ಲವ್ವಲ್ಲಿ ಬಿದ್ದ ವಾಷಿಂಗ್ಟನ್ ಸುಂದರ್‌! – ಸುಂದರ್‌ ಮನ ಗೆದ್ದ ಸುಂದರಿ ಯಾರು?

ಲವ್ವಲ್ಲಿ ಬಿದ್ದ ವಾಷಿಂಗ್ಟನ್ ಸುಂದರ್‌! – ಸುಂದರ್‌ ಮನ ಗೆದ್ದ ಸುಂದರಿ ಯಾರು?

ಚಾಂಪಿಯನ್ಸ್ ಟ್ರೋಫಿ ಮುಗಿತು.. ಇದೀಗ ಐಪಿಎಲ್ ಫಿವರ್ ಶುರುವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನ 18ನೇ ಆವೃತ್ತಿಗೆ ಕೌಂಟ್ಡೌನ್ ಶುರುವಾಗಿದ್ದು, ಕ್ರಿಕೆಟ್ ಹಬ್ಬಕ್ಕಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ. ಇದ್ರ ನಡುವೆಯೇ ಸ್ಟಾರ್ ಪ್ಲೇಯರ್ ಒಬ್ರು ಪ್ರೀತಿಯಲ್ಲಿ ಬಿದ್ದಿರೋ ವಿಚಾರ ರಿವೀಲ್ ಆಗಿದೆ. ಆ ಪ್ಲೇಯರ್ ದುಬೈನಲ್ಲಿ ಡೇಟಿಂಗ್ ನಡೆಸ್ತಿದ್ದಾರೆಂತೆ.. ಆ ಪ್ಲೇಯರ್ ಯಾರೂ ಅಲ್ಲ. ವಾಷಿಂಗ್ಟನ್ ಸುಂದರ್.. ಇದೀಗ ಸುಂದರಿ ಜೊತೆ ಸುಂದರ್‌  ಸುತ್ತಾಡ್ತಿರೋ ಫೋಟೋ.. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

ಇದನ್ನೂ ಓದಿ: ಮುಂಬೈ & ಚೆನ್ನೈ IPL ಕಿಂಗ್ಸ್ – 17 ಸೀಸನ್.. ಟ್ರೋಫಿ ಗೆದ್ದವರೆಷ್ಟು?

ಟೀಮ್ ಇಂಡಿಯಾದ ಕ್ಯಾಂಪ್ ನಲ್ಲೀಗ ಪ್ರೀತಿ, ಪ್ರೇಮ ವಿಚಾರವೇ ಸದ್ದು ಮಾಡ್ತಿದೆ. ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಶಿಖರ್‌ ಧವನ್‌ ಮಿಸ್ಟ್ರಿ ಗರ್ಲ್ ಜೊತೆ ಕಾಣಿಸಿಕೊಂಡಿದ್ರು.. ಅದಾದ್ಮೇಲೆ ಚಹಲ್ ಕೂಡ ಸುಂದರವಾದ ಯುವತಿ ಜೊತೆ ಕಾಣಿಸಿಕೊಂಡಿದ್ರು.. ಶುಭ್ಮನ್ ಗಿಲ್ ಡೇಟಿಂಗ್ ವಿಚಾರ ಕೂಡ ಭಾರಿ ಸದ್ದು ಮಾಡ್ತಿದೆ. ಇದೀಗ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸರದಿ.. ಈ ವಾಷಿಂಗ್ಟನ್ ಸುಂದರ್ ಅವರ ಸುಂದರ ಪ್ರೇಮ್ ಕಹಾನಿ ಸದ್ಯ ಎಲ್ಲೆಡೆ ಚರ್ಚೆಯಾಗ್ತಿದೆ.. ದುಬೈನ ಕಾಫಿ ಶಾಪ್ನಲ್ಲಿ ಹುಡುಗಿಯೊಬ್ಬಳ ಜೊತೆಗೆ ಸುಂದರ್ ಕಾಣಿಸಿಕೊಂಡಿರೋ ವಿಡಿಯೋ ಸಖತ್ ವೈರಲ್ ಆಗಿದೆ. ಡೇಟಿಂಗ್ ರೂಮರ್ಸ್ ಬಿರುಗಾಳಿಯಂತೆ ಹಬ್ಬಿದೆ. ಇದೀಗ ಸುಂದರ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಅಂತಾ ಹೇಳಲಾಗ್ತಿದೆ.

