50 ಲಕ್ಷದಿಂದ 11 ಕೋಟಿಗೆ ಸಂಭಾವನೆ ಹೆಚ್ಚಳ – ಕ್ಯಾಪ್ಟನ್ ಆಗಿ ಪಾಟಿದಾರ್ ಅದ್ಭುತ ಪ್ರದರ್ಶನ!

2025ರ ಐಪಿಎಲ್ಗೂ ಮುನ್ನ ರಜತ್ ಪಾಟಿದಾರ್ ಅವ್ರನ್ನ ಆರ್ಸಿಬಿ ಕ್ಯಾಪ್ಟನ್ ಅಂತಾ ಅನೌನ್ಸ್ ಮಾಡಿದಾಗ ಸಾಕಷ್ಟು ಜನ ಶಾಕ್ ಆಗಿದ್ರು. ಎಂತೆಂಥಾ ಘಟಾನುಘಟಿಗಳು ಹರಾಜಿನಲ್ಲಿದ್ರೂ ಯಾರನ್ನೂ ಖರೀದಿ ಮಾಡದೆ ಈ ಪಾಟಿದಾರ್ಗೆ ಪಟ್ಟ ಕಟ್ಟಿದ್ರಲ್ಲ.. ಏನ್ ಇವ್ರ್ ಲಾಜಿಕ್ಕು.. ಈ ಸಲನೂ ಕಪ್ ಹೊಗೆನೆ ಅಂತಾ ಫ್ಯಾನ್ಸ್ ಸಿಟ್ಟಾಗಿದ್ರು. ಬಟ್ ಫ್ರಾಂಚೈಸಿಯ ಗೇಮ್ ಪ್ಲ್ಯಾನ್ ಏನು ಅನ್ನೋದು ಈಗ ಅರ್ಥ ಆಗ್ತಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕೊಟ್ಟಿರೋ ಜವಾಬ್ದಾರಿಯನ್ನ ಹೇಗೆ ನಿಭಾಯಿಸ್ಬೇಕು ಅನ್ನೋದನ್ನ ಪಾಟಿದಾರ್ ಪ್ರೂವ್ ಮಾಡಿ ತೋರಿಸ್ತಿದ್ದಾರೆ. ಶ್ರೀಕೃಷ್ಣನಂತೆ ನಿಂತು ವಿರಾಟ್ ಕೊಹ್ಲಿ ಗೆಲುವಿನ ದಿಕ್ಕು ತೋರಿಸ್ತಿದ್ರೆ ಅರ್ಜುನನಂತೆ ರಜತ್ ಪಾಟಿದಾರ್ ಸಾಧಿಸುತ್ತಾ ಹೊರಟಿದ್ದಾರೆ. ಮೂರ್ನಾಲ್ಕು ವರ್ಷಗಳ ಹಿಂದಷ್ಟೇ ಐಪಿಎಲ್ಗೆ ಕಾಲಿಟ್ಟಿದ್ದ ಪಾಟಿದಾರ್ ಈಗ ಆರ್ಸಿಬಿ ತಂಡದ ಮಹಾರಾಜ ಆಗಿ ಗೆಲುವಿನ ದಂಡಯಾತ್ರೆ ಮುಂದುವರಿಸಿದ್ದಾರೆ. ಕೆಕೆಆರ್ ಮತ್ತು ಸಿಎಸ್ ಕೆ ವಿರುದ್ಧ ಭರ್ಜರಿ ಜಯದ ಹಿಂದೆಯೂ ಪಾಟಿದಾರ್ ಪಾತ್ರ ದೊಡ್ಡದಿದೆ. ಇದೀಗ ಗುಜರಾತ್ ಬೇಟೆಯಲ್ಲಿ ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಡೆತ್ ಓವರ್ ಸ್ಪೆಷಲಿಸ್ಟ್ ಡೇವಿಡ್ – ಸಿಕ್ಸರ್ ಗಳಲ್ಲೇ ದಾಖಲೆ ಬರೆದ ಟಿಮ್
