ಗಗನಾಗಾಗಿ ಬೀದಿ ಬೀದಿ ಅಲೆದ ಡ್ರೋನ್.. ಮದ್ವೆ ಬೆನ್ನಲ್ಲೇ ಪ್ರತಾಪ್ ವ್ಯಾಪಾರಿ
ಗಗನಾ ಇಂಪ್ರೆಸ್‌ಗೆ ನಾನಾ ಸರ್ಕಸ್

ಡ್ರೋನ್ ಪ್ರತಾಪ್ ಹಾಗೂ ಗಗನಾ.. ಸದ್ಯ ಜೀಕನ್ನಡದಲ್ಲಿ ಪ್ರಸಾರ ಆಗ್ತಿರೋ ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಇವರಿಬ್ಬರೇ ಹೈಲೈಟ್.. ವಿಭಿನ್ನ ಕಾನ್ಸೆಪ್ಟ್ ಮೂಲಕ ಗಗನಾ ಹಾಗೂ ಡ್ರೋನ್ ಪ್ರತಾಪ್ ವೀಕ್ಷಕರನ್ನ ರಂಜಿಸ್ತಿದ್ದಾರೆ. ಮೊನ್ನೆಯಷ್ಟೇ ಗಗನ ಮತ್ತು ಡ್ರೋನ್ ಪ್ರತಾಪ್ ರಾಮಾಚಾರಿ ಚಿತ್ರದ ಮದುವೆ ಆಗೋ ದೃಶ್ಯವನ್ನ ರೀ-ಕ್ರಿಯೇಟ್ ಮಾಡಿದ್ರು.. ಇದೀಗ ಗಗನಾಗಾಗಿ ಡ್ರೋನ್ ವ್ಯಾಪಾರಿಯಾಗಿದ್ದಾರೆ. ಅಲ್ಲಲ್ಲಿ ಹೋಗಿ ಬ್ಯಾಗು, ಸೀರೆ, ಬಳೆ ಸೇಲ್ ಮಾಡಿ ಗಮನ ಸೆಳೆದಿದ್ದಾಳೆ. ಡ್ರೋನ್ ಮಾಡಿದ ಕೆಲಸ ನೋಡಿ ಗಗನಾ ಫುಲ್ ಇಂಪ್ರೆಸ್ ಆಗಿದ್ದಾರೆ.
ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಸಂಚಲನ – ಹೈಕಮಾಂಡ್‌ಗೆ ದೂರು ನೀಡಲು ಮುಂದಾದ ಸಿಎಂ ಆಪ್ತರು
ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಭರ್ಜರಿಯಾಗಿ ಮೂಡಿ ಬರ್ತಿದೆ. ತಮ್ಮ ಮೆಂಟರ್ಸ್ ಮನಸ್ಸು ಗೆಲ್ಲಲು ಬ್ಯಾಚುಲರ್ಸ್ ಹೊಸ ಹೊಸ ಪ್ರಯತ್ನ ಮಾಡ್ತಿದ್ದಾರೆ. ಇದ್ರಲ್ಲಿ ಡ್ರೋನ್ ಪ್ರತಾಪ್ ಒಂದು ಕೈ ಮೇಲು.. ಹೌದು.. ಡ್ರೋನ್ ಪ್ರತಾಪ್ ಆರಂಭದಲ್ಲಿ ಗಗನಾರನ್ನ ಸಾವಿರ ಅಡಿ ಎತ್ತರಕ್ಕೆ ಹೆಲಿಕಾಪ್ಟರ್ ನಲ್ಲಿ ಕರ್ಕೊಂಡು ಹೋಗಿ ಸರ್‌ರ್ಪ್ರೈಸ್ ನೀಡಿದ್ರು.. ಅದಾದ್ಮೇಲೆ ರೀ-ಕ್ರಿಯೇಟ್ ರೌಂಡ್ ನಲ್ಲಿ ಗಗನಾಗೆ ತಾಳಿ ಕಟ್ಟೋತರ ಆಕ್ಟ್ ಮಾಡಿದ್ರು. ಈ ವಾರದ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್ ಸಂಪಾದನೆ ಮಾಡಲು ಹೊರಟಿದ್ದಾರೆ.. ಅದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ವ್ಯಾಪಾರವನ್ನ.
