ಅಜೇಯ ತಂಡಕ್ಕೆ ಸೋಲಿನ ಶಾಕ್ ಕೊಡುತ್ತಾ ಆರ್ ಸಿಬಿ? – ಗೆಲುವಿನ ಓಟ ಮುಂದುವರಿಸಿತ್ತಾ ಡಿಸಿ?

 ಅಜೇಯ ತಂಡಕ್ಕೆ ಸೋಲಿನ ಶಾಕ್ ಕೊಡುತ್ತಾ ಆರ್ ಸಿಬಿ? – ಗೆಲುವಿನ ಓಟ ಮುಂದುವರಿಸಿತ್ತಾ ಡಿಸಿ?

2025ರ ಐಪಿಎಲ್​ನಲ್ಲಿ ಸೋಲನ್ನೇ ಕಾಣದೇ ಇರೋ ಡೆಲ್ಲಿ ಕ್ಯಾಪಿಟಲ್ಸ್.. ಮತ್ತೊಂದೆಡೆ 4 ಪಂದ್ಯಗಳಲ್ಲಿ ಒಂದು ಮ್ಯಾಚ್ ಸೋತು 3 ಪಂದ್ಯಗಳನ್ನ ಗೆದ್ದು ಭರ್ಜರಿ ಫಾರ್ಮ್​ನಲ್ಲಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ. ಈ ಎರಡೂ ತಂಡಗಳ ನಡುವೆ ಚಿನ್ನಸ್ವಾಮಿ ಮೈದಾನದಲ್ಲಿ ಗುರುವಾರ ಹೈವೋಲ್ಟೇಜ್ ಫೈಟ್ ನಡೆಯಲಿದೆ. ಎರಡೂ ಟೀಮ್​ಗಳೂ ಕಳೆದ ಪಂದ್ಯಗಳಲ್ಲಿ ಗೆಲುವು ಸಾಧಿಸಿರೋದ್ರಿಂದ ಈ ಮ್ಯಾಚ್​ನಲ್ಲೂ ಅದೇ ಟ್ರ್ಯಾಕ್​ ಕಂಟಿನ್ಯೂ ಮಾಡೋಕೆ ಕಾಯ್ತಿದ್ದಾರೆ. ಹೊಸ ಕ್ಯಾಪ್ಟನ್​ಗಳ ಸಾರಥ್ಯದಲ್ಲಿ ಹಿಂದೆಂದಿಗಿಂತಲೂ ಸ್ಟ್ರಾಂಗ್ ಆಗಿರೋ ಈ ತಂಡಗಳ ಕಾದಾಟವೇ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ಕೋಟಿ ಪ್ಲೇಯರ್ಸ್.. ಚಿಲ್ರೆ ಪರ್ಫಾಮೆನ್ಸ್ –  ತಂಡಕ್ಕೆ ಭಾರವಾದ್ರಾ ಸೂಪರ್ ಸ್ಟಾರ್ಸ್?

