ಮೀನು ಕೊಟ್ಟು ಪ್ರಪೋಸ್‌ ಮಾಡ್ತಾರಾ?- ಅಭಿಜ್ಞಾ ಮಾತು ಫುಲ್‌ ಟ್ರೋಲ್!‌ 

ಮೀನು ಕೊಟ್ಟು ಪ್ರಪೋಸ್‌ ಮಾಡ್ತಾರಾ?- ಅಭಿಜ್ಞಾ ಮಾತು ಫುಲ್‌ ಟ್ರೋಲ್!‌ 

ಮೀನು ಕೊಟ್ಟು ಯಾರಾದ್ರೂ ಪ್ರಪೋಸ್‌ ಮಾಡ್ತಾರಾ? ಸದ್ಯ ಈ ಪ್ರಶ್ನೆ ಮೀನು ಪ್ರಿಯರು ಮಾತ್ರವಲ್ಲ.. ವೆಜಿಟೇರಿನ್ಸ್‌ ನ ಕೂಡ ಕಾಡ್ತಾ ಇದೆ.. ಅಂದ್ಹಾಗೆ ಈ ಪ್ರಶ್ನೆ ಹುಟ್ಟಿಕೊಳ್ಳೋದಿಕ್ಕೂ ಒಂದು ರೀಸನ್‌ ಇದೆ.. ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಭರ್ಜರಿ ಬ್ಯಾಚುಲರ್ಸ್‌ನ ಕಳೆದ ಸಂಚಿಕೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಶೋನ ಸ್ಪರ್ಧಿ ಅಭಿಜ್ಞಾ ಭಟ್‌, ಸ್ಟೇಜ್ ನಲ್ಲಿ ಮೀನಿನ ಮಹತ್ವ ಹಾಗೂ ಮೀನು ಕೊಟ್ಟು ಪ್ರಪೋಸ್ ಕೂಡ ಮಾಡ್ಬೋದು ಅಂತಾ ಹೇಳಿದ್ದಾರೆ.. ಅಭಿಜ್ಞಾ ಮಾತು ಕೇಳಿ ವೀಕ್ಷಕರು ಶಾಕ್‌ ಆಗಿದ್ದಲ್ಲದೇ.. ನಿಜ ಜೀವನದಲ್ಲಿ ಹೀಗೆಲ್ಲಾ ಆಗುತ್ತಾ? ಹೀಗೆ ಪ್ರಪೋಸ್‌ ಮಾಡ್ತಾರಾ ಅಂತಾ ಕೇಳಿದ್ದಾರೆ. ಇದೀಗ ಅಭಿಜ್ಞಾ ಮಾತು ಟ್ರೋಲ್‌ ಮೇಲೆ ಟ್ರೋಲ್‌ ಆಗ್ತಿದೆ.. ಅಷ್ಟಕ್ಕೂ ಆಗಿದ್ದೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  39 ವರ್ಷಕ್ಕೆ ಅಜ್ಜಿಯಾದ ಮಹಿಳೆ! – ವೈರಲ್‌ ಆಯ್ತು ಅಜ್ಜಿ ಮೊಮ್ಮಗುವಿನ ಫೋಟೋ!

