ದೆಹಲಿಯ ಬಜೆಟ್ ಮಂಡಿಸಿದ ಸಿಎಂ ರೇಖಾ ಗುಪ್ತಾ- ಹಿಂದಿನ ಕೇಜ್ರಿವಾಲ್ ಸರ್ಕಾರಕ್ಕೆ ಟಾಂಗ್

ದೆಹಲಿಯ ಬಜೆಟ್ ಮಂಡಿಸಿದ ಸಿಎಂ ರೇಖಾ ಗುಪ್ತಾ- ಹಿಂದಿನ ಕೇಜ್ರಿವಾಲ್ ಸರ್ಕಾರಕ್ಕೆ ಟಾಂಗ್

ದೆಹಲಿ ಸಿಎಂ ರೇಖಾ ಗುಪ್ತಾ ದೆಹಲಿಯ ಬಜೆಟ್ ಅನ್ನು ಮಂಡಿಸಿದ್ದಾರೆ. ಸಿಎಂ ರೇಖಾ ಗುಪ್ತಾ ದೆಹಲಿ ಮೆಟ್ರೋಗೆ 2,929 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ. ಬಜೆಟ್ ಪ್ರಸ್ತುತಿಯ ಸಮಯದಲ್ಲಿ, 2026ರಲ್ಲಿ 5,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳು ಬಿಡುಗಡೆಯಾಗುವ ಸಾಧ್ಯತೆಯಿದೆ. ನಗರ ಸಾರಿಗೆ ವಲಯಕ್ಕೆ 12,952 ಕೋಟಿ ರೂ.ಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ .  ದೆಹಲಿಯಲ್ಲಿ ಮತ್ತೆ ಗ್ರಾಮೀಣ ಮಂಡಳಿಯನ್ನು ರಚಿಸಲಾಗುವುದು ಮತ್ತು ಇದಕ್ಕಾಗಿ 1,157 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ .

ವಿದ್ಯುತ್, ರಸ್ತೆಗಳು, ನೀರು ಮತ್ತು ಸಂಪರ್ಕ ಸೇರಿದಂತೆ 10 ಕೇಂದ್ರೀಕೃತ ಕ್ಷೇತ್ರಗಳೊಂದಿಗೆ ಮುಖ್ಯಮಂತ್ರಿ ರೇಖಾ ಗುಪ್ತಾ 1 ಲಕ್ಷ ಕೋಟಿ ರೂ.ಗಳ ಬಜೆಟ್ ಅನ್ನು ಮಂಡಿಸಿದರು. ಇದನ್ನು “ಐತಿಹಾಸಿಕ ಬಜೆಟ್” ಎಂದು ಕರೆದ ರೇಖಾ ಗುಪ್ತಾ, “ಭ್ರಷ್ಟಾಚಾರ ಮತ್ತು ಅದಕ್ಷತೆಯ ಯುಗ” ಮುಗಿದಿದೆ ಎಂದು ಒತ್ತಿ ಹೇಳಿದರು. ನಮ್ಮ ಸರ್ಕಾರವು ಬಂಡವಾಳ ವೆಚ್ಚವನ್ನು ದ್ವಿಗುಣಗೊಳಿಸಿ 28,000 ಕೋಟಿ ರೂ.ಗಳಿಗೆ ಹೆಚ್ಚಿಸಿದೆ ಎಂದು ಘೋಷಿಸಿದರು. 2025-26ರ ಹಣಕಾಸು ವರ್ಷದ ಬಜೆಟ್ ವೆಚ್ಚವು ಹಿಂದಿನ ವರ್ಷಕ್ಕಿಂತ ಶೇ. 31.5ರಷ್ಟು ಹೆಚ್ಚಾಗಿದೆ.

“ಇದು ಸಾಮಾನ್ಯ ಬಜೆಟ್ ಅಲ್ಲ, ಈ ಬಜೆಟ್ ದೆಹಲಿಯನ್ನು ಅಭಿವೃದ್ಧಿಪಡಿಸುವ ಮೊದಲ ಹೆಜ್ಜೆಯಾಗಿದೆ. ಇದು ಕಳೆದ 10 ವರ್ಷಗಳಲ್ಲಿ ಹಾಳಾಗಿತ್ತು. ಕಳೆದ ದಶಕದಲ್ಲಿ ಅಭಿವೃದ್ಧಿಯ ಪ್ರತಿಯೊಂದು ಅಂಶದಲ್ಲೂ ದೆಹಲಿ ಕುಸಿದಿದೆ. ಹಿಂದಿನ ಸರ್ಕಾರವು ರಾಷ್ಟ್ರ ರಾಜಧಾನಿಯ ಆರ್ಥಿಕ ಆರೋಗ್ಯವನ್ನು ಗೆದ್ದಲುಗಳಂತೆ ಹಾಳುಮಾಡಿದೆಎಂದು ಹಣಕಾಸು ಖಾತೆಯನ್ನು ಹೊಂದಿರುವ ಸಿಎಂ ರೇಖಾ ಗುಪ್ತಾ ಹೇಳಿದರು.

 

Kishor KV