ಬಿಹಾರದ ಬಂಕಾದಲ್ಲಿ ಸ್ವಘೋಷಿಚ ಮಾವೋವಾದಿಯ ಎನ್‌ಕೌಂಟರ್- ಹ*ತ್ಯೆಗೆ 1 ಲಕ್ಷ ರೂಪಾಯಿ ಬಹುಮಾನ

ಬಿಹಾರದ ಬಂಕಾದಲ್ಲಿ ಸ್ವಘೋಷಿಚ ಮಾವೋವಾದಿಯ ಎನ್‌ಕೌಂಟರ್-   ಹ*ತ್ಯೆಗೆ 1 ಲಕ್ಷ ರೂಪಾಯಿ ಬಹುಮಾನ

ಬಿಹಾರದ ಬಂಕಾ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಸಿಪಿಐ  ಯ ಸ್ವಯಂ ಘೋಷಿತ ಏರಿಯಾ ಕಮಾಂಡರ್ 35 ವರ್ಷ ವಯಸ್ಸಿನ ವ್ಯಕ್ತಿ ಮೃತಪಟ್ಟಿದ್ದಾನೆ.  ಮೃತ ಮಾವೋವಾದಿಯನ್ನು ರಮೇಶ್ ತುಡು ಅಲಿಯಾಸ್ ಟೆಡುವಾ ಎಂದು ಗುರುತಿಸಲಾಗಿದ್ದು, ಆತನ ಹತ್ಯೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಈತ ಬಿಹಾರ ಮತ್ತು ಪಕ್ಕದ ಜಾರ್ಖಂಡ್‌ನಲ್ಲಿ ಸಕ್ರಿಯನಾಗಿದ್ದ.

ಬಂಕಾ ಜಿಲ್ಲೆಯ ಕಟೋರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಕಲೋಥರ್ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಗಳು ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಪೊಲೀಸರನ್ನು ಕಂಡ ತುಡು ಮತ್ತು ಅವರ ಸಹಚರರು ಗುಂಡು ಹಾರಿಸಲು ಪ್ರಾರಂಭಿಸಿದಾಗ ಎನ್ ಕೌಂಟರ್ ಏರ್ಪಟ್ಟಿತು. ಕಟೋರಿಯಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್   ಅರವಿಂದ್ ರೈ ನೇತೃತ್ವದ ಪೊಲೀಸ್ ತಂಡವು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರಲ್ಲಿ ತುಡುಗೆ ಗಾಯಗಳಾಗಿದ್ದವು. ನಂತರ ಆತನನ್ನು ಕಟೋರಿಯಾದ ಸರ್ಕಾರಿ ರೆಫರಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಮೃತಪಟ್ಟನು. ಅವನ ಸಹಚರರು ಬುಧಿ ಘಾಟ್ ಮತ್ತು ಕಲೋಥರ್ ನಡುವಿನ ಅರಣ್ಯದೊಳಗೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ಪ್ರಕಾರ, ಜಾರ್ಖಂಡ್‌ನ ದಿಯೋಘರ್ ಮತ್ತು ಗಸಿದಿಹ್ ಜಿಲ್ಲೆಗಳಲ್ಲಿ ನಡೆದ ನಕ್ಸಲ್ ನಿಗ್ರಹ ಘಟನೆಗಳಿಗೆ ಸಂಬಂಧಿಸಿದ ಕನಿಷ್ಠ 11 ಪ್ರಕರಣಗಳಲ್ಲಿ ತುಡು ಕೂಡ ಬೇಕಾಗಿದ್ದ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಬಂಕಾ ಎಸ್‌ಪಿ ತಿಳಿಸಿದ್ದಾರೆ.

 

Kishor KV

Leave a Reply

Your email address will not be published. Required fields are marked *