್ಯಾಚ್ ರಿಸಲ್ಟ್ ಬಹುಶಃ ಬೇರೆಯದ್ದೇ ಆಗಿರ್ತಿತ್ತು. ಕೇವಲ 17 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 37 ರನ್ ಸಿಡಿಸಿ ಮುನ್ನುಗ್ಗುತ್ತಿದ್ದ ಫಿಲ್ ಸಾಲ್ಟ್ ಅತೀ ಕೆಟ್ಟದಾಗಿ ರನ್ ಔಟ್ಗೆ ಬಲಿಯಾದ್ರು. ಡಿಸಿ ಆಟಗಾರರಾದ ವಿಪ್ರಾಜ್ ನಿಗಮ್ ಹಾಗೂ ಕೆ ಎಲ್ ರಾಹುಲ್ ಸೇರಿ ರನೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಫಿಲ್ ಸಾಲ್ಟ್ ಆಫ್‌ಸೈಡ್‌ನಲ್ಲಿ ಬಾರಿಸಿ ರನ್ ಗೆ ಓಡಬೇಕೋ ಬೇಡ್ವೋ ಅನ್ನೋ ಗೊಂದಲದಲ್ಲಿದ್ದಾಗಲೇ ಮತ್ತೊಂದು ತುದಿಯಲ್ಲಿದ್ದ ವಿರಾಟ್ ಓಡೋಕೆ ಶುರು ಮಾಡಿದ್ರು. ಹೀಗಾಗಿ ಸಾಲ್ಟ್ ಕೂಡ ಅನಿವಾರ್ಯವಾಗಿ ಓಡಬೇಕಾಯ್ತು. ಆದ್ರೆ ಕೊನೆಯ ಕ್ಷಣದಲ್ಲಿ ಬಾಲ್ ಫೀಲ್ಡರ್ಕೈಗೆ ಸಿಗ್ತಿದ್ದಂತೆ ವಿರಾಟ್ ಕೊಹ್ಲಿ ಹಿಂದೆ ಸರಿದಿದ್ದರಿಂದ ಫಿಲ್ ಸಾಲ್ಟ್ ಔಟ್ ಆಗಿ ಪೆವಿಲಿಯನ್ ಸೇರಬೇಕಾಗಿ ಬಂತು. ಹೆಚ್ಚಿನ ರನ್ ಗಳಿಸಲು ಹೋಗಿ ಕೊಹ್ಲಿ ತನ್ನ ಸಹ ಆಟಗಾರನನ್ನು ರನೌಟ್ ಮಾಡಿಸಿದ್ದು ಇದೇ ಮೊದಲಲ್ಲ. ಅಥವಾ ಕೊಹ್ಲಿಯೇ ರನೌಟ್ ಆಗಿರುವುದು ಕೂಡ ಇದೇ ಮೊದಲಲ್ಲ.
ರನ್ ಕದಿಯೋದ್ರಲ್ಲಿ ಕೊಹ್ಲಿ ಎಷ್ಟು ನಿಪುಣರೋ ರನ್ ಔಟ್ ಮಾಡಿಸೋದ್ರಲ್ಲೂ ಅಷ್ಟೇ ಬೇಡದ ದಾಖಲೆ ಬರೆದಿದ್ದಾರೆ. ಇದಕ್ಕೂ ಮೊದಲು ಐಪಿಎಲ್‌ನಲ್ಲಿ ಬರೋಬ್ಬರಿ 32 ಬಾರಿ ಈ ತಪ್ಪನ್ನು ಎಸಗಿದ್ದಾರೆ. ಐಪಿಎಲ್ ಆರಂಭದಿಂದಲೂ ಆರ್‌ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ 32 ರನ್ ಔಟ್‌ಗಳಿಗೆ ಕಾರಣರಾಗಿದ್ದಾರೆ. ಈ ಪೈಕಿ ಅವರು ಸ್ವತಃ 8 ಬಾರಿ ಔಟ್ ಆಗಿದ್ದರೆ, ತಮ್ಮ ಸಹ ಆಟಗಾರನನ್ನು 24 ಬಾರಿ ಔಟ್ ಮಾಡಿಸಿದ್ದಾರೆ. ತಾವಷ್ಟೇ ಅಲ್ಲದೇ ತಮ್ಮ ಸಹ ಆಟಗಾರನನ್ನು ತಮ್ಮ ಆತುರದ ನಿರ್ಧಾರದಿಂದ ಕೊಹ್ಲಿ ಬಲಿಪಶು ಮಾಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಬೇಡದ ದಾಖಲೆ ಬರೆದಿದ್ದಾರೆ.
