ಗಗನಾಗೆ ತಾಳಿ ಕಟ್ಟಿದ ಡ್ರೋನ್ ಪ್ರತಾಪ್! – ಸ್ಟೇಜ್ ಮೇಲೆಯೇ ನಡೆದು ಹೋಯ್ತು ಮದುವೆ!

ಡ್ರೋನ್ ಪ್ರತಾಪ್.. ವಿವಾದಗಳಿಂದಲೇ ಸುದ್ದಿಯಾಗಿದ್ದ ಈತ ಬಿಗ್ ಬಾಸ್ ಗೆ ಬಂದ್ಮೇಲೆ ಒಳ್ಳೆ ಹುಡುಗ ಅಂತಾ ಅನ್ನಿಕೊಂಡ್ರು.. ಬಳಿಕ ಒಂದಾದ ಮೇಲೊಂದು ರಿಯಾಲಿಟಿ ಶೋನಲ್ಲೂ ಕಾಣಿಸಿಕೊಳ್ತಿದ್ದಾರೆ. ಇದೀಗ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಗೆ ಎಂಟ್ರಿ ಕೊಟ್ಟಿದ್ದು, ಡ್ರೋನ್ ಗೆ ಗಗನಾ ಜೋಡಿಯಾಗಿದ್ದಾರೆ. ಸದಾ ವಿವಾದಗಳಿಂದ ಸುದ್ದಿಯಾಗ್ತಿದ್ದ ಡ್ರೋನ್ ಭರ್ಜರಿ ಬ್ಯಾಚುಲರ್ಸ್ ಗೆ ಎಂಟ್ರಿ ಕೊಡ್ತಿದ್ದಂತೆ, ಮಹಾನಟಿ ಗಗನಾ ಜೊತೆ ಫುಲ್ ರೊಮ್ಯಾಂಟಿಕ್ ಆಗಿದ್ದಾರೆ. ಮೊನ್ನೆಯಷ್ಟೇ ಬಿಗ್ ಸರ್ಪ್ರೈಸ್ ಕೊಟ್ಟಿದ್ದ ಡ್ರೋನ್ ಈಗ ಗಗನಾಗೆ ತಾಳಿ ಕಟ್ಟಿದ್ದಾರೆ.. ಇದ್ರಿಂದ ರವಿಚಂದ್ರನ್.. ಹಾಗೂ ರಚಿತಾರಾಮ್ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಕೈಕೊಟ್ಟ ಮಷಿನ್- ಸುನಿತಾ ವಿಲಿಯಮ್ಸ್ ಭೂಮಿಗೆ ಬರೋದು ಮತ್ತೆ ವಿಳಂಬ!
ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಆರಂಭದಲ್ಲೇ ಸಕ್ಸಸ್ ಕಂಡಿದೆ. ಬ್ಯಾಚುಲರ್ಸ್ ಈಗಾಗಲೇ ತಮಗೆ ಸರಿಹೊಂದುವ ಬ್ಯಾಚುಲರ್ಸ್ ಅನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಡ್ರೋನ್ ಪ್ರತಾಪ್ ಮಹಾನಟಿ ಖ್ಯಾತಿಯ ಗಗನಾಳನ್ನ ಮೆಂಟರ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಸದಾ ಸಿಂಪಲ್ ಆಗಿ, ಮಯಗ್ದನಂತೆ ನಟಿಸ್ತಿರ್ತಿದ್ದ ಡ್ರೋನ್, ಭರ್ಜರಿ ಬ್ಯಾಚುಲರ್ಸ್ ಗೆ ಎಂಟ್ರಿ ಕೊಡ್ತಿದ್ದಂತೆ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಡ್ರೆಸ್ಸಿಂಗ್ ಸ್ಟೈಲ್, ಹೇರ್ ಸ್ಟೈಲ್ ಕೂಡ ಚೇಂಜ್ ಆಗಿದೆ. ಮೊನ್ನೆಯಷ್ಟೇ ಸರ್ಪ್ರೈಸ್ ರೌಂಡ್ನಲ್ಲಿ ಗಗನಾಗೆ ಭರ್ಜರಿಯಾಗೇ ಸರ್ಪ್ರೈಸ್ ಕೊಟ್ಟಿದ್ರು.. ಹೆಲಿಕಾಪ್ಟರ್ನಲ್ಲಿ ಕರ್ಕೊಂಡು ಹೋಗಿ ಸಾವಿರ ಅಡಿ ಎತ್ತರದಲ್ಲಿ ಗಗನಾಗೆ ಅರಶಿನ ಕುಂಕುಮ ಕೊಟ್ಟಿದ್ರು.. ಅದಾದ್ಮೇಲೆ, ಸ್ಟೇಜ್ ನಲ್ಲಿ ಎಲ್ಲರ ಮುಂದೆ ಗಗನಾಗೆ ಕಾಲ್ಗೆಜ್ಜೆ ಕೊಡಿಸಿ ಪ್ರಪೋಸ್ ಮಾಡಿದ್ರು.. ಇದೀಗ ಡ್ರೋನ್ ಗಗನಾಗೆ ತಾಳಿ ಕಟ್ಟಿದ್ದಾರೆ..