ರಜತ್ ಪಾಟಿದಾರ್ ಗೆ ಐಪಿಎಲ್ನಲ್ಲಿ ಕ್ಯಾಪ್ಟನ್ಸಿ ನಿಭಾಯಿಸಿದ್ದ ಯಾವುದೇ ಎಕ್ಸ್ಪೀರಿಯನ್ಸ್ ಇರ್ಲಿಲ್ಲ. ಆದ್ರೂ ಅದನ್ನೆಲ್ಲಾ ಲೆಕ್ಕಕ್ಕಿಡದೆ ಫ್ರಾಂಚೈಸಿ ನಾಯಕತ್ವ ನೀಡಿತ್ತು. ಇದೀಗ ಸ್ಕಿಪ್ಪರ್ ಆಗಿ ಮೊದಲ 2 ಪಂದ್ಯಗಳಲ್ಲೇ ಪಾಟೀದಾರ್ ಎಲ್ಲರ ಮನ ಗೆದ್ದಿದ್ದಾರೆ. ಕೂಲ್ ಅಂಡ್ ಕಾಮ್ ಆಗಿಯೇ ಇಡೀ ತಂಡವನ್ನ ಕಮಟ್ರೋಲ್ ಮಾಡ್ತಿದ್ದಾರೆ. ಬ್ಯಾಟಿಂಗ್ ನಲ್ಲೂ ಕೂಡ ಮಿಡಲ್ ಆರ್ಡರ್ ನಲ್ಲಿ ರಾಕೆಟ್ ವೇಗದಲ್ಲಿ ರನ್ಸ್ ಸ್ಕೋರ್ ಮಾಡ್ತಿದ್ದಾರೆ. ಈಡನ್ ಗಾರ್ಡನ್ಸ್ನಲ್ಲಿ ಕೊಲ್ಕತ್ತಾ ವಿರುದ್ಧ 16 ಎಸೆತಗಳಲ್ಲಿ 34 ರನ್, ಚೆಪಾಕ್ನಲ್ಲಿ 32 ಬಾಲ್ಗಳಲ್ಲಿ 51 ರನ್ ಸಿಡಿಸಿರುವ ಪಟಿದಾರ್, ಟೂರ್ನಿಯಲ್ಲಿ 178ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸುತ್ತಿದ್ದಾರೆ. 2008ರಲ್ಲಿ ರಾಹುಲ್ ದ್ರಾವಿಡ್ ಅವ್ರ ಕ್ಯಾಪ್ಟನ್ಸಿಯಿಂದ ಹಿಡ್ದು 2024ರಲ್ಲಿ ಫಾಫ್ ಡುಪ್ಲೆಸಿಸ್ ವರೆಗೂ ಫ್ರಾಂಚೈಸಿ 8 ನಾಯಕರನ್ನ ಕಂಡಿದೆ. ಬಟ್ ಯಾರಿಂದಲೂ ಟೈಟಲ್ ಗೆಲ್ಲಿಸಿಕೊಡೋಕೆ ಸಾಧ್ಯವಾಗಲಿಲ್ಲ. ಆದ್ರೀಗ ಬೆಂಗಳೂರು ತಂಡದ ನೂತನ ನಾಯಕ ರಜತ್ ಪಾಟೀದಾರ್ ಕಪ್ ಗೆಲ್ಲಿಸುವ ಭರವಸೆ ಮೂಡಿಸಿದ್ದಾರೆ. ಹಾಗಂತ ಇಲ್ಲಿ ಪಾಟಿದಾರ್ಗೆ ಸುಖಾಸುಮ್ಮನೆ ತಂಡದ ಜವಾಬ್ದಾರಿ ಹೊರಿಸಿಲ್ಲ.
31 ವರ್ಷದ ರಜತ್ ಪಾಟಿದಾರ್, ದೇಶಿ ಕ್ರಿಕೆಟ್ ಹಾಗೂ ಆರ್ಸಿಬಿ ಪರವೂ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡಿದ್ದಾರೆ. ಇದಲ್ಲಕ್ಕಿಂತ ಮಿಗಿಲಾಗಿ ಆರ್ಸಿಬಿ ಪರ ಮಿಡಲ್ ಆರ್ಡರ್ನ ಬಲವಾಗಿದ್ದಾರೆ. ಬೆಂಗಳೂರು ತಂಡದ ನಾಯಕರಾಗೋ ಮೊದ್ಲು ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಮಧ್ಯ ಪ್ರದೇಶ ನಾಯಕನಾಗಿ ಸಕ್ಸಸ್ ಕಂಡಿದ್ದ ಪಾಟಿದಾರ್ ನಾಯಕನಾಗಿ 10 ಪಂದ್ಯಗಳ ಪೈಕಿ 8 ಮ್ಯಾಚ್ಗಳನ್ನ ಗೆಲ್ಲಿಸಿದ್ದರು. ಬೌಲಿಂಗ್ ಚೇಂಜ್, ಫೀಲ್ಡಿಂಗ್ ಅಡ್ಜಸ್ಟ್ಮೆಂಟ್ನಲ್ಲೂ ಚುರುಕುತನ ಹೊಂದಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕೂಲ್ ಅಂಡ್ ಕಾಮ್ ಆಗಿ ಎಲ್ಲರೊಂದಿಗೆ ಬೆರೆಯುವ ಗುಣ ಇದೆ. ಇದೇ ಕಾರಣಕ್ಕೆ ರಜತ್ ಪಾಟಿದಾರ್ ಮೇಲೆ ಭರವಸೆ ಹೊಂದಿರುವ ಮ್ಯಾನೇಜ್ಮೆಂಟ್ ಎರಡ್ಮೂರು ವರ್ಷಗಳ ಕಾಲ ನಾಯಕತ್ವದ ಪಟ್ಟ ಕಟ್ಟುವ ಲೆಕ್ಕಾಚಾರದಲ್ಲಿದೆ.
2024ರವರೆಗೂ ಐಪಿಎಲ್ನಲ್ಲಿ ರಜತ್ ಪಾಡಿದಾರ್ಗೆ ಲಕ್ಷಗಳ ಲೆಕ್ಕದಲ್ಲಷ್ಟೇ ಸಂಭಾವನೆ ಸಿಗ್ತಿತ್ತು. ಬಟ್ ಅದೇನ್ ಲಕ್ ನೋಡಿ. 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಅವ್ರಿಗಿದ್ದ ವೇತನಕ್ಕಿಂತ 22 ಪಟ್ಟು ಎಕ್ಸ್ಟ್ರಾ ಹಣ ಕೊಟ್ಟು ಆರ್ ಸಿಬಿ ಫ್ರಾಂಚೈಸಿ ಅವ್ರನ್ನ ಉಳಿಸಿಕೊಂಡಿತ್ತು. ರಜತ್ ಪಾಟಿದಾರ್ 2021 ರಲ್ಲಿ RCB ಜೊತೆ 20 ಲಕ್ಷ ರೂಪಾಯಿಗಳ ಒಪ್ಪಂದದೊಂದಿಗೆ ತಮ್ಮ ಕರಿಯರ್ ಶುರು ಮಾಡಿದ್ರು. 