ಏಕದಿನ ಮತ್ತು ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಗೆಲ್ತಾರಾ ರೋಹಿತ್ – ನಿವೃತ್ತಿ ಬಗ್ಗೆ ಮತ್ತೆ ಚರ್ಚೆ

ಏಕದಿನ ಮತ್ತು ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಗೆಲ್ತಾರಾ ರೋಹಿತ್ – ನಿವೃತ್ತಿ ಬಗ್ಗೆ ಮತ್ತೆ ಚರ್ಚೆ

ವಿಶ್ವಕ್ರಿಕೆಟ್​​ನಲ್ಲಿ ಟೀಂ ಇಂಡಿಯಾವನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿರುವ ರೋಹಿತ್ ಶರ್ಮಾ ಬ್ಯಾಕ್ ಟು ಬ್ಯಾಕ್ ಎರಡು ಐಸಿಸಿ ಟ್ರೋಫಿಗಳನ್ನ ಭಾರತಕ್ಕೆ ಗೆದ್ದು ಕೊಟ್ಟು ದಾಖಲೆ ಬರೆದಿದ್ದಾರೆ. ಆದ್ರೆ ಹಿಟ್​​ಮ್ಯಾನ್​ರ ಈ ಸಕ್ಸಸ್​​ಫುಲ್ ಜರ್ನಿ ಹಿಂದೆ ದೊಡ್ಡ ಸ್ಟ್ರಗಲ್ ಇದೆ. ಸಾಲು ಸಾಲು ಸೋಲುಗಳಿಂದ ಕಲಿತ ಪಾಠವೂ ಇದೆ. 2022ರ ಟಿ20 ವಿಶ್ವಕಪ್, 2023ರ ಏಕದಿನ ವಿಶ್ವಕಪ್, ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಸೋಲುಗಳನ್ನ ಕಂಡಿತ್ತು. ಕೊನೇ ಕ್ಷಣದಲ್ಲಿ ಟ್ರೋಫಿ ಕಳ್ಕೊಂಡಿದ್ದ ಆ ನೋವು ರೋಹಿತ್ ಮತ್ತು ಇಡೀ ತಂಡವನ್ನ ಕಾಡಿತ್ತು. ಕೊನೆಗೇ ಅದೇ ಛಲ ಸೋಲೇ ಕಾಣದೇ ಟಿ-20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಟೈಟಲ್ ಎತ್ತಿ ಹಿಡಿಯುವಂತೆ ಮಾಡಿದೆ. ರೋಹಿತ್ ಕ್ಯಾಪ್ಟನ್ಸಿಯಲ್ಲಿ ಇಡೀ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಇದೇ ಕಾರಣಕ್ಕೆ ರೋಹಿತ್ ಮತ್ತಷ್ಟು ವರ್ಷ ಭಾರತ ತಂಡವನ್ನ ಮುನ್ನಡೆಸಲಿ ಅಂತಾ ವಿಶ್ ಮಾಡ್ತಿದ್ದಾರೆ.

ಇದನ್ನೂ ಓದಿ : ದ್ವಿಪಕ್ಷೀಯ ಸರಣಿಗಳನ್ನ ಆಡುವಂತೆ ಭಾರತಕ್ಕೆ ಪಾಕ್ ಸವಾಲ್ – ಪಂಥಾಹ್ವಾನ ಒಪ್ಪುತ್ತಾ ಟೀಂ ಇಂಡಿಯಾ?