ಏಪ್ರಿಲ್ 7ರಂದು ಮುಂಬೈನ ವಾಂಖೆಡೆ ಸ್ಟೇಡಿಯಮ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಬೆಂಗಳೂರು ಟೀಂ ಮುಂಬೈ ತಂಡಕ್ಕೆ ಸೋಲಿನ ಆಘಾತ ನೀಡಿತ್ತು. ಬ್ಯಾಟಿಂಗ್, ಬೌಲಿಂಗ್ ಹಾಗೇ ಫೀಲ್ಡಿಂಗ್​ನಲ್ಲೂ ಮಿಂಚಿದ್ದ ಪ್ಲೇಯರ್ಸ್​ ಗೆದ್ದು ಬೀಗಿದ್ರು. 2015 ರ ನಂತರ ವಾಂಖೆಡೆ ಮೈದಾನದಲ್ಲಿ ಎಂಐ ವಿರುದ್ಧದ ಮೊದಲ ಜಯ ಇದಾಗಿತ್ತು. ಇದೇ ಜೋಶ್​ನಲ್ಲೇ ಈಗ ಐದನೇ ಪಂದ್ಯಕ್ಕೆ ರೆಡಿಯಾಗಿದ್ದಾರೆ. ಮತ್ತೊಂದೆಡೆ ಆಡಿರುವಂತ ಮೂರಕ್ಕೆ ಮೂರೂ ಪಂದ್ಯಗಳನ್ನ ಗೆದ್ದು ಟೇಬಲ್ ಟಾಪರ್ ಆಗಿರೋ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕನೇ ಪಂದ್ಯವಲ್ಲೂ ಗೆದ್ದು ಅದೇ ಟ್ರ್ಯಾಕ್​ನಲ್ಲಿ ಕಂಟಿನ್ಯೂ ಮಾಡೋಕೆ ನೋಡ್ತಿದೆ. ಅಲ್ದೇ ಈ ಬಾರಿಯ ಐಪಿಎಲ್​ನಲ್ಲಿ ಒಂದೇ ಒಂದು ಸೋಲನ್ನೂ ನೋಡದ ಏಕೈಕ ತಂಡವಾಗಿದೆ. ಅಕ್ಷರ್ ಪಟೇಲ್ ನೇತೃತ್ವದ ಡಿಸಿ ಎಲ್‌ಎಸ್‌ಜಿ ವಿರುದ್ಧದ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿತ್ತು.  ಆ ನಂತ್ರ ಎಸ್‌ಆರ್‌ಹೆಚ್ ಮತ್ತು ಸಿಎಸ್‌ಕೆ ವಿರುದ್ಧವೂ ಜಯಬೇರಿ ಬಾರಿಸಿತ್ತು.  ಈ ಹ್ಯಾಟ್ರಿಕ್ ಗೆಲುವಿನ ಬಳಿಕ ಡೆಲ್ಲಿ ಆಟಗಾರರ ಕಾನ್ಫಿಡೆನ್ಸ್ ಮತ್ತಷ್ಟು ಹೆಚ್ಚಾಗಿದ್ದು ಬೆಂಗಳೂರಿಗೂ ಶಾಕ್ ಕೊಡೋಕೆ ಕಾಯ್ತಿದ್ದಾರೆ. ಆದ್ರೆ ಪಟೇಲ್ ಪಡೆಗೆ ಮೊದಲ ಸೋಲಿನ ಆಘಾತ ನೀಡೋಕೆ ರೆಡ್ ಆರ್ಮಿ ಪ್ಲ್ಯಾನ್ ಮಾಡ್ಕೊಂಡಿದೆ. ಇನ್ನು ಗುರುವಾರದ ಪಂದ್ಯದಲ್ಲಿ ಒಂದಷ್ಟು ಪ್ಲೇಯರ್ಸ್ ಮೇಲೆ ಎಲ್ಲರ ಕಣ್ಣಿದೆ.

