ಇದು ಡಯೆಟ್ ಚಾರ್ಟ್ ಅಲ್ಲ.. ಮದುವೆ ಊಟದ ಮೆನು! – ವೈರಲ್ ಆಯ್ತು ಮೆನು ಕಾರ್ಡ್!

ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರ ಬಾಯಲ್ಲಿ ಕೇಳುವ ಪದವೇ ಈ ಫಿಟ್ ನೆಸ್. ತಮ್ಮ ಫಿಟ್‌ನೆಸ್ ಕಾಪಾಡ್ಕೊಳ್ಬೇಕು ಅಂತಾ ಕುಡಿಯೋ ನೀರಿನಿಂದ ಹಿಡಿದು, ತಿನ್ನೋ ಆಹಾರದವರೆಗೂ ಅಳೆದು ತೂಗಿ, ಸೇವಿಸ್ತಾರೆ. ಇನ್ನು ಸಮಾರಂಭಕ್ಕೆ ಹೋದ್ರು ಡಯೆಟ್ ಅಂತಾ ವಿವಿಧ ಭಕ್ಷ್ಯ ತಿನ್ನಲ್ಲ.. ಇದೀಗ ಅಂತವರಿಗಾಗೇ ಇಲ್ಲೊಂದು ಮದುವೆ ಮನೆಯಲ್ಲಿ ಊಟದ ಮೆನು ಮಾಡಿಸಿದ್ದಾರೆ. ಇದ್ರಲ್ಲಿ ಪ್ರತಿಯೊಂದು ಆಹಾರದ ಕ್ಯಾಲೋರಿಯನ್ನ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಅಜೇಯ ತಂಡಕ್ಕೆ ಸೋಲಿನ ಶಾಕ್ ಕೊಡುತ್ತಾ ಆರ್ ಸಿಬಿ? – ಗೆಲುವಿನ ಓಟ ಮುಂದುವರಿಸಿತ್ತಾ ಡಿಸಿ?
ಪಶ್ಚಿಮಬಂಗಾಳದಲ್ಲಿ ನಡೆದ ಮದುವೆಯಲ್ಲಿ ಈ ವಿಶೇಷ ಊಟದ ಮೆನು ತಯಾರಿಸಲಾಗಿದೆ. ಪ್ರತಿತಿಯೊಂದು ಆಹಾರದ ಪಕ್ಕದಲ್ಲಿ ಕ್ಯಾಲೋರಿಯನ್ನು ಉಲ್ಲೇಖಿಸಲಾಗಿದೆ. ಇದೀಗ ಈ ಮೆನು ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. r/india social ಹೆಸರಿನ ಖಾತೆಯಲ್ಲೋ ರೆಡ್ಡಿಟ್ ಬಳಕೆ ದಾರರು ಈ ಮೆನು ಕಾರ್ಡ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮೆನು ಕಾರ್ಡ್ ನನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಕಾರ್ಡ್‌ಗೆ ‘ಕ್ಯಾಲೋರಿ ಮೆಮೊ’ ಎಂದು ಹೆಸರಿಸಲಾಗಿದೆ. ಇದರಲ್ಲಿ ನಿಮ್ಮೆಲ್ಲರಿಗೂ ಚಾರಿಟಿ ಹಾಲ್‌ಗೆ ಸ್ವಾಗತ.ನಾವೆಲ್ಲರೂ ಇಂದು ಪ್ರೀತಿಯನ್ನು ಸೆಲೆಬ್ರೇಟ್ ಮಾಡುತ್ತಿದ್ದೇವೆ. ಈ ವಿಶೇಷ ಕ್ಷಣವನ್ನು ನೀವು ಆನಂದಿಸಿ, ಆಹಾರವನ್ನು ಸವಿಯಿರಿ. ಆದರೆ ದಯವಿಟ್ಟು ಆಹಾರವನ್ನು ವ್ಯರ್ಥ ಮಾಡಬೇಡಿ ಎಂದು ಬರೆಯಲಾಗಿದೆ. ಅದಲ್ಲದೇ ವಿಶೇಷ ಖಾದ್ಯಗಳ ಪಟ್ಟಿಯನ್ನು ನೀಡಲಾಗಿದ್ದು ಅದರ ಮುಂಭಾಗದಲ್ಲಿ ಕ್ಯಾಲೋರಿಯನ್ನು ಉಲ್ಲೇಖಿಸಲಾಗಿದೆ.
ಮೆನು ಕಾರ್ಡ್ ಫೋಟೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ನಾನು ಬೆಂಗಾಲಿ ಮದುವೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಉತ್ತರ ಭಾರತದ ಮದುವೆಗಳು ಸಾಮಾನ್ಯವಾಗಿ ಸಸ್ಯಾಹಾರಿ ಆಹಾರವನ್ನು ಹೊಂದಿರುತ್ತದೆ. ಆದರೆ ಬಂಗಾಳಿ ಮದುವೆಗಳಲ್ಲಿ ಬಹುತೇಕ ಎಲ್ಲವೂ ಮಾಂಸಾಹಾರಿಗಳಾಗಿರುತ್ತವೆ ಎಂದಿದ್ದಾರೆ. ಮತ್ತೊಬ್ಬರು, ‘ಅತ್ಯಂತ ಕೆಟ್ಟದಾಗಿ ವಿನ್ಯಾಸಗೊಳಿಸಲಾದ ಮೆನು ಕಾರ್ಡ್‌ಗಳಲ್ಲಿ ಒಂದು’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ಈ ರೀತಿಯ ಮೆನು ಕಾರ್ಡ್ ನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ನಾನು ಜೀವನಶೈಲಿ ಹಾಗೂ ಫಿಟ್ ನೆಸ್ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತೇನೆ. ಆದರೆ, ಈ ಮೆನು ಕಾರ್ಡ್ ಆಹಾರ ಪದ್ಧತಿಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಂದೆರಡು ದಿನಗಳ ಕಾಲ ಈ ರೀತಿ ಆಹಾರ ಸೇವಿಸುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.