ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಬೀಗಿದ ನ್ಯೂಜಿಲೆಂಡ್​ – ಭಾನುವಾರ ನ್ಯೂಜಿಲೆಂಡ್‌ Vs ಭಾರತ ಫೈನಲ್‌

ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಬೀಗಿದ ನ್ಯೂಜಿಲೆಂಡ್​ – ಭಾನುವಾರ ನ್ಯೂಜಿಲೆಂಡ್‌ Vs ಭಾರತ ಫೈನಲ್‌

2025ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಗೆದ್ದು ಬೀಗಿದೆ. ಈ ಮೂಲಕ ನ್ಯೂಜಿಲೆಂಡ್​ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿದೆ. ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ಮಧ್ಯೆ ಜಿದ್ದಾಜಿದ್ದಿ ಏರ್ಪಡಲಿದೆ.

ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ನಡುಕ ಹುಟ್ಟಿಸಿದ ಚಳಿ! – ದೆಹಲಿ ಹವಾಮಾನದಲ್ಲಿ ಭಾರಿ ಬದಲಾವಣೆ

ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ತಂಡ ಸೌತ್​ ಆಫ್ರಿಕಾ 363 ರನ್​ಗಳ ಟಾರ್ಗೆಟ್‌ ನೀಡಿತ್ತು. ಸೌತ್​ ಆಫ್ರಿಕಾ ಉತ್ತಮ ಆರಂಭ ಪಡೆದುಕೋಂಡ್ರೂ, ರಿಕಲ್ಟನ್​ ಕೇವಲ 17 ರನ್​ಗೆ ಔಟಾದ್ರು. 2ನೇ ವಿಕೆಟ್​​ಗೆ ಕ್ಯಾಪ್ಟನ್​ ಬವುಮಾ ಮತ್ತು ಡಸ್ಸೆನ್​​ ಶತಕದ ಜೊತೆಯಾಟ ಆಡಿದರು. ಇಬ್ಬರು ತಲಾ ಅರ್ಧಶತಕ ಸಿಡಿಸಿದರು. ಬವುಮಾ 56, ಡಸ್ಸೆನ್​​ 69 ರನ್​ ಚಚ್ಚಿದ್ರು.

ಕೊನೆಯರೆಗೂ ಕ್ರೀಸ್​ನಲ್ಲಿ ನಿಂತು ಡೇವಿಡ್​ ಮಿಲ್ಲರ್​ ಏಕಾಂಗಿ ಹೋರಾಟ ನಡೆಸಿದರು. ಆದ್ರೂ ರನ್​ಗಳ ಅಗತ್ಯ ಜಾಸ್ತಿ ಇದ್ದರಿಂದ ಏಕಾಂಗಿ ಹೋರಾಟ ಸಾಧ್ಯವಾಗಲಿಲ್ಲ. ಬದಲಿಗೆ ಸ್ಫೋಟಕ ಶತಕ ಸಿಡಿಸಿ ಗೆಲುವಿನ ಭರವಸೆ ಮೂಡಿಸಿದ್ರೂ ಪ್ರಯೋಜನೆ ಆಗಲಿಲ್ಲ. ಹೀಗಾಗಿ ಸೌತ್​ ಆಫ್ರಿಕಾ ಸೋಲನ್ನು ಒಪ್ಪಿಕೊಳ್ಳಬೇಕಾಯ್ತು. ಆಫ್ರಿಕಾ ಸುಮಾರು 50 ರನ್​ಗಳಿಂದ ಸೋತಿದೆ. ಮತ್ತೆ ಚೋಕರ್ಸ್​ ಎಂದು ಸೌತ್​ ಆಫ್ರಿಕಾ ಫ್ರೂವ್​ ಮಾಡಿದೆ.

ಇನ್ನು ಭಾನುವಾರ ನಡೆಯಲಿರೋ ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​, ಭಾರತ ತಂಡ ಸೆಣಸಲಿವೆ. ಕಳೆದ ಪಂದ್ಯದಲ್ಲಿ ಸೋತಿದ್ದ ನ್ಯೂಜಿಲೆಂಡ್​ ಭಾರತ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.

Shwetha M

Leave a Reply

Your email address will not be published. Required fields are marked *