ಮೇ 18.. 18 ರನ್.. 18 ಓವರ್ ಗಳ ಲೆಕ್ಕಾಚಾರ – 2024ರ RCB Vs CSK ಪಂದ್ಯ ಟ್ರೆಂಡಿಂಗ್

ಐಪಿಎಲ್ನಲ್ಲಿ ಬೆಂಗಳೂರು ವರ್ಸಸ್ ಚೆನ್ನೈ ನಡುವಿನ ಮ್ಯಾಚ್ ಅಂದ್ರೇನೇ ಹಾಗೆ. ಬಾಲ್ ಟು ಬಾಲ್ ಪೈಪೋಟಿ ಇದ್ದೇ ಇರುತ್ತೆ. ಫ್ಯಾನ್ಸ್ ವಾರ್ ಅಂತೂ ನೆಕ್ಸ್ ಲೆವೆಲ್ ನಲ್ಲಿರುತ್ತೆ. ಅದ್ರಲ್ಲೂ ಕಿಂಗ್ ವಿರಾಟ್ ಕೊಹ್ಲಿ ಹಾಗೇ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯೇ ಮೇನ್ ಹೈಲೆಟ್. ಎರಡೂ ತಂಡಗಳ ಪೈಕಿ 22 ಆಟಗಾರರು ಕಣಕ್ಕಿಳಿಯುತ್ತಾರಾದ್ರೂ ಎಲ್ಲರ ದೃಷ್ಟಿ ನೆಟ್ಟಿರೋದು ಈ ಇಬ್ಬರು ಲೆಜೆಂಡರಿ ಸ್ಟಾರ್ಸ್ ಮೇಲೆಯೇ. ಎರಡೂ ತಂಡಗಳಿಗೆ ಕ್ಯಾಪ್ಟನ್ಸ್ ಬೇರೆಯಾದ್ರೂ ಇಡೀ ಟೀಂನ ಕಂಟ್ರೋಲಿಂಗ್ ಪವರ್ ಇರೋದು ಇವ್ರ ಮೇಲೆಯೇ. ಇದೀಗ 18ನೇ ಸೀಸನ್ನಲ್ಲಿ ಮೊದಲ ಬಾರಿಗೆ ಎರಡೂ ತಂಡಗಳು ಎದುರು ಬದುರಾಗ್ತಿದ್ದು, ಕಳೆದ ವರ್ಷದ 18 ಆಟದ ಲೆಕ್ಕಾಚಾರ ಮತ್ತೊಮ್ಮೆ ಟ್ರೆಂಡಿಂಗ್ ಗೆ ಬಂದಿದೆ.
ಇದನ್ನೂ ಓದಿ : ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಫೇಲ್ಯೂರ್ – ಚೆನ್ನೈ ವಿರುದ್ಧ ಆಡಲ್ವಾ ಪಡಿಕ್ಕಲ್?
