CSKಯಲ್ಲಿ ಪವರ್ ಫುಲ್‌ಬೌಲರ್ – ಬಿಹಾರಿ ಆಲ್‌ರೌಂಡರ್‌ಗೆ ಧೋನಿ ಫಿದಾ
ಕುಗ್ರಾಮದಿಂದ ಬಂದ ಬಡ ಕ್ರಿಕೆಟರ್

CSKಯಲ್ಲಿ ಪವರ್ ಫುಲ್‌ಬೌಲರ್ –  ಬಿಹಾರಿ ಆಲ್‌ರೌಂಡರ್‌ಗೆ ಧೋನಿ ಫಿದಾಕುಗ್ರಾಮದಿಂದ ಬಂದ ಬಡ ಕ್ರಿಕೆಟರ್

ಮೊಹಮ್ಮದ್ ಇಜಾರ್.. ಇಂಡಿಯನ್ ಕ್ರಿಕೆಟ್‌ನಲ್ಲಿ ಕೇಳಿ ಬರ್ತಿರೋ ಹೊಸ ಹೆಸರು.. ಬಿಹಾರದಿಂದ ಕ್ರಿಕೆಟ್ ಅಂಗಳಕ್ಕೆ  ಕಾಲಿಟ್ಟಿದ್ದಾರೆ.. ಬಿಹಾರ್​ ಎಂದಾಕ್ಷಣ ನೆನಪಾಗುವುದು ಬಡತನ, ದಾರಿದ್ರ್ಯ, ಹಿಂಸಾಚಾರ . ಬಡ ಬಿಹಾರದಿಂದ ಬಂದ ಮೊಹಮ್ಮದ್ ಇಜಾರ್  ಮಿಂಚುತ್ತಿದ್ದಾರೆ. ಇಜಾರ್ ಸದ್ಯ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನೆಟ್ ಬೌಲರ್.. ಸಣ್ಣ ಕುಗ್ರಾಮದ ಹುಟ್ಟಿ ಬೆಳೆದು ಈ ಮೊಹಮ್ಮದ್ ಇಜಾರ್.. ಈಗ ಐಪಿಎಲ್​​​​​​​​​​​​​​​​​​​​​​​​​​​​​​​​​​​​​​​​​​ನ ಕದ ತಟ್ಟಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೆಟ್​ ಬೌಲರ್ ಆಗಿ ಆಯ್ಕೆ ಆಗುವುದರೊಂದಿಗೆ ಮಿಲಿಯನ್ ಡಾಲರ್ ಟೂರ್ನಿಗೆ ಎಂಟ್ರಿ ನೀಡಿದ್ದಾರೆ. ಇದರೊಂದಿಗೆ ಮನೆಯಲ್ಲಿ ಸಂಭ್ರಮವೂ ಮನೆ ಮಾಡಿದೆ.

ತಂದೆ ಮೌಲಾನಾ ಸಲಾವುದ್ದೀನ್, ತಾಯಿ ಶಭ್ನಮ್. ಇವರು ಮಗನ ಸಾಧನೆ ಬಗೆಗಿನ ಹಾಡಿದ ಉತ್ಸಾಹದ ಮಾತು. ಮಗ ಭವಿಷ್ಯದಲ್ಲಿ ಟೀಮ್ ಇಂಡಿಯಾ ಸೇರ್ತಾನೆ. ಪ್ರಸಿದ್ಧಿ ಪಡೀತಾನೆ ಎಂದು ತಾಯಿಯ ಭರವಸೆಯ ಮಾತು. ಯಾಕಂದ್ರೆ, ಕುಗ್ರಾಮದ ಈತ, ಐಪಿಎಲ್​ನಲ್ಲಿ ಒಂದು ತಂಡದ ನೆಟ್ ಬೌಲರ್ ಆಗಿ ಬರೋದು ನಿಜಕ್ಕೂ ದೊಡ್ಡ ಮೈಲುಗಲ್ಲು ಆಗಿದೆ. ಯಾಕಂದ್ರೆ, ಕುಗ್ರಾಮ, ಬಡತನದಲ್ಲಿ ಹುಟ್ಟಿದ್ದ ಇಜಾರ್, ಕ್ರಿಕೆಟರ್ ಆಗಿ ಬೆಳೆಯುವುದು ಸುಲಭದಲ್ಲ. ಇದರ ಹಿಂದೆ ಕಠಿಣ ಶ್ರಮವೇ ಅಡಗಿದೆ.