ವಾಂಷಿಂಗ್ಟನ್ ಸುಂದರ್ ಜೊತೆ ದುಬೈನ ಕಾಫಿ ಶಾಪ್ ನಲ್ಲಿ ಕಾಣಿಸಿಕೊಂಡ ಯುವತಿ ಸಾಹಿಬಾ ಬಾಲಿ. ಈಕೆ ಬಾಲಿವುಡ್ ನಟಿ ಹಾಗೂ ಸ್ಪೋರ್ಟ್ಸ್ ಪ್ರೆಸೆಂಟರ್.. ಈ ಸಾಹಿಬಾ ಬಾಲಿಯ ಜರ್ನಿ ಸಖತ್ ಇಂಟರೆಸ್ಟಿಂಗ್ ಆಗಿದೆ. ಈಕೆಗೆ ಆರಂಭದಲ್ಲಿ ಆಸಕ್ತಿ ಇದ್ದಿದ್ದು ಬ್ಯುಸಿನೆಸ್ ಮೇಲೆ. ಹೀಗಾಗಿ ಡೆಲ್ಲಿ ಯುನಿವರ್ಸಿಟಿಯಲ್ಲಿ ಎಕಾನಾಮಿಕ್ಸ್ ಡಿಗ್ರಿ ಪಡೆದ ಸಾಹಿಬಾ, ಡರ್‌ಹ್ಯಾಮ್‌ ಯುನಿವರ್ಸಿಟಿ ಆಫ್ ಬ್ಯುಸಿನೆಸ್ ಸ್ಕೂಲ್ನಲ್ಲಿ ಮಾಸ್ಟರ್ಸ್ ಡಿಗ್ರಿ ಕಂಪ್ಲೀಟ್ ಮಾಡ್ತಾರೆ. ಆ ಬಳಿಕ ಜೋಮ್ಯಾಟೋ  ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.. ಅಲ್ಲಿ ಬ್ರ್ಯಾಂಡ್ ಮ್ಯಾನೇಜರ್ ಆಗಿ ಕೆಲ್ಸ ಮಾಡಿದ್ರು.. ಸುಮಾರು ಎರಡುವರೆ ವರ್ಷ ಜೊಮ್ಯಾಟೋದಲ್ಲಿ ಕೆಲಸ ಮಾಡಿದ ಸಾಹಿಬಾ ಬಾಲಿಗೆ ಅದೇನಾಯ್ತೋ ಗೊತ್ತಿಲ್ಲ. ಸಡನ್ ಆಗಿ ಆ್ಯಕ್ಟಿಂಗ್ ಮೇಲೆ ಇಂಟರೆಸ್ಟ್ ಹುಟ್ಟಿಕೊಳ್ಳುತ್ತೆ… ಹೀಗಾಗಿ ಜೊಮ್ಯಾಟೋದಲ್ಲಿ ಕೆಲಸ ಬಿಟ್ಟು ಬಾಲಿವುಡ್ ಅಂಗಳದಲ್ಲಿ ಅದೃಷ್ಟ ಪರೀಕ್ಷೆ ಇಳಿತಾರೆ. ಬಾಲಿವುಡ್ ಅಂಗಳದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಕಬೀರ್ ಸಿಂಗ್, ಸುಲ್ತಾನ್ ಚಿತ್ರಗಳಲ್ಲಿ ಸಾಹಿಬಾ, ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡಿದ್ದರು. ಲೈಲಾ ಮಜ್ನು, ತಾನಾವ್, ಡಿಯರ್ ಮಾಯಾ ಸೇರಿದಂತೆ ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಲವು ಮ್ಯೂಸಿಕ್ ಆಲ್ಬಂಗಳಲ್ಲಿಯೂ ಸಾಹಿಬಾ ಕಾಣಿಸಿಕೊಂಡಿದ್ದಾರೆ. ಅದಾದ ಬಳಿಕ ಸಾಹಿಬಾ ನಟನಾ ಕ್ಷೇತ್ರಕ್ಕೆ ಕೂಡ ಗುಡ್‌ ಬೈ ಹೇಳಿದ್ರು… ಅಲ್ಲಿಂದ ನಂತರ ಆಕೆ ಶಿಫ್ಟ್‌  ಆಗಿದ್ದು ಸ್ಪೋರ್ಟ್ಸ್ ಪ್ರೆಸೆಂಟರ್ ಆಗಿ.. ಸ್ಪೋರ್ಟ್ಸ್ ಚಾನೆಲ್ ವೊಂದರಲ್ಲಿ ಕೆಲಸಕ್ಕೆ ಸೇರಿದ ಸಾಹಿಬಾ ಬಾಲಿ, ಕ್ರಿಕೆಟ್ ಪಂದ್ಯದ ವೇಳೆ ಮೈದಾನದಲ್ಲಿ ಕಾಣಿಸಿಕೊಳ್ತಾರೆ.. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪರ ಸುಂದರ್ ಆಡಿದ್ರೆ, ಸಾಹಿಬಾ ಬಾಲಿ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರೆಸೆಂಟರ್ ಆಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ರು.. ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಫ್ರೀ  ಟೈಮ್ ನಲ್ಲಿ ಇವರಿಬ್ರು ದುಬೈನಲ್ಲಿ ಸುತ್ತಾಡಿದ್ದು ಕಂಡುಬಂದಿದೆ.