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಭಾರಿ ಸದ್ದು ಮಾಡ್ತಿದೆ… ಬ್ಯಾಚುಲರ್ಸ್ ಗಳಿಗೆ ಮೆಂಟರ್ಸ್ ಗಳು ಕೂಡ ಸಿಕ್ಕಿದ್ದಾರೆ. ಕಳೆದ ವಾರ ಸರ್ಪ್ರೈಸ್ ರೌಂಡ್ ಇತ್ತು. ಬಾಚುಲರ್ಸ್‌ ವಿವಿಧ ರೀತಿಯಲ್ಲಿ ತಮ್ಮ ಮೆಂಟರ್ ಗಳಿಗೆ ಸರ್ಪ್ರೈಸ್ ನೀಡಿದ್ದರು. ಈ ಬಾರಿ ಸಿನಿಮಾಗಳ ರೀಕ್ರಿಯೇಶನ್ ರೌಂಡ್ ಸಕ್ಕಾತ್ತಾಗಿ ನಡೆದಿದೆ.. ಈ ಕಾರ್ಯಕ್ರಮದಲ್ಲಿ ನಟಿ ಅಭಿಜ್ಞಾ ಭಟ್, ಸೂರ್ಯ ಕುಮಾರ್ ಗೆ ಜೋಡಿಯಾಗಿದ್ದು, ಇವರಿಬ್ಬರು ಜೊತೆಯಾಗಿ ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು, ದೃಶ್ಯಗಳನ್ನು ರೀಕ್ರಿಯೇಟ್ ಮಾಡಿದ್ರು.. ಪರ್ಫಾಮೆನ್ಸ್‌ ಕೂಡ ಸಖತ್‌ ಚೆನ್ನಾಗೇ ಇತ್ತು.. ಆದ್ರೀಗ ಅಭಿಜ್ಞಾ ಒಂದು ಎಡವಟ್ಟು ಮಾಡ್ಕೊಂಡಿದ್ದಾರೆ.. ಅಭಿಜ್ಞಾ ಮಾತು ಟ್ರೋಲ್‌ ಮೇಲೆ ಟ್ರೋಲ್‌ ಆಗ್ತಿದೆ..

ಅಭಿಜ್ಞಾ ಹಾಗೂ ಸೂರ್ಯ ಕುಮಾರ್ ಪರ್ಫಾಮೆನ್ಸ್‌ ಮುಗಿಯುತ್ತಿದ್ದಂತೆ ನಿರೂಪಕ ನಿರಂಜನ್ ದೇಶಪಾಂಡೆ, ಅಭಿಜ್ಞಾ ಬಳಿ ಮೀನುಗಳ ವಿಶೇಷತೆ ಬಗ್ಗೆ ಕೇಳಿದ್ದಾರೆ.. ಆಗ  ಮಾತು ಆರಂಭಿಸಿದ ಅಭಿಜ್ಞಾ, ನಾನು ಮೀನು ತಿನ್ನೋದಿಲ್ಲ, ಆದರೆ ನಾನು ದಕ್ಷಿಣ ಕನ್ನಡದವಳು ಅಲ್ವಾ? ಹಾಗಾಗಿ ನಮ್ಮ ಅಕ್ಕ ಪಕ್ಕದ ಮನೆಯಲ್ಲಿ ಯಾವಾಗ ನೋಡಿದ್ರೂ ಮೀನು. ಮೀನು ಕಣ್ಣಿಗೆ ತುಂಬಾನೆ ಒಳ್ಳೆಯದು ಅಲ್ಲದೇ ಮೀನಿನ ಮಂಡೆ ತಿಂದ್ರೆ ನಮ್ಮ ಮಂಡೆಸ ಚುರುಕಾಗುತ್ತದೆ ಎಂದಿದ್ದಾರೆ ಅಭಿಜ್ಞಾ ಭಟ್.  ಇಷ್ಟಕ್ಕೆ ಮಾತು ನಿಲ್ಸಿದ್ರೆ ಟ್ರೋಲ್‌ ಆಗ್ತಿರ್ಲಿಲ್ಲ.. ಮೀನು ಪ್ರಿಯರು ಕೂಡ ಅಭಿಜ್ಞಾ ಮಾತು ಕೇಳಿ ಖುಷಿ ಪಡ್ತಿದ್ರು.. ಆದ್ರೆ ಅಭಿಜ್ಞಾ ಮೀನು ಕೊಟ್ಟು ಪ್ರಪೋಸ್‌ ಮಾಡ್ಬೋದು ಅಂತಾ ಹೇಳಿದ್ದಾರೆ.

