ಕುಳ್ಳ ಟೆಂಬಾ ಬವುಮಾ ಕಮಾಲ್ – ವಿರಾಟ್ ಕೊಹ್ಲಿ ಜೊತೆ ಕಿರಿಕ್
ಕೆಣಕಿದ್ರೆ ಬ್ಯಾಟ್‌ನಲ್ಲೇ ಉತ್ತರ

ಜಂಟಲ್ಮ್ಯಾನ್ ಗೇಮ್ನ ಜಂಟಲ್ಮ್ಯಾನ್ಗಳಲ್ಲಿ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಕೂಡ ಒಬ್ಬರು. ಮೈದಾನದಲ್ಲಾಗಲಿ, ಹೊರಗೆಯಾಗಲಿ ಯಾವುದೇ ವಿವಾದಕ್ಕೀಡಾಗದ ಆಟಗಾರ. ಅದರಲ್ಲೂ ಪ್ರತಿಯೊಬ್ಬ ಆಟಗಾರರೊಂದಿಗೆ ಬವುಮಾ ಗೌರವದಿಂದಲೇ ವರ್ತಿಸುತ್ತಾರೆ. ಇವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ..ಈ ಹಿಂದೆ T20I ನಲ್ಲಿ ನಾಯಕತ್ವ ವಹಿಸಿದ್ದರು . ಅವರು ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ . ಅವರು ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಶತಕ ಗಳಿಸಿದ ಮೊದಲ ಕಪ್ಪು ಆಫ್ರಿಕನ್ ಕ್ರಿಕೆಟಿಗ ಮತ್ತು ತಂಡವನ್ನು ಮುನ್ನಡೆಸಿದ ಮೊದಲ ವ್ಯಕ್ತಿ. ಸೆಪ್ಟೆಂಬರ್ 2016 ರಲ್ಲಿ ಐರ್ಲೆಂಡ್ ವಿರುದ್ಧ 113 ರನ್ ಗಳಿಸಿ, ಚೊಚ್ಚಲ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ ಮೂವರು ದಕ್ಷಿಣ ಆಫ್ರಿಕಾದ ಕ್ರಿಕೆಟಿಗರಲ್ಲಿ ಬವುಮಾ ಒಬ್ಬರು.
ಬವುಮಾ ಡಿಸೆಂಬರ್ 26, 2014 ರಂದು ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು .. ಮಾರ್ಚ್ 4, 2021 ರಂದು, ಬವುಮಾ ಅವರನ್ನು ದಕ್ಷಿಣ ಆಫ್ರಿಕಾದ ಸೀಮಿತ ಓವರ್ ತಂಡದ ನಾಯಕರನ್ನಾಗಿ ನೇಮಿಸಲಾಯಿತು, ಕ್ವಿಂಟನ್ ಡಿ ಕಾಕ್ ಅವರಿಂದ ನಾಯಕತ್ವ ವಹಿಸಿಕೊಂಡರು. ಇವರನ್ನ ದಕ್ಷಿಣ ಆಫ್ರಿಕಾದ ಖಾಯಂ ನಾಯಕರನ್ನಾಗಿ ನೇಮಿಸುವುದರೊಂದಿಗೆ, ಅವರು ದಕ್ಷಿಣ ಆಫ್ರಿಕಾ ತಂಡದ ಖಾಯಂ ನಾಯಕರಾಗಿ ನೇಮಕಗೊಂಡ ಮೊದಲ ಕಪ್ಪು ಆಫ್ರಿಕನ್ ಆಟಗಾರರಾದರು. ನಾಯಕನಾಗಿ ಬವುಮಾ ಅವರ ಮೊದಲ ಸರಣಿ ಪಾಕಿಸ್ತಾನ ವಿರುದ್ಧದ ತವರು ಸರಣಿಯಾಗಿತ್ತು..
