ಕ್ರಿಕೆಟ್ ಬ್ಯಾಟರ್ಸ್ ಗೇಮ್ ಆಯ್ತಾ? ಹೈಸ್ಕೋರ್ ಬೌಲರ್ಗೆ ಡೇಂಜರ್!!
ಬ್ಯಾಟಿಂಗ್ ಪಿಚ್, ಬೌಲರ್ಗೆ ಭವಿಷ್ಯ ಇಲ್ವಾ?

ಕ್ರಿಕೆಟ್ ಬ್ಯಾಟರ್ಸ್ ಗೇಮ್ ಆಯ್ತಾ?  ಹೈಸ್ಕೋರ್ ಬೌಲರ್ಗೆ ಡೇಂಜರ್!!ಬ್ಯಾಟಿಂಗ್ ಪಿಚ್, ಬೌಲರ್ಗೆ ಭವಿಷ್ಯ ಇಲ್ವಾ?

ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಬ್ಯಾಟರ್‌ಗಳ  ಅಬ್ಬರ ಜೋರಾಗಿದೆ. ಬೌಲರ್‌ಗಳಿಗೆ ಮನಬಂದಂತೆ ಚಚ್ಚುತ್ತಿದ್ದಾರೆ. ಟೂರ್ನಿಯಲ್ಲಿ 250 ರನ್ ಸಾಮಾನ್ಯ ಸ್ಕೋರ್ ಎನಿಸಿಬಿಟ್ಟಿದೆ.  ಅಷ್ಟೇ ಅಲ್ಲ ಮೊದಲು ಬ್ಯಾಟಿಂಗ್ ಮಾಡುವ ತಂಡ ಇಷ್ಟೆಲ್ಲಾ ರನ್ ಸಿಡಿಸಿದರೂ ಕೂಡ ಪಂದ್ಯ ಗೆಲ್ಲುತ್ತೇವೆ ಎಂಬ ವಿಶ್ವಾಸ ಇರಲ್ಲ. ಬೌಲರ್‌ಗಳು ಒಂದು ಪಂದ್ಯ ಆಡಿದ ಬಳಿಕ ಮತ್ತೊಂದು ಪಂದ್ಯಾ ಆಡ್ತಾರಾ ಅನ್ನೋದೆ ಪ್ರಶ್ನೆಯಾಗಿದೆ. ಯಾಕಂದ್ರೆ ಐಪಿಎಲ್‌ ಎಲ್ಲಾ ಪಿಚ್‌ಗಳು ಬ್ಯಾಟರ್ ಸ್ನೇಹಿ ಪಿಚ್‌ಗಳಾಗಿವೆ. ಅಲ್ಲದೆ ಈ ಸ್ವರೂಪದಲ್ಲಿ ಬೌಲರ್‌ಗಳ ಮೇಲೆ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಮೊದಲ ಓವರ್‌ನಿಂದಲೇ ಬೌಲರ್‌ಗಳನ್ನು ದಂಡಿಸುತ್ತಾರೆ. ಅದರೆ ಕೆಲವೊಮ್ಮೆ ಕ್ರಿಕೆಟ್​ ಪ್ರಿಯರನ್ನು ಆಕರ್ಷಿಸಲೆಂದ ಬ್ಯಾಟಿಂಗ್ ಪಿಚ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದು ಬೌಲರ್‌ಗಳಿಗೆ ನರಕವಾಗುತ್ತದೆ.