2024ರ ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೂ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದ ಕ್ರೇಜ್ ಯಾವ ಫೈನಲ್ ಮ್ಯಾಚ್ಗೂ ಕಮ್ಮಿ ಇರಲಿಲ್ಲ. ಯಾಕಂದ್ರೆ ಆವತ್ತಿನ ಪಂದ್ಯದಲ್ಲಿ ಗೆದ್ದವ್ರು ಪ್ಲೇಆಫ್ಗೇರಿದ್ರೆ ಸೋತವ್ರು ಇಡೀ ಟೂರ್ನಿಯಿಂದಲೇ ಹೊರ ಬೀಳ್ತಿದ್ರು. ಅಲ್ದೇ 18ರ ನಂಬರ್ ಗೇಮ್ ಕೂಡ ಜೋರಾಗಿತ್ತು. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಕನಿಷ್ಠ 18 ರನ್‌ಗಳಿಂದ ಗೆದ್ದರೆ, ಸಿಎಸ್‌ಕೆ ನೆಟ್ ರನ್ ರೇಟ್ ಅನ್ನು ಮೀರಿಸಿ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗುತ್ತಿತ್ತು. ಅಥವಾ ಫಸ್ಟ್ ಬೌಲಿಂಗ್ ಮಾಡಿ ಆ ನಂತ್ರ ಬ್ಯಾಟಿಂಗ್ ಮಾಡಿದ್ರೂ ಆರ್‌ಸಿಬಿ 18.1 ಓವರ್‌ಗಳಲ್ಲಿ ಗುರಿ ತಲುಪ ಬೇಕಿತ್ತು. ಬಟ್ ಚೆನ್ನೈ ಪಾಲಿಗೆ ಹಾಗಿರಲಿಲ್ಲ. ಜಸ್ಟ್ ಮ್ಯಾಚ್ ಗೆದ್ದಿದ್ರೂ ಸಿಎಸ್ಗೆ ಟೀಂ ಸೀದಾ ಪ್ಲೇಆಫ್ ಗೆ ಎಂಟ್ರಿ ಕೊಡ್ತಿತ್ತು.
ಹೀಗೆ 18ರ ನಂಬರ್ ಕ್ಯಾಲ್ಕುಲೇಷನ್ ನೊಂದಿಗೆ ಅಖಾಡಕ್ಕೆ ಇಳಿದಿದ್ದ ಈ ಪಂದ್ಯ ವಿಶ್ವಮಟ್ಟದಲ್ಲಿ ಸದ್ದು ಮಾಡಿತ್ತು. ಬಟ್ ಆವತ್ತಿನ ಪಂದ್ಯದಲ್ಲಿ ಬೆಂಗಳೂರು ಟೀಂ ಭರ್ಜರಿ ಗೆಲುವು ದಾಖಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಸೋಲಿಸಿತ್ತು. ಫಾಫ್ ಡುಪ್ಲೆಸಿಸ್ ನೇತೃತ್ವದಲ್ಲಿ ನಾಲ್ಕನೇ ತಂಡವಾಗಿ ಪ್ಲೇ ಆಫ್ ತಲುಪಿತ್ತು. ಚೆನ್ನೈ ತಂಡವನ್ನ ಸೋಲಿಸಿದ್ದಕ್ಕೆ ಆರ್ ಸಿಬಿ ಅಭಿಮಾನಿಗಳು ಫೈನಲ್ ಗೆದ್ದಷ್ಟೇ ಖುಷಿ ಪಟ್ಟಿದ್ರು. ಬಟ್ ಆವತ್ತಿನ ಪಂದ್ಯದಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರವೂ ನಡೆದಿತ್ತು.
