ಕೊಹ್ಲಿ ತಿರುಗಿಬಿದ್ದ ಬೆನ್ನಲ್ಲೇ ಬಿಸಿಸಿಐ ಉಲ್ಟಾ – ಪಂದ್ಯಗಳಿಗೆ ಪತ್ನಿಯರನ್ನು ಕರೆ ತರಲು ಒಪ್ಪಿಗೆ

ಟೀಂ ಇಂಡಿಯಾ ಆಟಗಾರರು ಸದ್ಯ ಐಪಿಎಲ್ ಗೆ ರೆಡಿಯಾಗ್ತಿದ್ದಾರೆ. ತಮ್ಮ ತಮ್ಮ ತಂಡಗಳ ಜೊತೆಗೂಡಿ ಮೈದಾನಗಳಲ್ಲಿ ಭರ್ಜರಿ ಪ್ರಾಕ್ಟೀಸ್ ಮಾಡ್ತಿದ್ದಾರೆ. ಮಾರ್ಚ್ 22ರಂದು ಉದ್ಘಾಟನಾ ಪಂದ್ಯ ನಡೆಯಲಿದ್ದು ಮೇ 25ಕ್ಕೆ ಫೈನಲ್ ಮ್ಯಾಚ್ ನಡೆಯಲಿದೆ. ಆ ನಂತ್ರ ಜೂನ್ ತಿಂಗಳಲ್ಲಿ ಮತ್ತೆ ಟೀಂ ಇಂಡಿಯಾ ಅಭಿಯಾನ ಶುರುವಾಗಲಿದೆ. ಆದ್ರೆ ಈ ಸರಣಿಗೂ ಮುನ್ನ ಬಿಸಿಸಿಐ ಕೆಲ ನಿಮಯಗಳಲ್ಲಿ ಬದಲಾವಣೆ ತರೋಕೆ ಮುಂದಾಗಿದೆ.
ಇದನ್ನೂ ಓದಿ : ಚಿನ್ನಸ್ವಾಮಿಯಲ್ಲಿ ಮೇಳೈಸಿದ ಕನ್ನಡ ಡಿಂಡಿಮ – ರಜತ್ ಗೆ ಜೊತೆಯಾಗಿ ನಿಂತ ವಿರಾಟ್ ಕೊಹ್ಲಿ!
ಟೀಂ ಇಂಡಿಯಾ ಆಟಗಾರರ ಡೆಡಿಕೇಷನ್ ಹೆಚ್ಚಿಸಲು ಬಿಸಿಸಿಐ ಕೆಲ ನಿರ್ಬಂಧಗಳನ್ನ ವಿಧಿಸಿತ್ತು. ಬಿಸಿಸಿಐನ ನಿಯಮಗಳ ವಿರುದ್ಧ ವಿರಾಟ್ ಕೊಹ್ಲಿ ತಿರುಗಿ ಬಿದ್ದಿದ್ರು. ಇದೇ ಕಾರಣಕ್ಕೆ ತನ್ನ ರೂಲ್ಸ್ ನ ಸ್ವಲ್ಪ ರಿಲೀಫ್ ಮಾಡ್ತಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಇಂಗ್ಲೆಂಡ್ನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಗೂ ಮುನ್ನ ಬಿಸಿಸಿಐ ತನ್ನ ನಿಯಮವನ್ನು ಸಡಿಲಿಕೆ ಮಾಡಲು ಮುಂದಾಗಿದ್ದು, ಅದರಂತೆ ಮುಂಬರುವ ಸರಣಿ ವೇಳೆ ಟೀಮ್ ಇಂಡಿಯಾ ಆಟಗಾರರ ಜೊತೆ ಅವರ ಪತ್ನಿಯರು ಅಥವಾ ಕುಟುಂಬಸ್ಥರು ಕಾಣಿಸಿಕೊಳ್ಳಬಹುದು. ಟೀಮ್ ಇಂಡಿಯಾ ಆಟಗಾರರಿಗೆ ವಿಧಿಸಿದ್ದ ಕಟ್ಟು ನಿಟ್ಟಿನ ನಿಯಮವನ್ನು ಮರುಪರಿಶೀಲಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಡಳಿ ವಿಧಿಸಿದ್ದ ಚಿಂತಿಸಿದೆ. ಈ ಹಿಂದಿನ ನಿಯಮದಂತೆ ವಿದೇಶಿ ಸರಣಿಗಳ ಪ್ರವಾಸದ ವೇಳೆ ನಿಗದಿತ ಸಮಯದವರೆಗೆ ಮಾತ್ರ ಕುಟುಂಬಸ್ಥರು ಜೊತೆಯಲ್ಲಿರಬಹುದು ಎಂದು ಬಿಸಿಸಿಐ ತಿಳಿಸಲಾಗಿತ್ತು. ಆದರೀಗ ಈ ನಿಯಮದಲ್ಲಿ ಬದಲಾವಣೆ ತರಲು ಮುಂದಾಗಿದೆ.
ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಹೀನಾಯ ಸೋಲಿನ ನಂತರ ಬಿಸಿಸಿಐ ಎಲ್ಲಾ ಆಟಗಾರರಿಗೆ ಕಟ್ಟುನಿಟ್ಟಿನ ಪ್ರಯಾಣ ನೀತಿಯನ್ನು ಹೊರಡಿಸಿತ್ತು. ವಿದೇಶಿ ಪ್ರವಾಸಗಳ ಸಮಯದಲ್ಲಿ ಆಟಗಾರರ ಕುಟುಂಬಗಳ ಉಪಸ್ಥಿತಿಯನ್ನು ಬಿಸಿಸಿಐ ಗಣನೀಯವಾಗಿ ಕಡಿಮೆ ಮಾಡಿತ್ತು. ಬಿಸಿಸಿಐನ ಹೊಸ ನಿಯಮಗಳ ಪ್ರಕಾರ, ಸರಣಿಗಳ ವೇಳೆ ಆಟಗಾರರು ತಮ್ಮ ಹೆಂಡತಿಯರು, ಮಕ್ಕಳು ಅಥವಾ ಕುಟುಂಬವನ್ನು ಕೇವಲ ಎರಡು ವಾರಗಳವರೆಗೆ ಮಾತ್ರ ಜತೆಯಲ್ಲಿರಿಸಬಹುದು ಎಂದು ತಿಳಿಸಲಾಗಿತ್ತು. ಆದರೆ ಈ ನಿಯಮದ ಬಗ್ಗೆ ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ದೊಡ್ಡ ಪಂದ್ಯಗಳ ವೇಳೆ ಅಥವಾ ಕೆಟ್ಟ ಸಮಯದಲ್ಲಿ ಆಟಗಾರರ ಕುಟುಂಬಗಳು ಜೊತೆಗಿರುವುದರಿಂದ ಉದ್ವೇಗ ಕಡಿಮೆಯಾಗುತ್ತದೆ. ಹೀಗಾಗಿ ಕುಟುಂಬಸ್ಥರು ಜೊತೆಗಿರಬೇಕಿರುವುದು ಅನಿವಾರ್ಯ ಎಂದು ಕೊಹ್ಲಿ ಹೇಳಿದ್ದರು. ವಿರಾಟ್ ಕೊಹ್ಲಿಯ ಈ ಹೇಳಿಕೆ ಬೆನ್ನಲ್ಲೇ ಬಿಸಿಸಿಐ ತನ್ನ ನಿಯಮದಲ್ಲಿ ಬದಲಾವಣೆ ತರಲು ಮುಂದಾಗಿದೆ. ವಿದೇಶ ಪ್ರವಾಸದ ಸಮಯದಲ್ಲಿ ಆಟಗಾರರು ತಮ್ಮ ಕುಟುಂಬಗಳೊಂದಿಗೆ ವಿಸ್ತೃತ ಅವಧಿವರೆಗೆ ಇರಲು ಬಯಸಿದರೆ, ಅವರು ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ ಮೂಲಗಳನ್ನು ಉಲ್ಲಂಘಿಸಿ ವರದಿಯಾಗಿದೆ. ಹೀಗಾಗಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆ ಟೀಮ್ ಇಂಡಿಯಾ ಆಟಗಾರರಿಗೆ ಕುಟುಂಬಸ್ಥರೊಂದಿಗೆ ಕಾಲ ಕಳೆಯಲು ಅವಕಾಶ ಸಿಗಲಿದೆ ಎನ್ನಬಹುದು.

ನೋಡಿರಿ

