ರಾಹುಕಾಲಕ್ಕೂ ಮೊದಲೇ ಬಜೆಟ್ ಆರಂಭ – ಎಷ್ಟು ಲಕ್ಷ ಕೋಟಿ ಆಯವ್ಯಯ ಮಂಡಿಸ್ತಾರೆ ಸಿಎಂ ಸಿದ್ದರಾಮಯ್ಯ?

ರಾಹುಕಾಲಕ್ಕೂ ಮೊದಲೇ ಬಜೆಟ್ ಆರಂಭ – ಎಷ್ಟು ಲಕ್ಷ ಕೋಟಿ ಆಯವ್ಯಯ ಮಂಡಿಸ್ತಾರೆ ಸಿಎಂ ಸಿದ್ದರಾಮಯ್ಯ?

ರಾಜ್ಯ ಬಜೆಟ್‌ ಮಂಡನೆಗೆ ಕೌಂಟ್‌ಡೌನ್‌ ಶುರುವಾಗಲಿದೆ. ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್​ ಮಂಡನೆ ಮಾಡಲಿದ್ದಾರೆ. ಶುಕ್ರವಾರ ಬೆಳಗ್ಗೆ 10:15ಕ್ಕೆ ವಿಧಾನಸಭೆಯಲ್ಲಿ ಆಯವ್ಯಯ ಮಂಡನೆ ಆಗಲಿದೆ.

ಇದನ್ನೂ ಓದಿ: ಭಾರತಕ್ಕೆ ಬೆದರಿಸುತ್ತಿದ್ಯಾ ಬಾಂಗ್ಲಾ? ಗಡಿಯಲ್ಲಿ TB-2 ಬೆರಾಕ್ತಾರ್ ಡ್ರೋನ್

ಬೆಳಗ್ಗೆ 9:30 ಕ್ಕೆ ತಮ್ಮ ನಿವಾಸದಿಂದ ಬಜೆಟ್ ಮಂಡನೆಗೆ ಸಿಎಂ ಹೊರಟಿದ್ದು, 9:45 ಕ್ಕೆ ವಿಧಾನಸೌಧದ ತಮ್ಮ ಕಚೇರಿಗೆ ಆಗಮಿಸಿದ್ದಾರೆ. 10 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಬಜೆಟ್‌ಗೆ ಅನುಮೋದನೆ ಪಡೆದು 10:10 ನಿಮಿಷಕ್ಕೆ ಸರಿಯಾಗಿ ಸದನಕ್ಕೆ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಬಜೆಟ್ ಗಾತ್ರ 4 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ.

ಬೆಳಗ್ಗೆ 10:15 ಕ್ಕೆ ಸರಿಯಾಗಿ ಬಜೆಟ್ ಓದಲು ಸಿಎಂ ಆರಂಭಿಸಲಿದ್ದಾರೆ. ಬೆಳಗ್ಗೆ 10:30 ರಿಂದ ರಾಹುಕಾಲ ಆರಂಭವಾಗಲಿರುವ ಹಿನ್ನೆಲೆಯಲ್ಲಿ 10:15 ರಿಂದ ಬಜೆಟ್ ಓದಲಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ನಿಂತುಕೊಂಡೆ ಬಜೆಟ್ ಮಂಡಿಸುತ್ತಾರೆ. ಮಂಡಿನೋವಿನ ಸಮಸ್ಯೆ ಇರುವುದರಿಂದ ಆನಂತರ ಕುಳಿತುಕೊಂಡು ಬಜೆಟ್ ಓದಲಿದ್ದಾರೆ. ಅಂದಾಜು 3 ಗಂಟೆ 30 ನಿಮಿಷಗಳ ಕಾಲ ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದೆ.

16 ಬಾರಿಗೆ ಸಿದ್ದರಾಮಯ್ಯ ಬಜೆಟ್

ಬಜೆಟ್ ಗಾತ್ರ 4 ಲಕ್ಷ ಕೋಟಿ ದಾಟುವ ಸಾಧ್ಯತೆ ಇದೆ. ಕಳೆದ ಬಾರಿ 3.71 ಲಕ್ಷ ಕೋಟಿ ಬಜೆಟ್ ಗಾತ್ರ ಇತ್ತು. ಈ ಬಾರಿಯೂ ಕೊರತೆ ಬಜೆಟ್ ಮಂಡನೆ ಸಾಧ್ಯತೆ ಇದೆ. ಅಂದಾಜು 30 ಸಾವಿರ ಕೋಟಿ ರೂ. ಕೊರತೆ ಬಜೆಟ್ ಆಗಬಹುದು. ಈ ಬಾರಿ ಸಾಲದ ಪ್ರಮಾಣವೂ ಹೆಚ್ಚಳ ಸಾಧ್ಯತೆ ಇದೆ. ಅಂದಾಜು 1.25 ಲಕ್ಷ ಕೋಟಿ ಸಾಲ ಪ್ರಸ್ತಾಪವಾಗಬಹುದು. ಕಾಲು ನೋವಿನಿಂದ ಸಿಎಂ ಸಿದ್ದರಾಮಯ್ಯ ಕುಳಿತುಕೊಂಡೇ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಮೊದಲು ಬಾರಿ ಕೂತು ಬಜೆಟ್ ಮಂಡನೆಯಾಗಲಿದೆ. ಅರುಣ್ ಜೆಟ್ಲಿ ಅವರು 2016ರಲ್ಲಿ ಕೂತು ಬಜೆಟ್ ಮಂಡಿಸಿದ್ದರು.

Shwetha M

Leave a Reply

Your email address will not be published. Required fields are marked *