ಮಗನ ಯಶಸ್ಸಿನ ಹಿಂದೆ ತಂದೆ ಮೌಲಾನಾ ಸಲಾವುದ್ದೀನ್, ತಾಯಿ ಶಭ್ನಮ್ ತ್ಯಾಗ ಹೆಚ್ಚಿದೆ. ಯಾಕಂದ್ರೆ, ವೀರಪುರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ, ಮಸೀದಿಯ ಇಮಾಮ್ ಆಗಿ ಕೆಲಸ ಮಾಡ್ತಿದ್ದರು. ಬರುವ ಅಲ್ಪ ಸಂಬಳದಲ್ಲೇ ಮನೆಯ ಜವಾಬ್ದಾರಿ ತಾಯಿ ಶಭ್ನಮ್ ನಿರ್ವಹಿಸುತ್ತಿದ್ದರು. ಆದ್ರೆ, ಕುಟುಂಬದ ಆರ್ಥಿಕ ಸಂಕಷ್ಟದಲ್ಲೇ 17 ವರ್ಷದಲ್ಲಿ ಮನೆ ತೊರೆದ ಇಜಾರ್​, ವೀರಪುರ್​ಗೆ ತೆರಳಿದರು. ಇದೇ ಮೀರ್​ಪುರನಲ್ಲಿ ಸಣ್ಣದೊಂದು ರೂಮ್​​​​​​​​​​​​​​​​​​​​​​​​​​​​​​​​​​​​​​​ನ ಬಾಡಿಗೆಗೆ ಪಡೆದ ಕ್ರಿಕೆಟ್​ ಜರ್ನಿ ಶುರು ಮಾಡಿದರು.​

ಬಡತನದ ನಡುವೆ ಕ್ರಿಕೆಟ್ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದ ಇಜಾರ್, ವೀರಪುರ್ ಕೋಸಿ ಕ್ರಿಕೆಟ್ ಕ್ಲಬ್‌ಗೆ ಸೇರಿದ್ದರು. ಮೊದಲ ದಿನದಿಂದಲೇ ಈತನ ಆಸಕ್ತಿ, ಉತ್ಸಾಹಕ್ಕೆ ಹಿರಿಯ ಆಟಗಾರರಾಗಿದ್ದ​ ಜಯಚಂದ್, ಬೀರ್ಬಲ್​ ಮನ ಸೋತಿದ್ದರು. ಅಷ್ಟೇ ಅಲ್ಲ, ಈತನ ಕೌಶಲ್ಯ ಗುರುತಿಸಿದ್ದ ಜಯಚಂದ್, ಬೀರ್ಬಲ್ ಬೌಲರ್ ಆಗಿ ರೂಪಿಸಿದರು. ಈತನ ಅದ್ಬುತ ಕೌಶಲ್ಯಕ್ಕೆ 2020ರಲ್ಲಿ ಬಿಹಾರ ಅಂಡರ್​-23 ತಂಡದಿಂದ ಬುಲಾವ್ ಸಿಕ್ತು. ಈ ಬೆನ್ನಲ್ಲೇ ಚೆನ್ನೈನಲ್ಲಿರುವ ಎಮ್​ಆರ್​ಎಫ್ ಪೇಸ್ ಪೌಂಡೇಶ್​​ನ್​ನಲ್ಲಿ ಗ್ರೇನ್ ಮೆಗ್ರಾಥ್​​, ಗರಡಿಯಲ್ಲಿ ಪಳಗಿದ ಮೊಹಮ್ಮದ್ ಇಜಾರ್, ಇಲ್ಲಿಂದ ನೇರವಾಗಿ ಸೇರಿದ್ದು ಚೆನ್ನೈ ಕ್ಯಾಂಪ್.

ಮೊಹಮ್ಮದ್ ಇಜಾರ್. ನೆಟ್ ಬೌಲರ್ ಆಗಿ ಚೆನ್ನೈ ಸೇರಿದ್ದಾರೆ ನಿಜ. ಆದ್ರೆ, ಇದೇ ಮೊಹಮ್ಮದ್ ಇಜಾರ್​ಗೆ ಚೆನ್ನೈ ತಂಡದ ಸೇರುವ ಅದೃಷ್ಟವೂ ಇದ್ದೇ ಇದೆ. ಯಾಕಂದ್ರೆ. ಬೌಲಿಂಗ್ ಜೊತೆಗೆ ಬ್ಯಾಟಿಂಗ್​ ಮಾಡಬಲ್ಲ ಕೆಪಾಸಿಟಿ ಹೊಂದಿರುವ ಈತನದ್ದು, ಧೋನಿ ತವರೂರು ಬೇರೆ. ಹೀಗಾಗಿ ಇಜಾರ್ ತನ್ನ ಸಾಮರ್ಥ್ಯ ಫ್ರೂವ್ ಮಾಡಿದ್ರೆ, ಇಂಜುರಿ ಪ್ಲೇಯರ್​​ಗಳ ಬದಲಿ ರೂಪದಲ್ಲಿ ಚೆನ್ನೈ ಕ್ಯಾಂಪ್ ಸೇರಿದರು ಅಚ್ಚರಿ ಇಲ್ಲ. ಅದ್ರೆ, ಈತನಿಗೆ ಚೆನ್ನೈ ಸೇರುವ ಅದೃಷ್ಟ ಸಿಗುತ್ತೋ ಇಲ್ವೋ.. ಉತ್ತಮ ಕ್ರಿಕೆಟರ್ ಆಗಿ ರೂಪುಗೊಳ್ಳುವ ಅವಕಾಶವಂತೂ ಇದ್ದೇ ಇದೆ. ಇವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸೋಣ..

Kishor KV