ಟಿಆರ್ ಎಸ್ ಈಗ ಬಿಆರ್ ಎಸ್ ಪಕ್ಷ: ಚುನಾವಣಾ ಆಯೋಗದಿಂದ ಗ್ರೀನ್ ಸಿಗ್ನಲ್

ಟಿಆರ್ ಎಸ್ ಈಗ ಬಿಆರ್ ಎಸ್ ಪಕ್ಷ: ಚುನಾವಣಾ ಆಯೋಗದಿಂದ ಗ್ರೀನ್ ಸಿಗ್ನಲ್

ಹೈದರಬಾದ್: ಟಿಆರ್ ಎಸ್ ಅಧ್ಯಕ್ಷ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪಕ್ಷದ ಹೆಸರನ್ನು ತೆಲಂಗಾಣ ರಾಷ್ಟ್ರ ಸಮಿತಿಯಿಂದ ಭಾರತ ರಾಷ್ಟ್ರ ಸಮಿತಿ ಎಂದು ಹೆಸರು ಬದಲಾಯಿಸಲು ನೀಡಿದ್ದ ಅರ್ಜಿಗೆ ಚುನಾವಣಾ ಆಯೋಗ ಅನುಮೋದಿಸಿದೆ.

ಇದನ್ನೂ ಓದಿ: ಗುಜರಾತ್ ನಲ್ಲಿ ಗೆಲುವು ಸಾಧಿಸಿದ “ಸೆಲೆಬ್ರಿಟಿಗಳು’ ಇವರೇ…

ತೆಲಂಗಾಣ ರಾಷ್ಟ್ರ ಸಮಿತಿಯಿಂದ ಭಾರತ ರಾಷ್ಟ್ರ ಸಮಿತಿ ಎಂದು ನಿಮ್ಮ ಪಕ್ಷದ ಹೆಸರನ್ನು ಬದಲಾಯಿಸಲಾಗಿದೆ. ಈ ಸಂಬಂಧ ಅಗತ್ಯ ಅಧಿಸೂಚನೆಯನ್ನು ಸದ್ಯದಲ್ಲಿಯೇ ಹೊರಡಿಸಲಾಗುವುದು ಅಂತಾ ಚುನಾವಣಾ ಆಯೋಗ ಕೆ. ಚಂದ್ರಶೇಖರ್ ರಾವ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

ಕೆ. ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್ ಪಕ್ಷವನ್ನು ರಾಷ್ಟ್ರೀಕರಣಗೊಳಿಸುವ ಸಲುವಾಗಿ  ‘ಬಿಆರ್‌ಎಸ್’ ಎಂದು ಮರುನಾಮಕರಣ ಮಾಡಲಾಗಿದೆ.

ಚುನಾವಣಾ ಆಯೋಗದ ಅನುಮೋದನೆಯೊಂದಿಗೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಇಂದು ಮಧ್ಯಾಹ್ನ 12. 30 ಕ್ಕೆ ತೆಲಂಗಾಣ ಭವನದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್) ರಚನಾ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಿದ್ದಾರೆ. ಇಸಿಐ ಅಧಿಕೃತ ಪತ್ರಕ್ಕೆ ಸಹಿ ಹಾಕುವ ಆದೇಶಕ್ಕೆ ಪ್ರತಿಕ್ರಿಯೆಯಾಗಿ ಇದಾದ ಬಳಿಕ ಸಿಎಂ ಕೆಸಿಆರ್ ಬಿಆರ್ ಎಸ್ ಧ್ವಜ ಅನಾವರಣ ಮಾಡಲಿದ್ದಾರೆ.

suddiyaana