ಡ್ರೋನ್, ಗಗನ ಲವ್ವಲ್ಲಿ ಬಿದ್ರಾ?.. 1,000 ಅಡಿ ಎತ್ತರದಲ್ಲಿ ಸರ್‌ಪ್ರೈಸ್!

ಗಿಲ್ಲಿ ನಟ ಹಾಗೂ ಗಗನಾ.. ಇಷ್ಟು ದಿನ ಜೀ ಕನ್ನಡ ರಿಯಾಲಿಟಿ ಶೋನಲ್ಲಿ ಇವರಿಬ್ಬರದ್ದೇ ಹವಾ ಇತ್ತು.. ಗಿಲ್ಲಿ ಗಗನಾ ಕಾಲೆಳೆಯೋದೇನು? ಗಗನಾ ಪಂಚಿಂಗ್ ಡೈಲಾಗ್ಸ್.. ವೀಕ್ಷಕರಿಗೆ ಸಖತ್ ಮನರಂಜನೆ ನೀಡಿತ್ತು.. ಆದ್ರೀಗ ಗಿಲ್ಲಿಗೆ ಮತ್ತೊಬ್ರು ಕಾಂಪಿಟೇಟರ್ ಆಗಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ನಲ್ಲಿ ಗಗನಾಗೆ ಡ್ರೋನ್ ಪ್ರತಾಪ್ ಜೋಡಿಯಾಗಿದ್ದಾರೆ.. ಗಗನಾಗೆ ಡ್ರೋನ್ ಪ್ರತಾಪ್ ದೊಡ್ಡ ಸರ್‌ಪ್ರೈಸ್ ನೀಡಿದ್ದಾರೆ.. ಇದನ್ನ ನೋಡಿ ಗಿಲ್ಲಿ ಮಾತ್ರವಲ್ಲ ಎಲ್ಲರೂ ಶಾಕ್ ಆಗಿದ್ದಾರೆ.. ಡ್ರೋನ್ ಪ್ರತಾಪ್ ಗಗನಾಗೆ 1000 ಅಡಿ ಎತ್ತರದಿಂದ ಗಿಫ್ಟ್ ಕೊಟ್ಟಿದ್ದಾರೆ.. ಗಗನಾಗೆ ಡ್ರೋನ್ ಭರ್ಜರಿಯಾಗೇ ಸರ್‌ಪ್ರೈಸ್ ಕೊಟ್ಟಿದ್ದಾರೆ.. ಆದ್ರೀಗ ನಮ್ಮ ಟ್ರೋಲರ್ಸ್ ಮಾತ್ರ ಗಿಲ್ಲಿನಾ ಸರಿಯಾಗೇ ಕಾಲೆಳೆದಿದ್ದಾರೆ.
ಇದನ್ನೂ ಓದಿ: ಮಾಲೀಕನನ್ನು ಕಳೆದುಕೊಂಡು ಅಳುತ್ತಿರುವ ಶ್ವಾನ – ಮನಕಲುಕುವ ವಿಡಿಯೋ ವೈರಲ್!
ಬರೀ ವಿವಾದಗಳಿಂದಲೇ ಸದ್ದು ಮಾಡ್ತಿದ್ದ ಡ್ರೋನ್ ಪ್ರತಾಪ್ ಈಗ ಬದಲಾಗಿದ್ದಾರೆ. ಬಿಗ್ ಬಾಸ್ ಕನ್ನಡ ಬಳಿಕ ಒಂದಾದ ಮೇಲೊಂದು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ತಿದ್ದಾರೆ. ಇದೀಗ ಭರ್ಜರಿ ಬ್ಯಾಚುಲರ್ಸ್ ನಲ್ಲೂ ಸಖತ್ ಶೈನ್ ಆಗ್ತಿದ್ದಾರೆ. ಈ ಶೋಗೆ ಬಂದ್ಮೇಲಂತೂ ಡ್ರೋನ್ ಲುಕ್ ಚೇಂಜ್ ಆಗಿದೆ. ಹೇರ್ ಸ್ಟೈಲ್ ಬದಲಾಗಿದೆ. ಡ್ರೆಸಿಂಗ್ ಸ್ಟೈಲ್ ಕೂಡ ಬದಲಾಗಿದೆ. ಈ ಶೋನಲ್ಲಿ ಡ್ರೋನ್ ಪ್ರತಾಪ್ ಗೆ ಮಾತಿನ ಮಲ್ಲಿ ಗಗನಾ ಮೆಂಟರ್ ಆಗಿದ್ದಾರೆ.. ಆದ್ರೀಗ ಡ್ರೋನ್ ಭರ್ಜರಿಯಾಗೇ ಗಗನಾಗೆ ಸರ್‌ಪ್ರೈಸ್ ಕೊಟ್ಟಿದ್ದಾರೆ.. ಗಗನಾಳನ್ನ ಹೆಲಿಕಾಪ್ಟರ್ ನಲ್ಲಿ ಕರ್ಕೊಂಡು ಹೋದ ಡ್ರೋನ್ ಸಾವಿರ ಅಡಿ ಎತ್ತರದಲ್ಲಿ ಸರ್ಪ್ರೈಸ್ ಕೊಟ್ಟಿದ್ದಾರೆ.
