ಮಿನಿ ಸಮರ : ಹಿಮಾಚಲದಲ್ಲಿ ಕಾಂಗ್ರೆಸ್ ಲೀಡ್ – ಖಾತೆ ತೆರೆಯದ ಆಪ್
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 30 ಕ್ಷೇತ್ರಗಳಲ್ಲಿ ಹಾಗೂ ಆಪ್ ಯಾವುದೇ ಕ್ಷೇತ್ರಗಳಲ್ಲಿ ಖಾತೆಗಳನ್ನು ತೆರೆದಿಲ್ಲ.
ಬಿಜೆಪಿ ಅಭ್ಯರ್ಥಿ, ರಾಜ್ಯದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಪ್ರಸ್ತುತ ತಮ್ಮ ಕ್ಷೇತ್ರವಾದ ಸೇರಾಜ್ನಿಂದ 15 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಈ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಚೇತ್ ರಾಮ್ ಇಲ್ಲಿಯವರೆಗೆ 4351 ಮತಗಳನ್ನು ಪಡೆಯುವ ಮೂಲಕ ಹಿಂದುಳಿದಿದ್ದಾರೆ.
ಶಿಮ್ಲಾ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಿಎಂ ದಿ. ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಒಟ್ಟು 7233 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ರಾಜ್ಯ ರಾಜಧಾನಿ ಶಿಮ್ಲಾದಲ್ಲಿ ಕಾಂಗ್ರೆಸ್ನ ಹರೀಶ್ ಜನಾರ್ಥ ಅವರು ಪ್ರಸ್ತುತ 3449 ಮತಗಳಿಂದ ಮುನ್ನಡೆಯಲ್ಲಿದ್ದರೆ, ಬಿಜೆಪಿಯ ಸಂಜಯ್ ಸೂದ್ 2565 ಮತಗಳೊಂದಿಗೆ ಕ್ಷೇತ್ರದಲ್ಲಿ ಹಿಂದುಳಿದಿದ್ದಾರೆ.
ಕುಲು ಕ್ಷೇತ್ರದಲ್ಲಿ ಕಾಂಗ್ರೆಸ್ನ ಸುಂದರ್ ಸಿಂಗ್ ಠಾಕೂರ್ 11599 ಮತಗಳಿಂದ ಮುನ್ನಡೆಯಲ್ಲಿದ್ದರೆ, ಬಿಜೆಪಿಯ ನರೋತಮ್ ಸಿಂಗ್ ಒಟ್ಟು 8033 ಮತಗಳಿಂದ ಹಿಂದುಳಿದಿದ್ದಾರೆ. ಅದೇ ರೀತಿ ಧರ್ಮಶಾಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಧೀರ್ ಶರ್ಮಾ 6338 ಮತಗಳಿಂದ ಮುನ್ನಡೆಯಲ್ಲಿದ್ದರೆ, ಬಿಜೆಪಿಯ ರಾಕೇಶ್ ಕುಮಾರ್ 3584 ಮತಗಳಿಂದ ಹಿಂದುಳಿದಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿವೆ.
ಇನ್ನೂ ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರ ಬದಲಾಗುವ ಹಿಮಾಚಲ ಪ್ರದೇಶದಲ್ಲಿ ಈ ಬಾರಿ ಮತ್ತೆ ಅಧಿಕಾರ ಹಿಡಿದು ಇತಿಹಾಸ ನಿರ್ಮಿಸುವ ಇರಾದೆಯಲ್ಲಿದೆ ಕಮಲ ಪಾಳಯ. ಆದರೆ ಐದು ವರ್ಷಗಳ ಬಳಿಕ ಅಧಿಕಾರ ಪಡೆಯಲು ಕಾಂಗ್ರೆಸ್ ಲೆಕ್ಕಾಚಾರ ರೂಪಿಸಿದ್ದು, ಮತದಾರ ಏನು ನಿರ್ಧರಿಸಿದ್ದಾನೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.