ಐಸಿಸಿ ಟೂರ್ನಿಯಲ್ಲಿ 3ನೇ ಬಾರಿಗೆ ಭಾರತ & ನ್ಯೂಜಿಲೆಂಡ್ ಮುಖಾಮುಖಿ! – ಯಾರ ಪಾಲಾಗುತ್ತೆ ಟ್ರೋಫಿ?

ಭಾನುವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮಿನಿ ವಿಶ್ವಕಪ್‌ನ ಫೈನಲ್ ಮ್ಯಾಚ್ ನಡೆಯಲಿದೆ. ವಿಶೇಷ ಅಂದ್ರೆ ಉಭಯ ತಂಡಗಳು ಐಸಿಸಿ ಟೂರ್ನಿಯ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು ಮೂರನೇ ಬಾರಿ. ಇದಕ್ಕೂ ಮುನ್ನ ನಡೆದ 2 ಪಂದ್ಯಗಳಲ್ಲೂ ನ್ಯೂಜಿಲೆಂಡ್ ತಂಡವೇ ಗೆದ್ದಿದೆ.
ಇದನ್ನೂ ಓದಿ: ಭಾರತ Vs ನ್ಯೂಜಿಲೆಂಡ್ ಫೈನಲ್.. ಯಾರಾಗ್ತಾರೆ ದುಬೈನಲ್ಲಿ ಚಾಂಪಿಯನ್?
2000ನೇ ಇಸವಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮೊದಲ ಬಾರಿ ಭಾರತ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಿತ್ತು. ಈ ವೇಳೆ ಟೀಮ್ ಇಂಡಿಯಾವನ್ನು 4 ವಿಕೆಟ್ಗಳಿಂದ ಸೋಲಿಸಿ ನ್ಯೂಝಿಲೆಂಡ್ ಚೊಚ್ಚಲ ಐಸಿಸಿ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಇದಾದ ಬಳಿಕ ಉಭಯ ತಂಡಗಳು 2021ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂತಿಮ ಪಂದ್ಯದಲ್ಲಿ ಫೈನಲ್ನಲ್ಲಿ ಮುಖಾಮುಖಿಯಾಗಿದ್ವ.. ಈ ಮ್ಯಾಚ್ನಲ್ಲಿ ಭಾರತ ತಂಡಕ್ಕೆ 8 ವಿಕೆಟ್ಗಳ ಸೋಲುಣಿಸಿ ನ್ಯೂಝಿಲೆಂಡ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಮೂರನೇ ಬಾರಿಗೆ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಫೈನಲ್ ಫೈಟ್ಗೆ ಸಜ್ಜಾಗಿದೆ. ಅಷ್ಟೇ 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡ ಭಾರತವನ್ನು ಸೋಲಿಸಿ ಟೂರ್ನಿಯಿಂದ ಹೊರ ಹಾಕಿತ್ತು. ಆದರೆ, 2023 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದು ಸೇಡು ತೀರಿಸಿಕೊಂಡಿತು. ಇದೀಗ ಉಭಯ ತಂಡಗಳೂ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.
ಲೀಗ್ ಹಂತದ 3ನೇ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು!
ಅಷ್ಟಕ್ಕೂ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ ಈಗಾಗ್ಲೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿಯಾಗಿತ್ತು. ಮಾರ್ಚ್ 2ರಂದು ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಟ ನಡೆಸಿದ್ವು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 249 ರನ್ ಕಲೆ ಹಾಕಿತು. 250 ರನ್ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಕಿವೀಸ್ ಪಡೆ ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿತು. ಆದ್ರೆ ಆ ನಂತರದಲ್ಲಿ ಭಾರತದ ಸ್ಪಿನ್ ದಾಳಿಗೆ ಸಿಲುಕಿ ಸೋಲೊಪ್ಪಿಕೊಳ್ತು. 205 ರನ್ಗಳಿಗೆ ಆಲೌಟ್ ಆಯ್ತು. ಆವತ್ತಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಶ್ರೇಯಸ್ ಬ್ಯಾಟಿಂಗ್ನಲ್ಲಿ ಹೀರೋ ಆದ್ರೆ ವರುಣ್ ಬೌಲಿಂಗ್ ನಲ್ಲಿ ಸೂಪರ್ ಹೀರೋ ಆಗಿದ್ರು. ವರುಣ್ ಚಕ್ರವರ್ತಿ ತಮ್ಮ 10 ಓವರ್‌ಗಳಲ್ಲಿ ಕೇವಲ 42 ರನ್‌ಗಳನ್ನು ನೀಡಿ 5 ವಿಕೆಟ್ ಪಡೆದಿದ್ರು. ಸೋ ಈಗ ಮತ್ತೊಮ್ಮೆ ಎರಡು ತಂಡಗಳು ಎದುರು ಬದುರಾಗ್ತಿವೆ. ಭಾನುವಾರ ನಡೆಯಲಿರೋ ಈ ಹೈವೋಲ್ಟೇಜ್ ಪಂದ್ಯದಲ್ಲಿ ಗೆದ್ದವ್ರೇ ಚಾಂಪಿಯನ್ ಪಟ್ಟಕ್ಕೇರಲಿದ್ದಾರೆ. ಇದೊಂದು ಗೆಲುವಿನ ಮೂಲಕ ಕಿವೀಸ್ ಪಡೆಗೆ ತಿರುಗೇಟು ಕೊಡೋಕೆ ಟೀಂ ಇಂಡಿಯಾ ಕೂಡ ಕಾಯ್ತಿದೆ.