ಸಿಂಹದ ಬಾಲ ಎಳೆದಾಡಿದ ಬಾಲಕ! – ಆಮೇಲೆ ಏನಾಯ್ತು?

ಸಿಂಹದ ಬಾಲ ಎಳೆದಾಡಿದ ಬಾಲಕ! – ಆಮೇಲೆ ಏನಾಯ್ತು?

ಕ್ರೂರ ಕಾಡು ಪ್ರಾಣಿಗಳು ಅರಸಿಕೊಂಡು ನಾಡಿಗೆ ಬರುತ್ತಿರುತ್ತವೆ. ಇದೇ ವೇಳೆಯಲ್ಲಿ ಜನರ ಮೇಲೆ ದಾಳಿ ನಡೆಸಿರುವಂತಹ ಅದೆಷ್ಟೋ ಸುದ್ದಿಗಳನ್ನು ಆಗಾಗ ಕೇಳಿರುತ್ತಿರುತ್ತೇವೆ. ಹೀಗಾಗಿ ಹುಲಿ, ಸಿಂಹದಂತಹ ಪ್ರಾಣಿಗಳು ಜನ ಪ್ರದೇಶಕ್ಕೆ ಬಂದ್ರೆ ಮನೆಯಿಂದ ಹೊರ ಬರಲು ಜನ ಹೆದರ್ತಾರೆ. ಆದ್ರೆ ಇಲ್ಲೊಬ್ಬ ಪುಟ್ಟ ಬಾಲಕ ಸಿಂಹದ ಬಾಲ ಹಿಡಿದು ಎಳೆದಾಡುತ್ತಿದ್ದಾನೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಮುಂಬೈನಲ್ಲಿ HITಮ್ಯಾನ್ ಸೈಡ್ ಲೈನ್ – RCB ವಿರುದ್ಧವೂ ಆಡಲ್ವಾ ರೋಹಿತ್?

ಸಿಂಹ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಬರುವುದನ್ನು ನೋಡುವುದು ಎಷ್ಟು ಚಂದವೋ, ಇದು ಬೇಟೆಯಾಡುವ ರೀತಿಯೇ ನಿಜಕ್ಕೂ ಭಯಾನಕವಾಗಿರುತ್ತದೆ. ಹೀಗಾಗಿ ಸಫಾರಿ ಗೆ ಹೋದಾಗ ದೂರದಿಂದಲೇ ನೋಡಿ ಖುಷಿ ಪಡುತ್ತಾರೋ ಹೊರತು ಇದರ ಹತ್ತಿರ ಹೋಗುವ ಧೈರ್ಯವಂತೂ ಯಾರು ಕೂಡ ಮಾಡುವುದಿಲ್ಲ. ಆದರೆ ಇಲ್ಲೊಬ್ಬ ಹುಡುಗನು ಸಿಂಹದ ಬಾಲ ಹಿಡಿದು ಎಳೆದಾಡುತ್ತಿರುವ ದೃಶ್ಯವು ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

asifsherowala ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಶಾಲೆಗೆ ಹೋಗುವ ಹುಡುಗನೊಬ್ಬನು ಸರಪಳಿಯಿಂದ ಬಂಧಿಸಲಾದ ಸಿಂಹ ಬಾಲವನ್ನು ಹಿಡಿದು ಕೊಂಡಿದ್ದಾನೆ. ಈ ವೇಳೆಯಲ್ಲಿ ಸಿಂಹವು ಹಿಂದಕ್ಕೆ ಮುಂದಕ್ಕೆ ಚಲಿಸುವುದನ್ನು ನೋಡಬಹುದು. ಆದರೆ ಬಾಲಕನು ಮಾತ್ರ ಬಲವಾಗಿ ಬಾಲವನ್ನು ಹಿಡಿದು ಎಳೆಯುತ್ತಿದ್ದಂತೆ ಸಿಂಹವು ಮುಂದಕ್ಕೆ ಚಲಿಸಿದೆ. ಈ ವೇಳೆಯಲ್ಲಿ ಬಾಲಕನು ಕೆಳಗೆ ಬೀಳುವುದನ್ನು ನೋಡಬಹುದು. ಆದರೆ ಅಲ್ಲೇ ಇದ್ದವರು ಜೋರಾಗಿ ನಗುತ್ತಿದ್ದು, ಯಾರೋ ಒಬ್ಬ ವ್ಯಕ್ತಿ ಬಂದು ಬಾಲಕನನ್ನು ಎಬ್ಬಿಸಿದ್ದಾನೆ. ಇಷ್ಟೆಲ್ಲಾ ಕೀಟಲೆ ಮಾಡುತ್ತಿದ್ದರೂ ಸರಪಳಿಯಲ್ಲಿ ಕಟ್ಟಿ ಹಾಕಿದ್ದ ಸಿಂಹವು ದುರುಗಟ್ಟಿ ನೋಡುತ್ತಿದೆ. ಇದೀಗ ಈ ವಿಡಿಯೋ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Shwetha M