ಸಿರಾಜ್ ಬೆಂಕಿ ಬೌಲಿಂಗ್ RCB ಫ್ಯಾನ್ಸ್ ರೊಚ್ಚಿಗೆದ್ದಿದ್ದೇಕೆ?
ಬೆಂಗಳೂರು ಬಿಟ್ಟವರೆಲ್ಲಾ ಹೀಗ್ಯಾಕೆ?

ಸಿರಾಜ್ ಬೆಂಕಿ ಬೌಲಿಂಗ್  RCB ಫ್ಯಾನ್ಸ್ ರೊಚ್ಚಿಗೆದ್ದಿದ್ದೇಕೆ?ಬೆಂಗಳೂರು ಬಿಟ್ಟವರೆಲ್ಲಾ ಹೀಗ್ಯಾಕೆ?

ಕಳೆದ 7 ವರ್ಷ ಆರ್‌ಸಿಬಿಯ ಭಾಗವಾಗಿದ್ದ ಮೊಹಮ್ಮದ್ ಸಿರಾಜ್ ಅವರನ್ನು ಬೆಂಗಳೂರು ಮೂಲದ ಫ್ರಾಂಚೈಸಿ 2025ನೇ ಸಾಲಿನ ಐಪಿಎಲ್‌ಮೆಗಾ ಹರಾಜಿನಲ್ಲಿ ಕೈ ಬಿಡ್ತು. ಗುಜರಾತ್ ಟೈಟನ್ಸ್ ಫ್ರಾಂಚೈಸಿ ಅವರಿಗೆ 12.5 ಕೋಟಿ ಹಣ ನೀಡುವ ಮೂಲಕ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ವರ್ಷದ ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನು ತೋರದ ಸಿರಾಜ್, ಈ ಬಾರಿ ಗುಜರಾತ್ ಪರವಾಗಿ ಅಬ್ಬರಿಸುತ್ತಿದ್ದಾರೆ. ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ್ದಾರೆ. ಅದ್ರಲ್ಲೂ ಮೊನ್ನೆ ಮೊನ್ನೆ ಜಿಟಿ ವಿರುದ್ಧ ಆರ್‌ಸಿಬಿ ಸೋಲುವುದಕ್ಕೆ ಇವರೇ ಕಾರಣ..

ಈ ಬಾರಿಯ ಐಪಿಎಲ್‌ನಲ್ಲಿ ಮೊಹಮ್ಮದ್ ಸಿರಾಜ್ ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲೇ 54 ರನ್ ಬಿಟ್ಟುಕೊಡುವ ಮೂಲಕ ದುಬಾರಿ ಬೌಲರ್ ಎನಿಸಿಕೊಂಡಿದ್ದರು. ಆದ್ರೆ, ನಂತ್ರದ 3 ಪಂದ್ಯದಲ್ಲಿ ಅದ್ಭುತ ಬೌಲಿಂದ್ ಮಾಡಿದ್ದಾರೆ. ಭಾನುವಾರ  ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ತಮ್ಮ ಐಪಿಎಲ್ ವೃತ್ತಿ ಜೀವನ್ ಬೆಸ್ಟ್ ಬೌಲಿಂಗ್ ಪ್ರದರ್ಶನ ತೋರಿದರು.  ಡ್ಯಾಷಿಂಗ್ ಓಪನರ್, ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡುವ ಮೂಲಕ ಮೊಹಮ್ಮದ್ ಸಿರಾಜ್ 100 ವಿಕೆಟ್ ಪಡೆದ ಸಾಧನೆ ಮಾಡಿದರು.

ಐಪಿಎಲ್ 2025 ರಲ್ಲಿ ಮೊಹಮ್ಮದ್ ಸಿರಾಜ್ ಪಂಜಾಬ್ ಕಿಂಗ್ಸ್ ವಿರುದ್ಧ 4 ಓವರ್‌ಗಳಲ್ಲಿ  ಯಾವುದೇ ವಿಕೆಟ್ ಪಡೆಯದೆ  54 ರನ್ ನೀಡಿದ್ರು.  ಮುಂಬೈ ಇಂಡಿಯನ್ಸ್ ವಿರುದ್ಧ 4 ಓವರ್‌ಗಳಲ್ಲಿ  34 ರನ್ ನೀಡಿ 2 ವಿಕೆಟ್ ಪಡೆದ್ರೆ,   ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 4 ಓವರ್‌ಗಳಲ್ಲಿ 19 ರನ್‌ ನೀಡಿ  3 ವಿಕೆಟ್ ಪಡೆದಿದ್ದಾರೆ.  ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 4 ಓವರ್‌ಗಳಲ್ಲಿ  ಕೇವಲ 17 ರನ್ ನೀಡಿ 4 ವಿಕೆಟ್ ತೆಗೆದಿದ್ದಾರೆ.  ಅಂದ್ರೆ ಜಿಟಿಯ 3 ಗೆಲುವಿನ ಸಿರಾಜ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಬೆಂಗಳೂರು ತಂಡದಿಂದ ಹೊರ ಹೋದ ಬೆನ್ನಲ್ಲೆ ಸಿರಾಜ್ ಭರ್ಜರಿ ಫಾರ್ಮ್‌ಗೆ ಮರಳಿದ್ದು, ಕ್ರಿಕೆಟ್ ಅಭಿಮಾನಿಗಳು ಆರ್‌ಸಿಬಿಯಿಂದ ಹೊರ ಹೋದ ಎಲ್ಲರೂ ಅಬ್ಬರಿಸುತ್ತಾರೆ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಅಲ್ಲದೇ ಈ ಹಿಂದೆ ದುಬೆ, ಶೇನ್ ವಾಟ್ಸನ್ ಸಾಲಿಗೆ ಸಿರಾಜ್ ಸೇರಿಕೊಂಡಿದ್ದಾರೆ. ಇವರು ಕೂಡ ಆರ್‌ಸಿಬಿಯಲ್ಲಿ ಇದ್ದಾಗ ಕಳಪೆ ಪ್ರದರ್ಶನ ನೀಡುತ್ತಿದ್ದರು. ಆದ್ರೆ ಬೇರೆ ಟೀಂ ಹೋಗುತ್ತಿದ್ದಂತೆ ಚೆನ್ನಾಗಿ ಆಡಿದ್ದಾರೆ.. ಈಗ ಸಿರಾಜ್  ಕೂಡ ಅದನ್ನೇ  ಮಾಡಿದ್ದು ಆರ್‌ಸಿಬಿ ಫಾನ್ಸ್‌ಗಳ ರೊಚ್ಚಿಗೆದ್ದಿದಂತು ಸುಳ್ಳಲ್ಲ..

Kishor KV

Leave a Reply

Your email address will not be published. Required fields are marked *