ಕ್ಯಾಪ್ ಕಂಪಲ್ಸರಿ.. ಫ್ಯಾಮಿಲಿಗಿಲ್ಲ ಎಂಟ್ರಿ – 2025ರ IPLಗೆ ಹೊಸ ರೂಲ್ಸ್!
ಕಂಡೀಷನ್ಸ್ ಹಾಕಿದ್ದೇಕೆ BCCI?

ಕ್ಯಾಪ್ ಕಂಪಲ್ಸರಿ.. ಫ್ಯಾಮಿಲಿಗಿಲ್ಲ ಎಂಟ್ರಿ – 2025ರ IPLಗೆ ಹೊಸ ರೂಲ್ಸ್!ಕಂಡೀಷನ್ಸ್ ಹಾಕಿದ್ದೇಕೆ BCCI?

2025ರ ಐಪಿಎಲ್ ಆರಂಭಕ್ಕೂ ಮುನ್ನ ಬಿಸಿಸಿಐ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇತ್ತೀಚೆಗೆ ಇದೇ ನಿಯಮಗಳನ್ನ ಭಾರತೀಯ ತಂಡದಲ್ಲೂ ಜಾರಿಗೆ ತರಲಾಗಿತ್ತು. ಅದೇ ನಿಯಮಗಳನ್ನೇ ಬಹುತೇಕ ಐಪಿಎಲ್‌ನ ಎಲ್ಲಾ ಫ್ರಾಂಚೈಸಿಗಳಿಗೂ ವಿಸ್ತರಿಸಿದೆ. ಆಟಗಾರರು ಮತ್ತು ಟೀಂ ಪರ್ಫಾಮೆನ್ಸ್​ನ ಮತ್ತಷ್ಟು ಇಂಪ್ರೂವ್ ಮಾಡಲು ಇಂಥಾದ್ದೊಂದು ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ : ಮುಂಬೈ & ಚೆನ್ನೈ IPL ಕಿಂಗ್ಸ್ – 17 ಸೀಸನ್.. ಟ್ರೋಫಿ ಗೆದ್ದವರೆಷ್ಟು?

2025ರ ಐಪಿಎಲ್ ಗೆ ಹೊಸ ರೂಲ್ಸ್!

ಒಂದು ತಂಡದ ಅಭ್ಯಾಸದ ವಿಕೆಟ್ ಮತ್ತೊಬ್ಬರು ಬಳಸುವಂತಿಲ್ಲ

ಪಂದ್ಯ ನಡೆಯುವ ದಿನ ಯಾವುದೇ ತಂಡಕ್ಕೆ ಅಭ್ಯಾಸಕ್ಕೆ ಅನುಮತಿ ಇಲ್ಲ

ಪಂದ್ಯದ ದಿನದಂದು ಯಾವುದೇ ಫಿಟ್‌ ನೆಸ್ ಪರೀಕ್ಷೆ ನಡೆಯುವುದಿಲ್ಲ

ಡ್ರೆಸ್ಸಿಂಗ್ ಕೊಠಡಿ ಮತ್ತು ಆಟದ ಮೈದಾನಕ್ಕೆ ಮಾನ್ಯತೆ ಪಡೆದ ಸಿಬ್ಬಂದಿ

ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಬೇರೆ ವಾಹನದಲ್ಲಿ ಪ್ರಯಾಣ

ಪ್ರಾಕ್ಟೀಸ್​​ಗೆ ಬರುವ ಆಟಗಾರರು ತಂಡದ ಬಸ್ ಅನ್ನು ಮಾತ್ರ ಬಳಸಬಹುದು

ಆಟಗಾರರು ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಧರಿಸಬೇಕು

ಅಟ್​ಲೀಸ್ಟ್  ಕ್ಯಾಪ್ ಧರಿಸಿರುವುದು ಪ್ರಸಾರ ಆಗುವವರೆಗಾದ್ರೂ ಬಳಕೆ

ಪಂದ್ಯ ಮುಗಿದ್ಮೇಲೆ ಪ್ರೆಸೆಂಟೇಷನ್ ವೇಳೆ ಸ್ಲೀವ್​ ಲೆಸ್ ಜೆರ್ಸಿ ಹಾಕುವಂತಿಲ್ಲ

ತಂಡದ ವೈದ್ಯರು ಸೇರಿದಂತೆ 12 ಮಾನ್ಯತೆ ಪಡೆದ ಸಹಾಯಕ ಸಿಬ್ಬಂದಿ

ಜೆರ್ಸಿ ಸಂಖ್ಯೆಗಳಲ್ಲಿ ಬದಲಾವಣೆಯಿದ್ದಲ್ಲಿ  24 ಗಂಟೆಗಳ ಮುಂಚಿತವಾಗಿ ತಿಳಿಸಬೇಕು

ಹೀಗೆ 2025ರ ಐಪಿಎಲ್​ಗೂ ಮುನ್ನ ಬಿಸಿಸಿಐ ಕಟ್ಟುನಿಟ್ಟಿನ ರೂಲ್ಸ್ ತಂದಿದೆ. ಇದೆಲ್ಲದ್ರ ನಡುವೆ ಉದ್ಘಾಟನಾ ಪಂದ್ಯಕ್ಕೂ ಅದ್ಧೂರಿ ತಯಾರಿಯೂ ನಡೆದಿದೆ. ಐಪಿಎಲ್-2025ರ ಉದ್ಘಾಟನಾ ಸಮಾರಂಭ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಜೆ 6 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್‌ನ ಸೂಪರ್ ಸ್ಟಾರ್ಸ್ ಪ್ರದರ್ಶನ ನೀಡ್ತಾರೆ. ದೀಪಿಕಾ ಪಡುಕೋಣೆ, ಅರ್ಜಿತ್ ಸಿಂಗ್ ಪರ್ಫಾಮ್ ಮಾಡೋ ನಿರೀಕ್ಷೆ ಇದೆ. ಹಾಗೇ ಎಲ್ಲಾ ತಂಡಗಳ ಕ್ಯಾಪ್ಟನ್ಸ್ ಕೂಡ ಹಾಜರಿರಲಿದ್ದು ಫೋಟೋಶೂಟ್ ಕೂಡ ನಡೆಯಲಿದೆ. ಈಗಾಗ್ಲೇ ಮೊದಲ ಪಂದ್ಯದ ಟಿಕೆಟ್ ಮಾರಾಟವಾಗ್ತಿವೆ. ಈ ಟಿಕೆಟ್​ಗಳೇ ಉದ್ಘಾಟನಾ ಸಮಾರಂಭದ ಟಿಕೆಟ್ ಕೂಡ ಆಗಿರುತ್ತದೆ. KKR vs RCB IPL 2025 ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಮಾರಾಟಕ್ಕಿವೆ. ಅಭಿಮಾನಿಗಳು BookMyShowನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಒಂದು ಟಿಕೆಟ್​ನ ಕನಿಷ್ಠ ಬೆಲೆ ಪ್ರಸ್ತುತ 3,500 ರೂಪಾಯಿ ಆಗಿದೆ. ಮುಂದಿನ ದಿನಗಳ ಬೆಲೆ ಹೆಚ್ಚಾದರೂ ಅಚ್ಚರಿ ಇಲ್ಲ.

Shantha Kumari

Leave a Reply

Your email address will not be published. Required fields are marked *