ಬೌಲರ್ ಬದಲು ಮಷಿನ್ ಜೊತೆ ಕ್ರಿಕೆಟ್ ಆಡಿ   

ಈ ಬಾರಿಯ ಬಹುತೇಕೆ ಐಪಿಎಲ್‌ ಪಂದ್ಯಗಳಲ್ಲಿ 200+ ರನ್​ಗಳು ದಾಖಲಾಗಿವೆ. ಇದು ಬ್ಯಾಟರ್​ಗಳ ಪ್ರಾಬಲ್ಯ ಎತ್ತಿ ತೋರಿಸುತ್ತಿದೆ. ಇದರ ಬೆನ್ನಲ್ಲೇ ಗುಜರಾತ್​ ಟೈಟಾನ್ಸ್​ ತಂಡದ ಸ್ಟಾರ್​ ಆಟಗಾರ ಕಗಿಸೋ ರಬಾಡ ಆಕ್ರೋಶ ಹೊರಹಾಕಿದ್ದಾರೆ. ಕ್ರಿಕೆಟ್​ ಎಂದರೆ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಸಮತೋಲನ ಇರಬೇಕು. ಬ್ಯಾಟಿಂಗ್ ಬೌಲಿಂಗ್ ಎರಡೂ ಸರಾಗವಾಗಿ ನಡೆದರೆ ಮಾತ್ರ ಪ್ರೇಕ್ಷಕರಿಗೆ ಮನರಂಜನೆ ಸಿಗುತ್ತದೆ. ಆದರೆ ಟಿ20 ಸ್ವರೂಪ ಬಂದ ನಂತರ ಇದು ಬ್ಯಾಟರ್​ಗಳ ಆಟವಾಗಿ ಬದಲಾಗಿದೆ. ಐಪಿಎಲ್‌ನಲ್ಲೂ ಹಲವು ಪಿಚ್‌ಗಳನ್ನು ಬ್ಯಾಟಿಂಗ್ ಸ್ನೇಹಿಯಾಗಿ ಮಾಡಲಾಗುತ್ತಿದೆ. ಆದ್ದರಿಂದ 250ಕ್ಕೂ ಹೆಚ್ಚು ಸ್ಕೋರ್‌ಗಳನ್ನು ಸುಲಭವಾಗಿ ಗಳಿಸಲಾಗುತ್ತಿದೆ. ಇದಕ್ಕೆ ಕ್ರಿಕೆಟ್ ಅನ್ನುವ ಬದಲು ಬ್ಯಾಟಿಂಗ್​ ಎಂದು ಹೆಸರು ಬದಲಿಸಬೇಕು ಎಂದಿದ್ದಾರೆ. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಪಿಚ್‌ಗಳು ತುಂಬಾ ಸಮತಟ್ಟಾಗುತ್ತಿವೆ. ಪ್ರತಿಯೊಂದು ಪಂದ್ಯದಲ್ಲೂ ನಾವು ಒಂದೇ ರೀತಿಯ ಪರಿಸ್ಥಿತಿಯನ್ನು ನೋಡುತ್ತೇವೆ. ಇದು ಆಟದಿಂದ ಮಜವನ್ನು ಕಸಿದುಕೊಳ್ಳುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಬೌಲರ್ ಬದಲು ಬ್ಯಾಟರ್ಸ್  ಜೊತೆ ಬೌಲಿಂಗ್ ಮಾಡೋ ಮಿಷನ್ ಫಿಕ್ಸ್ ಮಾಡಿ ಎಂದಿದ್ದಾರೆ. ಈ ಮಾತು ಕೇಳಿದ್ರೆ ಎಲ್ಲೋ ಒಂದ್ಕಡೆ ನಿಜ ಅನ್ಸುತ್ತೆ.. ಯಾಕಂದ್ರೆ ಈ ಹಿಂದಿನ ಸೀಸನ್‌ಗಳಲ್ಲಿ ಅಂದ್ರೆ 2 ವರ್ಷಗಳ ಹಿಂದೆ 200 ಕ್ಕೂ ಹೆಚ್ಚು ರನ್‌ಗಳು ಬರುತಿದಿದ್ದು ತೀರ ಕಡಿಮೆ. ಆದ್ರೆ ಈಗ ಪ್ರತಿ ಮ್ಯಾಚ್‌ನಲ್ಲೂ 200ಕ್ಕೂ ಹೆಚ್ಚು ರನ್ ಬರ್ತಿದೆ. ಮೊದಲ ಬ್ಯಾಟಿಂಗ್ ಮಾಡಿದ ತಂಡ 200ಕ್ಕೂ ಹೆಚ್ಚು ರನ್‌ಗಳಿಸಿದ್ರೂ ಕೂಡ ಎರಡನೇ ಬ್ಯಾಟಿಂಗ್ ಮಾಡೋ ತಂಡ ಆ ರನ್‌ನ ಚೇಸ್ ಮಾಡುತ್ತೆ. ಅಂದ್ರೆ ಪಿಚ್‌ಗಳಲ್ಲಿ ಬ್ಯಾಟಿಂಗ್ ಪ್ರಭಾಲ್ಯ ಹೆಚ್ಚಿದೆ. ಬೌಲಿಂಗ್ ಮಾಡೋರು ಇದರಿಂದ ಸಂಕಷ್ಟ ಪಡೋ ಹಾಗಾಗಿದೆ.

ಐಪಿಲ್ ಅಂದ್ರೆ ಒಂದು ರೀತಿಯಲ್ಲಿ ಜೋಶ್‌.. ಎರಡು ತಿಂಗಳು ಫಾನ್ಸ್‌ಗೆ ಹಬ್ಬ ಇದ್ದಂತೆ.. ಈಗ ಐಪಿಎಲ್‌ನಲ್ಲಿ ದೊಡ್ಡ ಸ್ಕೋರ್ ಬಂದ್ರು ಮಜಾ ಬರಲ್ಲ, ಲೋ ಸ್ಕೋರ್ ಬಂದ್ರು ಅಷ್ಟು ಮಜಾ ಬರಲ್ಲ. ಆದ್ರೆ  ಆವರೇಜ್ ಸ್ಕೋರ್ ಮಜಾ ಕೊಡುತ್ತೆ.. ಬ್ಯಾಟಿಂಗ್ ಹಾಗೂ ಬೌಲರ್ಸ್ ಇಬ್ಬರಿಗೂ ಸಮಾನವಾಗಿ ಸಹಕರಿಸುವ ಪಿಚ್ ಸಿದ್ದಪಡಿಸಿದರೆ ಅಲ್ಲಿ ಹೆಚ್ಚು ಸ್ಪರ್ಧೆ ಉಂಟಾಗುತ್ತದೆ. ಅದರಿಂದ ಪ್ರೇಕ್ಷಕರಿಗೂ ಮಜಾ ಸಿಗುತ್ತೆ.  ಬಟ್ ಕಳೆದ ಸೀಸನ್ ಮತ್ತು ಈ ಕಳೆದ ಸೀಸನ್ ಹಾಗಾಗಿಲ್ಲ.. ಬ್ಯಾಟರ್‌ಗಳ ಆರ್ಭಟದ ಮುಂದೆ ಬೌಲರ್‌ಗಳ ಆಟ ನಡೆಯುತ್ತಿಲ್ಲ..  ಮ್ಯಾಚ್ ಮುಗಿಯೋ ತನಕ ಯಾರ್ ಗೆಲ್ತಾರೆ ಅಂತ ಹೇಳುವುದು ತುಂಬಾ ಕಷ್ಟ.. ಐಪಿಎಲ್ 2024 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 277 ಮತ್ತು 287 ರನ್ ಗಳಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಈ ಸೀಸನ್​ನ ಎರಡನೇ ಪಂದ್ಯದಲ್ಲಿ ಎಸ್​​ಆರ್​ಹೆಚ್ ತಂಡವು 286 ರನ್ ಗಳಿಸುವ ಮೂಲಕ ಮತ್ತೊಮ್ಮೆ ಅಬ್ಬರಿಸಿದೆ. ಅಲ್ಲದೆ ಐಪಿಎಲ್​ನಲ್ಲಿ ಈಗ 300 ರನ್​ಗಳ ಗುರಿ ಮುಟ್ಟುವವರು ಯಾರು ಎಂಬುದರ ಚರ್ಚೆ ನಡೆಯುತ್ತಿದೆ. ನನ್ನ ಪ್ರಕಾರ 300 ರನ್ ದಾಟಿದ್ರು ಅದ್ಕೆ ಅಚ್ಚರಿ ಪಡಬೇಕಿಲ್ಲ.

