ಐಸ್ ಕ್ರೀಂ ಸವಿಯೋ ಮುನ್ನ ಎಚ್ಚರ! – ಕಲರ್‌ ಫುಲ್‌ ಐಸ್ ಕ್ರೀಂನಲ್ಲಿ ಹಾನಿಕಾರಕ ಅಂಶ ಪತ್ತೆ

ಐಸ್ ಕ್ರೀಂ ಸವಿಯೋ ಮುನ್ನ ಎಚ್ಚರ! – ಕಲರ್‌ ಫುಲ್‌ ಐಸ್ ಕ್ರೀಂನಲ್ಲಿ ಹಾನಿಕಾರಕ ಅಂಶ ಪತ್ತೆ

ಪ್ಲಾಸ್ಟಿಕ್ ಇಡ್ಲಿ ಆಯ್ತು, ಕಲ್ಲಂಗಡಿ ಆಯ್ತು, ಕಲರ್ ಕಲರ್ ಕಬಾಬ್ ಆಯ್ತು, ಗೋಬಿ ಮಂಚೂರಿ ಆಯ್ತು, ಪನ್ನೀರ್ ಆಯ್ತು. ಈಗ ಬಿಸಿಲ ಬೇಗೆಯಲ್ಲಿ ದೇಹ ತಣ್ಣಗಾಗಿಸುವ ಕೂಲ್ ಕೂಲ್ ಐಸ್‌ಕ್ರೀಂನ ಸರದಿಯಾಗಿದೆ.  ಬೇಸಿಗೆಯಲ್ಲಿ ಕೂಲ್‌ ಕೂಲ್‌ ಆಗಿರಲು ಐಸ್‌ಕ್ರೀಮ್‌ ತಿನ್ನುವವರೇ ಎಚ್ಚರ.. ಇದೀಗ ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಐಸ್‌ಕ್ರೀಂಗಳನ್ನ ಲ್ಯಾಬ್‌ಗೆ ರವಾನೆ ಮಾಡಿದ್ದಾರೆ.

ಇದನ್ನೂ ಓದಿ: ರಾಜಸ್ಥಾನಕ್ಕೆ ಮೊದಲ ಜಯ- ಸಿಎಸ್‌ಕೆಗೆ 2ನೇ ಸೋಲು

ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಕೂಡ ಆಹಾರ ಪದಾರ್ಥಗಳನ್ನ ತಪಾಸಣೆ ಮಾಡುತ್ತಾರೆ. ಈಗ ಬೇಸಿಗೆ ಬಿಸಿಲು ಜಾಸ್ತಿ ಇರುವುದರಿಂದ ಐಸ್‌ಕ್ರೀಂ ಅನ್ನು ಜನರು ಜಾಸ್ತಿ ಸೇವನೆ ಮಾಡುತ್ತಾರೆ. ಐಸ್‌ಕ್ರೀಂನಲ್ಲಿ ಕಲರ್ ಬಳಸಿರುವ ಕಾರಣ ಎಚ್ಚೆತ್ತುಕೊಂಡ ಸುರಕ್ಷತಾ ಇಲಾಖೆ ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ಮಾಡಿ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ರವಾನೆ ಮಾಡಿದ್ದಾರೆ.

ಆಹಾರಕ್ಕೆ ಸನ್‌ಸೆಟ್ ಯೆಲ್ಲೋ, ಸನ್ ಸೆಟ್ ಗ್ರೀನ್ ಕಲರ್ ಬಳಕೆ ಮಾಡುವುದರಿಂದ ಕಾರ್ಸ್ಮೋಜೆನಿಕ್‌ ಕ್ಯಾನ್ಸರ್‌ಕಾರಕ ಉತ್ಪತ್ತಿಯಾಗುತ್ತದೆ. ಕ್ಯಾನ್ಸರ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಆಹಾರ ತಜ್ಞರು ಎಚ್ಚರಿಸಿದ್ದಾರೆ.

ಆಹಾರ ಉತ್ಪತ್ತಿಯಲ್ಲೂ ಕಲಬೆರಕೆ, ಕಲರ್ ಬೆರಕೆ ಮತ್ತು ಕೆಮಿಕಲ್ ಬಳಕೆ ಮಾಡುವುದರಿಂದ ಜನರು ತೀರಾ ಸಮಸ್ಯೆಗೆ ತುತ್ತಾಗಿ ಎಫ್‌ಎಸ್‌ಎಸ್‌ಐನಿಂದ ಪ್ರಮಾಣಿಕರಿಸಿದ್ದನ್ನ ತಿನ್ನಬೇಕಾಗುತ್ತದೆ. ಅಲ್ಲದೇ ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ ಎನ್ನಲಾಗುತ್ತಿದೆ.

Shwetha M