ಹೌದು, ಇಲ್ಲೆಲ್ಲಾ ಹುಡುಗರು ಹುಡುಗಿಯರಿಗೆ ಪ್ರಪೋಸ್ ಮಾಡಲು, ಅಥವಾ ಇಂಪ್ರೆಸ್ ಮಾಡಲು ರೋಸ್, ಚಾಕ್ಲೆಟ್ ಎಲ್ಲಾ ಕೊಡ್ತಾರೆ, ಆದರೆ ನಮ್ ಕಡೆ ಹಾಗಲ್ಲ, ಮೀನು ಕೊಟ್ರೆ ಮುಗಿತು ಅಂದಿದ್ದಾರೆ. ಇಲ್ಲೆಲ್ಲ ಐ ಲವ್ ಯೂ ಅಂದ್ರೆ ಮುಗೀತು, ಆದ್ರೆ ನಮ್ ಕಡೆ ಹೇ ಭಾಗಿ ನಿನಗಾಗಿ ಮೀನು ತಂದಿದ್ದೇನೆ, ಸಾರು ಮಾಡಿಡು, ರಾತ್ರಿ ಬೇಗ ಬರ್ತೇನೆ ಅಂತ ಕುಡ್ಲದ ಜನ ಹೇಳ್ತಾರೆ.. ಭಾಗಿ ಮನೆಯಲ್ಲಿ ಮೀನು ಸಾರು ಅಂದ್ರೆ, ಇವತ್ತೇನೋ ಸ್ಪೆಷಲ್ ಇದೆ ಅಂತ ಅಂದ್ಕೊಳ್ಬೇಕು ಅಂತಾ ಹೇಳಿದ್ದಾರೆ ಅಭಿಜ್ಞಾ..

ಇನ್ನು ಅಭಿಜ್ಞಾ ಹೇಳಿದಾ ಕಥೆಯನ್ನೆಲ್ಲಾ ಕೇಳಿ,  ಕ್ರೇಜಿಸ್ಟಾರ್ ರವಿಚಂದ್ರನ್, ಯಾವ ಯಾವ ಮೀನು ಕೊಟ್ರೆ ಅದರ ಅರ್ಥ ಏನು ಎಂದು ಕೇಳಿದ್ದಾರೆ. ಅದಕ್ಕೆ ಅಭಿಜ್ಞಾ, ಬಂಗುಡೆ ಮೀನು ಕೊಟ್ರೆ, ಬರೀ ರೋಮ್ಯಾನ್ಸ್ ಅಷ್ಟೇ ಎಂದಿದ್ದಾರೆ. ಇನ್ನು ಕಾಣೆ ಫಿಶ್ ಕೊಟ್ರೆ ಸ್ವಲ್ಪ ಜಾಸ್ತಿನೇ ರೊಮ್ಯಾನ್ಸ್ ಅಂತೆ, ಪಾಂಪ್ಲೆಟ್ ಮೀನು ಕೊಟ್ರೆ ಲವ್ ಮಾಡೋದು ಅಂತ ಅರ್ಥ ಅಂತೆ, ಇನ್ನು ಏಡಿಯನ್ನು ತಂದು ಕೊಟ್ರೆ ಫಸ್ಟ್ ಸೆಕೆಂಡ್ ಸ್ಟೇಜ್ ಏನೂ ಇಲ್ಲ, ಡೈರೆಕ್ಟ್ ಎಂದಿದ್ದಾರೆ ಅಭಿಜ್ಞಾ, ಅದರ ಜೊತೆಗೆ, ನಾನು ಸುಮ್ಮನೆ ಹೇಳಿದ್ದು, ಇನ್ನು ನಮ್ಮ ಊರಿನವರು ನೋಡಿ, ಇವಳಿಗೇನು ಮಾಡೋದಕ್ಕೆ ಬೇರೆ ಕೆಲ್ಸ ಇಲ್ವಾ ಅಂತ ಹೇಳ್ಬೇಡಿ ಎಂದಿದ್ದಾರೆ. ಆದ್ರೀಗ ಮಂಗಳೂರಿಗರು ಮಾತ್ರ ಅಭಿಜ್ಞಾ ವಿರುದ್ಧ ಕಿಡಿಕಾರಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡಿ ಅಸಮಧಾನ ಹೊರ ಹಾಕಿದ್ದಾರೆ.

