ದ್ವಿಪಕ್ಷೀಯ ಸರಣಿಗಳನ್ನ ಆಡುವಂತೆ ಭಾರತಕ್ಕೆ ಪಾಕ್ ಸವಾಲ್ – ಪಂಥಾಹ್ವಾನ ಒಪ್ಪುತ್ತಾ ಟೀಂ ಇಂಡಿಯಾ?

29 ವರ್ಷಗಳ ಬಳಿಕ ಐಸಿಸಿ ಟೂರ್ನಿ ಆಯೋಜನೆ ಹೊಣೆ ಹೊತ್ತಿದ್ದ ಪಾಕಿಸ್ತಾನಕ್ಕೆ ಭಾರತ ಹೈಬ್ರಿಡ್ ಮಾದರಿ ಶಾಕ್ ಕೊಟ್ಟಿತ್ತು. ಲೀಗ್ ಹಂತದಲ್ಲಿ ಒಂದೂ ಪಂದ್ಯವನ್ನ ಗೆಲ್ಲದೆ ಹೊರಬಿದ್ದಿದ್ದ ಪಾಕಿಸ್ತಾನಕ್ಕೆ ಭಾರತ ಟ್ರೋಫಿ ಗೆದ್ದಿದ್ದನ್ನ ಅರಗಿಸಿಕೊಳ್ಳೋಕೂ ಆಗ್ತಿಲ್ಲ. ಅದ್ರಲ್ಲೂ ಪಾಕಿಸ್ತಾನದ ಮಾಜಿ ಆಟಗಾರರು ಭಾರತ ಸ್ಟ್ರಾಂಗ್ ಅಂತಾ ಒಪ್ಪಿಕೊಳ್ಬೇಕು ಅಂದ್ರೆ ನೀವು ಒಂದು ಚಾಲೆಂಜ್ಗೆ ರೆಡಿನಾ ಅಂತಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಕಪ್ ಸಿಗ್ಲಿಲ್ಲ.. ದುಡ್ಡೂ ಬರ್ಲಿಲ್ಲ – PAKಗೆ ಲಾಭಕ್ಕಿಂತ ನಷ್ಟವೇ ಆಯ್ತಾ?
ಭಾರತ ಮತ್ತು ಪಾಕಿಸ್ತಾನದ ನಡುವೆ 2008ರ ಬಳಿಕ ಯಾವುದೇ ದ್ವಿಪಕ್ಷೀಯ ಸರಣಿಗಳನ್ನ ಆಡಿಸಲಾಗ್ತಿಲ್ಲ. ಕೇವಲ ಐಸಿಸಿ ಟೂರ್ನಮೆಂಟ್ನ ಪಂದ್ಯಗಳಷ್ಟೇ ನಡೆಯುತ್ತಿವೆ. ಸೋ ಐಸಿಸಿ ಪಂದ್ಯಗಳಲ್ಲೂ ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾದ ಪಾರುಪತ್ಯ ಮೆರೆಯುತ್ತಲೇ ಇದೆ. ಚಾಂಪಿಯನ್ಸ್ ಟ್ರೋಫಿಯಲ್ಲೂ ಅದೇ ಆಯ್ತು. ಈ ಸೋಲನ್ನು ಅರಗಿಸಿಕೊಳ್ಳಲು ಪಾಕಿಸ್ತಾನದ ಮಾಜಿ ಆಟಗಾರರಿಗೂ ಕೂಡ ಸಾಧ್ಯವಾಗುತ್ತಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಅಜೇಯವಾಗಿ ಫಿನಾಲೆಗೆ ಕಾಲಿಟ್ಟು ಟ್ರೋಫಿ ಗೆದ್ದಿದ್ದರ ಬಗ್ಗೆ ಪಾಕ್ ತಂಡದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಮಾತ್ನಾಡಿದ್ದಾರೆ. ಎರಡೂ ರಾಷ್ಟ್ರಗಳ ರಾಜಕೀಯ ವಿಷಯಗಳನ್ನು ಬದಿಗಿಟ್ಟರೆ, ಟೀಂ ಇಂಡಿಯಾ ಆಟಗಾರರು ತುಂಬಾ ಒಳ್ಳೆಯವರು. ಉತ್ತಮ ಕ್ರಿಕೆಟ್ ಕೂಡ ಆಡ್ತಿದ್ದಾರೆ. ಬಟ್ ಪಾಕಿಸ್ತಾನ್ ವಿರುದ್ಧ ಹೆಚ್ಚಿನ ಪಂದ್ಯಗಳನ್ನಾಡದಿರುವುದೇ ಸಮಸ್ಯೆಯಾಗಿದೆ. ಒಂದು ವೇಳೆ ಟೀಮ್ ಇಂಡಿಯಾ ಬೆಸ್ಟ್ ಟೀಂ ಆಗಿದ್ರೆ ಪಾಕಿಸ್ತಾನದ ವಿರುದ್ಧ 10 ಟೆಸ್ಟ್, 10 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಲಿ, ನೋಡೋಣ. ಇದರಲ್ಲಿ ಯಾರು ಅತೀ ಹೆಚ್ಚು ಪಂದ್ಯಗಳನ್ನು ಗೆಲ್ಲುತ್ತಾರೋ ಅವರೇ ಬಲಿಷ್ಠರು ಎಂಬುದು ನಿರ್ಧಾರವಾಗುತ್ತದೆ ಎಂದು ಚಾಲೆಂಜ್ ಮಾಡಿದ್ದಾರೆ. ಅಲ್ದೇ ಯಾವುದೋ ಒಂದು ಪಂದ್ಯದ ಮೂಲಕ ಯಾರು ಉತ್ತಮರು ಅಂತಾ ಕ್ಯಾಲ್ಕುಲೇಟ್ ಮಾಡೋದು ಸರಿಯಲ್ಲ. ಎರಡೂ ತಂಡಗಳು ಮೂರು ಸ್ವರೂಪಗಳಲ್ಲೂ ಕನಿಷ್ಠ ಹತ್ತತ್ತು ಪಂದ್ಯಗಳನ್ನಾಡಲಿ. ಇದರಿಂದ ಯಾವ ತಂಡ ಬಲಿಷ್ಠ ಎಂಬುದು ಗೊತ್ತಾಗುತ್ತದೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಇಲ್ಲಿ ಸಕ್ಲೇನ್ ಮುಷ್ತಾಕ್ ಸವಾಲು ಹಾಕಿದ ತಕ್ಷಣ ಎರಡೂ ರಾಷ್ಟ್ರಗಳ ನಡುವೆ ಯಾವ ದ್ವಿಪಕ್ಷೀಯ ಸರಣಿಗಳನ್ನೂ ನಡೆಸೋಕೆ ಆಗಲ್ಲ. ಸೋ ಎರಡೂ ರಾಷ್ಟ್ರಗಳು ಮತ್ತೊಮ್ಮೆ ಮೈದಾನಕ್ಕೆ ಇಳೀಬೇಕು ಅಂದ್ರೆ ಏಷ್ಯಾಕಪ್ವರೆಗೆ ಕಾಯಲೇಬೇಕು. 2025ರ ಅಂತ್ಯದಲ್ಲಿ ಅಥವಾ 2026ರ ಆರಂಭದಲ್ಲಿ ಏಷ್ಯಾಕಪ್ ಟಿ20 ಟೂರ್ನಿ ನಡೆಯಲಿದೆ. ಭಾರತ ಆಯೋಜಿಸಲಿರುವ ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ಮತ್ತೆ ಮುಖಾಮುಖಿಯಾಗಲಿದೆ. 2026ರ ಟಿ20 ವಿಶ್ವಕಪ್ಗೂ ಮುನ್ನ ಏಷ್ಯಾಕಪ್ ಟಿ20 ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿದ್ದು, ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಶ್ರೀಲಂಕಾ, ಯುಎಇ ತಂಡಗಳು ಕಣಕ್ಕಿಳಿಯಲಿದೆ. ಗ್ರೂಪ್ ಎನಲ್ಲಿ ಭಾರತ, ಪಾಕಿಸ್ತಾ ಮತ್ತು ಯುಎಇ ಇದ್ರೆ ಬಿನಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಆಡಲಿವೆ. ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಸುತ್ತಿನ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದರೆ ಉಭಯ ತಂಡಗಳು ಸೂಪರ್-4 ಹಂತಕ್ಕೇರಲಿದೆ.