ಶಾಂತ ಸ್ವಾಭಾವದ ನಾಯಕ ಟೆಂಬಾ
ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ತ್ರಿಕೋನ ಸರಣಿಯ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ನಾಯಕ ಬವುಮಾ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡಕ್ಕೆ ಟೆಂಬಾ ಬವುಮಾ ಅತ್ಯುತ್ತಮ ಆರಂಭ ಒದಗಿಸಿದ್ದರು. ಎಚ್ಚರಿಕೆಯ ಆಟದೊಂದಿಗೆ ಇನಿಂಗ್ಸ್ ಕಟ್ಟಿದ ಬವುಮಾ 96 ಎಸೆತಗಳಲ್ಲಿ 13 ಫೋರ್ಗಳೊಂದಿಗೆ 82 ರನ್ ಬಾರಿಸಿದ್ದರು. ಆದರೆ 29ನೇ ಓವರ್ನ 5ನೇ ಎಸೆತವನ್ನು ಎದುರಿಸಿದ ಟೆಂಬಾ ಬವುಮಾ ರನ್ ಓಡುವ ಯತ್ನದಲ್ಲಿ ರನೌಟ್ ಆದರು. ಇತ್ತ ಟೆಂಬಾ ಬವುಮಾ ವಿಕೆಟ್ ಸಿಗುತ್ತಿದ್ದಂತೆ ಪಾಕ್ ಫೀಲ್ಡರ್ಗಳು ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಪಾಕ್ ಆಟಗಾರರು ಟೆಂಬಾ ಬವುಮಾ ಅವರನ್ನು ಸುತ್ತುವರೆದು ಸಂಭ್ರಮಿಸಿದ್ದಾರೆ. ಅದರಲ್ಲೂ ಸೌದ್ ಶಕೀಲ್ ಹಾಗೂ ಕಮ್ರಾನ್ ಗುಲಾಮ್ ಆಕ್ರಮಣಕಾರಿ ವರ್ತನೆಯೊಂದಿಗೆ ಬವುಮಾ ಅವರನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ. ಜಂಟಲ್ಮ್ಯಾನ್ ಆಟಗಾರನಾಗಿರುವ ಟೆಂಬಾ ಬವುಮಾ ಒಂದೇ ಒಂದು ಮಾತನಾಡದೇ, ಈ ವರ್ತನೆ ಬಗ್ಗೆ ಅಂಪೈರ್ಗೆ ದೂರು ನೀಡದೇ ಹೊರ ನಡೆದಿದ್ದಾರೆ.
ವಿರಾಟ್ ಕೊಹ್ಲಿ ಜೊತೆ ಒಮ್ಮೆ ಕಿರಿಕ್
ಇನ್ನು ಜನವರಿ 2022 ರಲ್ಲಿ ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡುತ್ತಿದ್ದಾಗ ಇವರು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸ್ಥಳದಲ್ಲಿ ಶಾಟ್ ಹೊಡೆದರು. ಕೊಹ್ಲಿ ಚೆಂಡನ್ನು ಎತ್ತಿಕೊಂಡು ಕೋಪದಿಂದ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಕಡೆಗೆ ಎಸೆದರು. ಬವುಮಾ ಕೊಹ್ಲಿಯ ಸ್ವಭಾವವನ್ನು ಇಷ್ಟಪಡಲಿಲ್ಲ ಮತ್ತು ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಇವರ ಫ್ಯಾನ್ಸ್ ಬವುಮಾ ಅವರನ್ನು ಹೊಗಳಿ ಮೈದಾನದಲ್ಲಿ ಕೊಹ್ಲಿಯ ವರ್ತನೆಗಳನ್ನು ಟೀಕಿಸಿದರು.
ಟೆಂಬಾ ಅವರ ದಾಖಲೆಗಳನ್ನ ನೋಡೋದಾದ್ರೆ.. 63 ಟೆಸ್ಟ್ ಪಂದ್ಯಗಳನ್ನ ಆಡಿರೋ ಬವುಮಾ 3606 ರನ್‌ಗಳಿಸಿದ್ದಾರೆ. ಇದ್ರಲ್ಲಿ 24 ಆಫ್ ಸೆಂಚುರಿಯಿದ್ರೆ, 4 ಆಫ್ ಸೆಂಚುರಿಯಿದೆ. ಇನ್ನು 48 ಏಕದಿನ ಪಂದ್ಯಗಳನ್ನ ಆಡಿರೋ ಟೆಂಬಾ 1847 ರನ್‌ಗಳಿಸಿದ್ದಾರೆ. ಇದ್ರಲ್ಲಿ 5 ಸೆಂಚುರಿ ಹೊಡೆದ್ರೆ, 7 ಆಫ್ ಸೆಂಚುರಿ ಹೊಡೆದಿದ್ದಾರೆ. 36 t20 ಪಂದ್ಯಗಳನ್ನ ಆಡಿರೋ ಟೆಂಬಾ 670 ರನ್‌ಗಳಿಸಿದ್ದಾರೆ.