ಮುಂಬೈಗಿಲ್ಲ ಬುಮ್ರಾ.. ಬೆಂಗಳೂರಿಗಿಲ್ಲ ಜೋಶ್ – IPLಗೂ ಕಾಡಿದ ಇಂಜುರಿ ಭೂತ
ಯಾವೆಲ್ಲಾ ಸ್ಟಾರ್ಸ್ ಐಪಿಎಲ್ ನಿಂದ ಮಿಸ್?

ಮುಂಬೈಗಿಲ್ಲ ಬುಮ್ರಾ.. ಬೆಂಗಳೂರಿಗಿಲ್ಲ ಜೋಶ್ – IPLಗೂ ಕಾಡಿದ ಇಂಜುರಿ ಭೂತಯಾವೆಲ್ಲಾ ಸ್ಟಾರ್ಸ್ ಐಪಿಎಲ್ ನಿಂದ ಮಿಸ್?

2025ರ ಐಪಿಎಲ್ ಟೂರ್ನಿ ಮಾರ್ಚ್ 22ರಿಂದ ಆರಂಭ ಆಗಲಿದೆ. ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಫೈಟ್ ನಡೆಯಲಿದೆ. ಮೇ 25 ರಂದು ಇದೇ ಸ್ಥಳದಲ್ಲಿಯೇ ಫೈನಲ್ ಪಂದ್ಯವೂ ನಡೆಯಲಿದೆ. ಬಟ್ ಐಪಿಎಲ್‌ನ 18 ನೇ ಸೀಸನ್ ಪ್ರಾರಂಭವಾಗುವ ಮೊದಲು ಇಂಜುರಿ ಕಾರಣದಿಂದಾಗಿ ಕೆಲ ಸ್ಟಾರ್ ಪ್ಲೇಯರ್ಸ್ ಪಂದ್ಯಗಳನ್ನ ಮಿಸ್ ಮಾಡಿಕೊಳ್ತಿದ್ದಾರೆ.

ಇದನ್ನೂ ಓದಿ : 25 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ಭಾರತ – ಚಾಂಪಿಯ‌ನ್ಸ್‌ಗಳಿಗೆ ಚಾಂಪಿಯನ್ಸ್ ಟ್ರೋಫಿ ಕಿರೀಟ!

2 ವಾರಗಳ ಕಾಲ ಐಪಿಎಲ್ ನಲ್ಲಿ ಆಡಲ್ಲ ಜಸ್ಪ್ರೀತ್ ಬುಮ್ರಾ!

ಜಸ್ಪ್ರೀತ್ ಬುಮ್ರಾ. ವಿಶ್ವ ಕ್ರಿಕೆಟ್​ನಲ್ಲಿ ಪ್ರಸ್ತುತ ನಂಬರ್ 1 ಬೆಸ್ಟ್ ಬೌಲರ್. ಬಟ್ ಬುಮ್ರಾ ಪದೇಪದೆ ಇಂಜುರಿಗೆ ತುತ್ತಾಗಿ ಅನೇಕ ಪಂದ್ಯಗಳನ್ನ ಮಿಸ್ ಮಾಡಿಕೊಳ್ತಾರೆ. ಈ ಬಾರಿಯ ಐಪಿಎಲ್​ನಲ್ಲೂ ಅದೇ ಆಗಲಿದೆ. ಐಪಿಎಲ್ 2025 ಮೆಗಾ ಹರಾಜಿಗೂ ಮುನ್ನ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಬುಮ್ರಾ ಅವರನ್ನು 18 ಕೋಟಿ ರೂ.ಗೆ ಉಳಿಸಿಕೊಂಡಿತು. 31 ವರ್ಷದ ಬುಮ್ರಾ ಬೆನ್ನು ನೋವಿನ ಕಾರಣದಿಂದ ಜನವರಿ 5ರಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನೂ ಮಿಸ್ ಮಾಡಿಕೊಂಡಿದ್ರು. ಸದ್ಯ ಬೌಲಿಂಗ್ ಮಾಡೋಕೆ ಶುರು ಮಾಡಿದ್ರೂ ಇನ್ನೂ ಕಂಪ್ಲೀಟ್ ಆಗಿ ಫಿಟ್ ಆಗದ ಕಾರಣ  ಐಪಿಎಲ್ ಆರಂಭವಾದ ಎರಡು ವಾರಗಳ ಕಾಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ಆರ್ ಸಿಬಿ ಪರ ಆಡಲ್ವಾ ಜೋಶ್ ಹೇಜಲ್ ವುಲ್?

ಕಳೆದ ನವೆಂಬರ್ ನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ಅವರನ್ನು 12.50 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿತ್ತು, ಆದರೆ ಹಿಪ್ ಇಂಜುರಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್​ನಿಂದ ಹೊರಗುಳಿದಿದ್ದಾರೆ. ಸೋ ವಿಶ್ವದ ಶ್ರೀಮಂತ ಲೀಗ್ ಆಗಿರುವ ಐಪಿಎಲ್​ನಿಂದಲೇ ಹೊರ ಬೀಳೋ ಸಾಧ್ಯತೆ ಇದೆ.

