ಕಪ್​ ಸಿಗ್ಲಿಲ್ಲ.. ದುಡ್ಡೂ ಬರ್ಲಿಲ್ಲ – PAK​ಗೆ ಲಾಭಕ್ಕಿಂತ ನಷ್ಟವೇ ಆಯ್ತಾ?

ಕಪ್​ ಸಿಗ್ಲಿಲ್ಲ.. ದುಡ್ಡೂ ಬರ್ಲಿಲ್ಲ – PAK​ಗೆ ಲಾಭಕ್ಕಿಂತ ನಷ್ಟವೇ ಆಯ್ತಾ?

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮುಗಿದು ಭಾರತ ಚಾಂಪಿಯನ್ ಆಗಿ ಒಂದು ದಿನ ಕಳೆದ್ರೂ ಅದ್ರ ಫೀವರ್ ಮಾತ್ರ ಕಮ್ಮಿ ಆಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆ ಸೆಲೆಬ್ರೇಷನ್ ಇನ್ನೂ ನಿಂತಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ 29 ವರ್ಷಗಳ ಬಳಿಕ ಐಸಿಸಿ ಟೂರ್ನಿ ಆಯೋಜನೆ ಮಾಡಿದ್ದ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಮುಜುಗರ ಅನುಭವಿಸ್ತಿದೆ. ಪಾಕಿಸ್ತಾನದಲ್ಲಿ ಪಂದ್ಯಗಳನ್ನ ಆಡಲು ನಿರಾಕರಿಸಿದ್ದ ಭಾರತ ತನ್ನೆಲ್ಲಾ ಪಂದ್ಯಗಳನ್ನ ದುಬೈನಲ್ಲೇ ಆಡಿತ್ತು. ಒಂದೂ ಮ್ಯಾಚ್ ಸೋಲದೆ ಚಾಂಪಿಯನ್ ಕೂಡ ಆಗಿದೆ.

ಇದನ್ನೂ ಓದಿ : IND & NZನಲ್ಲಿ ಸ್ಪಿನ್ನರ್ಸ್ ಅಸ್ತ್ರ – ದುಬೈ ಪಿಚ್ ನಲ್ಲಿ ಯಾರ ಕೈ ಮೇಲು?  

ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಭಾರತಕ್ಕೆ ಬಹುಮಾನವಾಗಿ ಐಸಿಸಿಯಿಂದ 20 ಕೋಟಿ ರೂಗಳು ಟೀಂ ಇಂಡಿಯಾ ಖಾತೆ ಸೇರಿದೆ. ಇದರ ಜೊತೆಗೆ ಪ್ರತಿ ಪಂದ್ಯದಲ್ಲೂ ಗೆಲುವು ಸಾಧಿಸಿದಕ್ಕೆ ಹಾಗೂ ಟೂರ್ನಿಯಲ್ಲಿ ಭಾಗವಹಿಸಿದ್ದಕ್ಕೂ ಟೀಂ ಇಂಡಿಯಾಗೆ ಐಸಿಸಿಯಿಂದ ಹಣ ಸಿಕ್ಕಿದೆ. ಒಟ್ಟಾರೆಯಾಗಿ ಭಾರತಕ್ಕೆ 23 ಕೋಟಿ ರೂಪಾಯಿಗೂ ಹೆಚ್ಚು ಹಣ ಬರೀ ಬಹುಮಾನವಾಗಿಯೇ ಸಿಕ್ಕಿದೆ.  ಆದ್ರೆ ಇತ್ತ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಹಾಗೆಯೇ ಆತಿಥ್ಯದ ಅಧಿಕಾರದೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಪಾಕಿಸ್ತಾನಕ್ಕೆ, ಇಡೀ ಪಂದ್ಯಾವಳಿ ದುಃಸ್ವಪ್ನವಾಗಿಯೇ ಕಾಡಿತ್ತು. ತವರು ನೆಲದಲ್ಲೇ ಪಾಕಿಸ್ತಾನಕ್ಕೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಲೀಗ್ ಹಂತವನ್ನು ದಾಟಿ ಪಾಕ್ ತಂಡಕ್ಕೆ ಮುಂದಕ್ಕೆ ಹೋಗಲು ಸಾಧ್ಯವಾಗಲಿಲ್ಲ.

