RCBಗೆ ಸವಾಲಾಗುತ್ತಾ MI ಬೇಟೆ – ಗೆಲುವಿನ ಟ್ರ್ಯಾಕ್ ಗೆ ಏನೆಲ್ಲಾ ಟ್ರಿಕ್ಸ್?
ವಾಂಖೆಡೆಯಲ್ಲಿ ಮುಂಬೈನದ್ದೇ ಪ್ರಾಬಲ್ಯ

RCBಗೆ ಸವಾಲಾಗುತ್ತಾ MI ಬೇಟೆ – ಗೆಲುವಿನ ಟ್ರ್ಯಾಕ್ ಗೆ ಏನೆಲ್ಲಾ ಟ್ರಿಕ್ಸ್?ವಾಂಖೆಡೆಯಲ್ಲಿ ಮುಂಬೈನದ್ದೇ ಪ್ರಾಬಲ್ಯ

ಸತತ 17 ಸೀಸನ್​ಗಳಿಂದ ಟ್ರೋಫಿ ವಂಚಿತವಾಗಿರೋ ಆರ್​ಸಿಬಿ ಒಂದ್ಕಡೆ.. 10 ವರ್ಷಗಳ ಅಂತರದಲ್ಲೇ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿರೋ ಮುಂಬೈ ಇಂಡಿಯನ್ಸ್ ಮತ್ತೊಂದ್ಕಡೆ. ಬಟ್ ಪಾಪ್ಯುಲಾರಿಟಿ ಅಂದ್ರೆ ಬಂದ್ರೆ ಐಪಿಎಲ್​ನಲ್ಲಿ ಇತಿಹಾಸದಲ್ಲಿ ಈ ತಂಡಗಳು ಟಾಪ್​ನಲ್ಲೇ ಇವೆ. ಬ್ರ್ಯಾಂಡ್ ವ್ಯಾಲ್ಯೂ ಕೂಡ ಪೀಕ್​ನಲ್ಲಿದೆ. ಇದೀಗ ಈ ಸೀಸನ್​ನಲ್ಲಿ ಮೊದಲ ಬಾರಿಗೆ ಉಭಯ ತಂಡಗಳು ಎದುರು ಬದುರಾಗ್ತಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ : 300+ ರನ್ಸ್ ಬಿಲ್ಡಪ್.. ಹ್ಯಾಟ್ರಿಕ್ ಸೋಲು – SRH ಪವರ್ ಹಿಟ್ಟರ್ಸ್ ಫ್ಲ್ಯಾಪ್

ಐಪಿಎಲ್​ನ ಹಿಸ್ಟರಿ ಕೆದಕಿದ್ರೆ ಕಳೆದ ಕೆಲವು ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದೆ. ಕಳೆದ 10 ವರ್ಷಗಳಲ್ಲಿ ತಂಡವು 5 ಪ್ರಶಸ್ತಿಗಳನ್ನು ಗೆದ್ದಿದೆ. ಈ ಎಲ್ಲಾ ಪ್ರಶಸ್ತಿ ಗೆಲುವುಗಳು ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಬಂದಿವೆ. ಮತ್ತೊಂದೆಡೆ,  2013ರಿಂದ 2021 ರ ಆವೃತ್ತಿಯವರೆಗೆ ಐಪಿಎಲ್‌ನಲ್ಲಿ ಆರ್‌ಸಿಬಿಯನ್ನು ವಿರಾಟ್ ಕೊಹ್ಲಿ ಮುನ್ನಡೆಸಿದ್ದರು. ವಿರಾಟ್ ನಾಯಕತ್ವದಿಂದ ಕೆಳಗಿಳಿದಾಗ  2022 ರಿಂದ ಅವರು ಫಾಫ್ ಡು ಪ್ಲೆಸಿಸ್ ರೂಪದಲ್ಲಿ ಹೊಸ ನಾಯಕನನ್ನು ನೇಮಿಸಿದರು. ಇದೀಗ 2025 ರಲ್ಲಿ, ಅವರು ರಜತ್ ಪಾಟಿದಾರ್ ಅವರಿಗೆ ಆರ್ಮ್‌ಬ್ಯಾಂಡ್ ಅನ್ನು ಹಸ್ತಾಂತರಿಸಲಾಗಿದೆ. ಎರಡು ಪಂದ್ಯಗಳನ್ನ ಗೆದ್ದು ಒಂದು ಪಂದ್ಯ ಸೋತಿರೋ ಆರ್​ಸಿಬಿ ಸ್ಟ್ರಾಂಗ್ ಆಗಿ ಕಾಣ್ತಿದೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಮೊದಲ 2 ಮ್ಯಾಚ್​ಗಳನ್ನ ಸೋತು 3ನೇ ಪಂದ್ಯದಲ್ಲಿ ಗೆಲುವಿನ ರುಚಿ ಕಂಡಿತ್ತು. ಹೀಗಾಗಿ ಇದೇ ಗೆಲುವನ್ನ ಕಂಟಿನ್ಯೂ ಮಾಡೋ ಜೋಶ್​ನಲ್ಲಿದೆ. ಶುಕ್ರವಾರ ಎಲ್​ಎಸ್​ಜಿ ವಿರುದ್ಧ ಕಣಕ್ಕಿಳಿಯಲಿರೋ ಮುಂಬೈ ಏಪ್ರಿಲ್ 7ಕ್ಕೆ ಆರ್​ಸಿಬಿ ವಿರುದ್ಧ ಸೆಣಸಾಡಲಿದೆ.

