ಇಂದೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ! – ಫಲಿತಾಂಶ ಚೆಕ್‌ ಮಾಡೋದು ಹೇಗೆ?

ಇಂದೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ! – ಫಲಿತಾಂಶ ಚೆಕ್‌ ಮಾಡೋದು ಹೇಗೆ?

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ರಿಸಲ್ಟ್‌ಗಾಗಿ ಕಾಯುತ್ತಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಮುಂಬೈ ವಿರುದ್ಧ RCBಗೆ ರಣರೋಚಕ ಗೆಲುವು- 10 ವರ್ಷದ ಬಳಿಕ ವಾಂಖೆಡೆ ಕೋಟೆ ಛಿದ್ರ

ದ್ವಿತೀಯ ಪಿಯುಸಿ ಪರಿಕ್ಷೆ ಕಳೆದ ಮಾರ್ಚ್ 1 ರಿಂದ ಆರಂಭಗೊಂಡು ಮಾರ್ಚ್ 20 ರಂದು ಮುಕ್ತಾಯಗೊಂಡಿತ್ತು. ಈ ಬಾರಿ ಸುಮಾರು 7.13 ಲಕ್ವ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ತ್ವರಿತಗತಿಯಲ್ಲಿ ನಡೆಸಲಾಗಿದೆ. ಇಂದು   ಮಧ್ಯಾಹ್ನ 12:30ಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಲ್ಲೇಶ್ವರದಲ್ಲಿರುವ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಸ ಪ್ರಕಟಿಸಲಿದ್ದಾರೆ. ಸುದ್ಧಿಗೋಷ್ಠಿಯ ಬಳಿಕ  ಮಧ್ಯಾಹ್ನ 1:30 ಗಂಟೆಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.

ಪಿಯು ಫಲಿತಾಂಶ ಲಭ್ಯವಾಗುವ ವೆಬ್‌ಸೈಟ್‌ :www.karresults.nic.in  

ಫಲಿತಾಂಶ ಚೆಕ್‌ ಮಾಡೋದು ಹೇಗೆ?

  • ಅಧಿಕೃತ ವೆಬ್‌ಸೈಟ್‌ಗೆ ಹೋಗಿ: karresults.nic.in
  • ಮುಖಪುಟದಲ್ಲಿ ಲಭ್ಯವಿರುವ ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2025 ಲಿಂಕ್ ಅನ್ನು ಕ್ಲಿಕ್ ಮಾಡಿ
  • ಸ್ಟ್ರೀಮ್ ಆಯ್ಕೆಮಾಡಿ ಮತ್ತು ನೋಂದಣಿ ಸಂಖ್ಯೆಯನ್ನು ಟೈಪ್‌ ಮಾಡಿ
  • ಕರ್ನಾಟಕ 2 ನೇ ಪಿಯುಸಿ ಫಲಿತಾಂಶ 2025 ಪರದೆಯ ಮೇಲೆ ಕಾಣಿಸುತ್ತದೆ
  • ಸ್ಕೋರ್‌ಕಾರ್ಡ್ ಪಿಡಿಎಫ್ ವೀಕ್ಷಿಸಿ ಮತ್ತು ಡೌನ್‌ಲೋಡ್ ಮಾಡಿ
  • ಭವಿಷ್ಯದ ದಾಖಲೆಗಳಿಗಾಗಿ ಅದನ್ನು ಸುರಕ್ಷಿತವಾಗಿರಿಸಿಕೊಳ್ಳಿ

Shwetha M

Leave a Reply

Your email address will not be published. Required fields are marked *