ರೈತರ ಬಡ್ಡಿ ಮನ್ನಾ ಮಾಡಿದ್ರೆ ಸಾಕಾ? – ಹಲಾಲ್ ಲೆಕ್ಕ.. ಮುಸ್ಲಿಂ ಓಲೈಕೆನಾ?

ಗ್ಯಾರಂಟಿ ಯೋಜನೆಗಳ ಹೊರೆ ನಡುವೆಯೇ ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾಖಲೆಯ 16ನೇ ಬಜೆಟ್ ಇದು. 4.09 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಇದಾಗಿದ್ದು, ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್ ಇದು. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆಂದೇ ಸಿಂಹಪಾಲು ಅನುದಾನವನ್ನ ಮೀಸಲಿಡಲಾಗಿದೆ. ಆದ್ರೆ ಸರ್ಕಾರದ ಬಜೆಟ್ ಬಗ್ಗೆ ಬಿಜೆಪಿ ಹಲಾಲ್ ಕಟ್, ಅಲ್ಪಸಂಖ್ಯಾತರ ಬಜೆಟ್ ಅಂತಾ ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ : ಗ್ಯಾರಂಟಿಗೆ ಗಿಫ್ಟ್.. ರೈತರಿಗೆ ಸಿಕ್ಕಿದೆಷ್ಟು? – ಸಾಲ ಬಡ್ಡಿ ಮನ್ನಾ ಮಾಡಿದ ಸಿದ್ದು!
ಸರ್ಕಾರದ ಬಜೆಟ್ ಅಂದ್ಮೇಲೆ ಎಲ್ರಿಗೂ ನಿರೀಕ್ಷೆ ಇದ್ದಿದ್ದೇ. ಅದ್ರಲ್ಲೂ ರಾಜ್ಯ ಬಜೆಟ್ ಅಂದಾಗ ಇನ್ನೂ ಸ್ವಲ್ಪ ಜಾಸ್ತಿ ಎಕ್ಸ್ಪೆಕ್ಟೇಷನ್ಸ್ ಇರುತ್ತೆ. ಸದ್ಯ 5 ಗ್ಯಾರಂಟಿ ಯೋಜನೆಗಳ ಭಾರವನ್ನು ಹೊತ್ತು ಸಾಗ್ತಿರೋ ಸಿದ್ದರಾಮಯ್ಯ ಸರ್ಕಾರ ಬಜೆಟ್ನಲ್ಲಿ ಎಲ್ರನ್ನೂ ಓಲೈಕೆ ಮಾಡೋ ರೀತಿ ಆಯವ್ಯಯವನ್ನ ಜನರ ಮುಂದಿಟ್ಟಿದೆ.
ಬಜೆಟ್ ನಲ್ಲಿ ರೈತರಿಗೆ ಸಿಕ್ಕಿದ್ದೇನು?
ಬಜೆಟ್ ನಲ್ಲಿ ರೈತರಿಗೆ ಬಂಪರ್ ಕೊಡುಗೆಗಳನ್ನ ನೀಡಿರೋ ಸಿದ್ದು
ಎರಡು ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ರೆ ಮಾತ್ರ ಬಡ್ಡಿ ಮನ್ನಾ
ಡಿಸಿಸಿ ಬ್ಯಾಂಕ್ ಇನ್ನೊಂದು ಪಿಕಾರ್ಡ್ ಬ್ಯಾಂಕ್ ಗಳಲ್ಲಿ ಸಾಲ
2 ಬ್ಯಾಂಕ್ ಗಳಲ್ಲಿ ರೈತರ ಸಾಲದ ₹240 ಕೋಟಿ ಬಡ್ಡಿ ಮನ್ನಾ
37 ಲಕ್ಷ ರೈತರಿಗೆ ಸಾಲಕ್ಕಾಗಿ ₹28,000 ಕೋಟಿ ಘೋಷಣೆ
ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ನೆರವು
ಹನಿ, ತುಂತುರು ನೀರಾವರಿ ಘಟಕ ಅಳವಡಿಕೆಗೆ 440 ಕೋಟಿ ರೂ.