ʻಭರ್ಜರಿ ಬ್ಯಾಚುಲರ್ಸ್ ಸೀಸನ್ 2ʼ ಶೋನಲ್ಲಿ ಹೊಸ ಹೊಸ ಟಾಸ್ಕ್‌ಗಳನ್ನು ಜೋಡಿಗಳಿಗೆ ನೀಡಲಾಗುತ್ತಿದೆ. ಅಂತೆಯೇ ಈ ವಾರ ಭಾರ್ಜರಿ ಬ್ಯಾಚುಲರ್ಸ್ ಕಂಟೆಸ್ಟೆಂಟ್‌ಗಳಿಗೆ ʻಸರ್ಪ್ರೈಸ್ ರೌಂಡ್ʼ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್‌ನಲ್ಲಿ ಬ್ಯಾಚುಲರ್ಸ್ ಹುಡುಗರು ತಮ್ಮ ಪಾರ್ಟ್‌ನರ್‌ಗೆ ಸರ್ಪ್ರೈಸ್ ನೀಡಬೇಕು. ಈ ಮೂಲಕ ಅವರನ್ನು ಇಂಪ್ರೆಸ್ ಮಾಡಬೇಕು. ಈ ಟಾಸ್ಕ್ ಅನ್ನು ಡ್ರೋನ್ ಪ್ರತಾಪ್ ವಿಭಿನ್ನವಾಗಿ ಮಾಡಿದ್ದಾರೆ. ಹೆಲಿಕ್ಯಾಪ್ಟರ್‌ನಲ್ಲಿ ಸಾವಿರ ಅಡಿ ಎತ್ತರಕ್ಕೆ ಹೋಗಿ, ಅಲ್ಲಿ ಗಗನಾಗೆ ಸರ್ಪ್ರೈಸ್ ನೀಡಿದ್ದಾರೆ. ಕಿರುತೆರೆಯಲ್ಲಿಯೇ ಪ್ರಪಥಮ ಬಾರಿಗೆ ಈ ರೀತಿಯಾದ ಪ್ರಯತ್ನ ಆಗಿರುವುದರ ಕುರಿತು ಜೀ ವಾಹಿನಿ ಪ್ರೊಮೋವನ್ನು ಹಂಚಿಕೊಂಡಿದೆ. ಭರ್ಜರಿ ಬ್ಯಾಚುಲರ್ಸ್ ಶೋ ನಲ್ಲಿ ಗಗನಾಗೆ ಸಾವಿರ ಅಡಿ ಎತ್ತರದಲ್ಲಿ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ ‘ಡ್ರೋನ್’ ಪ್ರತಾಪ್. ಹೌದು, ಹೆಲಿಕ್ಯಾಪ್ಟರ್‌ನಲ್ಲಿ ಹಾರಾಡಿಸುವುದು ಅಷ್ಟೇ ಅಲ್ಲ, ಗಗನದಲ್ಲೇ ಗಗನಾಗೆ ಅರಿಶಿನ-ಕುಂಕುಮ ಕೊಟ್ಟು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಬಳಿಕ ವೇದಿಕೆಯಲ್ಲಿ ಗಗನಾಗೆ, ಲಕ್ಷ್ಮೀ ರೂಪ, ಬಲಗಾಲಿಟ್ಟು ಲಕ್ಷೀಯಂತೆ ಬರಲಿ ಎನ್ನುತ್ತಾ ವೇದಿಕೆಯಲ್ಲಿ ಎಲ್ಲರ ಮುಂದೆ ಕಾಲ್ಗೆಜ್ಜೆ ತೊಡಿಸಿದ್ದಾರೆ ಪ್ರತಾಪ್. ಈ ಸರ್ಪ್ರೈಸ್‌ಗೆ ಇಂಪ್ರೆಸ್ ಆಗಿರುವ ಗಗನಾ, ನನಗೆ ಡ್ರೋನ್ ಪ್ರತಾಪ್ ಪಾರ್ಟ್‌ನರ್ ಆಗಿ ಸಿಕ್ಕಿರುವುದಕ್ಕೆ ನಾನು ತುಂಬಾ ಲಕ್ಕಿ ಅಂತಾ ಹೇಳಿದ್ರು.. ಇನ್ನು ಈ ವಿಭಿನ್ನ ಪ್ರಯತ್ನ ನೋಡಿ ಜಡ್ಜಸ್ ಕೂಡ ಇಂಪ್ರೆಸ್ ಆಗಿದ್ದಾರೆ. ಗಗನಕ್ಕೆ ಕರೆದುಕೊಂಡು ಹೋಗಿ ಅರಿಶಿನ-ಕುಂಕುಮ ಕೊಟ್ಟಿದ್ದೇ ಬೆಸ್ಟ್ ಸರ್ಪ್ರೈಸ್ ಅಂತ ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಹೇಳಿದ್ದಾರೆ. ಇನ್ನೂ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಕೂಡ ಇದನ್ನು ಕಂಡು ಫುಲ್ ಖುಷ್ ಆಗಿದ್ದಾರೆ. ಸದ್ಯ ಡ್ರೋನ್ ಪ್ರತಾಪ್ ನೀಡಿದ ಭರ್ಜರಿ ಗಿಫ್ಟ್‌ಗೆ ಗಗನಾ ಕ್ಲೀನ್ ಬೋಲ್ಡ್ ಆಗಿದ್ದಾರೆ. ಆದರೆ, ಪಾಪ ಗಿಲ್ಲಿ ನಟನ ಕಥೆ ಏನು ಅನ್ನೋದು ಅಭಿಮಾನಿಗಳಲ್ಲಿ ಚಿಂತೆ ಮೂಡಿದೆ.
ಇನ್ನು ಈ ಪ್ರೋಮೋ ನೋಡ್ತಿದ್ದಂತೆ ವೀಕ್ಷಕರು ಗಿಲ್ಲಿ ಬಗ್ಗೆ ಚಿಂತೆ ಮಾಡಿದ್ದಾರೆ.. ಇದನ್ನೆಲ್ಲಾ ನೋಡಿ ಗಿಲ್ಲಿ ನಟಗೆ ಯಾಕೋ ಬೇಜಾರಾದಂತೆ ಕಾಣುತ್ತಿದೆ.. ಅಯ್ಯೋ, ಗಿಲ್ಲಿ ಪಾರಿವಾಳ ಹಾರಿಹೋಯ್ತಲ್ಲ.. ನಮ್ಮ ಗಿಲ್ಲಿ ಅಣ್ಣನ ನೋಡೋಕೆ ಆಗ್ತಿಲ್ವೆ.. ಪಾಪ ನಮ್ಮ ಗಿಲ್ಲಿ ಅಣ್ಣನಿಗೆ ಎಷ್ಟು ಹೊಟ್ಟೆ ಉರುಸ್ತಿರೋ ಅಂತಾ ಹೇಳಿದ್ರೆ, ಇನ್ನೂ ಕೆಲವರು ಗಿಲ್ಲಿ ಅಣ್ಣ ಪಂಚ್‌ಗೋಸ್ಕರ ವೈಟಿಂಗ್ ಎಂದೆಲ್ಲಾ ಗಿಲ್ಲಿ ಬಗ್ಗೆ ಅಭಿಮಾನಿಗಳು ನೋವು ತೋಡಿಕೊಂಡಿದ್ದಾರೆ.
ಸದ್ಯ ಸಖತ್ ಸೈಲೆಂಟ್ ಆಗಿದ್ದ ಡ್ರೋನ್ ಪ್ರತಾಪ್ ʻಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಶೋನಲ್ಲಿ ಹೊಸ ರೂಪ ತಾಳಿದ್ದಾರೆ. ಡ್ರೋನ್ ಪ್ರತಾಪ್ ಲುಕ್ಕನ್ನು ಗಗನಾ ಕಂಪ್ಲೀಟ್ ಆಗಿ ಚೇಂಜ್ ಮಾಡಿದ್ದಾರೆ. ಇದೀಗ ಗಗನಾಗೆ, ಡ್ರೋನ್ ಪ್ರತಾಪ್ ಕೊಟ್ಟಿರೋ ಸ್ಪೆಷಲ್ ಸರ್ಪ್ರೈಸ್ ನೋಡಿ ನೆಟ್ಟಿಗರು ನಿಬ್ಬೆರಗಾಗಿದ್ದಾರೆ. ಮುಂದಿನ ಟಾಸ್ಕ್ ಗಳನ್ನ ಇವರಿಬ್ರು ಹೇಗೆ ಮಾಡ್ತಾರೆ. ಗಿಲ್ಲಿ ರಿಯಾಕ್ಷನ್ ಹೆಂಗಿರುತ್ತೆ ಅನ್ನೋ ಕುತೂಹಲ ಎಲ್ಲರನ್ನ ಕಾಡ್ತಿದೆ.