ಲೀಗ್ ಹಂತದಲ್ಲಿ 2 ಪಂದ್ಯಗಳನ್ನು ಆಡುವ ಅವಕಾಶ ಪಡೆದ ಪಾಕಿಸ್ತಾನ, ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್​ಗಳಿಂದ ಸೋತಿತ್ತು. ಇದರ ನಂತರ ಭಾರತದ ವಿರುದ್ಧ 6 ವಿಕೆಟ್‌ಗಳಿಂದ ಸೋತಿತ್ತು. ಆದರೆ ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಕೊನೆಯ ಲೀಗ್ ಪಂದ್ಯ ಮಳೆಯಿಂದ ರದ್ದಾಗಿತ್ತು. ಈ ಕಾರಣದಿಂದಾಗಿ ಪಾಕಿಸ್ತಾನ ತಂಡ ಸೆಮಿಫೈನಲ್ ತಲುಪಲು ಸಾಧ್ಯವಾಗದೆ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಪಾಕಿಸ್ತಾನ ಒಂದೂ ಪಂದ್ಯವನ್ನೂ ಗೆಲ್ಲದೇ ಇದ್ರೂ ಐಸಿಸಿಯಿಂದ ಬಹುಮಾನದ ಮೊತ್ತವನ್ನ ಪಡ್ಕೊಂಡಿದೆ.  2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ 7 ಅಥವಾ 8 ನೇ ಸ್ಥಾನ ಪಡೆಯುವ ತಂಡಗಳಿಗೆ ಸರಿಸುಮಾರು 1 ಕೋಟಿ 22 ಲಕ್ಷ ರೂಪಾಯಿಗಳನ್ನು ನೀಡಲು ಐಸಿಸಿ ನಿರ್ಧರಿಸಿತ್ತು. ಆ ಪ್ರಕಾರ 7ನೇ ಸ್ಥಾನ ಪಡೆದಿರುವ ಪಾಕಿಸ್ತಾನಕ್ಕೆ 1 ಕೋಟಿ 22 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಅಷ್ಟೇ ಅಲ್ಲ ಪಾಕಿಸ್ತಾನ ತಂಡ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ್ದಕ್ಕಾಗಿ ಸರಿಸುಮಾರು 1 ಕೋಟಿ 9 ಲಕ್ಷ ರೂಗಳನ್ನು ಪಡೆದುಕೊಂಡಿದೆ. ಹೀಗೆ ಯಾವುದೇ ಪಂದ್ಯವನ್ನು ಗೆಲ್ಲದೆ ಸರಿಸುಮಾರು 2 ಕೋಟಿ 31 ಲಕ್ಷ ರೂಪಾಯಿಗಳನ್ನ ಪಡ್ಕೊಂಡಿದೆ.