ಮುಂಬೈ ಇಂಡಿಯನ್ಸ್ ಮೊದಲ ಪಂದ್ಯಕ್ಕಿಲ್ಲ ಕ್ಯಾಪ್ಟನ್ ಪಾಂಡ್ಯ!

ಫಿಟ್ ಌಂಡ್ ಫೈನ್ ಆಗಿದ್ರೂ ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾಗೇ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ತಮ್ಮ ತಂಡದ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಮಾರ್ಚ್ 23 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಆಡುವ ಮೊದಲ ಪಂದ್ಯವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಲಾಸ್ಟ್ ಸೀಸನಲ್ಲಿ ಮುಂಬೈ ಕ್ಯಾಪ್ಟನ್ ಆಗಿದ್ದ ಪಾಂಡ್ಯ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ನಿಧಾನಗತಿಯ ಓವರ್ ಹಾಕಿದ್ದಕ್ಕಾಗಿ ಒಂದು ಪಂದ್ಯಕ್ಕೆ ಅಮಾನತುಗೊಂಡಿದ್ರು. ಸೋ ಲಾಸ್ಟ್ ಇಯರ್ ಮಿಸ್ಟೇಕ್ ಗೆ ಈ ವರ್ಷದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯೋದಿಲ್ಲ.

ಐಪಿಎಲ್ ನ ಫಸ್ಟ್ ಆಫ್ ನಿಂದ ಹೊರಗುಳಿಯಲಿದ್ದಾರೆ ಮಯಾಂಕ್!

ಮಯಾಂಕ್ ಯಾದವ್. ಲಾಸ್ಟ್ ಸೀಸನ್ ನಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿ ಸುದ್ದಿಯಾಗಿದ್ದ ಬೌಲರ್. ಇದೇ ಕಾರಣಕ್ಕೆ ಮೆಗಾ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡ ಮಯಾಂಕ್ ಯಾದವ್ ಅವರನ್ನು 11 ಕೋಟಿ ರೂ.ಗೆ ಉಳಿಸಿಕೊಂಡಿದೆ. ಆದರೆ ಇಎಸ್‌ಪಿಎನ್ ಕ್ರಿಕ್‌ಇನ್ಫೊ ವರದಿ ಪ್ರಕಾರ, 22 ವರ್ಷದ ವೇಗಿ ಮಯಾಂಕ್ ಯಾದವ್ ಐಪಿಎಲ್ ನ ಫಸ್ಟ್ ಆಫ್ ನಿಂದ ಹೊರಗುಳಿಯಲಿದ್ದಾರೆ.. lumbar stress injuryಯಿಂದ ಬಳಲ್ತಿರೋ ಮಯಾಂಕ್ ರಿಕವರ್ ಆಗ್ತಿದ್ದಾರೆ. ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಬೌಲಿಂಗ್ ಅನ್ನು ಪುನರಾರಂಭಿಸಿದ್ದಾರೆ.

ಬೆನ್ನು ನೋವಿನಿಂದಾಗಿ ಐಪಿಎಲ್ ಮಿಸ್ ಮಾಡಿಕೊಳ್ತಾರಾ ಮಿಚೆಲ್ ಮಾರ್ಷ್?

ಮೆಗಾ ಹರಾಜಿನಲ್ಲಿ 3.40 ಕೋಟಿ ರೂಪಾಯಿಗೆ ಎಲ್​ಎಸ್​ಜಿ ಸೇರಿದ್ದ ಆಸ್ಟ್ರೇಲಿಯಾದ ಟಿ 20 ಐ ನಾಯಕ ಮಿಚೆಲ್ ಮಾರ್ಷ್ ಬೆನ್ನು ನೋವಿನಿಂದ ಬಳಲ್ತಿದ್ದಾರೆ. ಹೀಗಾಗಿ ಐಪಿಎಲ್ 2025 ರ ಆರಂಭದ ಪಂದ್ಯಗಳನ್ನ ಮಿಸ್ ಮಾಡಿಕೊಳ್ಳಬಹುದು.  ಹೀಗೆ ಇಂಜುರಿ ಕಾರಣದಿಂದ ಸಾಕಷ್ಟು ಸ್ಟಾರ್ ಪ್ಲೇಯರ್ಸ್ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ರು. ಇದೀಗ ಐಪಿಎಲ್​ಗೂ ಅಲಭ್ಯರಾಗೋ ಚಾನ್ಸಸ್ ಇದೆ. ಹಾಗೇ ಆರ್​ಸಿಬಿಯ ಮತ್ತೊಬ್ಬ ಆಟಗಾರ ಜಾಕೋಬ್ ಬೆಥೆಲ್ ಆಡೋದು ಕೂಡ ಕನ್ಫರ್ಮ್ ಇಲ್ಲ. ಹೀಗಾಗಿ ಫ್ರಾಂಚೈಸಿಗಳಿಗೆ ಹೊಸ ತಲೆಬಿಸಿ ಶುರುವಾಗಿದೆ.

Shantha Kumari

Leave a Reply

Your email address will not be published. Required fields are marked *