ಈ ವರ್ಷ 12 ಸಾವಿರ ಕೃಷಿ ಹೊಂಡಗಳ ನಿರ್ಮಾಣದ ಗುರಿ
ಮಂಡ್ಯ ಕೃಷಿ ವಿವಿ ಸ್ಥಾಪನೆಗೆ 25 ಕೋಟಿ ರೂ. ನೀಡಲಾಗುತ್ತೆ
ಜಾನುಗಾರುಗಳ ಆಕಸ್ಮಿಕ ಸಾವಿಗೆ ಇನ್ಮುಂದೆ 15 ಸಾವಿರ ಪರಿಹಾರ
ಕುರಿ, ಮೇಕೆಗಳಿಗೆ ನೀಡಲಾಗುತ್ತಿದ್ದ ಮೊತ್ತ 7,500 ರೂಗೆ ಏರಿಕೆ
ಹೀಗೆ ಬಜೆಟ್ನಲ್ಲಿ ಸಿದ್ದರಾಮಯ್ಯ ರೈತರಿಗೆ ಗಿಫ್ಟ್ಗಳನ್ನ ಕೊಟ್ಟಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಸಮಗ್ರ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪಶುಸಂಗೋಪನೆ, ಮೀನುಗಾರಿಕೆ, ನೀರಾವರಿ, ತೋಟಗಾರಿಗೆ ಸೇರಿದಂತೆ ಹಲವು ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಇಷ್ಟೇ ಅಲ್ದೇ ಕೆಲ ವಲಯಗಳಿಗೂ ಭರಪೂರ ಕೊಡುಗೆ ಸಿಕ್ಕಿದೆ.
ಬಜೆಟ್ ನ ಪ್ರಮುಖ ಘೋಷಣೆಗಳು!
ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿ ₹7,000 ಕೋಟಿ ಅನುದಾನ
ಬೆಂಗಳೂರಲ್ಲಿ ಟನಲ್ ಕಾರಿಡಾರ್ ಗೆ ₹19,000 ಕೋಟಿ ಅನುದಾನ
ಶಾಲಾ ಮಕ್ಕಳಿಗೆ 6 ದಿನ ಮೊಟ್ಟೆ, ಬಾಳೆ ಹಣ್ಣು ವಿತರಣೆಗೆ ₹1,500 ಕೋಟಿ
ಆಶಾ ಕಾರ್ಯಕರ್ತೆಯರ ಸಹಾಯಧನ 1000 ರೂಪಾಯಿ ಏರಿಕೆ
ಅಂಗನವಾಡಿ ಸಹಾಯಕಿಯರಿಗೆ ₹750 ಸಹಾಯಧನ ಹೆಚ್ಚಳ
ಕೊಡಗಿನ ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ
ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಯ ಉದ್ದೇಶ
ಚಿಂತಾಮಣಿ ತಾಲೂಕಿನಲ್ಲಿ 150 ಕೋಟಿ ವೆಚ್ಚದಲ್ಲಿ VTU ಘಟಕ ಕಾಲೇಜು
ಬಾಣಂತಿ ಮರಣ ಪ್ರಮಾಣ ಶೂನ್ಯಕ್ಕಿಳಿಸಲು 320 ಕೋಟಿ ಅನುದಾನ
ಮಲ್ಟಿಪ್ಲೆಕ್ಸ್ ಸೇರಿ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರತಿ ಪ್ರದರ್ಶನಕ್ಕೆ ₹200
ಬಟ್ ಕಾಂಗ್ರೆಸ್ ಸರ್ಕಾರದ ಬಜೆಟ್ ವಿರುದ್ಧ ಬಿಜೆಪಿ ನಾಯಕರೆಲ್ಲಾ ರೊಚ್ಚಿಗೆದ್ದಿದ್ದಾರೆ. ಹಲಾಲ್ ಬಜೆಟ್, ಅಲ್ಪಸಂಖ್ಯಾತರ ಓಲೈಕೆ ಬಜೆಟ್ ಅಂತೆಲ್ಲಾ ಲೇವಡಿ ಮಾಡ್ತಿದ್ದಾರೆ.