2021ರಿಂದ 23ರವರೆಗೆ ಅಂದ್ರೆ 3 ವರ್ಷ 20 ಲಕ್ಷ ರೂಪಾಯಿ ಸಂಭಾವನಯಷ್ಟೇ ಪಡೀತಿದ್ರು. ಬಟ್ 2024ರಲ್ಲಿ ಅಂದ್ರೆ ಕಳೆದ ಸೀಸನ್ನಲ್ಲಿ 50 ಲಕ್ಷ ರೂಪಾಯಿಗೆ ಏರಿಕೆ ಮಾಡ್ಲಾಗಿತ್ತು. ವಿಷ್ಯ ಅಂದ್ರೆ 18ನೇ ಸೀಸನ್ ಐಪಿಎಲ್ಗೂ ಮುನ್ನ ಬರೋಬ್ಬರಿ 11 ಕೋಟಿ ರೂಪಾಯಿಗೆ ಫ್ರಾಂಚೈಸಿ ಅವ್ರನ್ನ ರಿಟೇನ್ ಮಾಡ್ಕೊಂಡಿತ್ತು. ಅಂದ್ರೆ 50 ಲಕ್ಷ ಇದ್ದ ವೇತನ ಒಂದೇ ಬಾರಿಗೆ 11 ಕೋಟಿಗೆ ಏರಿಕೆಯಾಯ್ತು. ಫ್ರಾಂಚೈಸಿ ಇಷ್ಟು ದೊಡ್ಡ ಮೊತ್ತವನ್ನ ಪಾಟಿದಾರ್ ಕೊಟ್ಟಿದ್ದು ಯಾಕೆ ಅನ್ನೋ ಸೀಕ್ರೆಟ್ ಈಗ ರಿವೀಲ್ ಆಗ್ತಿದೆ.
ರಜತ್ ಪಾಟಿದಾರ್ 1 ಜೂನ್ 1993 ರಂದು ಇಂದೋರ್ನಲ್ಲಿ ಜನಿಸಿದರು. ರಜತ್ ಪಾಟಿದಾರ್ ಅವರ ತಂದೆ ಮನೋಹರ್ ಪಾಟಿದಾರ್. ತಾಯಿ ಗೃಹಿಣಿ. ರಜತ್ಗೆ ಮಹೇಂದ್ರ ಪಾಟಿದಾರ್ ಮತ್ತು ಸುನೀತಾ ಪಾಟಿದಾರ್ ಎಂಬ ಸಹೋದರ, ಸಹೋದರಿ ಇದ್ದಾರೆ. ತಂದೆ ಇಂದೋರ್ನಲ್ಲಿ ಉದ್ಯಮಿ ಆಗಿದ್ದಾರೆ. ರಜತ್ ಪಟಿದಾರ್ ತಮ್ಮ ಎಂಟನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಈ ಟೈಮಲ್ಲಿ ಆಫ್-ಸ್ಪಿನ್ ಬೌಲರ್ ಆಗಿದ್ದರು. ಬಟ್ ಅಂಡರ್-15 ಹಂತದ ನಂತರ ಬ್ಯಾಟಿಂಗ್ ಕಡೆ ಗಮನ ಹರಿಸಿದರು. 2021 ರಲ್ಲಿ ಆರ್ಸಿಬಿಯೊಂದಿಗೆ ಹೊಸ ಜರ್ನಿ ಪ್ರಾರಂಭವಾಯ್ತು. ಬಳಿಕ ರಾಷ್ಟ್ರೀಯ ತಂಡದಲ್ಲೂ ಸ್ಥಾನ ಸಿಗುವಂತೆ ಮಾಡಿತು. ಇಂಗ್ಲೆಂಡ್ ವಿರುದ್ಧ 2024 ರಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಪರ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದರು. ಬಟ್ ಆ ನಂತ್ರ ಟೀಂ ಇಂಡಿಯಾದಿಂದ ದೂರವೇ ಉಳಿದಿದ್ದಾರೆ. ಬಟ್ ಐಪಿಎಲ್ನಲ್ಲಿ ಕ್ಯಾಪ್ಟನ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದು ಆರಂಭದಲ್ಲೇ ಸಕ್ಸಸ್ ಕೂಡ ಕಾಣ್ತಿದ್ದಾರೆ.