ವೈಷ್ಣವ್ ಮುಂದೆ ಕಾವೇರಿ ಸತ್ಯ.. ಕೀರ್ತಿಯಿಂದಲೂ ದೂರವಾದ ಲಕ್ಷ್ಮೀ! – ಹೆಂಡ್ತಿನಾ ಮನೆಗೆ ಕರಿತಾನಾ ವೈಷ್?

ಲಕ್ಷ್ಮೀ ಮೇಲೆ ವೈಷ್ಣವ್ ಗೆ ಬೆಟ್ಟದಷ್ಟು ಪ್ರೀತಿ ಇದ್ರೂ ಕಾವೇರಿಯಿಂದಾಗಿ ಅವರಿಬ್ರು ದೂರ ದೂರ ಆಗಿದ್ದಾರೆ. ಕಾವೇರಿ ಲಕ್ಷ್ಮೀಯನ್ನ ಮನೆಯಿಂದ ಆಚೆ ಹಾಕಿದ್ರಿಂದ ಆಕೆ ಕೀರ್ತಿ ಮನೆಯಲ್ಲಿ ಇದ್ಲು.. ಆದ್ರೀಗ ಲಕ್ಷ್ಮೀ ವೈಷ್ಣವ್ ಮಾತ್ರ ಅಲ್ಲ.. ಕೀರ್ತಿಯಿಂದಲೂ ದೂರ ಆಗ್ತಿದ್ದಾಳೆ.. ಕೀರ್ತಿಗೆ ಹೇಳದೇ ಮನೆಯಿಂದ ಹೊರಟಿದ್ದಾಳೆ.. ಹಾಗಾದ್ರೆ ಕೀರ್ತಿ ಜೊತೆ ಇದ್ರೆ ವೈಷ್ಣವ್ ಪ್ರೀತಿ ಸಿಗಲ್ಲ ಅಂತಾ ಲಕ್ಷ್ಮೀಗೆ ಗೊತ್ತಾಯ್ತಾ? ಲಕ್ಷ್ಮೀ ಹೊರಟಿರೋದು ಎಲ್ಲಿಗೆ? ವೈಷ್ಣವ್ ಲಕ್ಷ್ಮೀಯನ್ನ ತಡಿತಾನಾ? ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ.
ಇದನ್ನೂ ಓದಿ: ಲಾಂಗ್ ಝಳಪಿಸಿದ ವಿನಯ್-ರಜತ್! – ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಬಿತ್ತು ಕೇಸ್
ಲಕ್ಷ್ಮೀ ಬಾರಮ್ಮ ಸೀರಿಯಲ್ ರೋಚಕ ಘಟ್ಟ ತಲುಪಿದೆ. ಕಾವೇರಿ ಲಕ್ಷ್ಮೀ ವೈಷ್ಣವ್ ನ ಎಷ್ಟೇ ದೂರ ಮಾಡಲು ಪ್ರಯತ್ನಿಸಿದ್ರೂ ಗೆಲ್ಲೋದು ಮಾತ್ರ ಅವರಿಬ್ಬರ ಪ್ರೀತಿನೇ.. ವೈಷ್ಣವ್ ಸಂಕಷ್ಟದಲ್ಲಿದ್ದಾಗ ಲಕ್ಷ್ಮೀ ಕಾಪಾಡ್ತಾಳೆ.. ಲಕ್ಷ್ಮೀ ಸಮಸ್ಯೆಯಲ್ಲಿ ಸಿಕಾಕೊಂಡ್ರೆ ವೈಷ್ಣವ್ ಕಾಪಾಡ್ತಾನೆ.. ಮೊನ್ನೆಯಷ್ಟೇ ವೈಷ್ ರೌಡಿಗಳ ಜೊತೆ ಫೈಟ್ ಮಾಡಿ, ನಿತಿನ್ ನಿಂದ ಲಕ್ಷ್ಮೀಯನ್ನ ಕಾಪಾಡಿದ್ದ.. ಅದಾದ್ಮೇ ಲಕ್ಷ್ಮೀ ಮೇಲೆ ಪ್ರೀತಿ ಇದೆ ಅಂತಾ ಫ್ರೂವ್ ಆಯ್ತು.. ಆದ್ರೀಗ ಲಕ್ಷ್ಮೀ ವೈಷ್ಣವ್ ಮಾತ್ರ ಅಲ್ಲ.. ಕೀರ್ತಿಯಿಂದಲೂ ದೂರ ಆಗ್ತಿದ್ದಾಳೆ.. ಈಗ ಕೀರ್ತಿಗೂ ಹೇಳದೇ ಲಕ್ಷ್ಮೀ ಮನೆಯಿಂದ ಹೊರಟಿದ್ದಾಳೆ..
