CSK ಟೀಂನಿಂದ ಬಾಲ್ ಟ್ಯಾಂಪರಿಂಗ್? – ಸೋಶಿಯಲ್ ಮೀಡಿಯಾದಲ್ಲಿ ಬ್ಯಾನ್ ಟ್ರೆಂಡಿಂಗ್

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವೀ ತಂಡಗಳು ಅಂದ್ರೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್. ತಲಾ ಐದೈದು ಬಾರಿ ಚಾಂಪಿಯನ್ ಪಟ್ಟಕ್ಕೇರಿವೆ. ವಿಶೇಷ ಅಂದ್ರೆ ಎರಡೂ ಟೀಮ್ಗಳಲ್ಲೂ ಐದೈದು ಸಲ ಟ್ರೋಫಿ ಗೆಲ್ಲಿಸಿಕೊಟ್ಟವರು ಒಬ್ಬರೇ ನಾಯಕರು. ಹೀಗಿದ್ರೂ ಚೆನ್ನೈ ತಂಡ ಕಪ್ ಗೆದ್ದಿದ್ದಕ್ಕಿಂತ ಜಾಸ್ತಿ ಬ್ಯಾನ್ ಆಗಿದ್ದ ವಿಚಾರವೇ ಜಾಸ್ತಿ ಸದ್ದು ಮಾಡುತ್ತೆ. ಇದೊಂಥರಾ ಚೆನ್ನೈ ತಂಡಕ್ಕೆ ಕಪ್ಪು ಚುಕ್ಕೆ ಅಂದ್ರೂ ತಪ್ಪಾಗಲ್ಲ. ಇದೀಗ ಮತ್ತೊಮ್ಮೆ ಬ್ಯಾನ್ ಟ್ರೆಂಡ್ ಶುರುವಾಗಿದೆ. ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆಂಬ ಸ್ಫೋಟಕ ಆರೋಪ ಕೇಳಿ ಬಂದಿದೆ. ಹಾಗೇ ಮಹೇಂದ್ರ ಸಿಂಗ್ ಧೋನಿ ಅಂಪೈರ್ ಜೊತೆ ರಹಸ್ಯವಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ : ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿಗೆ ರೋಚಕ ಜಯ – ದೇಶೀ ಸ್ಟಾರ್ಸ್‌ಗಳ ಬೊಂಬಾಟ್ ಆಟ
ಐಪಿಎಲ್ನಲ್ಲಿ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್‌ಕೆ ತನ್ನ ಮೊದಲ ಪಂದ್ಯವನ್ನು ಆಡಿತು. ರೋಚಕ ಪಂದ್ಯದಲ್ಲಿ ಸಿಎಸ್‌ಕೆ ನಾಲ್ಕು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಇದೀಗ ಸಿಎಸ್‌ಕೆ ತಂಡಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ. ಅಭಿಮಾನಿಗಳು ಚೆನ್ನೈ ತಂಡದ ವಿರುದ್ಧ ಬಾಲ್ ಟ್ಯಾಂಪರಿಂಗ್ ಅಂದ್ರೆ ಬಾಲ್ ವಿರೂಪಗೊಳಿಸಿದ ಆರೋಪ ಮಾಡುತ್ತಿದ್ದಾರೆ. ಈ ಆರೋಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ ಅವರು ಬೌಲರ್ ಖಲೀಲ್ ಅಹ್ಮದ್ ಬಳಿಗೆ ಬರುತ್ತಾರೆ. ಅದೇ ಟೈಮಲ್ಲಿ ಖಲೀಲ್ ಅಹ್ಮದ್ ತಮ್ಮ ಜೇಬಿನಿಂದ ಏನೋ ತೆಗೆಯುತ್ತಾರೆ. ಆಗ ಕ್ಯಾಮೆರಾ ಖಲೀಲ್ ಅಹ್ಮದ್ ಹಿಂಭಾಗದ ಮೇಲೆ ಕವರ್ ಮಾಡಿದ್ದು ಈ ವೇಳೆ ಖಲೀಲ್ ತಮ್ಮ ಜೇಬಿನಿಂದ ಏನನ್ನೋ ತೆಗೆದ್ದಿದ್ದಾರೆ. ಬಟ್ ಅದೇನು ಅನ್ನೋದು ಕ್ಲಿಯರ್ ಆಗಿ ಗೊತ್ತಾಗಲ್ಲ. ಆ ಬಳಿಕ ರುತುರಾಜ್ ಗಾಯಕ್ವಾಡ್ ಅವರಿಗೆ ಕೊಟ್ಟಿದ್ದು ಅದನ್ನು ಜೇಬಿನಲ್ಲಿರಿಸಿಕೊಂಡಿದ್ದಾರೆ. ಇಬ್ಬರು ಆಟಗಾರರ ನಡುವೆ ಒಂಥರಾ ಕದ್ದುಮುಚ್ಚಿ ಎನ್ನುವಂತೆ ನಡೆದಿರುವ ಈ ಎಕ್ಸ್ಚೇಂಜ್ ವಿಡಿಯೋ ಇದೀಗ ವೈರಲ್ ಆಗಿದೆ. ಇದೇ ಈಗ ಅನುಮಾನಕ್ಕೆ ಕಾರಣವಾಗಿದೆ. ವಿಡಿಯೋ ವೈರಲ್ ಬೆನ್ನಲ್ಲೇ, ಅಭಿಮಾನಿಗಳು ತಮ್ಮದೇ ಅರ್ಥದಲ್ಲಿ ವಿಶ್ಲೇಷಿಸುತ್ತಿದ್ದಾರೆ. ಇಬ್ಬರು ಸೇರಿಕೊಂಡು ಬಾಲ್ ವಿರೂಪಗೊಳಿಸಿದ್ದಾರೆ ಅಂತಾ ಕಿಡಿಕಾರಿದ್ದಾರೆ.
ಈ ಎಕ್ಸ್ಚೇಂಜ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಅನೇಕರು ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ವೇಗಿ ಖಲೀಲ್ ಅಹ್ಮದ್ ರುತುರಾಜ್ ಗೆ ಸ್ಯಾಂಡ್ ಪೇಪರ್ ನೀಡಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಈ ಸ್ಯಾಂಡ್ ಪೇಪರ್ ಅನ್ನು ಚೆಂಡಿಗೆ ಉಜ್ಜುವುದರಿಂದ ಚೆಂಡು ಬೌಲರ್ ಗಳಿಗೆ ನೆರವಾಗುತ್ತದೆ. ವೇಗಿಗಳು ಚೆಂಡು ಸ್ವಿಂಗ್ ಮಾಡಲು ಇದು ನೆರವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇದೇ ರೀತಿ ಭಾನುವಾರದ ಪಂದ್ಯದಲ್ಲಿ ನಡೆದಿರಬಹುದು ಎನ್ನುವುದು ಹಲವರ ಆರೋಪ. ಇನ್ನು ಈ ಪಂದ್ಯದಲ್ಲಿ ಸಿಎಸ್‌ಕೆ ತಂಡದ ಬೌಲರ್ ನೂರ್ ಅಹ್ಮದ್ 4 ಓವರ್ಗಳಲ್ಲಿ 4 ವಿಕೆಟ್ ತೆಗೆದು 18 ರನ್ ಅಷ್ಟೇ ನೀಡಿದ್ರು. ಇದು ಒಂದ್ಕಡೆಯಾದ್ರೆ ಮತ್ತೊಂದೆಡೆ ಧೋನಿ & ಅಂಪೈರ್ ನಡುವಿನ ಮಾತುಕತೆಯೂ ಅನುಮಾನ ಹುಟ್ಟಿಸಿದೆ.