ಆರ್‌ಸಿಬಿ ವರ್ಸಸ್ ಡಿಸಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಮಿಚೆಲ್ ಸ್ಟಾರ್ಕ್ ಹೈಲೆಟ್. ಇಬ್ಬರು ನಡುವೆ ಟಫ್ ಫೈಟ್ ನಡೆಯಲಿದೆ. ಕೊಹ್ಲಿ ಬ್ಯಾಟಿಂಗ್​ನಲ್ಲಿ ಸಾಲಿಡ್ ಫಾರ್ಮ್​ನಲ್ಲಿದ್ರೆ ಸ್ಟಾರ್ಕ್ ಬೌಲಿಂಗ್​ನಲ್ಲಿ ಡಾಮಿನೇಟ್ ಮಾಡ್ತಿದ್ದಾರೆ. ಈ ಇಬ್ಬರು ಆಟಗಾರರು ಮೊದಲ ಆರು ಓವರ್‌ಗಳಲ್ಲಿ ಪರಸ್ಪರ ಸೆಣಸಾಡಲಿದ್ದು, ಯಾರು ಯಾರ ಮೇಲೆ ಮೇಲುಗೈ ಸಾಧಿಸ್ತಾರೆ ನೋಡ್ಬೇಕು. ಇನ್ನು ಮಿಡಲ್ ಓವರ್​ಗಳಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಗೆ ಕುಲ್ದೀಪ್ ಯಾದವ್ ಎದುರಾಗ್ತಾರೆ. ಮಿಡಲ್ ಓವರ್‌ಗಳಲ್ಲಿ ವಿಕೆಟ್ ಪಡೆಯೋದ್ರಲ್ಲಿ ಪಂಟರ್ ಆಗಿರೋ ಕುಲ್ದೀಪ್ ಯಾದವ್ ಅವರ ಸ್ಪಿನ್ ಅನ್ನು ಎದುರಿಸಲಿದ್ದಾರೆ. ಸೋ ಇವ್ರಿಬ್ಬರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇರಲಿದೆ. ಇನ್ನು ಆರ್​ಸಿಬಿಯ ಜೋಶ್ ಹ್ಯಾಜಲ್‌ವುಡ್ ಕಳೆದ ಪಂದ್ಯದಲ್ಲಿ ಮಾಡಿದ ಪ್ರದರ್ಶನವನ್ನೇ ಡಿಸಿ ವಿರುದ್ಧವೂ ನೀಡೋಕೆ ಕಾಯ್ತಿದ್ದಾರೆ. ಎಂಐ ವಿರುದ್ಧ ಹಾರ್ದಿಕ್ ಪಾಂಡ್ಯ ಅವರ ನಿರ್ಣಾಯಕ ವಿಕೆಟ್ ಪಡೆದು ಬ್ರೇಕ್ ಥ್ರ್ಯೂ ತನ್ಕೊಟ್ಟಿದ್ರು. ಇನ್ನು ಡಿಸಿ ಪರ ಅದ್ಭುತ ಪ್ರದರ್ಶನ ನೀಡ್ತಿರೋ ಫಾಫ್ ಡುಪ್ಲೆಸಿಸ್​​ರನ್ನ ಆದಷ್ಟು ಬೇಗ ಪೆವಿಲಿಯನ್​ಗೆ ಕಳಿಸ್ಬೇಕಿದೆ.  ಇನ್ನು ಈ ಬಾರಿಯ ಐಪಿಎಲ್  ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಬಲಗೈ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್, ಆರ್‌ಸಿಬಿಯ ಬೌಲರ್‌ಗಳಲ್ಲಿ ಪ್ರಮುಖರಾಗಿರುವ ಕೃನಾಲ್ ಪಾಂಡ್ಯ ಅವರ ಸವಾಲನ್ನು ಎದುರಿಸಲಿದ್ದಾರೆ. ರಾಹುಲ್ ಮತ್ತು ಕೃನಾಲ್ ನಡುವಿನ ಹೋರಾಟವು ಥ್ರಿಲ್ ಕೊಡೋದ್ರಲ್ಲಿ ಅನುಮಾನವೇ ಇಲ್ಲ.

ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟರ್ ಫ್ರೆಂಡ್ಲಿ ಆಗಿರೋದ್ರಿಂದ ಯಾವ ಟೀಮ್​ನ ಬೌಲರ್ಸ್ ರನ್ಸ್ ಕಂಟ್ರೋಲ್ ಮಾಡ್ತಾರೋ ಅವ್ರಿಗೆ ಪ್ಲಸ್ ಆಗಲಿದೆ. ಫಸ್ಟ್ ಬ್ಯಾಟಿಂಗ್ ಮಾಡುವ ತಂಡದ ರನ್ಸ್ ಟು ಹಂಡ್ರೆಡ್ ಒಳಗೆ ಇದ್ರೆ ಟಾರ್ಗೆಟ್ ಮಾಡೋರಿಗೆ ಈಸಿಯಾಗುತ್ತೆ. ಸದ್ಯ ರಜತ್ ಪಾಟಿದಾರ್ ನಾಯಕತ್ವದ ಆರ್​ಸಿಬಿ ಟೀಂ ಬ್ಯಾಟಿಂಗ್​ನಲ್ಲಿ ಸಾಲಿಡ್ ಫಾರ್ಮ್​ನಲ್ಲಿದೆ. ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಪವರ್ ಪ್ಲೇನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ರೆ ಆ ನಂತ್ರ ಮೂರನೇ ಸ್ಥಾನದಲ್ಲಿ ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್ ಪರ್ಫಾಮೆನ್ಸ್ ಕೊಡ್ತಾರೆ. ಪವರ್ ಹಿಟ್ಟರ್ ರೋಲ್ ನಿಭಾಯಿಸಲೆಂದೇ ಫ್ರಾಂಚೈಸಿ ಅವ್ರನ್ನ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸುತ್ತಿದೆ. ಕ್ರೀಸ್​ನಲ್ಲಿ ಇರುವಷ್ಟು ಹೊತ್ತು ಹೊಡಿಬಡಿ ಸ್ಟೈಲ್ ಮೂಲಕ ಸ್ಫೋಟಕ ಇನ್ನಿಂಗ್ಸ್ ಆಡೋದೇ ಅವ್ರ ಟಾರ್ಗೆಟ್. ಮುಂಬೈ ವಿರುದ್ಧದ ಪಂದ್ಯದಲ್ಲಿ ಪಡಿಕ್ಕಲ್ ಅಬ್ಬಿರಿಸಿದ್ದು ಚಿನ್ನಸ್ವಾಮಿ ಅವ್ರಿಗೆ ಹೋಂ ಪಿಚ್ ಆಗಿದ್ದು ಇಲ್ಲಿ ಮತ್ತಷ್ಟು ಬೆಟರ್ ಪರ್ಫಾಮೆನ್ಸ್ ಕೊಡ್ಬೇಕಿದೆ. ಇನ್ನು 4ನೇ ಸ್ಥಾನದಲ್ಲಿ ರಜತ್ ಪಾಟಿದಾರ್ ಪ್ರದರ್ಶನದ ಬಗ್ಗೆ ಹೇಳೋದೇ ಬೇಡ. ಒಬ್ಬ ಕ್ಯಾಪ್ಟನ್ ಆಗಿ ಮಿಡಲ್ ಆರ್ಡರ್​ನಲ್ಲಿ ರನ್ ಸುನಾಮಿ ಎಬ್ಬಿಸ್ತಿದ್ದಾರೆ. ಲಿಯಾಮ್ ಲಿವಿಂಗ್​ಸ್ಟೋನ್ ರಿಂದ ಮತ್ತಷ್ಟು ನಿರೀಕ್ಷೆ ಇದೆ. ಉಳಿದಂತೆ ಜಿತೇಶ್ ಶರ್ಮಾ ಹಾಗೇ ಟಿಮ್ ಡೇವಿಡ್ ತಮ್ಮ ಸ್ಟ್ರೆಂಥ್ ಏನು ಅನ್ನೋದನ್ನ ಈಗಾಗ್ಲೇ ಪ್ರೂವ್ ಮಾಡಿದ್ದಾರೆ. ಬಟ್ ಆಲ್ ರೌಂಡರ್ ಕೃನಾಲ್ ಪಾಂಡ್ಯ ಬೌಲಿಂಗ್​ ನಲ್ಲಿ ಗುಡ್. ಬ್ಯಾಟ್​ನಲ್ಲೂ ಸ್ವಲ್ಪ ಸೌಂಡ್ ಬೇಕು. ಸೋ ಅಲ್ಲಿಗೆ ಆರ್​ಸಿಬಿಯಲ್ಲಿ ನಂಬರ್ 1 ಟು ನಂಬರ್ 8ವರೆಗೂ ಬ್ಯಾಟಿಂಗ್ ಆರ್ಡರ್​ ಸಖತ್ತಾಗಿದೆ.