ಈ ಮ್ಯಾಚ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲ್ತಾ ಇದ್ದಂತೆ ಧೋನಿ ಆರ್‌ಸಿಬಿ ಆಟಗಾರರಿಗೆ ಹಸ್ತಲಾಘವ ನೀಡದೇ ಡ್ರೆಸ್ಸಿಂಗ್ ರೂಮ್ಗೆ ತೆರಳಿದ್ದರು. ಮ್ಯಾಚ್ ಮುಗಿದ ಬಳಿಕ ಸಿಎಸ್‌ಕೆ ಆಟಗಾರರು ಶೇಕ್ ಹ್ಯಾಂಡ್ ಮಾಡೋಕೆ ಸರದಿಯಲ್ಲಿ ನಿಂತಿದ್ದರು. ಈ ಸಾಲಿನಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡ ಇದ್ರು. ಬಟ್ ಗೆಲುವಿನ ಖುಷಿಯಲ್ಲಿದ್ದ ಆರ್‌ಸಿಬಿ ಆಟಗಾರರು ಸಂಭ್ರಮದಲ್ಲಿದ್ರು. ಇದೇ ವೇಳೆ ಆರ್‌ಸಿಬಿ ಆಟಗಾರರನ್ನು ಕಾಯದೇ ಮಹೇಂದ್ರ ಸಿಂಗ್ ಧೋನಿ ಸೀದಾ ಡ್ರೆಸ್ಸಿಂಗ್ ರೂಮ್ಗೆ ಹೋಗಿದ್ರು. ಧೋನಿಯ ಈ ನಡೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಬಟ್ ಶೇಕ್ ಹ್ಯಾಂಡ್ ವೇಳೆ ಕೊಹ್ಲಿ ಧೋನಿಯವ್ರ ಇಲ್ಲದ್ದು ಗೊತ್ತಾಗಿ ಸೀದಾ ಡ್ರೆಸ್ಸಿಂಗ್ ರೂಮ್ಗೇ ಹೋಗಿದ್ರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಧೋನಿಗೆ ಶೇಕ್ ಹ್ಯಾಂಡ್ ನೀಡಿ ಬಂದಿದ್ರು. ಈ ಸೋಲು ಚೆನ್ನೈ ತಂಡವನ್ನ ಬಹುವಾಗಿ ಕಾಡಿತ್ತು. ಅದಕ್ಕೆ ಕಾರಣ ಧೋನಿ ಕಳೆದ ವರ್ಷವೇ ಐಪಿಎಲ್ಗೆ ನಿವೃತ್ತಿ ಹೇಳ್ತಾರೆ ಎನ್ನಲಾಗಿತ್ತು. ಹೀಗಾಗಿ ಕಪ್ ಗೆದ್ದು ಸೆಂಡ್ ಆಫ್ ಕೊಡ್ಬೇಕು ಅನ್ನೋದು ಆಟಗಾರುರ ಮತ್ತು ಫ್ರಾಂಚೈಸಿ ನಿರೀಕ್ಷೆಯಾಗಿತ್ತು. ಆದ್ರೆ ಪ್ಲೇಆಫ್ ಅವಕಾಶವನ್ನೂ ಆರ್‌ಸಿಬಿ ತಡೆದಿತ್ತು. ಹೀಗಾಗೇ ಈ ವರ್ಷದ ಮೊದಲ ಪಂದ್ಯದಲ್ಲಿ ಗೆದ್ದು ಹಳೇ ನೋವಿಗೆ ಉತ್ತರ ಕೊಡೋಕೆ ಕಾಯ್ತಿದ್ದಾರೆ.
ಆವತ್ತು ಚೆನ್ನೈ ಸೋತಿದ್ದಕ್ಕೆ ಆರ್‌ಸಿಬಿ ಅಭಿಮಾನಿಗಳಂತೂ ಟ್ರೋಫಿ ಗೆದ್ದಂತೆಯೇ ಸಂಭ್ರಮಿಸಿದ್ರು. ಪಂದ್ಯ ಮುಗಿದ ಬಳಿಕ ತಡ ರಾತ್ರಿ 130ರವರೆಗೆ ಸ್ಟೇಡಿಯಂ ಹೊರಗೆ ಕಾದು ಆರ್‌ಸಿಬಿ ಆಟಗಾರರಿಗೆ ಜೈಕಾರ ಹಾಕಿದ್ರು. ಕಬ್ಬನ್ ಪಾರ್ಕ್ ರಸ್ತೆಯ ಇಕ್ಕೆಲಗಳಲ್ಲೂ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ರು. RCBಯ ಗೆಲುವು, ಆಟಗಾರರ ಸಂಭ್ರಮ, ಅಭಿಮಾನಿಗಳ ಸೆಲಬ್ರೇಷನ್ ಈ ಎಲ್ಲವೂ ಇಂದು ಸಿಎಸ್‌ಕೆ ಪಾಳಯದಲ್ಲಿ ಕಿಚ್ಚು ಹತ್ತಿಸಿದೆ. ಅಭಿಮಾನಿಗಳ ಕ್ರೇಜ್ ಕೂಡ ಜಾಸ್ತಿಯಾಗಿದೆ.