ಅಂದ್ಹಾಗೆ,  ಇವರಿಬ್ಬರ ಪರಿಚಯಕ್ಕೆ ವೇದಿಕೆಯಾಗಿದ್ದು ಆಸ್ಟ್ರೇಲಿಯಾ ಪ್ರವಾಸ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆ ಸುಂದರ್ ತಂಡದೊಂದಿಗಿದ್ರೆ, ಬ್ರಾಡ್ಕಾಸ್ಟಿಂಗ್ ಟೀಮ್ ಜೊತೆಗೆ ಸಾಹಿಬಾ ಇದ್ದರು. ಈ ಪ್ರವಾಸದ ವೇಳೆಯೇ ಇವರಿಬ್ಬರ ನಡುವೆ ಪರಿಚಯವಾಗಿ, ಸ್ನೇಹ ಶುರುವಾಗಿದ್ದು ಎಂಬ ಸುದ್ದಿಯಿದೆ. ಆ ಸ್ನೇಹವೇ ಇದೀಗ ಪ್ರೀತಿಯ ರೂಪ ಪಡೆದುಕೊಂಡಿದೆ ಎನ್ನಲಾಗ್ತಿದೆ. ಆದ್ರೆ ಸದ್ಯಕ್ಕಿದು ಗಾಸಿಪ್ ರೂಪದಲ್ಲಿದ್ರೂ, ಈ ಲವ್ ಕಹಾನಿಗೆ ಅಧಿಕೃತ ಮುದ್ರೆ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗ್ತಿದೆ. ಹಾಗೇನಾದ್ರೂ ಇವರು ಮದುವೆ ಆದ್ರು  ಅಂದ್ರೆ ಜಸ್‌ಪ್ರೀತ್‌ ಬುಮ್ರಾ – ಸಂಜನಾ ಸಾಲಿಗೆ ಸೇರಲಿದ್ದಾರೆ..

Shwetha M

Leave a Reply

Your email address will not be published. Required fields are marked *