ಬಾಲ್ ಟ್ಯಾಂಪರಿಂಗ್ ಆರೋಪದ ವಿಡಿಯೋ ಜೊತೆಗೆ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮೈದಾನದಲ್ಲಿರುವ ಅಂಪೈರ್ ಮತ್ತು ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿ ನಡುವೆ ಮಾತುಕತೆ ನಡೆದಿದೆ. ಈ ಕ್ಲಿಪ್‌ನಲ್ಲಿ ಅಂಪೈರ್‌ಗೆ ಧೋನಿ ಏನೋ ರಹಸ್ಯವಾಗಿ ಹೇಳುತ್ತಿರುವುದನ್ನು ಕಾಣಬಹುದು. ಮಾಹಿ ಹೇಳಿದ ಬೆನ್ನಲ್ಲೇ ಅಂಪೈರ್ ಓಕೆ ಎನ್ನುವ ರೀತಿ ಥಂಬ್ ಮೂಲಕ ಸೂಚಿಸುತ್ತಾರೆ. ಇದು ಪಕ್ಕಾ ಫಿಕ್ಸಿಂಗ್ ಎಂದು ಅಭಿಮಾನಿಗಳು ಅನುಮಾನಿಸಿದ್ದಾರೆ. ಬಟ್ ಅವ್ರು ಏನ್ ಮಾತಾಡ್ಕೊಂಡ್ರು ಅನ್ನೋದು ಯಾರಿಗೂ ಕ್ಲಾರಿಟಿ ಇಲ್ಲ. ಬಟ್ ಫ್ಯಾನ್ಸ್ ಮಾತ್ರ ಅಂಪೈರ್ ಮತ್ತು ಆಟಗಾರರು ಏನೋ ಗೋಲ್ಮಾಲ್ ಮಾಡಿದ್ದಾರೆಂದು ಊಹೆ ಮಾಡ್ತಿದ್ದಾರೆ.
ಅಷ್ಟಕ್ಕೂ ಸಿಎಸ್‌ಕೆ ತಂಡದ ವಿರುದ್ಧ ಇಂಥಾ ಆರೋಪಗಳು ಕೇಳಿ ಬರ್ತಿರೋದು ಇದೇ ಮೊದಲೇನಲ್ಲ. ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ 2016ರ ಮತ್ತು 2017 ರ ಸೀಸನ್ನಲ್ಲಿ ಸಿಎಸ್‌ಕೆ ಫ್ರಾಂಚೈಸಿಯನ್ನ ಎರಡು ವರ್ಷ ಬ್ಯಾನ್ ಮಾಡ್ಲಾಗಿತ್ತು. ಈ ಹಿಂದೆ ಐಪಿಎಲ್ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕೂಡ ಈ ಬಗ್ಗೆ ಮಾತನಾಡಿದ್ರು. ಚೆನ್ನೈ ತಂಡದ ಮಾಲೀಕರು ಪಂದ್ಯ ಗೆಲ್ಲಲು ಅಂಪೈರ್ಗಳನ್ನ ಫಿಕ್ಸ್ ಮಾಡುತ್ತಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್ ಶ್ರೀನಿವಾಸನ್ ಅವರು ಸಿಎಸ್‌ಕೆ ಪಂದ್ಯಗಳಿಗೆ ಚೆನ್ನೈ ಮೂಲದ ಅಂಪೈರ್ಗಳನ್ನೇ ನೇಮಿಸುತ್ತಿದ್ದರು ಎಂದು ಆರೋಪಿಸಿದ್ದರು. ಇದೀಗ ಸಿಎಸ್ ಕೆ ವಿರುದ್ಧ ಮತ್ತೆ ಬಾಲ್ ಟ್ಯಾಂಪರಿಂಗ್ ಆರೋಪ ಸದ್ದು ಮಾಡ್ತಿದೆ. ಇನ್ನು ಇದೇ ರೀತಿಯ ಸ್ಯಾಂಡ್ ಪೇಪರ್ ಹಗರಣದಿಂದಾಗಿ 2018ರಲ್ಲಿ ಆಸ್ಟ್ರೇಲಿಯಾದ ಅಂದಿನ ನಾಯಕ ಸ್ಟೀವ್ ಸ್ಮಿತ್, ಉಪ ನಾಯಕ ಡೇವಿಡ್ ವಾರ್ನರ್, ವೇಗಿ ಕ್ಯಾಮೆರಾನ್ ಬ್ಯಾಂಕ್ರಾಫ್ಟ್ ರನ್ನ 12 ತಿಂಗಳುಗಳ ಕಾಲ ಬ್ಯಾನ್ ಮಾಡ್ಲಾಗಿತ್ತು.