ಬರೀ ಪರ್ಫಾಮೆನ್ಸ್ ಮಾತ್ರವಲ್ಲ ಮ್ಯಾಚ್​ಗಳ ವಿಚಾರದಲ್ಲೂ ಪಿಸಿಬಿಗೆ ಹೊಡೆತವೇ ಬಿದ್ದಿದೆ. ಹೇಳಿ ಕೇಳಿ ಟೀಂ ಇಂಡಿಯಾ ಫ್ಯಾನ್ಸ್ ಪ್ರಪಂಚದಾದ್ಯಂತ ಇದ್ದಾರೆ. ಯಾವ ದೇಶದಲ್ಲಿ ಐಸಿಸಿ ಟೂರ್ನಮೆಂಟ್‌ಗಳು ನಡೆದರೂ ಭಾರತದ ಅಭಿಮಾನಿಗಳು ಸ್ಟೇಡಿಯಂಗೆ ಬಂದು ಮ್ಯಾಚ್‌ಗಳನ್ನು ನೋಡ್ತಾರೆ. ಸೋ ಸ್ಟೇಡಿಯಂ ಫುಲ್ ಆದ್ರೆ ಅಮೌಂಟ್ ಕೂಡ ಜಾಸ್ತಿ ಬರುತ್ತೆ. ಚಾಂಪಿಯನ್ ಟ್ರೋಫಿಯಲ್ಲಿ ಪಾಕಿಸ್ತಾನ ಕೂಡ ಇದೇ ಆಲೋಚನೆಯಿಂದ ಭಾರೀ ದುಡ್ಡು ಖರ್ಚು ಮಾಡಿತು. ಆದರೆ ಭಾರತ ಪಾಕ್ ಹೋಗೋಕೆ ಒಪ್ಪದೇ ಇರೋದ್ರಿಂದ ಅಲ್ಲಿಯೇ ಪಾಕ್​ಗೆ ದೊಡ್ಡ ಹಿನ್ನಡೆ ಆಗಿತ್ತು. ಅತ್ತ ಪಾಕಿಸ್ತಾನ ತಂಡ ಲೀಗ್ ಮ್ಯಾಚ್‌ನಲ್ಲೇ ಸೋತು ಮನೆಗೆ ಹೋಯ್ತು.  ಪಾಕ್ ಕೂಡ ಟೂರ್ನಿಯಿಂದ ಹೊರಬಿದ್ದಿದ್ದರಿಂದ ಸ್ಟೇಡಿಯಂಗೆ ಪಾಕಿಸ್ತಾನ ಪ್ರೇಕ್ಷಕರು ಕೂಡ ಬರಲಿಲ್ಲ. ಹೀಗಾಗಿ ಅಂದುಕೊಂಡ ಮಟ್ಟಿಗೆ ಟಿಕೆಟ್‌ಗಳು ಮಾರಾಟ ಆಗಲಿಲ್ಲ. ಇದರಿಂದ ಪಾಕಿಸ್ತಾನಕ್ಕೆ ಆ ದೇಶದ ಕ್ರಿಕೆಟ್ ಬೋರ್ಡ್‌ಗೆ ಭಾರೀ ನಷ್ಟ ಉಂಟಾಗಿದೆ.

ಪಾಕಿಸ್ತಾನದಲ್ಲಿ ಪದೇಪದೇ ಭದ್ರತಾ ವೈಫಲ್ಯ ಇರೋದ್ರಿಂದ 1996ರ ನಂತರ ಐಸಿಸಿ ಟೂರ್ನಮೆಂಟ್ ನಡೆದಿರಲಿಲ್ಲ. 2025ರಲ್ಲಿ ಚಾಂಪಿಯನ್ ಟ್ರೋಫಿ ನಡೆಸುವ ಅವಕಾಶ ಬಂದಿದ್ದರಿಂದ ಒಳ್ಳೆ ಆದಾಯ ಬರುತ್ತೆ ಅಂದುಕೊಂಡಿದ್ದರು. ಇದಕ್ಕಾಗಿ ಕರಾಚಿ, ಲಾಹೋರ್, ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂಗಳಿಗೆ ಹೈಟೆಕ್ ಟಚ್ ಕೊಟ್ಟಿದ್ರು. ಅದ್ರಲ್ಲೂ ಬರೀ ರಾವಲ್ಪಿಂಡಿ ಸ್ಟೇಡಿಯಮ್​ಗೆ ಗಿ 560ಕೋಟಿಗೂ ಹೆಚ್ಚು ಖರ್ಚು ಮಾಡಿದ್ರು. ಒಟ್ಟಾರೆ ಮೂರೂ ಕ್ರೀಡಾಂಗಣ ಮತ್ತು ಸಾರಿಗೆ ಸೇರಿದಂತೆ ಟೂರ್ನಿ ಆಯೋಜನೆಗೆ 1800 ಕೋಟಿಯಷ್ಟು ವೆಚ್ಚವಾಗಿತ್ತು. ಹೀಗಿದ್ರೂ ಟೂರ್ನಿ ಆಯೋಜನೆ ಮಾಡಿದ್ದ ಪಾಕಿಸ್ತಾನಕ್ಕೆ ಐಸಿಸಿಯಿಂದ ಅಮೌಂಟ್ ಬಂದಿದೆ ನಿಜ. ಆದ್ರೆ ಆದಾಯಕ್ಕಿಂತ ವೆಚ್ಚವೇ ಜಾಸ್ತಿಯಾಗಿದೆ. ಪ್ರೇಕ್ಷಕರು ಬರದೇ ಇರೋದ್ರಿಂದ ಟಿಕೆಟ್‌ಗಳು ಹೆಚ್ಚಾಗಿ ಮಾರಾಟ ಆಗಲಿಲ್ಲ. ಇದರಿಂದ ಆದಾಯ ಕಡಿಮೆ ಬಂತು. ವಿದೇಶಿ ಪ್ರೇಕ್ಷಕರು ಕೂಡ ಕ್ರಿಕೆಟ್ ಮ್ಯಾಚ್‌ಗಳನ್ನು ನೋಡೋಕೆ ಪಾಕಿಸ್ತಾನಕ್ಕೆ ಹೋಗಲಿಲ್ಲ. ಇದರಿಂದ ಟೂರ್ನಮೆಂಟ್‌ನಲ್ಲಿ ಖರ್ಚು ಮಾಡಿದಷ್ಟು ಆದಾಯ ಬರಲಿಲ್ಲ.