ಒಂದು ಟೈಮ್ನಲ್ಲಿ ಲಕ್ಷ್ಮೀಗೂ, ಕೀರ್ತಿಗೂ ಆಗಿ ಬರುತ್ತಿರಲಿಲ್ಲ. ವೈಷ್ಣವ್ ಹಾಗೂ ಕೀರ್ತಿ ಪ್ರೀತಿಸಿದ್ದರು. ಇವರಿಬ್ಬರನ್ನು ವೈಷ್ಣವ್ ತಾಯಿಯೇ ದೂರ ಮಾಡಿದಳು. ಈ ವಿಚಾರ ವೈಷ್ಣವ್ಗಾಗಲೀ, ಲಕ್ಷ್ಮೀಗಾಗಲಿ ಗೊತ್ತೇ ಇರಲಿಲ್ಲ. ವೈಷ್ಣವ್ ಹಾಗೂ ಲಕ್ಷ್ಮೀ ಮದುವೆ ಆಯ್ತು, ಇವರಿಬ್ಬರು ಒಂದಾದ ಬಳಿಕ ಕೀರ್ತಿಯೇ ವೈಷ್ಣವ್ ಬೇಕು ಅಂತ ಹಠ ಹಿಡಿದು ಕೂತಳು. ನನ್ನನ್ನು ನನ್ನ ವೈಷ್ಣವ್ನಿಂದ ದೂರ ಮಾಡಿದ್ದಾಳೆ ಅಂತ ಲಕ್ಷ್ಮೀ, ಕೀರ್ತಿ ಮೇಲೆ ಸಿಟ್ಟುಮಾಡಿಕೊಂಡಿದ್ದಳು. ನನ್ನ ಗಂಡನಿಂದ ನನ್ನನ್ನು ದೂರ ಮಾಡುತ್ತಿದ್ದಾಳೆ ಅಂತ ಕೀರ್ತಿ ಮೇಲೆ ಲಕ್ಷ್ಮೀ ಸಿಟ್ಟು ಮಾಡಿಕೊಂಡಿದ್ದಳು. ಆದ್ರೀಗ ಕಾವೇರಿಯ ನಿಜವಾದ ಮುಖವಾಡ ದೂರ ಮಾಡುವ ನಿಟ್ಟಿನಲ್ಲಿ ಲಕ್ಷ್ಮೀ, ಕೀರ್ತಿ ಈಗ ಇನ್ನಷ್ಟು ಹತ್ತಿರ ಆಗಿದ್ದಾರೆ. ಈಗ ಹಳೆ ನೆನಪು ಇಲ್ಲದ ಕೀರ್ತಿಗೆ ಈಗ ಲಕ್ಷ್ಮೀಯೇ ಫೇವರಿಟ್. ಯಾರೇ ಲಕ್ಷ್ಮೀಗೆ ಏನೇ ಹೇಳಲಿ? ಏನೇ ನಿಂದಿಸಲಿ? ತೊಂದರೆ ಮಾಡಲಿ ಕೀರ್ತಿ ಸಹಿಸೋದಿಲ್ಲ. ಅವರ ಮೇಲೆ ರೇಗಾಡ್ತಾಳೆ.. ಹೀಗಾಗೇ ತಾನು ಈ ಮನೆಯಲ್ಲಿದ್ದರೆ ಕೀರ್ತಿಗೆ ತೊಂದರೆ ಆಗತ್ತೆ ಅಂತ ಲಕ್ಷ್ಮೀ ಮನೆ ಬಿಟ್ಟು ಹೋಗಿದ್ದಾಳೆ. ಕೀರ್ತಿ ಮಲಗಿದ್ದ ಸಮಯದಲ್ಲಿ ಲಕ್ಷ್ಮೀ ಆ ಮನೆಯಿಂದ ಸೈಲೆಂಟ್ ಆಗಿ ಹೊರಗಡೆ ಬಂದಿದ್ದಾಳೆ. ಕೀರ್ತಿಗೆ ಎಚ್ಚರ ಆದಾಗ ಲಕ್ಷ್ಮೀ ಮನೆಯಲ್ಲಿಲ್ಲ ಅಂದರೆ ಮುಂದೆ ಏನಾಗಬಹುದು ಎಂಬ ಕ್ಯೂರಿಯಾಸಿಟಿ ಇದೆ.
ಇನ್ನು ಕಾವೇರಿ, ವೈಷ್ಣವ್ ನಿಂದ ದೂರ ಮಾಡಿದ್ಲು.. ಅದಾದ್ಮೇಲೆ ಲಕ್ಷ್ಮೀಯನ್ನು ದೂರ ಮಾಡಿದ್ಲು.. ಇದೀಗ ಮತ್ತೊಂದು ಮದುವೆ ಮಾಡಿಸಲು ಮುಂದಾಗಿದ್ದಾಳೆ.. ಆದ್ರೆ ಇಷ್ಟೆಲ್ಲಾ ಆದ್ರೂ ಕಾವೇರಿ ಏನೂ ಅಂತ ವೈಷ್ಣವ್ಗೆ ಅರ್ಥ ಆಗ್ತಿಲ್ಲ. ಆಕೆ ಏನೇ ಮಾಡಿದ್ರು ಅಮ್ಮ ಮಾಡಿದ್ದೇ ಸರಿ ಅಂತಾ ತಲೆ ಆಡಿಸ್ತಿದ್ದಾನೆ.. ಇದೀಗ ವಿಧಿ ಲೈಫ್ ಕೂಡ ಹಾಳಾಗಿದೆ. ಆದ್ರೆ ಕಾವೇರಿಗೆ ಆಕೆಯ ಬಗ್ಗೆ ಚಿಂತೆನೇ ಇಲ್ಲ.. ಕಾವೇರಿ ಮಾತಿನಿಂದ ನೊಂದ ವಿಧಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ.. ಇದೀಗ ಕಾವೇರಿ ಯಾಕೆ ಹೀಗಾಡ್ತಿದ್ದಾಳೆ ಅನ್ನೋ ಪ್ರಶ್ನೆ ವೈಷ್ಣವ್ ಗೆ ಕಾಡೋದಿಕ್ಕೆ ಶುರುವಾಗಿದೆ. ಹಾಗಾದ್ರೆ ಲಕ್ಷ್ಮೀ ಒಳ್ಳೆಯವಳು, ಕಾವೇರಿ ಕೆಟ್ಟವಳು ಅಂತಾ ವೈಷ್ಣವ್ ಗೆ ಗೊತಾಗುತ್ತಾ? ಕಾವೇರಿ ಸತ್ಯ ಗೊತ್ತಾದ ವೈಷ್ ಏನ್ ಮಾಡ್ಬೋದು? ಲಕ್ಷ್ಮೀಯನ್ನ ಆತ ಮನೆಗೆ ಕರೆಸಿಕೊಳ್ತಾನಾ ಅಂತಾ ಕಾದುನೋಡ್ಬೇಕು.