ಜಸ್ಪ್ರೀತ್ ಫಿಟ್ನೆಸ್ನಲ್ಲಿ ಶಾಕಿಂಗ್!! ಬುಮ್ರಾ IPL ಆಡೋದೆೇ ಡೌಟ್!?
ಇಂಗ್ಲೆಂಡ್ ಟೆಸ್ಟ್ಗೂ ಫಿಟ್ ಆಗಲ್ವಾ?

ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಜಸ್ಟ್ರೀತ್ ಬುಮ್ರಾ ಅವರ ಫಿಟ್‌ನೆಸ್ ರಿಪೋರ್ಟ್’ಟೆನ್ಷನ್ ಹೆಚ್ಚಿಸಿದೆ. . ಆದರೆ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಮತ್ತೆ ನಿರಾಸೆಯಾಗಿದೆ. ಜನವರಿ 3 ರಂದು ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೆನ್ನು ನೋವಿನ ಸಮಸ್ಯೆಗೆ ತುತ್ತಾದ ಬುಮ್ರಾ ಅಂದಿನಿಂದ ಸ್ಪರ್ಧಾತ್ಮಕ ಕ್ರಿಕೆಟ್ ಮರಳಿಲ್ಲ. ಇದೀಗ ಹೊಸ ವರದಿಯ ಪ್ರಕಾರ ಭಾರತದ ವೇಗಿ ಮೈದಾನಕ್ಕೆ ಮರಳಲು ಮತ್ತಷ್ಟು ದಿನಗಳು ಬೇಕಾಗಬಹುದು.
ಬೆನ್ನು ನೋವಿನಿಂದ ಬಳಲುತ್ತಿರುವ ಬುಮ್ರಾ ಅವರಿಗೆ ಇನ್ನೂ ಫಿಟ್‌ನೆಸ್ ಕ್ಲಿಯರೆನ್ಸ್ ಸಿಕ್ಕಿಲ್ಲ. ಇದರಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಗ್ ಲಾಸ್ ಆಗಿದೆ. ಈ ಹಿಂದಿನ ವರದಿ ಪ್ರಕಾರ, ಬುಮ್ರಾ ಏಪ್ರಿಲ್ ಮೊದಲ ವಾರದ ವೇಳೆಗೆ ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಿತ್ತು. ಆದ್ರೆ ಅದು ಸಾಧ್ಯವಿಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ಬೌಲರ್ ಅನ್ನು ಮತ್ತೆ ಆಟದಲ್ಲಿ ನೋಡಲು ಹೆಚ್ಚು ಸಮಯ ಕಾಯಬೇಕಾಗಬಹುದು. ಇದಕ್ಕೆ ಕಾರಣವೆಂದರೆ ಬುಮ್ರಾ ಅವರ ಗಾಯವು ಈ ಹಿಂದೆ ಪರಿಗಣಿಸಿದ್ದಕ್ಕಿಂತ ಹೆಚ್ಚು ಗಂಭೀರವಾಗಿದೆ. ಜನವರಿ 3 ರಂದು ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೆನ್ನು ನೋವಿನ ಸಮಸ್ಯೆಗೆ ತುತ್ತಾದ ಬುಮ್ರಾ ಅಂದಿನಿಂದ ಸ್ಪರ್ಧಾತ್ಮಕ ಕ್ರಿಕೆಟ್ ಮರಳಿಲ್ಲ. ಮೈದಾನಕ್ಕೆ ಮರಳಿದರೆ ಸ್ಟಾರ್ ಬೌಲರ್‌ನ ಸಮಸ್ಯೆಗಳು ಮತ್ತೆ ಹೆಚ್ಚಾಗಲಿವೆ. ಹೀಗಾಗಿ ಬಿಸಿಸಿಐ ವೈದ್ಯಕೀಯ ತಂಡವು ಆತುರದ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ.
