ಲಕ್ಷ್ಮೀ, ವೈಷ್ ಬಾಳಲ್ಲಿ ಮತ್ತೊಬ್ಬಳು! – 2ನೇ ಮದುವೆ ಮುಗಿದೇ ಬಿಡುತ್ತಾ?

ಲಕ್ಷ್ಮೀ, ವೈಷ್ ಬಾಳಲ್ಲಿ ಮತ್ತೊಬ್ಬಳು! – 2ನೇ ಮದುವೆ ಮುಗಿದೇ ಬಿಡುತ್ತಾ?

ಕಾವೇರಿಗೆ ಮಕ್ಕಳ ಲೈಫ್‌ ಹಾಳಾದ್ರೂ ಚಿಂತೆ ಇಲ್ಲ.. ತಾನೇನು ಅಂದ್ಕೊಂಡಿದ್ದೀನೋ ಅದನ್ನೇ ಮಾಡ್ಬೇಕು.. ತನ್ನಿಂದ ಮಕ್ಕಳ ಲೈಫ್‌ ಹಾಳಾಗುತ್ತೆ ಅನ್ನೋ ಪಶ್ಚಾತ್ತಾಪ ಕೂಡ ಇಲ್ಲ.. ವಿಧಿ ಜೀವನ ಸರಿ ಮಾಡೋ ಬದಲು ಈಗ ವೈಷ್ಣವ್‌ ಗೆ ಮತ್ತೊಂದು ಮದುವೆ ಮಾಡ್ತೀನಿ ಅಂತಾ ಹೊರಟಿದ್ದಾಳೆ.. ಇದೀಗ ವೈಷ್ಣವ್‌ ನ ಮದುವೆ ಆಗೋಕೆ ಹುಡುಗಿಯನ್ನ ಕೂಡ ಕಾವೇರಿ ಕರೆಸಿಕೊಂಡಿದ್ದಾಳೆ.. ಹಾಗಾದ್ರೆ ಮದುವೆ ನಡೆದೇ ಹೋಗುತ್ತಾ? ವೈಷ್‌ ಬಾಳಿಗೆ ಎಂಟ್ರಿಕೊಟ್ಟ ಹುಡುಗಿ ಯಾರು? ವೈಷ್ಣವ್‌ ಬ್ಯಾಗ್‌ ಪ್ಯಾಕ್‌ ಮಾಡ್ಕೊಂಡು ಹೊರಟಿದ್ದೆಲ್ಲಿಗೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಐಪಿಎಲ್ ನಲ್ಲಿ ಹೈದ್ರಾಬಾದ್ ದಾಖಲೆ ಬ್ಯಾಟಿಂಗ್ – 300+ ಸ್ಕೋರ್ ಮಾಡ್ತಾರಾ ಕಮಿನ್ಸ್ ಬಾಯ್ಸ್?

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಕಾವೇರಿಯಿಂದಾಗಿ ಲಕ್ಷ್ಮೀ ಹಾಗೂ ವೈಷ್ಣವ್‌ ದೂರ ಆಗುವಂತೆ ಆಗಿದೆ. ಮತ್ತೊಂದ್ಕಡೆ ವಿಧಿ ಪ್ರೀತಿಸಿದ ಹುಡುಗನೊಂದಿಗೆ ಮದುವೆ ಆಗಿದ್ದಾಳೆ.  ಅವಳ ಸಂಸಾರ ಸರಿ ಮಾಡ್ಬೇಕು ಅನ್ನೋ ಯೋಚನೆ ಅಮ್ಮನಾಗಿರೋ ಕಾವೇರಿಗೆ ಬಂದಿಲ್ಲ. ಮನೆಗೆ ಬಂದಿರೋ ವಿಧಿ, ವಿಖ್ಯಾತ್‌ ಮನೆಗೆ ಬಂದಿದ್ರೂ, ಅವರಿಗೆ ಸರಿಯಾಗಿ ಅವಮಾನ ಮಾಡಿ ಕಳ್ಸಿದ್ದಾಳೆ. ಇದೀಗ ವೈಷ್ಣವ್‌ ಹಾಗೂ ಲಕ್ಷ್ಮೀ ವಿಧಿ, ವಿಖ್ಯಾತ್‌ ಲೈಫ್‌ ಸರಿ ಮಾಡಲು ಮುಂದಾಗಿದ್ದಾರೆ. ಹೀಗಾಗಿ ವೈಷ್ಣವ್‌ ಬ್ಯಾಗ್‌ ಪ್ಯಾಕ್‌ ಮಾಡ್ಕೊಂಡು ಹೊರಟಿದ್ದಾನೆ. ಇತ್ತ ಲಕ್ಷ್ಮೀಯೂ ಅಲ್ಲಿಗೆ ಬಂದಿದ್ದಾಳೆ. ಅಷ್ಟೊತ್ತಿಗೆ ವೈಷ್ಣವ್ನ ಮದುವೆಯಾಗೋ ಹುಡುಗಿ ಎಂಟ್ರಿ ಕೊಟ್ಟಿದ್ದಾಳೆ.