ಮೊದಲ ಎರಡು ಪಂದ್ಯಗಳಲ್ಲಿ ಆರ್​ಸಿಬಿಗೆ ಸಾಲಿಡ್ ಸ್ಟಾರ್ಟ್ ಸಿಕ್ಕಿತ್ತು. ಪವರ್ ಪ್ಲೇನಲ್ಲಿ ಕೊಹ್ಲಿ ಮತ್ತು ಸಾಲ್ಟ್ ಜೋಡಿ ಮೋಡಿ ಮಾಡಿತ್ತು. ಆದ್ರೆ ಗುಜರಾತ್ ಎದುರಿನ ಪಂದ್ಯದಲ್ಲಿ ಇದೆಲ್ಲವೂ ಉಲ್ಟಾ ಆಯ್ತು. 2ನೇ ಓವರ್​ನಲ್ಲಿ ವಿರಾಟ್​ ಕೊಹ್ಲಿ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ, ದೇವದತ್ತ್​​ ಪಡಿಕ್ಕಲ್​, ಫಿಲ್ ಸಾಲ್ಟ್ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಸೇರಿದ್ರು. ರಜತ್ ಪಾಟಿದಾರ್ ಕೂಡ ಫೇಲ್ಯೂರ್ ಆಗಿದ್ರು. ಇನ್ನು ದೇವದತ್ ಪಡಿಕ್ಕಲ್ ಆಡಿದ ಮೂರೂ ಪಂದ್ಯಗಳಿಂದಲೂ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಂತಿಲ್ಲ. ಜಿತೇಶ್ ಶರ್ಮಾ ಕಡೆಯಿಂದ ಮತ್ತಷ್ಟು ಒಳ್ಳೆ ಪರ್ಫಾಮೆನ್ಸ್ ಬೇಕಿದೆ. ಆಲ್​​ರೌಂಡರ್​ ಕೃನಾಲ್ ಪಾಂಡ್ಯ ಆಟ ಒಂದು ಪಂದ್ಯಕ್ಕೆ ಸೀಮಿತವಾದಂತಿದೆ. ಕೊಲ್ಕತ್ತಾದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದ ಕೃನಾಲ್​​, ಕಳೆದ ಎರಡೂ ಪಂದ್ಯಗಳಿಂದ ವಿಕೆಟ್ ಲೆಸ್ ಆಗಿದ್ದಾರೆ. ಬೆಂಗಳೂರಲ್ಲಿ ಬರೋಬ್ಬರಿ 11.30ರ ಏಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದಾರೆ. 2 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು ಬಂದಿರೋದು ಜಸ್ಟ್​ ಐದೇ ಐದು ರನ್ ಮಾತ್ರ. ಸೋ ನೆಕ್ಸ್​ಟ್ ಮ್ಯಾಚ್ ಕಮ್ ಬ್ಯಾಕ್ ಮಾಡ್ಲೇಬೇಕಿದೆ. ಇನ್ನು ಬೌಲಿಂಗ್ ವಿಭಾಗ ನೋಡೋದಾದ್ರೆ ಈ ಹಿಂದಿಗಿಂತ ಬೆಸ್ಟ್​ ಅನ್ನೋದ್ರಲ್ಲಿ ಡೌಟಿಲ್ಲ. ಬಟ್ ಮುಂಬೈ ವಿರುದ್ಧವೂ ಅಂಥದ್ದೇ ಪರ್ಫಾಮೆನ್ಸ್ ಬರಬೇಕಿದೆ. ಈ ಟ್ರಿಕ್ಸ್ ವರ್ಕೌಟ್ ಆದ್ರೆ ಗೆಲುವು ನಮ್ಮದೇ ಆಗಲಿದೆ.