ಪೋಲಿ ಪೋಲಿ ಮಾತನಾಡಲು ನಿಮ್ಗೆ ಮೀನೇ ಟಾಪಿಕ್‌ ಆಯ್ತಾ? ರಿಯಾಲಿಟಿ ಶೋ ಅಂದ್ಮೇಲೆ.. ಒಂಚೂರಾದ್ರೂ ವಾಸ್ತವದಿಂದ ಕೂಡಿರ್ಬೇಕು.. ಅದು ಬಿಟ್ಟು ಪೇಮಸ್‌ ಆಗ್ಬೇಕು ಅಂತಾ ಬಾಯಿಗೆ ಬಂದಂಗೆ ಮಾತಾಡ್ಬಾರ್ದು ಅಂತಾ ಹೇಳಿದ್ರೆ, ಮತ್ತೆ ಕೆಲವರು ಅಭಿಜ್ಞಾ ಮಾತನಾಡೋವಾಗ ಮಂಗಳೂರವರ ಹಾಗೆ ಕಾಣಲ್ವಲ್ಲ.. ಯಾರಾದ್ರು ಮಂಗೂರಿಗರು ಬಂಗುಡೆ ಮೀನಿಗೆ ಬಾಂಗ್‌ ಡೇ ಮೀನು ಅನ್ನುತ್ತಾರ? ತುಳುವರು ಬಾಂಗ್ಡೇ ಅನ್ನಲ್ಲ.. ಬಂಗುಡೆ ಅನ್ನುವುದು.. ಇವ್ರು ಹೇಳೋದೆಲ್ಲಾ ಸುಳ್ಳು.. ಫಿಲ್ಮ್‌ ನಲ್ಲಿ ಮಾತ್ರ ಇಂತದ್ದು ತೋರಿಸ್ತಾರೆ.. ಬಟ್‌ ತುಳುನಾಡಲ್ಲಿ ಇದೆಲ್ಲಾ ಇಲ್ಲ.. ಫೇಮಸ್‌ ಆಗೋದಿಕ್ಕೋಸ್ಕರ ಸುಳ್ಳು ಬಿಡ್ತಿದ್ದಾರೆ.. ಅಂತಾ ಕಾಮೆಂಟ್‌ ಮಾಡಿದ್ದಾರೆ.. ಇನ್ನೂಕೆಲವರು, ಈಕೆ ಮೂಲತ ಮಂಗಳೂರು ಅಲ್ಲವೇ ಅಲ್ಲ ಅಂತ ಕಾಣುತ್ತೆ.. ಮೀನು ಕೊಟ್ಟು ಮಂಗಳೂರು ಜನ ಲವು ಮಾಡುತ್ತಾರೆ ಅನ್ನೋದು ತಪ್ಪು ಕಲ್ಪನೆ.. ಅದು ಕೇವಲ ಮಾತಿಗಾಗಿ ಮಾತ್ರ ಹಾಗೆ ಹೇಳ್ತಾರೆ.. ಲವ್ ಸುದ್ದಿ ಇಲ್ಲಿ ಬರೋದಿಲ್ಲ.. ಬಾಯಲ್ಲಿ ಪ್ರೊಪೋಸ್ ಮಾಡ್ತಾರೆ ಅಥವಾ ಹೂವಿನ ಮೂಲಕವೇ ಪ್ರೊಪೋಸ್ ಮಾಡ್ಬಹುದು.. ಈಕೆ ತಿಳಿಯದೆ ಏನೇನೋ ಹೇಳಿರಬಹುದು. ಈ ಸೋಷಿಯಲ್ ಮೀಡಿಯಾಗಳಲ್ಲಿ ಈಗಿನ ಜನರೇಷನ್ ನ ಮಕ್ಕಳು ತಪ್ಪಾಗಿ ಹೇಳಿಕೊಂಡು ಬಂದು ಅದು ಪ್ರಚಾರ ಆಗಿ.. ಆಯಾ ಪ್ರದೇಶದ ಕಲ್ಚರ್‌ ತನ್ನ ಮೂಲತ್ವ ವನ್ನೇ ಕಳಕೊಂಡಿದೆ.. ಆಚಾರ, ವಿಚಾರ ಗೊತ್ತಿಲ್ಲ ಅಂದ್ರೆ  ಸುಮ್ನೆ ಇರ್ಬೇಕು.. ಅಭಿಜ್ಞಾ ಮಾತಾಡಿದ್ದೆಲ್ಲ ಸುಳ್ಳು.. ಬೇಕಾದ್ರೆ ಮೀನು ತಿನ್ನುವವರ ಹತ್ತಿರ ಕೇಳಿನೋಡಿ ಅಂತಾ ಹೇಳಿದ್ದಾರೆ.

Shwetha M

Leave a Reply

Your email address will not be published. Required fields are marked *