ಪಾಕಿಸ್ತಾನ ಇಲ್ಲಿ ಭಾರತಕ್ಕೆ ಏನೇ ಸವಾಲು ಹಾಕಿದ್ರೂ ತಂಡದ ಪ್ಲೇಯರ್ಗಳ ಪ್ರದರ್ಶನ ಹೇಗಿದೆ ಅನ್ನೋದನ್ನ ಇಡೀ ಜಗತ್ತೇ ನೋಡಿದೆ. ಇವ್ರ ಪ್ರತಾಪ ಏನಿದ್ರೂ ಜಿಂಬಾಂಬ್ವೆಯಂತಹ ತಂಡಗಳ ಎದುರಲ್ಲಷ್ಟೇ ಅಂತಾ ತಿರುಗೇಟು ಕೊಟ್ಟಿದ್ದಾರೆ. ಹೀಗಿದ್ರೂ ಅಲ್ಲಿನ ಆಟಗಾರರ ಆಟಾಟೋಪಕ್ಕೇನು ಕಮ್ಮಿ ಇಲ್ಲ. ಅಲ್ದೇ ಮೊದ್ಲೆಲ್ಲಾ ಭಾರತ ಮತ್ತು ಪಾಕಿಸ್ತಾನ ಮ್ಯಾಚ್ ಅಂದ್ರೆ ನೆಕ್ ಟು ನೆಕ್ ಫೈಟ್ ಇರ್ತಿತ್ತು. ಲಾಸ್ಟ್ ಮೂಮೆಂಟ್ವರೆಗೂ ಯಾರು ಗೆಲ್ಬೋದು ಅನ್ನೋದನ್ನ ಇಮ್ಯಾಜಿನ್ ಮಾಡೋಕೂ ಆಗ್ತಿರಲಿಲ್ಲ. ಬಟ್ ಇತ್ತೀಚಿನ ವರ್ಷಗಳಲ್ಲಿ ಟೀಂ ಇಂಡಿಯಾ ಕಂಪ್ಲೀಟ್ ಆಗಿ ಡಾಮಿನೇಟ್ ಮಾಡ್ತಿದೆ. ಭಾರತ ಮತ್ತು ಪಾಕಿಸ್ತಾನ್ ನಡುವಿನ ಪಂದ್ಯದ ರೋಚಕತೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗ್ತಾನೇ ಇದೆ. ಭಾರತ ಏಕಪಕ್ಷೀಯವಾಗಿ ಪಂದ್ಯಗಳನ್ನು ಗೆಲ್ಲುತ್ತಿದೆ. ಹೀಗಾಗಿಯೇ ಕ್ರಿಕೆಟ್ ಪ್ರೇಮಿಗಳು ಸಹ ಯಾರು ಗೆಲ್ಬೋದು ಅನ್ನೋದನ್ನ ಸುಲಭವಾಗಿಯೇ ಹೇಳಿ ಬಿಡ್ತಾರೆ. ಸೋ ಭಾರತಕ್ಕೆ ಪಂಥಾಹ್ವಾನ ಕೊಡೋ ಮುನ್ನ ಅಲ್ಲಿನ ತಂಡವನ್ನ ಸ್ಟ್ರಾಂಗ್ ಮಾಡ್ಬೇಕಿದೆ.