‘ಮ್ಯಾಂಡಸ್ ‘ ಚಂಡಮಾರುತ ಎದುರಿಸಲು ಸಜ್ಜಾದ ತಮಿಳುನಾಡು
ಪುದುಚೇರಿಯಲ್ಲೂ ಹೈ ಅಲರ್ಟ್
ಬಂಗಾಳಕೊಲ್ಲಿಯಲ್ಲಿ ಡಿಸೆಂಬರ್ 8ರಂದು ಮ್ಯಾಂಡಸ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ. ಹೀಗಾಗಿ ತಮಿಳುನಾಡು, ಪುದುಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. ‘ಮ್ಯಾಂಡಸ್ ‘ ಚಂಡಮಾರುತವು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳಲಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ. ಚೆನ್ನೈನಿಂದ ಆಗ್ನೇಯಕ್ಕೆ ಎನ್ಡಿ ಆರ್ ಎಫ್ ತಂಡಗಳು, ಸೇನೆ ನೌಕಾಪಡೆ, ಚಂಡಮಾರುತದ ಅಬ್ಬರ ನಿಯಂತ್ರಣಕ್ಕೆಸಜ್ಜಾಗಿದ್ದು, ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ : ಅನ್ನರಾಮಯ್ಯ, ದಲಿತರಾಮಯ್ಯ ಈಗ ಸಿದ್ರಾಮುಲ್ಲಾಖಾನ್- ಹೆಸರಿಟ್ಟಿದ್ದಕ್ಕೆ ಬೇಸರವಿಲ್ಲ ಎಂದು ಬಿಜೆಪಿಗೆ ಸಿದ್ದು ತಿರುಗೇಟು
ಡಿಸೆಂಬರ್ 6ರಂದು ರಾತ್ರಿ 11.30ರ ವೇಳೆಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕಾರೈಕಲ್ನಿಂದ ಸುಮಾರು 840 ಕಿಲೋಮೀಟರ್ ಪೂರ್ವ ಆಗ್ನೇಯಕ್ಕೆ ಮತ್ತು ಚೆನ್ನೈನಿಂದ ಸುಮಾರು 900 ಕಿಲೋಮೀಟರ್ ಆಗ್ನೇಯದಲ್ಲಿ ಡಿಪ್ರೆಷನ್ ಶುರುವಾಗಿದೆ. ಡಿಸೆಂಬರ್ 7ರಂದು ಸಂಜೆ ವೇಳೆಗೆ ವಾಯುಭಾರ ಕುಸಿತವು ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಡಿಸೆಂಬರ್ 8ರ ಮುಂಜಾನೆ ವೇಳೆಗೆ ತಮಿಳುನಾಡು, ಪುದುಚೇರಿ, ಮತ್ತು ದಕ್ಷಿಣ ಆಂಧ್ರಪ್ರದೇಶ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ.
ಈ ಚಂಡಮಾರುತಕ್ಕೆ ಮ್ಯಾಂಡಸ್ ಎಂದು ಹೆಸರಿಡಲಾಗಿದೆ. ಆಂದ್ರಪ್ರದೇಶ ಕರಾವಳಿ ಜಿಲ್ಲೆಗಳು ಮತ್ತು ತಮಿಳುನಾಡು, ಪುದುಚೇರಿಯ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.