ಜೈಸ್ವಾಲ್ ದಿಲ್ ಕದ್ದ ವಿದೇಶಿ ಬ್ಯೂಟಿ.. – ಬೆಡ್ ರೂಮ್ ಫೋಟೋ.. ಗುಟ್ಟು ರಟ್ಟು!
ಯಶಸ್ವಿ ಸೆಕೆಂಡ್ ಇನ್ನಿಂಗ್ಸ್ ಶುರು?

ಯಶಸ್ವಿ ಜೈಸ್ವಾಲ್.. ಟೀಮ್ ಇಂಡಿಯಾದ ಈ ಯುವ ಬ್ಯಾಟರ್ ಈಗ ಐಪಿಎಲ್ ನಲ್ಲಿ ಆಟ ಆಡ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಆಡ್ತಿರೋ ಜೈಸ್ವಾಲ್ ಬ್ಯಾಟಿಂಗ್ ಈ ಬಾರಿ ಫುಲ್ ಸೈಲೆಂಟ್ ಆಗಿದೆ. ಹೀಗಾಗಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗ್ತಿದ್ದಾರೆ. ಜೈಸ್ವಾಲ್ ಆಟ ಮಾತ್ರವಲ್ಲದೇ ಅವ್ರ ವೈಯಕ್ತಿಕ ಜೀವನ ಕೂಡ ಚರ್ಚೆಯಲ್ಲಿದೆ. ಜೈಸ್ವಾಲ್ ಪ್ರೀತಿಯಲ್ಲಿ ಬಿದ್ದಿರೋ ಮ್ಯಾಟರ್ ರಿವೀಲ್ ಆಗಿದೆ. ಅಷ್ಟಕ್ಕೂ ಯುವ ಬ್ಯಾಟರ್ ಮನಸ್ಸು ಕದ್ದ ಚೆಲುವೆ ಯಾರು? ಈ ಮ್ಯಾಟರ್ ರಿವೀಲ್ ಆಗಿದ್ದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ತವರಲ್ಲೇ ಸೋಲುಂಡ ಆರ್‌ಸಿಬಿ – ಡೆಲ್ಲಿ ಕ್ಯಾಪಿಟಲ್ಸ್ ಗೆ 6 ವಿಕೆಟ್ಗಳ ಭರ್ಜರಿ ಜಯ
ಐಪಿಎಲ್ 2025 ರಲ್ಲಿ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿದ್ದಾರೆ. ಆದ್ರೆ ಈ ವರ್ಷದ ಟೂರ್ನಿಯಲ್ಲಿ ಜೈಸ್ವಾಲ್ ನಿರೀಕ್ಷಿತ ಪ್ರದರ್ಶನ ನೀಡ್ತಿಲ್ಲ.. ಆದ್ರೂ ಜೈಸ್ವಾಲ್ ಭಾರಿ ಚರ್ಚೆಯಲ್ಲಿದ್ದಾರೆ. ಇತ್ತೀಚೆಗೆ ಜೈಸ್ವಾಲ್ ಮುಂಬೈ ತಂಡವನ್ನು ಬಿಟ್ಟು ಗೋವಾ ತಂಡವನ್ನು ಸೇರುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಈ ಸುದ್ದಿ ಜೈಸ್ವಾಲ್ ಅಭಿಮಾನಿಗಳಿಗೂ ಶಾಕ್ ಆಗುವಂತೆ ಆಗಿತ್ತು. ಇವೆಲ್ಲದ್ರ ಮಧ್ಯೆ ಜೈಸ್ವಾಲ್ ಮತ್ತೊಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಯುವ ಬ್ಯಾಟರ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ವಿದೇಶಿ ಬ್ಯೂಟಿ ಜೊತೆ ಯಂಗ್ ಕ್ರಿಕೆಟರ್ ಸಿಕ್ಕಿ ಬಿದ್ದಿದ್ದಾರೆ.. ಇದೀಗ ಪ್ರೇಯಸಿ ಎಂದು ಹೇಳಲಾಗ್ತಿರೋ ಯುವತಿ ಫೋಟೋ ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ..
