ಕೊಹ್ಲಿ ಹೈಯೆಸ್ಟ್ ರನ್.. ಗೇಲ್ 17 ಸಿಕ್ಸರ್ – ವಿರಾಟ್ & ಎಬಿಡಿ ದಾಖಲೆ ಜೊತೆಯಾಟ

ಕೊಹ್ಲಿ ಹೈಯೆಸ್ಟ್ ರನ್.. ಗೇಲ್ 17 ಸಿಕ್ಸರ್ – ವಿರಾಟ್ & ಎಬಿಡಿ ದಾಖಲೆ ಜೊತೆಯಾಟ

ಪ್ರತೀ ಸಲ ಐಪಿಎಲ್ ಟೂರ್ನಿ ಶುರುವಾದಾಗ್ಲೂ ಸಾಕಷ್ಟು ದಾಖಲೆಗಳು ಸೃಷ್ಟಿ ಆಗ್ತಾವೆ. ಹಾಗೇ ಹಳೆ ರೆಕಾರ್ಡ್ಸ್ ಬ್ರೇಕ್ ಆಗ್ತಾವೆ. ಇದೊಂಥರ ಕಾಮನ್ ಆಗೋಗ್ಬಿಟ್ಟಿದೆ. ಹೀಗೆ ಐಪಿಎಲ್​ನಲ್ಲಿ ಆರ್​ಸಿಬಿ ಟೀಂ  ಬರೆದಿರೋ ಕೆಲ ದಾಖಲೆಗಳನ್ನ ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಅದರಲ್ಲೂ ಇನ್ನು ಕೆಲ ದಾಖಲೆಗಳು ಮುರಿಯೋದೇ ಅಸಾಧ್ಯ ಇದೆ. ಈ ಪೈಕಿ ವಿರಾಟ್​ ಕೊಹ್ಲಿ ಹೆಸರಲ್ಲಿರುವ ಅತಿದೊಡ್ಡ ದಾಖಲೆಯೂ ಸೇರಿದೆ.

ಆರ್ ಸಿಬಿಯ ಅದ್ಭುತ ದಾಖಲೆಗಳು!

ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಕೊಹ್ಲಿ

18ನೇ ಸೀಸನ್ ವೇಳೆಗೆ ಒಟ್ಟು 252 ಪಂದ್ಯಗಳನ್ನು ಆಡಿ 8,004 ರನ್

ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ​ಗಳಿಸಿದ ಆಟಗಾರ ಕೊಹ್ಲಿ

2016ನೇ ಆವೃತ್ತಿಯಲ್ಲಿ ಕೊಹ್ಲಿ 973 ರನ್​ ಕೆಲೆಹಾಕಿದ್ದರು

ಅತಿದೊಡ್ಡ ಜೊತೆಯಾಟದ ದಾಖಲೆ ಕೂಡ ಆರ್‌ ಸಿಬಿ ಹೆಸರಲ್ಲಿದೆ

2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಈ ಜೋಡಿ 229 ರನ್

​ ಕೊಹ್ಲಿ 55 ಎಸೆತಗಳಲ್ಲಿ 109 ರನ್, ಎಬಿಡಿ 52 ಎಸೆತಗಳಲ್ಲಿ 129 ರನ್

ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ದಾಖಲೆ ಆರ್ ​ಸಿಬಿ ಆಟಗಾರನ ಹೆಸರಲ್ಲಿ

2013ರಲ್ಲಿ ಕ್ರಿಸ್​ಗೇಲ್​ ಪುಣೆ ವಾರಿಯರ್ಸ್​ ವಿರುದ್ಧ 175 ರನ್​

17 ಸಿಕ್ಸರ್, ಒಂದು ಪಂದ್ಯದಲ್ಲಿ ವೈಯಕ್ತಿಕವಾಗಿ ಹೆಚ್ಚು ರನ್​ ಗಳಿಕೆ

ಹೀಗೆ ಕಳೆದ 17 ಸೀಸನ್​ಗಳಿಂದಲೂ ಐಪಿಎಲ್ ಆಡ್ತಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಒಂದಿಲ್ಲೊಂದು ರೆಕಾರ್ಡ್ಸ್ ಕ್ರಿಯೇಟ್ ಆಗ್ತಾನೇ ಇದೆ. ಬಟ್ ಒಂದು ಸಲವೂ ಕಪ್ ಗೆದ್ದಿಲ್ಲ ಅನ್ನೋದನ್ನ ಬಿಟ್ರೆ ಮತ್ಯಾವುದೇ ತಂಡವೂ ಮಾಡಲು ಸಾಧ್ಯವಾಗದ ರೆಕಾರ್ಡ್ಸ್ ಆರ್ ಸಿಬಿ ಹೆಸರಲ್ಲೇ ಇದೆ.

Shantha Kumari

Leave a Reply

Your email address will not be published. Required fields are marked *