ಇನ್ನು ಮುಂಬೈ ಮತ್ತು ಬೆಂಗಳೂರು ನಡುವೆ 2024ರಲ್ಲಿ ಇದೇ ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆದಿದ್ದ ಕೊನೇ ಪಂದ್ಯದಲ್ಲಿ ಎಂಐ ಪಡೆ ಅಬ್ಬರಿಸಿತ್ತು.  ಐಪಿಎಲ್ 2024 ರ ಏಪ್ರಿಲ್ 11ರಂದು ನಡೆದಿದ್ದ 25 ನೇ ಮ್ಯಾಚ್​ನಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಕೊನೆಯ ಬಾರಿಗೆ ತಂಡಗಳು ಮುಖಾಮುಖಿಯಾದವು. ಈ ಮ್ಯಾಚಲ್ಲಿ ವಿರಾಟ್ ಕೊಹ್ಲಿ ಮತ್ತು ವಿಲ್ ಜ್ಯಾಕ್ಸ್ ಸಿಂಗಲ್ ಡಿಜಿಟ್​ಗೆ ವಿಕೆಟ್ ಒಪ್ಪಿಸಿದ್ರು. ಆದರೆ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ರಜತ್ ಪಾಟಿದಾರ್ ಅರ್ಧಶತಕಗಳೊಂದಿಗೆ ಜವಾಬ್ದಾರಿಯುತ ಆಟವಾಡಿದ್ರು. ದಿನೇಶ್ ಕಾರ್ತಿಕ್ ಅವರ ಮತ್ತೊಂದು ಅರ್ಧಶತಕದಿಂದ ಸ್ಕೋರ್ ಹೆಚ್ಚಾಗಿತ್ತು. ಮೂವರ ವೈಯಕ್ತಿಕ ಅರ್ಧಶತಕದ ಹೊರತಾಗಿಯೂ ಆರ್ ಸಿಬಿ 20 ಓವರ್​ಗಳಲ್ಲಿ 8 ವಿಕೆಟ್ ಕಳ್ಕೊಂಡು 196 ರನ್ ಕಲೆ ಹಾಕಿತ್ತು. ಈ ಟಾರ್ಗೆಟ್ ಬೆನ್ನತ್ತಿದ ಎಂಐ ತಂಡ ಹೋಂ ಗ್ರೌಂಡ್​ನಲ್ಲಿ ಈಸಿಯಾಗಿ ಟಾರ್ಗೆಟ್ ರೀಚ್ ಆಗಿತ್ತು. ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಆಕ್ರಮಣಕಾರಿಯಾಗಿ ಇನ್ನಿಂಗ್ಸ್ ಪ್ರಾರಂಭಿಸಿದರು. ಇಶಾನ್ ಕಿಶನ್ 69 ರನ್ ಚಚ್ಚಿದ್ರೆ ರೋಹಿತ್ 38 ರನ್ ಗಳಿಸಿದ್ರು. ಸೂರ್ಯ 52, ಪಾಂಡ್ಯ 21, ತಿಲಕ್ ವರ್ಮಾ 16 ರನ್ ಗಳಿಸೋ ಮೂಲಕ 15.3 ಓವರ್​ಗಳನ್ನೇ ಟಾರ್ಗೆಟ್ ಬೆನ್ನಟ್ಟಿ ಗೆದ್ದು ಬೀಗಿದ್ರು. ಮುಂಬೈ ಮತ್ತು ಆರ್​ಸಿಬಿ ತಂಡಗಳು ಈವರೆಗೂ ಐಪಿಎಲ್​ನಲ್ಲಿ 33 ಪಂದ್ಯಗಳನ್ನು ಆಡಿವೆ. ಇದರಲ್ಲಿ ಮುಂಬೈ 19 ಪಂದ್ಯಗಳನ್ನು ಗೆದ್ದುಕೊಂಡು ಮೇಲುಗೈ ಸಾಧಿಸಿದ್ದರೇ, ಆರ್​ಸಿಬಿ 14 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.

Shantha Kumari

Leave a Reply

Your email address will not be published. Required fields are marked *