ಕೋಟಿ ಪ್ಲೇಯರ್ಸ್.. ಚಿಲ್ರೆ ಪರ್ಫಾಮೆನ್ಸ್ –  ತಂಡಕ್ಕೆ ಭಾರವಾದ್ರಾ ಸೂಪರ್ ಸ್ಟಾರ್ಸ್?

ಕೋಟಿ ಪ್ಲೇಯರ್ಸ್.. ಚಿಲ್ರೆ ಪರ್ಫಾಮೆನ್ಸ್ –  ತಂಡಕ್ಕೆ ಭಾರವಾದ್ರಾ ಸೂಪರ್ ಸ್ಟಾರ್ಸ್?

ಕಳೆದ ಎರಡು ವಾರಗಳಿಂದ ಐಪಿಎಲ್ ಫೀವರ್​ ಪೀಕ್​ಗೆ ಹೋಗ್ತಿದೆ. ಒಂದೊಂದು ಪಂದ್ಯದಲ್ಲೂ ಹಳೇ ದಾಖಲೆಗಳು ಬ್ರೇಕ್ ಆಗ್ತಿವೆ. ಹೊಸ ದಾಖಲೆಗಳು ಕ್ರಿಯೇಟ್ ಆಗ್ತಿವೆ. ಇಷ್ಟು ದಿನ ಕೆಲ ಆಟಗಾರರ ಹೆಸ್ರೇ ಯಾರಿಗೂ ಗೊತ್ತಿರ್ಲಿಲ್ಲ. ಬಟ್ ರಾತ್ರೋರಾತ್ರಿ ಅವ್ರೇ ಮ್ಯಾಚ್ ವಿನ್ನರ್ಸ್ ಆಗ್ತಿದ್ದಾರೆ. ಹೀರೋಗಳಾಗ್ತಿದ್ದಾರೆ. ಇನ್ನೂ ಕೆಲವ್ರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡ್ರೂ ಮೈದಾನದಲ್ಲಿ ಝೀರೋ ಪರ್ಫಾಮೆನ್ಸ್ ಕೊಡ್ತಿದ್ದಾರೆ. ಕೋಟಿಗಳ ಲೆಕ್ಕದಲ್ಲಿ ಹಣ ಪಡೆದು ಚಿಲ್ರೆ ಪರ್ಫಾಮೆನ್ಸ್ ಕೊಡ್ತಿದ್ದಾರೆ.

ಇದನ್ನೂ ಓದಿ : CSKಗಾಗಿ ಧೋನಿ ಸಾಮ್ರಾಜ್ಯ ಪತನ – 3 ICC, 5 IPL ಟ್ರೋಫಿಗಿಲ್ವಾ ಬೆಲೆ?

2025ರ ಐಪಿಎಲ್​ಗೂ ಮುನ್ನ ಮೆಗಾ ಹರಾಜಿನಲ್ಲಿ ವಿಶ್ವಮಟ್ಟದಲ್ಲಿ ಸದ್ದು ಮಾಡಿದ ಹೆಸ್ರು ರಿಷಭ್ ಪಂತ್. ಒಂದಲ್ಲ ಎರಡಲ್ಲ ಬರೋಬ್ಬರಿ 27 ಕೋಟಿ ಕೊಟ್ಟು ಲಕ್ನೋ ತಂಡ ಖರೀದಿ ಮಾಡಿತ್ತು. ಅದೇನ್ ಅಷ್ಟೊಂದು ದುಡ್ಡು ಕೊಟ್ರು ಅಂತಾನೋ ಇಲ್ಲ ಪ್ರೆಶರ್​ನಲ್ಲಿದ್ದಾರೋ ಗೊತ್ತಿಲ್ಲ. ಲಕ್ನೋ ಸೇರಿದ್ಮೇಲೆ ಪಂತ್ ಬ್ಯಾಟ್ ನಿದ್ದೆಗೆ ಜಾರಿದಂತಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಕೇವಲ 19 ರನ್​ಗಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಡಕ್ ಆಗಿದ್ದ ಪಂತ್, ನಂತರ 15ರನ್​ಗಳಿಸಿದ್ದರು. ಕಳೆದ 2 ಪಂದ್ಯಗಳಲ್ಲಿ ತಲಾ 2 ರನ್​ಗಳಿಸಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಪಂತ್ ಆಟ ನೋಡಿ ಇಷ್ಟೊಂದು ದುಡ್ಡು ಕೊಟ್ಟ ಕೆಟ್ನಲ್ಲ ಅಂತಾ ಸಂಜೀವ್ ಗೋಯೆಂಕಾ ಹ್ಯಾಪ್ ಮೋರೆ ಹಾಕ್ಕೊಂಡು ಕೂರ್ತಿದ್ದಾರೆ.