ಭರ್ಜರಿ ಬ್ಯಾಚುಲರ್ಸ್ನ ಈ ವಾರದ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ Love Recreation Round ಟಾಸ್ಕ್ ನೀಡಲಾಗಿದೆ. ಅದ್ರಂತೆ ಎಲ್ಲಾ ಜೋಡಿಗಳು ಒಂದೊಂದು ಸಿನಿಮಾದ ಸೀನ್ ಹಾಗೇ ಹಾಡಿಗೆ ಪರ್ಫಾಮೆನ್ಸ್ ನೀಡಬೇಕಿತ್ತು.. ಡ್ರೋನ್ ಹಾಗೂ ಗಗನಾ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರಾಮಾಚಾರಿ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆಕಾಶದಾಗೆ ಯಾರೋ ಮಾಯಗಾರನು ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.. ನಂದಿನಿ ಪಾತ್ರವನ್ನ ಗಗನಾ ಮಾಡಿದ್ರೆ, ರಾಮಾಚಾರಿಯಾಗಿ ಡ್ರೋನ್ ಪ್ರತಾಪ್ ಸ್ಟೇಜ್ಗೆ ಎಂಟ್ರಿಕೊಟ್ಟಿದ್ದಾರೆ.. ನಮ್ಮ ಅಣ್ಣಂದ್ರು ನಿನ್ಗೆ ಹೊಡಿಬಾರ್ದು ಅಂದ್ರೆ ನನಗೆ ಮೂರು ಗಂಟು ಹಾಕು ಅಂತಾ ಹೇಳಿದ್ದಾರೆ.. ಇದನ್ನ ಕಟ್ಟಿದ್ರೆ ಮದುವೆ ಆಗೋಗುತ್ತಾ ಅಂತಾ ಹೇಳಿ ಡ್ರೋನ್ ತಾಳಿ ಕಟ್ಟಿದ್ದಾರೆ.. ಬಳಿಕ ನೀನು ಕಟ್ಟಿರೋದು ತಾಳಿ ಕಣೋ ರಾಮಾಚಾರಿ ಅಂತಾ ಗಗನಾ ಸಖತ್ ಡೈಲಾಗ್ ಹೊಡಿದ್ದಾರೆ.. ಅದಕ್ಕೆ ಡ್ರೋನ್.. ನೀನು ನನ್ನ ಹೆಂಡ್ತಿನೂ ಅಲ್ಲ.. ನಾನು ನಿನ್ನ ಗಂಡನೂ ಅಲ್ಲ ಅಂತಾ ಹೇಳಿ ಅಲ್ಲಂದ ಓಡಿದ್ದಾರೆ.. ಇದನ್ನ ನೋಡಿ ಜಡ್ಜಸ್ ಶಾಕ್ ಆದ್ರೂ ರವಿಚಂದ್ರನ್ ಇವರ ಆಕ್ಟಿಂಗ್ ಗೆ ಭೇಷ್ ಅಂದಿದ್ದಾರೆ.. ಹುಚ್ಚನ ತರ ಆಕ್ಟ್ ಮಾಡೋದು ಸುಲಭ ಅಲ್ಲ.. ನಿಜವಾಗ್ಲೂ ಚೆನ್ನಾಗಿದೆ ಅಂತಾ ಹೇಳಿದ್ದಾರೆ.. ಇನ್ನು ರಚಿತಾ ರಾಮ್ ಕೂಡ ಗಗನಾ, ಡ್ರೋನ್ ಫರ್ಫಾಮೆನ್ಸ್ ಮೆಚ್ಚಿಕೊಂಡಿದ್ದಾರೆ..
ಇನ್ನು ಗಗನಾ, ಡ್ರೋನ್ ಪರ್ಫಾಮೆನ್ಸ್ ನೋಡಿದ ವೀಕ್ಷಕರು ಮಾತ್ರ ನಾನಾ ಕಾಮೆಂಟ್ ಮಾಡ್ತಿದ್ದಾರೆ.. ಗಗನಾ ಡ್ರೋನ್ ಫರ್ಫಾಮೆನ್ಸ್ ಚೆನ್ನಾಗೇ ಇದೆ.. ಆದ್ರೆ ನಮ್ಮ ಗಿಲ್ಲಿಗೆ ಯಾಕೆ ನೀವು ಇಷ್ಟೊಂದು ಉರಿಸ್ತೀರಾ.. ನೀವೂ ಏನೇ ಪರ್ಫಾಮೆನ್ಸ್ ನೀಡಿದ್ರೂ, ಗಗನಾ ಗಿಲ್ಲಿ ಜೋಡಿನೇ ನಮ್ಗೆ ಇಷ್ಟ ಆಗೋದು ಅಂತಾ ಕೆಲವರು ಕಾಮೆಂಟ್ ಮಾಡಿದ್ದಾರೆ.