ರಾಷ್ಟ್ರ ರಾಜಧಾನಿಯಲ್ಲಿ ನಡುಕ ಹುಟ್ಟಿಸಿದ ಚಳಿ! – ದೆಹಲಿ ಹವಾಮಾನದಲ್ಲಿ ಭಾರಿ ಬದಲಾವಣೆ

ರಾಷ್ಟ್ರ ರಾಜಧಾನಿಯಲ್ಲಿ ವಾಯುಗುಣಮಟ್ಟ ದಿನೇ ದಿನೇ ಕ್ಷೀಣಿಸುತ್ತಿದೆ. ಇದೀಗ ಕಳೆದ ಕೆಲವು ದಿನಗಳಿಂದ ವಿಚಿತ್ರ ಹವಾಮಾನ ಕಂಡುಬರುತ್ತಿದೆ. ಒಮ್ಮೆ ಸುಡು ಬಿಸಿಲಿದ್ರೆ, ಮತ್ತೊಮ್ಮೆ ವಿಪರೀತ ಚಳಿ ದಾಖಲಾಗ್ತಿದೆ. ಇದ್ರಿಂದಾಗಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಐಪಿಎಸ್ ಅಧಿಕಾರಿಗಳ ಕಿತ್ತಾಟ – ಡಿ ರೂಪಾ ಎತ್ತಂಗಡಿ ಮಾಡಿದ ರಾಜ್ಯ ಸರ್ಕಾರ
ಹೌದು, ಕಳೆದ ವಾರ ದೆಹಲಿಯ ಕನಿಷ್ಠ ತಾಪಮಾನವು 20 ಡಿಗ್ರಿ ಇತ್ತು. ಆದ್ರೆ ವಾರ ತಾಪಮಾನ ಮತ್ತೆ ಮತ್ತೆ ಕುಸಿದಿದೆ. ಕೆಲವು ಪ್ರದೇಶಗಳಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ವರದಿಯಾಗಿದೆ. ತಾಪಮಾನ ಕುಸಿತಕ್ಕೆ ಕಾರಣ ಪಶ್ಚಿಮದಿಂದ ಬೀಸುತ್ತಿರುವ ಬಲವಾದ ಶೀತ ಮಾರುತಗಳು. ಸುಮಾರು 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಇದು ಹಿಮಾಲಯದಿಂದ ಶೀತವನ್ನು ಹೊತ್ತು ತರುತ್ತಿದೆ. ಇತ್ತೀಚೆಗೆ, ಫೆಬ್ರವರಿ ಕೊನೆಯ ದಿನಗಳಲ್ಲಿ, ಪರ್ವತಗಳಲ್ಲಿ ಭಾರಿ ಹಿಮಪಾತವಾಯಿತು. ಅಂದಿನಿಂದ ಈ ತಂಪಾದ ಗಾಳಿಯು ದೆಹಲಿಯ ಜನರನ್ನು ನಡುಗಿಸುತ್ತಿದೆ. ಈ ಗಾಳಿ ನಾಳೆಯವರೆಗೆ ಅಂದರೆ ಮಾರ್ಚ್ 6 ರವರೆಗೆ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆಯು ಮಾರ್ಚ್ ತಿಂಗಳನ್ನು ಬೇಸಿಗೆಯ ಆರಂಭವೆಂದು ಪರಿಗಣಿಸುತ್ತದೆ. ಈ ಬಾರಿ ಮಾರ್ಚ್ ತಿಂಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ. ಮಾರ್ಚ್ ಆರಂಭದ ದಿನಗಳಲ್ಲಿ ಹವಾಮಾನದಲ್ಲಿನ ಏರಿಳಿತಗಳಿಂದಾಗಿ, ಚಳಿಗಾಲ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ. ಆದರೆ ದಿನಾಂಕ ಮುಂದುವರೆದಂತೆ, ತಾಪಮಾನವು ಹೆಚ್ಚಾಗುವ ನಿರೀಕ್ಷೆಯಿದೆ.
ಮಾರ್ಚ್ 10 ರ ವೇಳೆಗೆ ಗರಿಷ್ಠ ತಾಪಮಾನವು 33 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕನಿಷ್ಠ ತಾಪಮಾನವು 18 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಅಂದರೆ ಹೋಳಿ ಬರುವ ಹೊತ್ತಿಗೆ ದೆಹಲಿಯಲ್ಲಿ ಶಾಖವು ಅದರ ನಿಜವಾದ ರೂಪದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಲಿದೆ.