ಯಾರಿಗೂ ಬೇಡವಾಗಿದ್ದ ಶಾರ್ದೂಲ್ IPL ನಂ.1 ಬೌಲರ್
ಯಾರಿಗೂ ಬೇಡವಾಗಿದ್ದ ಶಾರ್ದೂಲ್ IPL ನಂ.1 ಬೌಲರ್

ಯಾರಿಗೂ ಬೇಡವಾಗಿದ್ದ ಶಾರ್ದೂಲ್ IPL ನಂ.1 ಬೌಲರ್ಯಾರಿಗೂ ಬೇಡವಾಗಿದ್ದ ಶಾರ್ದೂಲ್ IPL ನಂ.1 ಬೌಲರ್

ಐಪಿಎಲ್ 2025 ರ ಏಳನೇ ಪಂದ್ಯವು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್‌ ತಂಡವನ್ನು 190 ರನ್​ಗಳಿಗೆ ಕಟ್ಟಿಹಾಕುವಲ್ಲಿ ಲಕ್ನೋ ತಂಡ ಯಶಸ್ವಿಯಾಗಿತ್ತು. ಅದರಲ್ಲೂ ಲಕ್ನೋ ಪರ ಮಾರಕ ದಾಳಿ ನಡೆಸಿದ ಶಾರ್ದೂಲ್ ಠಾಕೂರ್ ಎಸ್‌ಆರ್‌ಹೆಚ್‌ ಓಟಕ್ಕೆ ಬಿಗ್ ಬ್ರೇಕ್ ಹಾಕಿದ್ರು.

2025ರ ಐಪಿಎಲ್‌ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿದ್ದ ಶಾರ್ದೂಲ್‌ ಠಾಕೂರ್‌, ಕೊನೆಯ ಕ್ಷಣದಲ್ಲಿ ಲಕ್ನೋ ತಂಡವನ್ನು ಸೇರಿದ್ರು. ಇವರು ತಂಡಕ್ಕೆ ಸೇರುತ್ತಿದ್ದಂತೆ ಲಕ್ನೋ ತಂಡಕ್ಕೆ ಬಲ ಬಂದಂತೆ ಆಗಿದೆ. ಈ ತಂಡದ ಪ್ರಮುಖ ಬೌಲರ್‌ಗಳು ಗಾಯಕ್ಕೆ ತುತ್ತಾಗಿದ್ದರಿಂದ, ಶಾರ್ದೂಲ್‌ ಠಾಕೂರ್‌ ಅಮೋಘ ಬೌಲಿಂಗ್ ದಾಳಿ ನಡೆಸಿದರು. ಹೈದರಾಬಾದ್ ತಂಡದ ಬ್ಯಾಟಿಂಗ್ ಲೈನ್ ಅಪ್ ಅನ್ನು ನಾಶಪಡಿಸಿದರು. ಅಮೋಘ ದಾಳಿಯನ್ನು ಎದುರಿಸುವಲ್ಲಿ ಎಸ್‌ಆರ್‌ಎಚ್ ತಂಡ ವಿಫಲವಾಗಿತು

ಮಾರಾಟವಾಗದೆ ಉಳಿದಿದ್ದ ಶಾರ್ದೂಲ್ 

ಮೆಗಾ ಹರಾಜಿಗೆ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಪ್ರವೇಶಿಸಿದ್ದ ಶಾರ್ದೂಲ್​ ಮೇಲೆ ಯಾವುದೇ ಫ್ರಾಂಚೈಸಿ ಬಿಡ್ ಮಾಡಲಿಲ್ಲ. ಹೀಗಾಗಿ ಶಾರ್ದೂಲ್ ಮಾರಾಟವಾಗದೆ ಉಳಿಯಬೇಕಾಯಿತು. ಇದಾದ ನಂತರ, ಲಕ್ನೋ ಸೂಪರ್ ಜೈಂಟ್ಸ್ ತಂಡವು ತಮ್ಮ ಪ್ರಮುಖ ವೇಗಿ ಮೊಹ್ಸಿನ್ ಖಾನ್ ಗಾಯಗೊಂಡಾಗ ಅವರ ಬದಲಿಯಾಗಿ ಶಾರ್ದೂಲ್​ ಠಾಕೂರ್​ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ಶಾರ್ದೂಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಓವರ್‌ನಲ್ಲಿ 2 ವಿಕೆಟ್‌ಗಳನ್ನು ಉರುಳಿಸಿದ್ದರು. ಇದಾದ ನಂತರ, ಹೈದರಾಬಾದ್ ವಿರುದ್ಧದ ಪವರ್‌ಪ್ಲೇನಲ್ಲಿಯೇ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರಂತಹ ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಕೊನೆಯಲ್ಲಿ ಅವರು ಮೊಹಮ್ಮದ್ ಶಮಿ ಮತ್ತು ಅಭಿನವ್ ಮನೋಹರ್ ಅವರನ್ನು ಔಟ್ ಮಾಡಿದರು. ಈ ರೀತಿಯಾಗಿ, ಅವರು 4 ಓವರ್‌ಗಳಲ್ಲಿ 34 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದರು. ಇದು ಈ ಟೂರ್ನಿಯಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಶಾರ್ದೂಲ್ ಈ ಆವೃತ್ತಿಯ ನಂಬರ್-1 ಬೌಲರ್ ಆಗಿ ಹೊರಹೊಮ್ಮಿದ್ದು, ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಒಟ್ನಲ್ಲಿ ಯಾರನ್ನ ಐಪಿಎಲ್‌ನಲ್ಲಿ ಕೆಡೆಕಣಿಸಿದ್ರೋ, ಅವನೇ ತನ್ನ ತಾಕತ್ತು ಏನು ಅನ್ನೋದನ್ನ ತೋರಿಸಿದ್ದಾನೆ. ಸಿಕ್ಕ ಒಂದು ಅವಕಾಶವನ್ನ ಬಳಸಿಕೊಂಡು ತನ್ನ  ಶಕ್ತಿಯನ್ನ ತೋರಿಸಿದ್ದಾನೆ. ಶಾರ್ದೂಲ್ ನಿಜಕ್ಕೂ ಗ್ರೇಟ್..

Kishor KV