“3ಡಿ ಅವತಾರ್” ಸ್ಟಿಕ್ಕರ್ ಪರಿಚಯಿಸಿದ ವಾಟ್ಸ್‌ಆ್ಯಪ್‌ – ಹೊಸ ಫೀಚರ್ ಹೇಗಿದೆ ಗೊತ್ತಾ?

“3ಡಿ ಅವತಾರ್” ಸ್ಟಿಕ್ಕರ್ ಪರಿಚಯಿಸಿದ ವಾಟ್ಸ್‌ಆ್ಯಪ್‌ – ಹೊಸ ಫೀಚರ್ ಹೇಗಿದೆ ಗೊತ್ತಾ?

ಅತ್ಯಂತ ಜನಪ್ರಿಯ ಮತ್ತು ವ್ಯಾಪಕವಾಗಿ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆ್ಯಪ್‌ ಹೊಸ ಹೊಸ ಫೀಚರ್ ಗಳನ್ನು ಬಿಡುಗಡೆ ಮಾಡಿ ಸುದ್ದಿಯಲ್ಲಿರುತ್ತದೆ. ಇದೀಗ ವಾಟ್ಸ್‌ಆ್ಯಪ್‌ “3ಡಿ ಅವತಾರ್” ಸ್ಟಿಕ್ಕರ್ ಗಳನ್ನು ಬಳಕೆದಾರರಿಗೆ ಪರಿಚಯಿಸಿದೆ.

“3ಡಿ” ಅವತಾರ್ ಸ್ಟಿಕ್ಕರ್ ಗಳನ್ನು  ಬಳಕೆದಾರರು ಪ್ರೊಫೈಲ್‌ ಫೋಟೋಗಳಾಗಿ ಅಥವಾ ಬೇರೆಯವರಿಗೆ ಕಳುಹಿಸಲು ಕಸ್ಟಮ್‌ ಸ್ಟಿಕ್ಕರ್ ಗಳಾಗಿ ಬಳಸಬಹುದಾಗಿದೆ.

ಇದನ್ನೂ ಓದಿ: ICMR ವೆಬ್ ಸೈಟ್ ಮೇಲೆ ಸೈಬರ್ ದಾಳಿ –ಚೀನಾ ಕೈವಾಡ?

ಈ ಹೊಸ ಫೀಚರ್ ನಲ್ಲಿ ವಿವಿಧ ಭಾವನೆಗಳು ಮತ್ತು ಕ್ರಿಯೆಗಳನ್ನು ಪ್ರತಿಬಿಂಬಿಸುವ 36 ಕಸ್ಟಮ್‌ ಸ್ಟಿಕ್ಕರ್ ಗಳನ್ನು ವಾಟ್ಸ್‌ಆ್ಯಪ್‌ ಪರಿಚಯಿಸಿದೆ. ಇವು ಸ್ನಾಪ್‌ನ ಬಿಟ್‌ಮೊಜಿ ಅಥವಾ ಆ್ಯಪಲ್‌ನ ಮೆಮೊಜಿ ಸ್ಟಿಕ್ಕರ್ ಗಳ ರೀತಿಯಲ್ಲೇ ಇವೆ.

ಅವತಾರ್‌ ಸ್ಟಿಕ್ಕರ್ ಅನ್ನು ತಮ್ಮ ಪ್ರೊಫೈಲ್‌ ಫೋಟೋ ಮಾಡಿಕೊಳ್ಳಬೇಕಾದರೆ, ಮೊದಲು ವಾಟ್ಸ್‌ಆ್ಯಪ್‌ನ ಸೆಟ್ಟಿಂಗ್ಸ್‌ ಮೆನುಗೆ ಹೋಗಿ, ನಂತರ ಪ್ರೊಫೈಲ್‌ ಫೋಟೋಗೆ ಹೋಗಿ, ಅವತಾರ್‌ ಸ್ಟಿಕ್ಕರ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

“ಶೀಘ್ರ ನಿಮ್ಮ ವಾಟ್ಸ್‌ಆ್ಯಪ್‌ ಗಳು ಅವತಾರ್‌ ಸ್ಟಿಕ್ಕರ್ ಗಳು ಬರಲಿವೆ. ಬೆಟಾ ಪರೀಕ್ಷೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನಾವು ಇವುಗಳನ್ನು ಪರಿಚಯಿಸುತ್ತಿದ್ದೇವೆ,’ ಎಂದು ಮೆಟಾ ಸಿಇಒ ಮಾರ್ಕ್‌ ಜುಗರ್‌ಬರ್ಗ್‌ ತಿಳಿಸಿದ್ದಾರೆ.

suddiyaana