ಇನ್ನು ಇದೆಲ್ಲದ್ರ ನಡುವೆ ಟೀಂ ಇಂಡಿಯಾ ಚಾಂಪಿಯನ್ ಆದಾಗ ಪ್ರಶಸ್ತಿ ಸಮಾರೋಪ ಸಮಾರಂಭದ ವೇಳೆ ಪಿಸಿಬಿಯ ಯಾವುದೇ ಅಧಿಕಾರಿ ವೇದಿಕೆ ಮೇಲೆ ಭಾಗಿಯಾಗಿರಲಿಲ್ಲ. ಈ ಬಗ್ಗೆ ಪಾಕ್​ನ ಮಾಜಿ ಕ್ರಿಕೆಟಿಗ ಶೋಯೆಬ್‌ ಅಖ್ತರ್‌ ಅಸಮಾಧಾನ ವ್ಯಕ್ತಪಡಿಸಿದ್ರು. ಬಟ್ ಪಿಸಿಬಿ ಚೇರ್ಮನ್ ಮೊಯ್ಸಿನ್ ನಖ್ವಿ ಪಾಕಿಸ್ತಾನದಲ್ಲಿ ಸಚಿವರೂ ಆಗಿದ್ದು, ಪೂರ್ವನಿಯೋಜಿತ ಕಾರ್ಯಕ್ರಮದಿಂದಾಗಿ ದುಬೈಗೆ ತೆರಳಿರಲಿಲ್ಲ. ಆದರೆ ಪಿಸಿಬಿ ಸಿಇಒ ಅನ್ನು ಪಾಕಿಸ್ತಾನದ ಪ್ರತಿನಿಧಿಯಾಗಿ ದುಬೈಗೆ ಕಳುಹಿಸಿಕೊಡಲಾಗಿತ್ತು. ಆದ್ರೆ ಪಿಸಿಬಿಯ ಸಿಇಒಗೆ ಸಮಾರೋಪದ ವೇದಿಕೆ ಏರಲು ಐಸಿಸಿಯಿಂದ ಇನ್ ಟೈಮ್​ನಲ್ಲಿ ಆಹ್ವಾನ ತಲುಪಿಲ್ಲ ಎನ್ನಲಾಗಿದೆ. ಆದ್ರೆ ಐಸಿಸಿ ಮೂಲಗಳು ಮಾತ್ರ ನಾವು ಪಿಸಿಬಿ ಅಧ್ಯಕ್ಷರಿಗೆ ಆಹ್ವಾನ ನೀಡಿದ್ದೆವು ಎನ್ನುತ್ತಿದೆ. ಒಟ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಯಿಂದ ಪಾಕಿಸ್ತಾನ ಪಡ್ಕೊಂಡಿದ್ದಕ್ಕಿಂತ ಕಳ್ಕೊಂಡಿದ್ದೇ ಹೆಚ್ಚು. ಹೈಬ್ರಿಡ್ ಮಾದರಿ ಟೂರ್ನಿ, ಒಂದೂ ಪಂದ್ಯ ಗೆಲ್ಲದ ಮುಜುಗರ, ನೂರಾರು ಕೋಟಿ ನಷ್ಟ.

Shantha Kumari

Leave a Reply

Your email address will not be published. Required fields are marked *