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಕಳಪೆ ಫಾರ್ಮ್​ನಿಂದ ಬಳಲ್ತಿದ್ರು. ಆಡಿದ ಮೂರು ಪಂದ್ಯಗಳಲ್ಲೂ ಹೇಳಿಕೊಳ್ಳುವಂಥ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ರೋಹಿತ್ ಕ್ರಿಕೆಟ್​​ಗೆ ಗುಡ್ ಬೈ ಹೇಳೋದೇ ಬೆಸ್ಟ್ ಅಂತೆಲ್ಲಾ ಹೇಳಲಾಗ್ತಿತ್ತು. ಸಾಕಷ್ಟು ಮಾಜಿ ಕ್ರಿಕೆಟಿಗರು ಕೂಡ ರೋಹಿತ್ ಶರ್ಮಾ ಯಂಗ್​ಸ್ಟರ್ಸ್​​ಗೆ ಚಾನ್ಸ್ ಕೊಟ್ಟು ನಿವೃತ್ತಿಯಾದ್ರೆ ಒಳ್ಳೇದು ಅಂದಿದ್ರು. ಅಲ್ದೇ ಚಾಂಪಿಯನ್ಸ್ ಟ್ರೋಫಿಯೇ ಕೊನೇ. ಬಿಸಿಸಿಐ ಕೂಡ ರೋಹಿತ್ ವಿದಾಯಕ್ಕೆ ಟೈಂ ಫಿಕ್ಸ್ ಮಾಡಿದೆ ಎಂದು ರಿಪೋರ್ಟ್​ಗಳು ಹೊರ ಬಿದ್ದಿದ್ವು. ಆದ್ರೆ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನಲ್ಲಿ 5 ಇನಿಂಗ್ಸ್‌ಗಳಲ್ಲಿ 180 ರನ್ ಕಲೆ ಹಾಕಿದ್ರು. ಅದ್ರಲ್ಲೂ ಫೈನಲ್ ಮ್ಯಾಚ್​​ನಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಭಾರತದ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ರು. ಟೀಂ ಹಾಗೇ ರೋಹಿತ್ ಪರ್ಫಾಮೆನ್ಸ್ ನೋಡಿ ಸದ್ಯಕ್ಕಂತೂ ಯಾರೂ ರೋಹಿತ್ ಶರ್ಮಾ ನಿವೃತ್ತಿಯಾಗ್ಲಿ ಅಂತಾ ಕೇಳ್ತಿಲ್ಲ. ಇನ್ನಷ್ಟು ಕಾಲ ಆಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಸೋಲಿನ ಮೂಲಕ 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಆದರೆ, 2025-27ರ ಸೈಕಲ್​​ನಲ್ಲಿ ಟೆಸ್ಟ್ ಚಾಂಪಿಯನ್‌ಶಿಪ್ ಗೆಲುವಿಗೆ ರೋಹಿತ್ ಶರ್ಮಾ ತಯಾರಿ ಆರಂಭಿಸಿದ್ದಾರೆ. ಹಾಗೇ 2023ರ ಏಕದಿನ ವಿಶ್ವಕಪ್​ನಲ್ಲಿ ಫೈನಲ್​ನಲ್ಲಿ ಟ್ರೋಫಿ ಕಳ್ಕೊಂಡಿರೋ ಭಾರತ 2027ರ ಏಕದಿನ ವಿಶ್ವಕಪ್‌ನಲ್ಲಿ ಗೆದ್ದೇ ಗೆಲ್ಬೇಕು ಅನ್ನೋ ಕಾನ್ಫಿಡೆನ್ಸ್​​ನಲ್ಲಿದ್ದಾರೆ. ಹೀಗಾಗಿ ಈ ಎರಡೂ ಟೈಟಲ್​ಗಳನ್ನ ಗೆಲ್ಲೋವರೆಗೂ ಅಂದ್ರೆ 2027ರವರೆಗೆ ರೋಹಿತ್ ಶರ್ಮಾ ಅವ್ರೇ ನಾಯಕನಾಗಿ ಕಂಟಿನ್ಯೂ ಆಗೋ ಸಾಧ್ಯತೆ ಇದೆ.  ಏಕದಿನ ವಿಶ್ವಕಪ್ ಮತ್ತು ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಲಿ ಅನ್ನೋದು ಅಭಿಮಾನಿಗಳ ಆಶಯ ಕೂಡ ಆಗಿದೆ. ಸದ್ಯ 37 ವರ್ಷದ ರೋಹಿತ್ ಶರ್ಮಾ, 2027ರ ವೇಳೆಗೆ 39 ವರ್ಷಕ್ಕೆ ಕಾಲಿಡಲಿದ್ದಾರೆ. ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾಗಿರೋದ್ರಿಂದ ಫ್ರೆಶರ್ ಸ್ವಲ್ಪ ಕಡಿಮೆಯಾಗಿದೆ. ಆದ್ರೆ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಫಾರ್ಮ್ ಮತ್ತು ಫಿಟ್‌ನೆಸ್ ಕಾಯ್ದುಕೊಳ್ಳುವ ಸವಾಲೂ ಇದೆ.

Shantha Kumari