ಕಾವೇರಿ ಲಕ್ಷ್ಮೀಯನ್ನ ಮನೆಯಿಂದ ಆಚೆ ಹಾಕ್ತಿದ್ದಂತೆ ವೈಷ್ಣವ್‌ ಗೆ ಮತ್ತೊಂದು ಮದುವೆ ಮಾಡ್ತೇನೆ ಅಂತಾ ಹೇಳ್ತಾನೇ ಬಂದಿದ್ಲು. ಇದೀಗ ವೈಷ್ಣವ್‌ ವಿಖ್ಯಾತ್‌ ಮನೆಗೆ ಹೊರಡ್ತಿದ್ದಂತೆ, ನಾಡಿದ್ದೇ ನಿನ್ನ ಎಂಗೇಜ್‌ಮೆಂಟ್‌ ಅಂತಾ ಹೇಳಿದ್ದಾಳೆ. ಇದ್ರಿಂದ ಮನೆಯವರೆಲ್ಲಾ ಶಾಕ್‌ ಆಗಿದ್ದಾರೆ. ಆಗ ಸುಪ್ರಿತಾ ಹುಡುಗಿ ಯಾರು ಅಂತಾ ಕೇಳ್ತಿದ್ದಂತೆ ಹುಡುಗಿಯ ಎಂಟ್ರಿಯಾಗಿದೆ. ಹೊಸ ಹುಡುಗಿ ಕಾರಿನಿಂದ ಇಳಿದು, ಲಕ್ಷ್ಮೀ ಹಾಗೂ ಕೀರ್ತಿಯನ್ನ ದೂಡ್ಕೊಂಡು ಬಂದಿದ್ದಾಳೆ. ಈ ಮೂಲಕ ನಟಿ ಕಾವ್ಯಾ ಮಹದೇವಯ್ಯ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಗೆ ಎಂಟ್ರಿ ಕೊಟ್ಟಿದ್ದಾರೆ. ಅಂದ್ಹಾಗೆ, ನಟಿ ಕಾವ್ಯ, ಈ ಹಿಂದೆ  ಸೀತಾ ವಲ್ಲಭ ಸೀರಿಯಲ್‌, ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಆರಂಭದಲ್ಲಿ ರಾಧಾ ಪಾತ್ರಕ್ಕೂ ಜೀವ ತುಂಬಿದ್ರು.. ಅದಾದ್ಮೇಲೆ ಇತ್ತೀಚೆಗೆ ಸೀತಾರಾಮ ಧಾರಾವಾಹಿಯಲ್ಲಿ ಶಾಲಿನಿ ಪಾತ್ರ ಮಾಡಿದ್ದರು .. ಇದೀಗ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಗೆ ಎಂಟ್ರಿ ಕೊಟ್ಟಿದ್ದಾರೆ.

ಸೀರಿಯಲ್‌ ಗೆ ಹೊಸ ಪಾತ್ರ ಎಂಟಿಯಾಗುತ್ತಿದ್ದಂತೆ, ವೀಕ್ಷಕರಿಗೆ ನಾನಾ ಪ್ರಶ್ನೆ ಕಾಡ್ತಿದೆ. ಲಕ್ಷ್ಮೀಯಿಂದ ದೂರ ಆಗಿರೋ ವೈಷ್ಣವ್‌ ಪ್ರತಿ ಸಲ ಆಕೆಯನ್ನ  ರಕ್ಷಿಸುತ್ತಾನೆ, ಅವಳ ಬಗ್ಗೆ ಕೆಟ್ಟ ಮಾತಾಡಿದ್ರೆ ಸಹಿಸೋದಿಲ್ಲ. ಆದರೆ ತಾಯಿ ಇನ್ನೊಂದು ಮದುವೆ ಆಗು ಅಂದಾಗ ಅವನು ಒಪ್ಪಿದ್ದಾನೆ. ಹೀಗಾಗಿ ವೈಷ್ಣವ್‌ಗೆ ಸ್ವಂತ ಬುದ್ಧಿ ಇದ್ಯಾ? ತಲೆ ಸರಿ ಇದ್ಯಾ ಅಂತ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು  ವೈಷ್ಣವ್‌ ತನ್ನ ಪತ್ನಿ ಲಕ್ಷ್ಮೀಗೆ ಡಿವೋರ್ಸ್‌ ಕೊಡದೆ ಹೇಗೆ ಮದುವೆ ಆಗ್ತಾನೆ? ಸ್ವಲ್ಪನಾದ್ರೂ ಲಾಜಿಕ್‌ ಬೇಡವಾ ಎಂದು ಹೇಳ್ತಿದ್ದಾರೆ.

ಇದೀಗ ವೈಷ್ಣವ್‌ ನಿಜಕ್ಕೂ ಮತ್ತೊಂದು ಹುಡುಗಿಯನ್ನು ಮದುವೆ ಆಗ್ತಾನಾ? ಲಕ್ಷ್ಮೀ ಏನು ಮಾಡ್ತಾಳೆ? ಈಗ ಬಂದಿರೋ ಹುಡುಗಿ ಯಾರು? ಅವಳ ಪಾತ್ರದ ಹೆಸರು ಏನು? ಕಾವೇರಿ ಹಾಗೂ ಅವಳ ಮಧ್ಯೆ ಏನು ಡೀಲ್‌ ಆಗಿದೆ ಹೀಗೆ ಸಾಕಷ್ಟು ಪ್ರಶ್ನೆಗಳು ವೀಕ್ಷಕರನ್ನ ಕಾಡ್ತಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ರೋಚಕತೆಯಿಂದ ಕೂಡಿವೆ.

Shwetha M