ಇನ್ನು ಈ ಬಾರಿಯ ಐಪಿಎಲ್​ನಲ್ಲಿ ಅಭಿಮಾನಿಗಳಿಗೆ ತುಂಬಾನೇ ಡಿಸಪಾಯಿಂಟ್ ಮಾಡ್ತಿರೋ ಮತ್ತೊಬ್ಬ ಆಟಗಾರ ಹಿಟ್​ಮ್ಯಾನ್ ರೋಹಿತ್ ಶರ್ಮಾ. ಅವ್ರು ಬ್ಯಾಟ್ ಬೀಸೋಕೆ ನಿಂತ್ರೆ ಎದುರಾಳಿ ಬೌಲರ್ ಯಾರೇ ಆಗಿದ್ರೂ ಬೆಂಡೆತ್ತದೆ ಬಿಟ್ಟೋರೇ ಅಲ್ಲ. ಬಟ್ ಈ ಸಲ ಐಪಿಎಲ್​ನಲ್ಲಿ ರೋಹಿತ್ ಕಂಪ್ಲೀಟ್ ಡಲ್. ಸಿಎಸ್​ಕೆ ವಿರುದ್ಧ ಫಸ್ಟ್ ಮ್ಯಾಚಲ್ಲಿ ಡಕ್​ಔಟ್ ಆಗಿದ್ದ ರೋಹಿತ್ ಎರಡನೇ ಮ್ಯಾಚಲ್ಲಿ ಜಿಟಿ ವಿರುದ್ಧ 8 ರನ್ ಅಷ್ಟೇ ಕಲೆ ಹಾಕಿದ್ರು. ಆ ಬಳಿಕ ಕೆಕೆಆರ್ ವಿರುದ್ಧದ ಮೂರನೇ ಪಂದ್ಯದಲ್ಲಿ 13 ರನ್ ಅಷ್ಟೇ ಸಿಡಿಸಿದ್ರು. ಆ ಬಳಿಕ ಲಕ್ನೋ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಪಂದ್ಯದಲ್ಲಿ  ಇಂಜುರಿ ಕಾರಣದಿಂದ ರೋಹಿತ್​ರನ್ನ ಡ್ರಾಪ್ ಮಾಡಿದ್ರು. ಇದೀಗ ಐದನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 17 ರನ್​ಗೆ ವಿಕೆಟ್ ಒಪ್ಪಿಸಿದ್ರು. ಈ ಮೂಲಕ 4 ಪಂದ್ಯಗಳನ್ನ ಆಡಿ 38 ರನ್ ಅಷ್ಟೇ ಗಳಿಸಿದ್ದಾರೆ. ಈ ಸೀಸನ್​ನಲ್ಲಿ 16.30 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿರೋ ರೋಹಿತ್ ಮಂಕಾಗಿರೋದು ಫ್ರಾಂಚೈಸಿಗೆ ಮಾತ್ರವಲ್ಲದೆ ಅಭಿಮಾನಿಗಳಿಗೂ ನಿರಾಸೆ ಮೂಡಿಸಿದೆ.

ಐಪಿಎಲ್ ಸ್ಟಾರ್ಟ್ ಆಗೋ ಮೊದ್ಲು ಎಲ್ಲಾ ಫ್ರಾಂಚೈಸಿಗಳಿಗೆ ಕೊಂಚ ತಲೆಬಿಸಿ ಎನ್ನುವಂತೆ ಕಂಡಿದ್ದು ಹೈದ್ರಾಬಾದ್ ಟೀಂ. ಟಾಪ್ 5 ಇರೋರೆಲ್ಲಾ ಬಿಗ್ ಹಿಟ್ಟರ್ಸೇ. ಫಸ್ಟ್ ಮ್ಯಾಚಲ್ಲೇ 286 ರನ್ ಹೊಡ್ದು ಈ ಸಲ ಪ್ರತೀ ಮ್ಯಾಚಲ್ಲೂ ನಮ್ಮ ಟಾರ್ಗೆಟ್ 300+ ರನ್ ಸ್ಕೋರ್ ಅಂದಿದ್ರು. ಏನ್ ಗುರು ಬೌಲರ್​ಗಳಿಗೆ ಇವ್ರು ಮರ್ಯಾದೆನೇ ಕೊಡಲ್ಲ ಅಂತಾ ಬೌಲರ್ಸ್ ಗೊಣಗಾಡಿದ್ದೂ ಉಂಟು. ಆದ್ರೆ ಮೊದಲ್ನೇ ಮ್ಯಾಚ್ ಆದ್ಮೇಲೆ ಯಾರಾದ್ರೂ ಮಾಟ ಮಾಡ್ಸಿದ್ರೋ ಏನೋ. 20 ಓವರ್ ನಲ್ಲಿ 150 ದಾಟೋದೇ ಕಷ್ಟ ಅನ್ನೋ ಹಂಗ್ ಆಡ್ತಿದ್ದಾರೆ. ಸ್ಫೋಟಕ ಬ್ಯಾಟನ್ ಎನಿಸಿಕೊಂಡಿದ್ದ ಅಭಿಷೇಕ್ 14 ಕೋಟಿ ಸಂಭಾವನೆ ಪಡೆದು ಕಳೆದ ಐದು ಮ್ಯಾಚ್​ಗಳಿಂದ 51 ರನ್ ಅಷ್ಟೇ ಗಳಿಸಿದ್ದಾರೆ. ಇನ್ನು ಹೈದ್ರಾಬಾದ್ ಪರ ಫಸ್ಟ್ ಮ್ಯಾಚಲ್ಲಿ ಸೆಂಚುರಿ ಬಾರಿಸಿದ್ದ ಇಶಾನ್ ಕಿಶನ್ ಆ ಬಳಿಕ ಬ್ಯಾಟ್ ಸದ್ದು ಮಾಡ್ತಾನೇ ಇಲ್ಲ. 11.25ಕೋಟಿಗೆ ಎಸ್​ಆರ್ ಹೆಚ್ ಸೇರಿದ್ದ ಕಿಶನ್ ಕಳೆದ 5 ಪಂದ್ಯಗಳಲ್ಲಿ ಒಂದು ಸೆಂಚುರಿ ಸೇರಿ 127 ರನ್ ಕಲೆ ಹಾಕಿದ್ದಾರೆ. ಟ್ರಾವಿಸ್ ಹೆಡ್ ಪರ್ಫಾಮೆನ್ಸ್ ಕೂಡ ಒಂದು ಪಂದ್ಯಕ್ಕಷ್ಟೇ ಸೀಮಿತವಾಗಿದ್ದು ಕಳೆದ ಐದು ಪಂದ್ಯಗಳಿಂದ 148 ರನ್ ಗಳಿಸಿದ್ದಾರೆ. ಇವ್ರೂ ಕೂಡ ಬರೋಬ್ಬರಿ 14 ಕೋಟಿ ಸಂಭಾವನೆ ಪಡೀತಿದ್ದಾರೆ.