ಇನ್ನು ಶುಭ ಸುದ್ದಿ ಏನೆಂದರೆ ಬುಮ್ರಾ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಆರಂಭಿಸಿದ್ದಾರೆ. ಆದರೆ ವೇಗಿಯು ಪೂರ್ಣ ಶಕ್ತಿ ಮತ್ತು ಸಾಮರ್ಥ್ಯದೊಂದಿಗೆ ಚೆಂಡನ್ನು ಎಸೆಯುತ್ತಿಲ್ಲ. ಹಾಗಾಗಿ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಬಿಸಿಸಿಐ ವೈದ್ಯಕೀಯ ತಂಡವು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದೆ. ದೀರ್ಘಕಾಲೀನ ಹಾನಿಯನ್ನು ಉಂಟುಮಾಡುವುದರಿಂದ ಕ್ರಿಕೆಟ್ ಮೈದಾನಕ್ಕೆ ಮರಳಲು ತಂಡವು ಯಾವುದೇ ಆತುರ ಪಡುತ್ತಿಲ್ಲ. ಆತುರಪಟ್ಟರೆ, ಬುಮ್ರಾ ಒತ್ತಡದ ಮುರಿತಕ್ಕೆ ಬಲಿಯಾಗಬಹುದು.
ಬುಮ್ರಾಗೆ ಇರೋ ಸಮಸ್ಯೆ ಏನು?
ಮೂಳೆಯಲ್ಲಿ ಬಹಳ ಸಣ್ಣ ಬಿರುಕನ್ನು ಒತ್ತಡದ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಕಂಟಿನ್ಯೂವ್ ಆಗಿ ಓಡುವುದು, ಮೇಲಕ್ಕೆ ಮತ್ತು ಕೆಳಗೆ ಜಿಗಿಯುವುದರಿಂದ ಉಂಟಾಗುತ್ತದೆ. ಬುಮ್ರಾ ಶೇಕಡಾ 100 ರಷ್ಟು ಫಿಟ್ ಆಗಿದ್ದಾರೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಬಿಸಿಸಿಐ ವೈದ್ಯಕೀಯ ತಂಡ ಖಚಿತ ಪಡಿಸಿಲ್ಲ.
ಏಪ್ರಿಲ್ ಮಧ್ಯದಲ್ಲಿ ಮರಳುವ ಸಾಧ್ಯತೆ?
ಮುಂದಿನ ಎರಡು ವಾರಗಳ ಕಾಲ ಜಸ್ಪ್ರೀತ್ ಬುಮ್ರಾ ಐಪಿಎಲ್ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ ಎಂಬ ವರದಿಗಳಿವೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಅವರು ಬೌಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದರೂ, ಅವರಿಗೆ ಇನ್ನೂ ಫಿಟ್‌ನೆಸ್ ಕ್ಲಿಯರೆನ್ಸ್ ಸಿಕ್ಕಿಲ್ಲ. ಇದಕ್ಕೆ ಯಾವುದೇ ನಿರ್ದಿಷ್ಟ ಕಾಲಮಿತಿ ಇಲ್ಲ. ಆದರೆ ಅವರು ಏಪ್ರಿಲ್ ಮಧ್ಯದ ವೇಳೆಗೆ ಮರಳಬಹುದು ಎಂದು ನಿರೀಕ್ಷಿಸಲಾಗಿದೆ.
ಇಂಗ್ಲೆಂಡ್ ಟೆಸ್ಟ್‌ಗೆ ರೆಡಿ ಆಗ್ತಾರಾ ಬುಬ್ರಾ?
ಕಳೆದ ವರ್ಷ ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸದ ನಂತರ ಜಸ್ಟ್ರೀತ್ ಬುಮ್ರಾ ಸ್ಪರ್ಧಾತ್ಮಕ ಕ್ರಿಕೆಟ್ ಆಡುತ್ತಿಲ್ಲ. ಕ್ರಿಕೆಟ್ ಅಭಿಮಾನಿಗಳು ಇವರ ಕಂಬ್ಯಾಕ್‌ಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಐಪಿಎಲ್ ಬಳಿಕ ಭಾರತ ತಂಡ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನಾಡಲಿದೆ. ಅಷ್ಟರೊಳಗೆ ಅವರು ಸಂಪೂರ್ಣ ಫಿಟ್ ಆಗಲಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ಪರ ಯಾವಾಗ ಕಣಕ್ಕಿಳಿತ್ತಾರೆ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.