ಬೌಲರ್​ಗಳಿಗೆ ಮನಃಶಾಸ್ತ್ರಜ್ಞರ ಅಗತ್ಯವಿದೆ

ಬ್ಯಾಟರ್​ಗಳ ಅಬ್ಬರ ಜೋರಾಗಿದ್ರ ಬಗ್ಗೆ ಆರ್ ಅಶ್ವಿನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.  ಐಪಿಎಲ್ ಸೇರಿದಂತೆ ಟಿ20 ಕ್ರಿಕೆಟ್​ನಲ್ಲಿ ಬ್ಯಾಟರ್​ಗಳ ಪರಾಕ್ರಮವು ಬೌಲರ್​ಗಳ ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿ ಎಂದು ಆರ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.   ಟಿ20 ಕ್ರಿಕೆಟ್​ ಬದಲಾಗಿರುವ ರೀತಿಯ ಬಗ್ಗೆ ಮಾತನಾಡಲು ನಾನು ಬಯಸುತ್ತೇನೆ. ಏಕೆಂದರೆ ಬೌಲರ್​ಗಳಿಗೆ ರನ್​ಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದು ಅವರನ್ನು ಮಾನಸಿಕವಾಗಿ ಒತ್ತಡಕ್ಕೀಡು ಮಾಡುತ್ತದೆ. ಇಂತಹ ಒತ್ತಡಗಳಿಂದಾಗಿ ಬೌಲರ್​ಗಳಿಗೆ ಶೀಘ್ರದಲ್ಲೇ ವೈಯಕ್ತಿಕ ಮನಃಶಾಸ್ತ್ರಜ್ಞರು ಬೇಕಾಗಿ ಬರಬಹುದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಈಗ ಟಿ20 ಕ್ರಿಕೆಟ್​ನಲ್ಲಿ ಬೌಲಿಂಗ್ ಅಕ್ಷರಶಃ ಅಸಾಧ್ಯವಾಗಿದೆ. ಕೆಲವು ಪಿಚ್​ಗಳು ಸಂಪೂರ್ಣ ಬ್ಯಾಟಿಂಗ್​​ ಸ್ನೇಹಿಯಾಗಿ ಮಾರ್ಪಟ್ಟಿದೆ. ಇದರಿಂದ ಬೌಲರ್​ಗಳು ನಿಷ್ಪ್ರಯೋಜಕರಾಗುತ್ತಿದ್ದಾರೆ ಎಂಬುದು ನನ್ನ ಭಾವನೆ. ಹೀಗಾಗಿ ಬೌಲರ್​ಗಳ ಪಾಲಿಗೆ ಮನಃಶಾಸ್ತ್ರಜ್ಞರ ಅಗತ್ಯವಿದೆ ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ಯುವ ಕ್ರಿಕೆಟರ್ಸ್‌ಗೆ ಬೌಲಿಂಗ್ ಕಡೆ ಒಲವು ಕಮ್ಮಿಯಾಗುತ್ತಾ?

ಮುಂದೆ ಬರೋ ಕ್ರಿಕೆಟರ್ಸ್‌ಗೆ ಬೌಲಿಂಗ್ ಕಡೆ ಹೆಚ್ಚು ಒಲವು ಕಮ್ಮಿಯಾಗುತ್ತೆ.. ಯಾಕಂದ್ರೆ ಬ್ಯಾಟರ್ಸ್‌ಗಳ ಪರಾಕ್ರಮದ ಮುಂದೆ ನಮ್ಮ ಆಟ ನಡೆಯಲ್ಲ ಅಂತ ಅವರಿಗೆ ಅನ್ಸುತ್ತೆ.. ಒಂದು ಮ್ಯಾಚ್‌ನಲ್ಲಿ ಕಂಟ್ರೋಲ್ ಮಾಡೋಕೆ ಆಗಲ್ಲ ಅಂದ್ರೆ ನೆಕ್ಟ್ ಅವರು ಟೀಂನಲ್ಲಿ ಇರುತ್ತಾರೆ ಅನ್ನೋದು ಡೌಟ್‌.. ಹೀಗಾಗಿ ಮುಂದೆ ಬರೋ ಕ್ರಿಕೆಟರ್ಸ್ ಬ್ಯಾಟಿಂಗ್‌ಗೆ ಹೆಚ್ಚು ಗಮನ ಹರಿಸುತ್ತಾರೆ.. ಹೀಗಾಗಿ ರಬಾಡ ಹೇಳಿದ್ದು ಮುಂದೆ ಬೌಲರ್‌ಗಳ ಬದಲು ಬೌಲಿಂಗ್‌ ಮಾಡೋ ಮಷಿನ್ ತರಬೇಕಾಗುತ್ತೆ ಅಂತ.. ಬ್ಯಾಟಿಂಗ್ ಸ್ನೇಹಿ ಪಿಚ್‌ ಕ್ರಿಕೆಟ್‌ ಕೇಜ್‌ನ ಕಮ್ಮಿ ಮಾಡುತ್ತಿರುವುದಂತ ಸತ್ಯ.

Kishor KV