ಕೆಕೆಆರ್ ತಂಡದಲ್ಲೂ ಈ ಸಲ ತಿಮಿಂಗಿಲಗಳೇ ಇದ್ರೂ ಸಾಧನೆ ಮಾತ್ರ ಕಳಪೆಯಾಗಿದೆ. ಸುನಿಲ್ ನರೈನ್​ಗೆ 12 ಕೋಟಿ ಕೊಟ್ಟು ಉಳಿಸಿಕೊಂಡಿದ್ರು. ಬಟ್ ಲಾಸ್ಟ್ ಸೀಸನ್​ನಂತೆ ಈ ಸೀಸನ್​ನಲ್ಲಿ ಅವ್ರ ಬ್ಯಾಟ್ ಸೌಂಡ್ ಮಾಡ್ತಿಲ್ಲ. ಕೆಕೆಆರ್ 3 ಪಂದ್ಯಗಳನ್ನ ಆಡಿ 51 ರನ್ ಕಲೆ ಹಾಕಿದ್ದಾರೆ. 3 ಪಂದ್ಯಗಳಿಂದ 2 ವಿಕೆಟ್ ಅಷ್ಟೇ ಬೇಟೆಯಾಡಿದ್ದಾರೆ. 13 ಕೋಟಿ ಸಂಭಾವನೆ ಪಡೆಯುತ್ತಿರೋ ರಿಂಕು ಸಿಂಗ್ ಕೂಡ ಕಳೆದ ನಾಲ್ಕು ಪಂದ್ಯಗಳಿಂದ 61 ರನ್ ಅಷ್ಟೇ ಕಲೆ ಹಾಕಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಆಲ್ ರೌಂಡರ್ ಶಿವಂ ದುಬೆ ಅವ್ರಿಗೆ 12 ಕೋಟಿಗೆ ರಿಟೇನ್ ಮಾಡ್ಕೊಂಡಿತ್ತು. ಆದ್ರೆ ಕಳೆದ ನಾಲ್ಕು ಪಂದ್ಯಗಳಿಂದ ದುಬೆ ಬ್ಯಾಟ್​ನಿಂದ ಬಂದಿರೋದೇ 64 ರನ್. ಇದು ಸಿಎಸ್​ಕೆ ಸಾಲು ಸಾಲು ಸೋಲಿಗೆ ಕಾರಣ ಆಗ್ತಿದೆ. ಇನ್ನು ಆಸ್ಟ್ರೇಲಿಯನ್ ಆಟಗಾರ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವ್ರನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 9 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಬಟ್ ಕಳೆದ ಮೂರು ಪಂದ್ಯಗಳಿಂದ ಮೆಕ್ ಗುರ್ಕ್ ಕಲೆ ಹಾಕಿದ್ದೇ 39 ರನ್. ಪಂಜಾಬ್ ಪರ ಆಡ್ತಿರೋ ಗ್ಲೆನ್ ಮ್ಯಾಕ್ಸ್​ವೆಲ್ 4.2 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಮೂರು ಪಂದ್ಯಗಳಿಂದ 54 ರನ್ ಕಲೆ ಹಾಕಿ ನಿರಾಸೆ ಮೂಡಿಸಿದ್ದಾರೆ.

Shantha Kumari

Leave a Reply

Your email address will not be published. Required fields are marked *