ಅಲ್ಪ ಸಂಖ್ಯಾತರಿಗೆ ಸಿಕ್ಕಿದ್ದೆಷ್ಟು?
ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ 150 ಕೋಟಿ ರೂ. ಮೀಸಲು.
ಹಜ್ ಭವನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕೇಂದ್ರ ಸ್ಥಾಪನೆ
2,500 ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕಲೆ ಕಲಿಕೆಗೆ ಸೌಲಭ್ಯ
ಅಲ್ಪಸಂಖ್ಯಾತರ ಸರಳ ವಿವಾಹಕ್ಕೆ ಪ್ರತಿ ಜೋಡಿಗೆ 50 ಸಾವಿರ ರೂ. ನಗದು
100 ಉರ್ದು ಶಾಲೆಗಳ ಉನ್ನತೀಕರಣಕ್ಕೆ 100 ಕೋಟಿ ರೂ.
ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ 1,000 ಕೋಟಿ ರೂ.
ಮದರಸಾಗಳಲ್ಲಿ ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್ ಸೌಲಭ್ಯ
ವಕ್ಫ್ ಖಾಲಿ ನಿವೇಶನಗಳಲ್ಲಿ 16 ಮಹಿಳಾ ಕಾಲೇಜು ನಿರ್ಮಾಣ
ಜೈನ, ಬೌದ್ಧ, ಸಿಖ್ಖ್ ಸಮುದಾಯಗಳ ಅಭಿವೃದ್ಧಿಗೆ 100 ಕೋಟಿ ರೂ
ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ 250 ಕೋಟಿ ರೂ. ಮೀಸಲು
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿ ವೇತನ 30 ಲಕ್ಷ
ಇದಿಷ್ಟು ಅಲ್ಪಸಂಖ್ಯಾತರಿಗೆ ಬಜೆಟ್ನಲ್ಲಿ ಸಿದ್ದರಾಮಯ್ಯ ಸರ್ಕಾರ ಕೊಟ್ಟಿರೋ ಕೊಡುಗೆಗಳು. ಆದ್ರೆ ಇದು ಬಿಜೆಪಿ ನಾಯಕರ ಕಣ್ಣನ್ನ ಕೆಂಪಾಗಿಸಿದೆ. ಬಜೆಟ್ ಬಗ್ಗೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯನವರ ಬಜೆಟ್ ಮುಸಲ್ಮಾನರಿಗೆ ರಂಜಾನ್ ಕೊಡುಗೆ. ಸರ್ಕಾರ ರಂಜಾನ್ ಹಬ್ಬದ ಇಫ್ತಾರ್ ಕೂಟದ ಔತಣವನ್ನು ಪೂರ್ಣವಾಗಿ ಕೊಟ್ಟಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ವ್ಯಂಗ್ಯವಾಡಿದ್ದಾರೆ. ವಿಪಕ್ಷನಾಯಕ ಆರ್.ಅಶೋಕ್ ಕೂಡ ಮಾತನಾಡಿದ್ದು, ಸಿದ್ದರಾಮಯ್ಯ ಅವರು ಸಾಬ್ರು ಜಟಕಾ ಕುದುರೆ ಏರಿ ಹೊರಟಿದ್ದಾರೆ. ಅಲ್ಪಸಂಖ್ಯಾತರ ವೋಟಿನ ಋಣ ತೀರಿಸ್ತಿದ್ದಾರೆ. ಇದು ಕಾಟಾಚಾರದ ಬಜೆಟ್, ಮುಸ್ಲಿಂ ಓಲೈಕೆ ಬಜೆಟ್, ಇದೊಂದು ಮುಸ್ಲಿಂ ಬಜೆಟ್ ಅಂತ ಕಿಡಿಕಾರಿದ್ದಾರೆ. ಹಾಗೇ ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಇದೊಂದು ಹಲಾಲ್ ಬಜೆಟ್ ಅಂತಾ ಲೇವಡಿ ಮಾಡಿದ್ದಾರೆ. ಬಿಜೆಪಿ ನಾಯಕರು ಎಷ್ಟೇ ಟೀಕೆ ಮಾಡಿದ್ರೂ ಕೂಡ ಎಲ್ಲಾ ಸರ್ಕಾರಗಳೂ ಅಲ್ಪಸಂಖ್ಯಾತರಿಗೆ ಇಷ್ಟು ಹಣ ಅಂತಾ ಮೀಸಲಿಡಲೇಬೇಕು. ಈವನ್ ಬಿಜೆಪಿ ಸರ್ಕಾರ ಇದ್ದಾಗ್ಲೂ ಇದೇ ಪ್ರೊಸೀಜರ್ಸ್ ನಡೆದಿದೆ. ಬಟ್ ಕಾಂಗ್ರೆಸ್ ಸರ್ಕಾರದ ಬಜೆಟ್ ಅಂದಾಗ ಅವ್ರಿಗೆ ಬಜೆಟ್ನಲ್ಲಿ ಧರ್ಮ ಮಾತ್ರ ಕಾಣ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಘೋಷಣೆ ಮಾಡಿರೋದನ್ನ ಓಲೈಕೆ ರಾಜಕಾರಣ ಅಂತಾ ಟೀಕಿಸ್ತಿದ್ದಾರೆ. ಸೋ ಇದು ಇದ್ದಿದ್ದೇ ಬಿಡಿ. ಯಾವುದೇ ಸರ್ಕಾರದ ಬಜೆಟ್ ಇದ್ದಾಗ್ಲೂ ವಿಪಕ್ಷದವ್ರಿಗೆ ಅದನ್ನ ಜರಿಯೋದೇ ಕೆಲ್ಸ. ಸೋ ಅವ್ರ ಕೆಲಸನೇ ಅದು. ಇವ್ರಾದ್ರೂ ಅಷ್ಟೇ. ಅವ್ರಾದ್ರೂ ಅದನ್ನೇ ಮಾಡೋದು. ಬಟ್ ಈಗ ಇರೋ ಪ್ರಶ್ನೆ ಅಂದ್ರೆ ಕಾಂಗ್ರೆಸ್ ಸರ್ಕಾರ ದಾಖಲೆಯ ಮಟ್ಟದಲ್ಲಿ ಬಜೆಟ್ ಏನೋ ಮಂಡಿಸಿದೆ ನಿಜ. ಅದಕ್ಕೆ ಹಣ ಹೇಗೆ ಹೊಂದಿಸ್ತಾರೆ ಅನ್ನೋದು. 4.09 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ನಲ್ಲಿ 51,300 ಕೋಟಿ ರೂಪಾಯಿ ಅನುದಾನವನ್ನ ಗ್ಯಾರಂಟಿ ಯೋಜನೆಗಳಿಗೇ ಮೀಸಲಿಡಲಾಗಿದೆ. 2025-26ನೇ ಸಾಲಿಗೆ ಸರ್ಕಾರಕ್ಕೆ ಪ್ರಮುಖ ಆದಾಯ ಮೂಲಗಳು.
ಸರ್ಕಾರದ ಆದಾಯ ಮೂಲ!
ರಾಜಸ್ವ ಸ್ವೀಕೃತಿ (ರೆವಿನ್ಯೂ ರೆಸಿಪ್ಟ್) : 2,92,477 ಕೋಟಿ ರೂ
ಬಂಡವಾಳ ಸ್ವೀಕೃತಿ (ಕ್ಯಾಪಿಟಲ್ ರೆಸಿಪ್ಟ್) : 1,16,170 ಕೋಟಿ ರೂ
ವಾಣಿಜ್ಯ ತೆರಿಗೆ ಇಲಾಖೆಗೆ 1,20,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ
ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 28,000 ಕೋಟಿ ರೂ. ತೆರಿಗೆ ಗುರಿ
ಅಬಕಾರಿ ಇಲಾಖೆಗೆ 40,000 ಕೋಟಿ ರೂ. ಗುರಿ;
ಮೋಟಾರು ವಾಹನ ಇಲಾಖೆಗೆ 15,000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 12,000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