ಜೀಕನ್ನಡ ವಾಹಿನಿ ಭರ್ಜರಿ ಬ್ಯಾಚುಲರ್ಸ್ ನ ಪ್ರೋಮೋ ರಿಲೀಸ್ ಮಾಡಿದೆ. ಇದ್ರಲ್ಲಿ ಡ್ರೋನ್ ಪ್ರತಾಪ್ ವ್ಯಾಪಾರ ಶುರು ಮಾಡ್ಕೊಂಡಿದ್ದಾರೆ. ಬ್ಯಾಗ್..ಬ್ಯಾಗ್.. ಭರ್ಜರಿ ಬ್ಯಾಚುಲರ್ಸ್ ಬ್ಯಾಗ್ ಅಂತಾ ಕೆಲ ಹೊತ್ತು ರೋಡ್ ನಲ್ಲಿ ಬ್ಯಾಗ್ ವ್ಯಾಪಾರ ಮಾಡಿದ್ದಾರೆ.. ಬಳಿಕ ಸೀರೆ ಅಂಗಡಿಯಲ್ಲೂ ಕೆಲಸ ಮಾಡಿದ್ದಾರೆ.. ಅದಾದ್ಮೇಲೆ ಡ್ರೋನ್ ಬಳೆಗಾರ ಆಗಿದ್ದಾರೆ.. ರಸ್ತೆ ಬದಿಯಲ್ಲಿ ಬಳೆ ವ್ಯಾಪಾರ ಮಾಡಿದ್ದಾರೆ.. ಯುತಿಯೊಬ್ಬಳಿಗೆ ಬಳೆ ತೊಡಿಸಿದ್ದಾರೆ.. ಅಮೇಲೆ ಚಪ್ಪಲಿ ಅಂಗಡಿಯಲ್ಲೂ ಕೆಲ ಹೊತ್ತು ಕೆಲಸ ಮಾಡಿದ್ದಾರೆ.. ಡ್ರೋನ್ ಪ್ರತಾಪ್ ಕೆಲಸ ನೋಡಿ ಗಗನಾ ಫುಲ್ ಫಿದಾ ಆಗಿದ್ದಾರೆ. ಒಬ್ರು ಮೆಂಟರ್‌ಗೋಸ್ಕರನೇ ಇಷ್ಟೆಲ್ಲಾ ಮಾಡಿದ್ದಾರೆ ಅಂದ್ರೆ, ಇನ್ನೂ ಫೂಚರ್ ವೈಫ್ ಗೆ ಇನ್ನೆಷ್ಟೆಲ್ಲಾ ಮಾಡ್ಬೋದು ಅಂಯಾ ಗಗನಾ ಹೇಳಿದ್ದಾರೆ..
ಇದೀಗ ಶೋ ನ ಪ್ರೋಮೋ ನೋಡಿದ ವೀಕ್ಷಕರು ನಾನಾ ಕಾಮೆಂಟ್ ಮಾಡ್ತಿದ್ದಾರೆ.. ಡಿಫ್ರೆಂಟ್ ಟಾಸ್ಕ್‌ಗಳಲ್ಲಿ ಡ್ರೋನ್ ಪ್ರತಾಪ್ ಉತ್ತಮ ಪರ್ಫಾಮೆನ್ಸ್ ಕೊಡ್ತಿದ್ದಾರೆ.. ಇವ್ರ ಐಡಿಯಾ.. ಪ್ರೆಸೆಂಟೇಷನ್ ಗಗನಾಗೆ ಮಾತ್ರವಲ್ಲ.. ಎಲ್ಲಾ ಹೆಣ್ಣು ಮಕ್ಕಳಿಗೂ ಇಷ್ಟ ಆಗ್ತಿದೆ.. ಡ್ರೋನ್ ಪ್ರತಾಪ್ ಮಾತ್ರ ಸೂಪರ್ ಅಂತಾ ಕಾಮೆಂಟ್ ಮಾಡಿದ್ದಾರೆ.. ಆದ್ರೆ ಇನ್ನೂ ಕೆಲವರು ಶೋ ವಿರುದ್ದ ಅಸಮಧಾನ ಹೊರ ಹಾಕಿದ್ದಾರೆ.. ಈ ಶೋನಿಂದ ಸಮಾಜಕ್ಕೆ ಏನ್ ಸಂದೇಶ ಸಿಗ್ತಿದೆ. ವೇದಿಕೆ ಮೇಲೆನೇ ನನಗೆ ಅವಳು ಇಷ್ಟ.. ಇವನು ಇಷ್ಟ ಅಂತ ಇಲ್ಲ ಸಲ್ಲದ ಮಾತುಗಳನ್ನು ಆಡಿ.. ಯುವಕ ಯುವತಿಯರಲ್ಲಿ ತಪ್ಪು ಭಾವನೆಗಳನ್ನು ಬರುವ ಹಾಗೆ ಮಾಡೋದು ಒಂದು ಸಭ್ಯ ಶೋ ನಾ? ಅಂತಾ ಪ್ರಶ್ನೆ ಮಾಡ್ತಿದ್ದಾರೆ.. ಇನ್ನೂ ಕೆಲವರು, ಈಗ ಶೋನಲ್ಲಿ ವಾವ್ ನೈಸ್.. ಸೋ ಸ್ವೀಟ್ ಅಂತಾ ಹೇಳ್ತಾರೆ.. ಆದ್ರೆ ರೋಡ್ ಸೈಡ್ ಬಟ್ಟೆ ಮಾರುವವನ ಕರ್ಕೊಂಡು ಬಂದು, ಹುಡುಗ ಚಂದ ಇದ್ದಾನೆ.. ನೋಡು ಇವನ ಮದ್ವೆ ಆಗ್ತೀಯ ಅಂತ ಕೇಳಿದ್ರೆ, ಎಷ್ಟು ಆಸ್ತಿ ಇದೆ.. ಎಷ್ಟು ದುಡ್ಡು ಇದೆ.. ಎನ್ ಕೆಲಸ ಮಾಡ್ತೀಯ ಅಂತ ಕೇಳ್ತಾರೆ. ಇದೆಲ್ಲಾ.. ಶೋ.. ಸೀರಿಯಲ್ ಸಿನಿಮಾದಲ್ಲಿ ಮಾತ್ರ ಚೆಂದ.. ಇದೆಲ್ಲಾTRPಗಾಗಿ ಅಷ್ಟೇ.. ಅಂತಾ ಕಾಮೆಂಟ್ ಮಾಡಿದ್ದಾರೆ.