ಇನ್ನು ಚಿನ್ನಸ್ವಾಮಿ ಮೈದಾನದ ಪಿಚ್ ಬಗ್ಗೆ ನೋಡೋದಾದ್ರೆ ಮೈದಾನದಲ್ಲಿ ಬೌಂಡರಿ ಲೈನ್ ಚಿಕ್ಕದಾಗಿರೋದ್ರಿಂದ ರನ್ ಮಳೆಯನ್ನೇ ಹರಿಸಬಹುದು. ಬೆಸ್ಟ್ ಬ್ಯಾಟಿಂಗ್ ವಿಕೆಟ್ ಆಗಿದ್ದು, ಚೆಂಡು ಬ್ಯಾಟ್‌ಗೆ ನೇರವಾಗಿ ಬರುತ್ತೆ. ಬಟ್ ಹಿಂದಿನ ಪಂದ್ಯ ಅಂದ್ರೆ ಆರ್‌ಸಿಬಿ ಮತ್ತು ಜಿಟಿ ತಂಡಗಳ ನಡುವಿನ ಮ್ಯಾಚಲ್ಲಿ ಮೊದಲ ಪಂದ್ಯದಲ್ಲಿ ಪಿಚ್ ಅಷ್ಟೇನು ಸಪೋರ್ಟ್ ಮಾಡಲಿಲ್ಲ. ಸೆಕೆಂಡ್ ಇನ್ನಿಂಗ್ಸ್​ಗೆ ಸಖತ್ತಾಗೇ ಬ್ಯಾಟರ್ಸ್ ರನ್ ಗಳಿಸಿದ್ರು. ಹೀಗಾಗೇ ಪಸ್ಟ್ ಬ್ಯಾಟಿಂಗ್ ಮಾಡೋ ಟೀಂ ಹೇಗೇ ಹೊಡೆದ್ರೂ ಆಲ್ಮೋಸ್ಟ್ 180-190 ರನ್‌ಗಳನ್ನು ಗಳಿಸುತ್ತದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವಂತ ಹಿಂದಿನ ಪಂದ್ಯಗಳ ರೆಕಾರ್ಡ್ಸ್ ನೋಡಿದ್ರೆ 2008 ರಿಂದ ಮೈದಾನದಲ್ಲಿ 96 ಪಂದ್ಯಗಳನ್ನ ಆಯೋಜನೆ ಮಾಡ್ಲಾಗಿದೆ. ಈ ವೇಳೆ ಫಸ್ಟ್ ಬ್ಯಾಟಿಂಗ್ ಮಾಡಿದ ತಂಡ 41 ಪಂದ್ಯಗಳನ್ನ ಗೆದ್ದಿದೆ. ಚೇಸಿಂಗ್ ಮಾಡಿದ ತಂಡ 51 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಹೀಗಾಗಿ ಈ ಪಿಚ್​ನಲ್ಲಿ ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಚೂಸ್ ಮಾಡಿಕೊಳ್ತಾರೆ. ಇನ್ನು ಈ ಕ್ರೀಡಾಂಗಣದಲ್ಲಿ ಗಳಿಸಿದ ಅತ್ಯಧಿಕ ಮೊತ್ತ ಅಂದ್ರೆ 3 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿರೋದು. 2024ರ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಈ ದಾಖಲೆ ಬರೆದಿತ್ತು. ಐಪಿಎಲ್ ಇತಿಹಾಸದಲ್ಲೇ ಇದು ಹೈಯೆಸ್ಟ್ ಸ್ಕೋರ್ ಆಗಿದೆ.

Shantha Kumari

Leave a Reply

Your email address will not be published. Required fields are marked *