ಕ್ರಿಕೆಟ್ ಅಭಿಮಾನಿಗಳು ಇಂಟ್ರೆಸ್ಟಿಂದ ಮ್ಯಾಚ್ ನೋಡುವಾಗ ಕ್ಯಾಚ್ ಔಟ್ ಆದ್ರೆ ಅಥವಾ ಬೌಲ್ಡ್, ಎಲ್ಬಿಡಬ್ಲ್ಯೂ ಬಲೆಗೆ ಬಿದ್ರೆ ಅಷ್ಟು ಹರ್ಟ್ ಆಗಲ್ಲ. ಬಟ್ ರನ್ ಔಟ್ ಆಗೋದು ಬ್ಯಾಟರ್ಗಳ ಸೆಲ್ಫ್ ಸೂಸೈಡ್ ಅದು. ಬ್ಯಾಟರ್ಗಳ ಆತುರದಿಂದಲೇ ವಿಕೆಟ್ ಕಳ್ಕೊಳ್ಳೋದು. ಈ ಟೈಮಲ್ಲಿ ಆಟಗಾರನಿಗೆ ಎಷ್ಟು ಬೇಸರ ಆಗುತ್ತೋ ಅದ್ರ ದುಪ್ಪಟ್ಟು ನೋಡುಗರಿಗೆ ಆಗುತ್ತೆ. ಡಿಸಿ ವಿರುದ್ಧದ ಮ್ಯಾಚಲ್ಲೂ ಹಂಗೇ ಆಗಿದ್ದು. ಸ್ಟಾರ್ಟಿಂಗ್ ರನ್ಸ್ ಬರೋದನ್ನ ನೋಡಿ ಹುಚ್ಚೆದ್ದು ಕುಣೀತಿದ್ರು ಫ್ಯಾನ್ಸ್. ಬಟ್ ಸಾಲ್ಟ್ ರನ್ ಔಟ್ ಆದಾಗ ನಿಜಕ್ಕೂ ಅಭಿಮಾನಿಗಳಿಗೆ ಹಾರ್ಟ್ ಬ್ರೇಕ್ ಆದ ಕ್ಷಣ. ಅದೇ ರನ್ಔಟ್ಗೆ ನಾವು ಮ್ಯಾಚ್ ಕಳ್ಕೊಂಡ್ವಿ ಕೂಡ. ಸೋ ಬ್ಯಾಟಿಂಗ್ ಟೈಮಲ್ಲಿ ಪಾರ್ಟರ್ಗಳ ಕಮ್ಯುನಿಕೇಶನ್ ಕರೆಕ್ಟ್ ಆಗಿರ್ಬೇಕು. ಇಲ್ದೇ ಇದ್ರೆ ವಿಕೆಟ್ ಕಳ್ಕೊಳ್ಬೇಕಾಗುತ್ತೆ. ಕೊಹ್ಲಿ ಫಿಟ್ ಌಂಡ್ ಫೈನ್ ಇದ್ದಾರೆ. ಕ್ವಿಕ್ ಆಗಿ ಓಡ್ತಾರೆ. ಬಟ್ ಜೊತೆಗಿದ್ದ ಬ್ಯಾಟರ್ಸ್ ಬಗ್ಗೆಯೂ ಅವ್ರು ಯೋಚನೆ ಮಾಡ್ಬೇಕಾಗುತ್ತೆ.

ನೋಡಿರಿ