ಅಂದ್ಹಾಗೆ ಜೈಸ್ವಾಲ್ ಮನಸ್ಸು ಕದ್ದಿರೋ ಚೆಲುವೆ ಹೆಸ್ರು ಮ್ಯಾಡಿ ಹ್ಯಾಮಿಲ್ಟನ್.. ಈಕೆ ಇಂಗ್ಲೆಂಡ್ ಮೂಲದವಳು. ಈಕೆ ಇನ್ನೂ ವ್ಯಾಸಾಂಗ ಮಾಡ್ತಿದ್ದಾಳೆ ಎಂದು ಹೇಳಲಾಗ್ತಿದೆ. ಕಳೆದು ನಾಲ್ಕು ವರ್ಷಗಳಿಂದ ಮ್ಯಾಡಿ ಹಾಗೂ ಜೈಸ್ವಾಲ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗ್ತಿದೆ. ಈ ಹಿಂದೆ ಕೂಡ ಇಂಗ್ಲೆಂಡ್ನಲ್ಲಿ ಇವರಿಬ್ರು ಒಟ್ಟಿಗೆ ಓಡಾಡುತ್ತಿರುವ ಫೋಟೋಗಳು ವೈರಲ್ ಆಗಿತ್ತು. ಇನ್ನು ಜೈಸ್ವಾಲ್, ಮ್ಯಾಡಿ ಫ್ಯಾಮಿಲಿ ಜೊತೆ ಕೂಡ ಫುಲ್ ಕ್ಲೋಸ್ ಆಗಿದ್ದಾರೆ. ಮ್ಯಾಮಿಲ್ಟನ್ ಅಣ್ಣ ಮತ್ತು ಯಶಸ್ವಿ ಫ್ರೆಂಡ್ಸ್. ಹೀಗಾಗಿ ಮ್ಯಾಡಿ ಫ್ಯಾಮಿಲಿ ಜೊತೆಯೂ ಜೈಸ್ವಾಲ್ ಆಗಾಗ ಕಾಣಿಸಿಕೊಳ್ತಿರ್ತಾರೆ. ಇನ್ನು ಮ್ಯಾಡಿ ಜೈಸ್ವಾಲ್ ಪಂದ್ಯ ಇದ್ದಾಗಲೆಲ್ಲಾ ಸ್ಟೇಡಿಯಂ ನಲ್ಲಿ ಕಾಣಿಸಿಕೊಳ್ತಿರ್ತಾರೆ. ಗ್ಯಾಲರಿಯಲ್ಲಿ ಕೂತು ಚಿಯರಪ್ ಮಾಡ್ತಿರ್ತಾರೆ. ಇದೀಗ ಐಪಿಎಲ್ ಟೈಮ್ ನಲ್ಲೂ ಮ್ಯಾಡಿ ಗಿಲ್ ಜೊತೆ ಕಾಣಿಸಿಕೊಂಡಿದ್ದಾರೆ. ಮ್ಯಾಡಿ ಜೊತೆ ಜೈಸ್ವಾಲ್ ಫೋಟೋ ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋದಲ್ಲಿ ಜೈಸ್ವಾಲ್, ಮ್ಯಾಡಿ ಹ್ಯಾಮಿಲ್ಟನ್ ಹಾಗೂ ಆಕೆಯ ಸಹೋದರ ಹೆನ್ರಿ ಹ್ಯಾಮಿಲ್ಟನ್ ಇದ್ದಾರೆ. ಈ ಫೋಟೋ ಶೇರ್ ಮಾಡಿರುವ ಜೈಸ್ವಾಲ್, ಸಮಯ ಕಳೆದು ಹೋಗಬಹುದು. ಬಂಧನಗಳು ಮರೆಯಲಾಗುವುದಿಲ್ಲ. ನಾವು ಕೃತಜ್ಞರಾಗಿರಬೇಕು ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಇಂಟರ್ನೆಟ್ನಲ್ಲಿ ಜೈಸ್ವಾಲ್ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಜೈಸ್ವಾಲ್ ಹೃದಯ ಗೆದ್ದ ಚೋರಿ ಈಕೆಯೇ ಅಂತಾ ಫ್ಯಾನ್ಸ್ ಹೇಳ್ತಿದ್ದಾರೆ. ಆದ್ರೆ ಇವರಿಬ್ಬರು ನಿಜಕ್ಕೂ ಪ್ರೀತಿಯಲ್ಲಿ ಬಿದ್ದಿದ್ದಾರಾ ಅಥವಾ ಜಸ್ಟ್ ಫ್ರೆಂಡ್ಸ್ ಅಂತಾ ಗೊತ್ತಿಲ್ಲ.. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡ್ತಾರಾ ಅಂತಾ ಕಾದು ನೋಡ್ಬೇಕು.